For Quick Alerts
ALLOW NOTIFICATIONS  
For Daily Alerts

  ಪ್ರಸಿದ್ಧ ವ್ಯಕ್ತಿಗಳ ಆತ್ಮಹತ್ಯೆಯ ಹಿಂದೆ ಅಡಗಿರುವ ಪತ್ರಗಳು

  By Divya Pandith
  |

  ಮನಸ್ಸಿಗೆ ನೋವು ದುಃಖವಾಗುವದು ಸಹಜ. ಇದು ದೇವರ ವರವೂ ಹೌದು. ಆದರೆ ಕೆಲವರು ತಮ್ಮ ಮನಸ್ಸಿಗೆ ಉಂಟಾದ ನೋವು ಮೋಸಗಳಿಂದ ಆಚೆ ಬರಲಾಗದೆ, ಜೀವನವೇ ಸಾಕೆಂದು ಬಯಸುತ್ತಾರೆ. ಅಲ್ಲದೆ ಗಟ್ಟಿ ಮನಸ್ಸಿನಿಂದ ಆತ್ಮ ಹತ್ಯೆಗೆ ಶರಣಾಗುತ್ತಾರೆ. ಆತ್ಮ ಹತ್ಯೆಯ ವಿಚಾರ ಕೇವಲ ಸಾಮಾನ್ಯ ವ್ಯಕ್ತಿಗಳಿಗಷ್ಟೇ ಕಾಡುವುದಿಲ್ಲ. ಸಮಾಜದಲ್ಲಿ ಹೆಸರಾದ ವ್ಯಕ್ತಿಗಳು ಸಹ ಮನನೊಂದು ಆತ್ಮ ಹತ್ಯೆಗೆ ಶರಣಾಗಿದ್ದಾರೆ. ಆ ವಿಚಾರಗಳನ್ನು ಕೇಳಿದಾಗ ಮನಸ್ಸಿಗೆ ಒಂದಿಷ್ಟು ನೋವುಂಟಾಗುತ್ತದೆ.

  ಜೀವನದಲ್ಲಿ ಅತಿಯಾದ ದುಃಖಕ್ಕೆ ಒಳಗಾದಾಗ ಆತ್ಮ ಹತ್ಯೆ ಒಂದೇ ಉತ್ತರವೇ? ಎನ್ನುವ ಪ್ರಶ್ನೆ ಕಾಡುವುದುಂಟು. ಸಮಾಜದಲ್ಲಿ ಇಂದು ಆದರ್ಶ ಪ್ರಾಯರಾಗಿ ಮಿಂಚಿರುವವರು ಆತ್ಮ ಹತ್ಯೆಗೆ ಶರಣಾಗುತ್ತಾರೆ ಎಂದಾದರೆ ಅದರ ಹಿಂದಿರುವ ಕಾರಣವಾದರೂ ಏನು? ಎನ್ನುವ ಪ್ರಶ್ನೆ ಕಾಡುವುದು ಸಹಜ. ಹೀಗೆ ನಮ್ಮ ನಡುವೆ ಇದ್ದು ಒಂದಿಷ್ಟು ಹೆಸರು ಗಳಿಸಿ, ಆತ್ಮ ಹತ್ಯೆಗೆ ಶರಣಾದವರ "ಆತ್ಮಹತ್ಯಾ ಪತ್ರ"ದ ಕೆಲವು ವಿವರಣೆಗಳನ್ನು ಬೋಲ್ಡ್ ಸ್ಕೈ ನಿಮಗೆ ತೆರೆದಿಡುತ್ತಿದೆ...

  ಜಿಯ ಖಾನ್

  ಜಿಯ ಖಾನ್

  ಅವರು ಬಾಲಿವುಡ್ ನಟಿಯಾಗಿದ್ದರು. ಅವರ ವೃತ್ತಿಜೀವನವು ಅಷ್ಟೊಂದು ಉತ್ತಮವಾಗಿರಲಿಲ್ಲ. ಆದರೆ ಅವಳ ಗೆಳೆಯನೊಂದಿಗಿನ ಅವಳ ಸಂಬಂಧವು ಅವಳ ಸಾವಿಗೆ ಕಾರಣವಾಯಿತು. 2013 ರಲ್ಲಿ ಮುಂಬಯಿ ನಿವಾಸದಲ್ಲಿ ಸೀಲಿಂಗ್ ಫ್ಯಾನ್‌ನಿಂದ ನೇಣು ಹಾಕಿಕೊಂಡಿದ್ದಾಳೆ ಎಂದು ಪತ್ತೆಯಾಗಿದೆ. ಆಕೆಯು 6 ಪುಟಗಳ ಆತ್ಮಹತ್ಯೆ ಪತ್ರವನ್ನು ಬರೆದಿದ್ದಾಳೆ. ತನ್ನ ಪತ್ರದಿಂದ ಬಂದ ಒಂದು ಸಾಲು ಹೀಗಿದೆ: "ವಿಧಿ ಯಾಕೆ ನಮ್ಮಿಬ್ಬರನ್ನು ಒಟ್ಟುಗೂಡಿಸಿತು ಎಂದು ನನಗೆ ಗೊತ್ತಿಲ್ಲಾ. ಎಲ್ಲಾ ನೋವು, ಅತ್ಯಾಚಾರ, ದುರುಪಯೋಗ, ನಾನು ಹಿಂದೆ ನೋಡಿದ ಚಿತ್ರಹಿಂಸೆ ನನ್ನ ಈ ನಿರ್ಣಯಕ್ಕೆ ಕಾರಣ''ಎಂದು ಬರೆದಿದ್ದಾರೆ

