For Quick Alerts
ALLOW NOTIFICATIONS  
For Daily Alerts

ನೈಜೀರಿಯಾದ ಈ ವ್ಯಕ್ತಿಗೆ ಬರೋಬ್ಬರಿ 120 ಪತ್ನಿಯರು ಹಾಗೂ 203 ಮಕ್ಕಳು!

By Manu
|

ಅಲ್ಪವಿದ್ಯಾ ಮಹಾಗರ್ವೀ ಎಂಬ ಸಂಸ್ಕೃತದ ಗಾದೆಯೊಂದಿದೆ. ಅದರಂತೆ ಧಾರ್ಮಿಕ ಗ್ರಂಥವನ್ನು ಓದದೇ, ಅರ್ಥಮಾಡಿಕೊಳ್ಳದೇ, ಅದರಂತೆ ನಡೆಯದೇ ತಮ್ಮದೇ ಆದ ಕಾನೂನುಗಳನ್ನು ಹುಟ್ಟುಹಾಕಿದ ಅಲ್ಪಜ್ಞಾನಿಗಳಿಂದಾಗಿ ಇಂದು ಜಗತ್ತಿನಲ್ಲಿ ಎಷ್ಟೋ ಗೊಂದಲಗಳಿವೆ. ವಿಶೇಷವಾಗಿ ಮುಸ್ಲಿಮ್ ಧರ್ಮದಲ್ಲಿ ಹೇಳಿರುವ ತ್ರಿವಳಿ ತಲಾಖ್ ಅಥವಾ ವಿಚ್ಛೇದನದ ಕುರಿತಾಗಿಯೂ ಇದೇ ರೀತಿಯ ನಂಬಿಕೆಗಳು ಬೆಳೆದುಬಂದಿವೆ.

ಇದೇ ರೀತಿ ಮುಸ್ಲಿಂ ಧರ್ಮದಲ್ಲಿ ಅವಕಾಶ ಮಾಡಿಕೊಟ್ಟಿರುವ ಇನ್ನೊಂದು ವ್ಯವಸ್ಥೆ ಎಂದರೆ ಬಹುಪತ್ನಿತ್ವದ್ದು. ಈ ಕಾನೂನು ರಚನೆಯಾಗಿದ್ದು 1400 ವರ್ಷಗಳ ಹಿಂದೆ, ಯುದ್ಧದಲ್ಲಿ ಬಹಳಷ್ಟು ಪುರುಷರು ಮಡಿದಾಗ ಮಹಿಳೆಯರ ಸಂಖ್ಯೆ ಹೆಚ್ಚಿದ್ದು ಇವರಿಗೆ ಸಮನಾದ ಸಾಮಾಜಿಕ ಮಾನ್ಯತೆಯನ್ನು ನೀಡಲೆಂದೇ ಇದು ರೂಪುಗೊಂಡಿತು.

ಬದುಕಿನ ಗುಟ್ಟನ್ನು ಬಿಚ್ಚಿಡುವ ಇಸ್ಲಾಂ ಧರ್ಮದ ಸತ್ಯಾಸತ್ಯತೆ

ಆದರೆ ಇದಕ್ಕಿರುವ ಕಟ್ಟುಪಾಡೆಂದರೆ ನಾಲ್ಕು ಪತ್ನಿಯರು. ಆದರೆ ನೈಜೀರಿಯಾದ ಪ್ರವಚನಕಾರರೊಬ್ಬರು ಈ ಅವಕಾಶವನ್ನೇ ಉಪಯೋಗಿಸಿಕೊಂಡು ತನ್ನ ಜೀವಿತಾವಧಿಯಲ್ಲಿ ನೂರಿಪ್ಪತ್ತು ಮದುವೆಯಾಗಿ ಇನ್ನೂರಾಮೂರು ಮಕ್ಕಳ ತಂದೆಯೂ ಆಗಿದ್ದ. ಬನ್ನಿ, ಧರ್ಮವನ್ನು ಸರಿಯಾಗಿ ಉಪದೇಶಿಸುವ ಬದಲು ತನ್ನ ಉಪಯೋಗಕ್ಕೆ ತಿರುಚಿಸಿದ ಈ ವ್ಯಕ್ತಿಯ ಬಗ್ಗೆ ಹೆಚ್ಚಿನ ವಿವರಗಳನ್ನು ಅರಿಯೋಣ...