  ಕ್ರಿಸ್ಟೀನ್ ಚುಬುಕ್

  ಕ್ರಿಸ್ಟೀನ್ ಚುಬುಕ್

  ಈಕೆ ಒಬ್ಬ ಪ್ರಸಿದ್ಧ ವರದಿಗಾರ್ತಿಯಾಗಿದ್ದಳು. ಈಕೆ ತನ್ನ ಆತ್ಮ ಹತ್ಯೆಯ ಪ್ರಕ್ರಿಯೆಯನ್ನು ಚಾನೆಲ್ಗೆ ನೇರ ಪ್ರಸಾರ ಮಾಡಲು ಮನವಿಮಾಡಿಕೊಂಡಿದ್ದಳು. ಆಕೆ ಆತ್ಮ ಹತ್ಯೆ ಮಾಡಿಕೊಳ್ಳುವ ಮೊದಲೇ ಎಲ್ಲಾ ವಿದಧ ಸಂಶೋಧನೆಯನ್ನು ನಡೆಸಲಾಗಿತ್ತು ಎನ್ನಲಾಗುತ್ತದೆ. ತನ್ನ ಆತ್ಮ ಹತ್ಯೆ ಮಾಡಿಕೊಳ್ಳುವ ವರೆಗೂ ಕೆಲವು ಚಿತ್ರಣವನ್ನು ಆಕೆಯೇ ಮಾಡಿದ್ದಳು ಎನ್ನಲಾಗುತ್ತದೆ. ಕಾರ್ಯಕ್ರಮ ಪ್ರಸಾರವಾಗುತ್ತಿದ್ದಂತೆ ತನ್ನನ್ನು ತಾನೇ ಶೂಟ್ ಮಾಡಿಕೊಂಡಳು. ಇದನ್ನು ಅನೇಕ ವೀಕ್ಷಕರು ನೇರವಾಗಿ ವೀಕ್ಷಿಸಿದ್ದಾರೆ. "ಈಕೆ ಸಾಯುವಾಗ ಚಾನೆಲ್ನ 40ರ ನೀತಿಯ ಪ್ರಕಾರ ಹೊಸದಾದ ವಿಚಾರವನ್ನು ಜೀವಂತವಾಗಿ ತೋರಿಸಿದ್ದೇನೆ ಎಂದಿದ್ದಾಳೆ.

  ಕರ್ಟ್ ಕೊಬೈನ್

  ಕರ್ಟ್ ಕೊಬೈನ್

  ಅವರು ನಿರ್ವಾಣ ವಾದ್ಯವೃಂದದ ಪ್ರಸಿದ್ಧ ಗಾಯಕ ಮತ್ತು ಮುಖ್ಯಸ್ಥರಾಗಿದ್ದರು. ಅವರ ಸಂಗೀತ ತಂಡವು ರಾಕ್ ಸಂಗೀತದಲ್ಲಿ ಶ್ರೇಷ್ಠವೆಂದು ಪರಿಗಣಿಸಲಾಗಿತ್ತು. ಕೊಬೈನ್ ಅವರು ಪ್ರಖ್ಯಾತರಾಗುತ್ತಿದ್ದಂತೆಯೇ ಆತ್ಮ ಹತ್ಯೆಗೆ ಶರಣಾದರು ಎಂದು ಎಂದು ವರದಿಗಳು ಹೇಳುತ್ತವೆ. ಕೊಬೈನ್ ಅವರ ಮನಸ್ಸಿಗೆ ಬೇಸರ ತಂದ ಏಕೈಕ ವಿಷಯದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಅವರ ಆತ್ಮ ಹತ್ಯೆಯ ಟಿಪ್ಪಣಿಯನ್ನು ಓದಿದಾಗ ಅದರಲ್ಲಿದ್ದ ಕೆಲವು ಸಾಲು" ಇನ್ನು ಮುಂದೆ ನಾನು ಭಾವೋದ್ರೇಕಕ್ಕೆ ಒಳಗಾಗುವುದಿಲ್ಲ. ನೆನಪಿಟ್ಟುಕೊಳ್ಳಿ. ಮಾಯವಾಗುವುದಕ್ಕಿಂತ ದಹಿಸುವುದು ಒಳ್ಳೆಯದು."