ಈತ ತನ್ನ ಬಳಿಗೆ ಚಿಕಿತ್ಸೆಗೆಂದು ಬರುತ್ತಿದ್ದ ಮಹಿಳೆಯರನ್ನೇ ವರಿಸುತ್ತಿದ್ದ

ಈತ ತನ್ನ ಬಳಿಗೆ ಚಿಕಿತ್ಸೆಗೆಂದು ಬರುತ್ತಿದ್ದ ಮಹಿಳೆಯರನ್ನೇ ವರಿಸುತ್ತಿದ್ದ

ನಾಟಿ ವೈದ್ಯಪದ್ಧತಿಯ ಬಗ್ಗೆ ಅರಿವಿದ್ದ ಕಾರಣ ತಮ್ಮ ಕಾಯಿಲೆಗಳನ್ನು ಹೇಳಿಕೊಂಡು ಹಲವಾರು ಮಹಿಳೆಯರು ಚಿಕಿತ್ಸೆಗಾಗಿ ಈತನ ಬಳಿ ಆಗಮಿಸುತ್ತಿದ್ದರು. ಇವರಲ್ಲಿ ಹಲವರ ಕಾಯಿಲೆಗಳನ್ನು ತನ್ನ ಚಿಕಿತ್ಸೆಯ ಮೂಲಕ ಗುಣಪಡಿಸಿದ ಬಳಿಕ ಇದಕ್ಕೆ ಉಪಕಾರವಾಗಿ ತನ್ನ ಪತ್ನಿಯಾಗುವಂತೆ ಕೇಳಿಕೊಳ್ಳುತ್ತಿದ್ದ. ಈತನ ಪತ್ನಿಯರಲ್ಲೊಬ್ಬರು ಹೀಗೆ ವಿವರಿಸಿದ್ದಾರೆ: "ನನಗಿಂತ ತುಂಬಾ ಹೆಚ್ಚು ವಯಸ್ಸಾಗಿದ್ದ ವ್ಯಕ್ತಿಯನ್ನು ಮದುವೆಯಾಗಲು ಸಾಧ್ಯವಿಲ್ಲವೆಂದು ಹೇಳಿದರೂ ಆತ ಇದು ದೇವರ ಆಜ್ಞೆ, ಇದನ್ನು ಪಾಲಿಸಲೇಬೇಕೆಂದು ಹೇಳಿದ್ದರಿಂದ ಅನಿವಾರ್ಯವಾಗಿ ಮದುವೆಯಾಗಲೇಬೇಕಾಯಿತು"

ಈತನ ವಿರುದ್ಧ ಫತ್ವಾವನ್ನೂ ಹೊರಡಿಸಲಾಗಿತ್ತು

ಈತನ ವಿರುದ್ಧ ಫತ್ವಾವನ್ನೂ ಹೊರಡಿಸಲಾಗಿತ್ತು

ಇಸ್ಲಾಂ ಧರ್ಮದ ಪ್ರಕಾರ ವ್ಯಕ್ತಿಯೊಬ್ಬ ಗರಿಷ್ಠ ನಾಲ್ಕು ಮದುವೆಯಾಗಬಹುದು, ಅದೂ ಆ ಸಮಯದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದ್ದು ಪ್ರತಿಯೊಬ್ಬ ಪತ್ನಿಗೂ ಸಮಾನವಾದ ಹಕ್ಕುಬಾಧ್ಯತೆಗಳನ್ನು, ಜೀವನ ನಡೆಸಲು ಅವಶ್ಯವಿದ್ದಷ್ಟು ಧನಿಕನಾಗಿದ್ದರೆ ಮಾತ್ರ. ಆದರೆ ಇಲ್ಲಿ ಈ ನಿಯಮವನ್ನು ಈತ ಸರಾಸಗಟಾಗಿ ಉಲ್ಲಂಘಿಸಿದ್ದ ಕಾರಣ ವಿದ್ವಾಂಸರು ಈತನ ವಿರುದ್ಧ ಫತ್ವಾ ಅಥವಾ ನಿಷೇಧಾಜ್ಞೆಯನ್ನೂ ಹೊರಡಿಸಿದ್ದರು.