  ಕೆವಿನ್ ಕಾರ್ಟರ್

  ಕೆವಿನ್ ಕಾರ್ಟರ್

  ಅವರು ಅದ್ಭುತವಾದ ಪ್ರಸಿದ್ಧ ಫೋಟೋಗ್ರಾಫರ್ ಆಗಿದ್ದರು. ಅವನ ಕೃತಿಯು ಬಡತನ, ಹಸಿವು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ವಿವರಿಸುತ್ತದೆ. ಹಸಿವಿನಿಂದ ಸಾಯುತ್ತಿದ್ದ ಮಗುವನ್ನು ಒಂದು ರಣ ಹದ್ದು ತಿನ್ನಲು ಕಾಯುತ್ತಿರುವುದರ ಫೋಟೋ ತೆಗೆದು ಪ್ರಸಿದ್ಧರಾಗಿದ್ದರು. ಅದೇ

  ಫೋಟೋ ಚಿತ್ರದ ದೃಶ್ಯವು ಅವರ ಮನಸ್ಸಿಗೆ ಬೇಸರವುಂಟುಮಾಡಿದ್ದರಿಂದಲೇ ಆತ್ಮ ಹತ್ಯೆಗೆ ಶರಣಾದರು ಎನ್ನಲಾಗುತ್ತದೆ. ಇವರ ಆತ್ಮ ಹತ್ಯೆಯ ಪತ್ರದಲ್ಲಿ "ಹಸಿವಿನಿಂದ ಅಥವಾ ಗಾಯಗೊಂಡ ಮಕ್ಕಳ ಫೋಟೋ ತೆಗೆಯುವುದು ಹುಚ್ಚುತನ. ಹಾಗೆ ಮಾಡುವುದಕ್ಕೆ ಕಾನೂನು ರೀತಿಯಲ್ಲಿ ಶಿಕ್ಷಾರ್ಹರು" ಎಂದು ಬರೆದಿದ್ದರು.

  ಸಿಡ್ ವಿಸ್ಕಸ್

  ಸಿಡ್ ವಿಸ್ಕಸ್

  ಇವರು ರಾಕ್ ಪಂಕ್ ಬ್ಯಾಂಡ್ ಮತ್ತು ಸೆಕ್ಸ್ ಪಿಸ್ತೋಲ್ಸ್ನ ಸದಸ್ಯರಾಗಿದ್ದರು. ಇವರು ಮಾದಕ ವಸ್ತುಗಳ ಸೇವನೆಗೆ ದಾಸರಾಗಿದ್ದರು. ನಂತರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು. ಅವರ ಸ್ನೇಹಿತನ ಸಹಾಯದಿಂದ ಒಂದಿಷ್ಟು ಹೆರಾಯನ್ಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಒಮ್ಮೆ ನಿದ್ರೆ ಮಾಡುತ್ತಿರುವಾಗಲೇ ನಿಧನರಾಗಿದ್ದರು. ಕೆಲವು ಮೂಲಗಳು ಅವರು ಅವರ ಸ್ನೇಹಿತೆಯಿಂದಲೇ ಸಾವನ್ನಪ್ಪಿದರು ಎಂದು ಹೇಳಲಾಗುತ್ತದೆ. ಆದರೆ ಅವರ ಸಾವಿನ ಸತ್ಯವು ಆತ್ಮ ಹತ್ಯಾ ಪತ್ರದಲ್ಲಿ ಬರೆದಿತ್ತು. "ನಾವು ಸಾವಿನ ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ನನ್ನ ಮಗುವಿನ ಸಮಾಧಿಯ ಪಕ್ಕದಲ್ಲಿಯೇ ನನ್ನನ್ನು ಮಣ್ಣುಮಾಡಿ.ನನ್ನ ಚರ್ಮದ ಜಾಕೇಟ್, ಜೀನ್ಸ್, ಮೋಟರ್ ಸೈಕಲ್, ಬೂಟ್ಸ್ಗಳಿಗೆ ಗುಡ್ ಬೈ ಹೇಳಿ ಅದನ್ನು ಅಲ್ಲಿಯೇ ಮಣ್ಣುಮಾಡಿ" ಎಂದು ಬರೆದಿದ್ದರು.

  English summary

  Notes Celebs Wrote Before Committing Suicide!

  When we get the news of any famous celeb's death, it disturbs us quite a lot. And what if it is a suicide? It disturbs us to the core into thinking what made them take such a hasty unfortunate decision. Some of the famous celebs who've committed suicide have left their suicide notes. And few of these notes reveal the actual reason as to what made them take such a drastic step. There are those few suicide notes from some of the celebs as well who left the world with confusion and chaos, since they had not mentioned the reason behind them taking this extreme step. Here, we bring to you the list of some of the famous celebs' suicide notes.
  Story first published: Friday, November 24, 2017, 23:50 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more