ಕೆಲವನ್ನು ಈತ ವಿಚ್ಚೇದಿಸಿದ್ದಾನೆ ಸಹಾ

ಕೆಲವನ್ನು ಈತ ವಿಚ್ಚೇದಿಸಿದ್ದಾನೆ ಸಹಾ

120 ಪತ್ನಿಯರಲ್ಲಿ ಈತ ಹತ್ತು ಪತ್ನಿಯರಿಗೆ ವಿಚ್ಛೇದನ ನೀಡಿದ್ದಾನೆ. ಆದರೆ ಉಳಿದ 110 ಪತ್ನಿಯರನ್ನು ಆತ ಪತ್ನಿಯರೆಂದೇ ಪರಿಗಣಿಸಿದ್ದಾನೆ.

ಅವಕಾಶ ಸಿಕ್ಕಿದ್ದರೆ ಇನ್ನೂ ಹೆಚ್ಚು ಮದುವೆಯಾಗುತ್ತಿದ್ದ

ಅವಕಾಶ ಸಿಕ್ಕಿದ್ದರೆ ಇನ್ನೂ ಹೆಚ್ಚು ಮದುವೆಯಾಗುತ್ತಿದ್ದ

ಈ ಬಗ್ಗೆ ನಡೆಸಿದ ಸಂದರ್ಶನವೊಂದರಲ್ಲಿ ಅವಕಾಶ ಸಿಕ್ಕರೆ ಜೀವಿತಾವಧಿಯಲ್ಲಿ ಇನ್ನೂ ಹೆಚ್ಚು ಮದುವೆಯಾಗುವುದಾಗಿ ತಿಳಿಸಿದ್ದ.

ಈತನ ನಂಬಿಕೆಯ ಪ್ರಕಾರ

ಈತನ ನಂಬಿಕೆಯ ಪ್ರಕಾರ

ಈತ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ ಪ್ರಕಾರ ಈತ ಯಾರನ್ನೂ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿರಲಿಲ್ಲ. ಬದಲಿಗೆ ಅವರೇ ತನ್ನ ಬಳಿ ಬರುತ್ತಾರೆ ಹಾಗೂ ಇವರನ್ನು ಮದುವೆಯಾಗುವಂತೆ ದೇವರೇ ನನ್ನಲ್ಲಿ ಕೇಳಿಕೊಳ್ಳುತ್ತಾರೆ ಮತ್ತು ಸರಳವಾಗಿ ಅವರನ್ನು ಮದುವೆಯಾಗುತ್ತೇನೆ, ಅಷ್ಟೇ.

ಕಡೆಗೂ 93 ರ ವಯಸ್ಸಿನಲ್ಲಿ ಈತ ತೀರಿಕೊಂಡ

ಕಡೆಗೂ 93 ರ ವಯಸ್ಸಿನಲ್ಲಿ ಈತ ತೀರಿಕೊಂಡ

ವಯೋಸಹಜವಾಗಿ ತನ್ನ 93ನೇ ವಯಸ್ಸಿನಲ್ಲಿ ಈತ ತೀರಿಕೊಂಡಾಗ ಸರಿಯಾಗಿ ನೂರಿಪ್ಪತ್ತು ಪತ್ನಿ ಮತ್ತು 203 ಮಕ್ಕಳನ್ನು ಹೊಂದಿದ್ದ.

English summary

Nigerian Muslim Man Who Had 120 Wives & 203 Kids!

There are many Islamic rules that have been created by people with very less knowledge. This is the reason why Muslim women are fighting to remove the triple talak rule that people have been following blindly. This is one of the examples in which a Nigerian man misused the liberty of polygamy and married 120 women and bore 203 kids!
X
Desktop Bottom Promotion