ಮಾಟ ಮಂತ್ರ ಮಾಡಿ ಬಾಲಕಿಯ ಶರೀರಕ್ಕೆಲ್ಲಾ ಸೂಜಿ ಚುಚ್ಚಿದರು!

By: manu
Subscribe to Boldsky

ಮಾಟ ಮಂತ್ರ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕ್ರಿಯೆಯಾಗಿದ್ದು ಭಾರತದಾದ್ಯಂತ ಇದನ್ನು ಇಂದಿಗೂ ಪಾಲಿಸಿಕೊಂಡು ಬರಲಾಗುತ್ತಿದೆ. ಮಂತ್ರ ತಂತ್ರಗಳ ಮೂಲಕ ಒಬ್ಬರಿಗೆ ಹಾನಿ ಮಾಡುವುದು ಮಾನವರ ಮನಸ್ಸಿನ ಕುತ್ಸಿತ ಭಾವನೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂದಿನ ದಿನಗಳಲ್ಲಿಯೂ ಶೀಘ್ರವಾಗಿ ಹಣ ಸಂಪಾದನೆ ಮಾಡಲೆಂದು ಕಪಟ ಮಾಂತ್ರಿಕರು ಕೆಲವಾರು ತಂತ್ರಗಳನ್ನು ಅನುಸರಿಸುತ್ತಾರೆ. ಇದರಲ್ಲಿ ಕೆಲವು ಬಲಿದಾನದಂತಹ ಅಮಾನವೀಯ ತಂತ್ರಗಳೂ ಸೇರಿವೆ. ಇಂತಹ ಪ್ರಕರಣಗಳ ಬಗ್ಗೆ ಪತ್ರಿಕೆಗಳಲ್ಲಿ ಆಗಾಗ ವರದಿಗಳು ಬರುತ್ತಲೇ ಇರುತ್ತವೆ.

ಲಿಂಬೆಹಣ್ಣಿನ ಅಲೌಕಿಕ ಶಕ್ತಿ: ಮಾಟಮಂತ್ರದ ರಹಸ್ಯ ಬಯಲು!

ಕೆಲವು ಪ್ರಕರಣಗಳಲ್ಲಿ ನಡೆದಿರುವ ಹಿಂಸಾಚಾರ ಮನ ಕಲಕುತ್ತದೆ. ಮಂತ್ರಗಾರಿಕೆಯಲ್ಲಿ ಬೊಂಬೆಯೊಂದನ್ನು ಮಾಡಿ ಅದಕ್ಕೆ ಸೂಜಿಯನ್ನು ಚುಚ್ಚಿ ವ್ಯಕ್ತಿಯೊಬ್ಬರನ್ನು ಹಿಂಸೆ ಮಾಡುವ ಘೋರ ಕ್ರಮವೊಂದಿದೆ. ಈ ಬೊಂಬೆಗೆ ವೂಡೂ ಬೊಂಬೆ ಎಂದು ಕರೆಯುತ್ತಾರೆ. ಒಂದು ಪ್ರಕರಣದಲ್ಲಿ ಮೂರು ವರ್ಷದ ಪುಟ್ಟ ಬಾಲಕಿಯನ್ನೇ ವೂಡೂ ಬೊಂಬೆಯಂತೆ ಬಳಸಿದ ಪ್ರಕರಣ ನಿಮ್ಮನ್ನು ಬೆಚ್ಚಿ ಬೀಳಿಸುತ್ತದೆ.

ತಂತ್ರ ವಿದ್ಯೆ: ಅದೇನು ಮಾಯೆ, ಅದೇನು ಜಾದೂ!

ಮಹಿಳೆಯೊಬ್ಬಳು ತನ್ನ ಉದ್ಯೋಗಿಯೊಬ್ಬಳ ಮಗಳನ್ನೇ ಈ ನೀಚ ಕೆಲಸಕ್ಕೆ ಬಳಸಿದ್ದು ದೇವರು ಮಾತೆಯ ರೂಪದಲ್ಲಿರಬೇಕಾದ ಈ ಮಹಿಳೆಯಲ್ಲಿ ಯಾವ ರಾಕ್ಷಸಿಯನ್ನಿಟ್ಟ ಎಂದು ಚಿಂತಿಸುವಂತಾಗುತ್ತದೆ. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ....

ಈ ಬಾಲಕಿಯನ್ನು ಆಸ್ಪತ್ರೆಗೆ ಕರೆತರಲಾಯ್ತು

ಈ ಬಾಲಕಿಯನ್ನು ಆಸ್ಪತ್ರೆಗೆ ಕರೆತರಲಾಯ್ತು

ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿದ್ದ ಪುಟ್ಟ ಬಾಲಕಿಯನ್ನು ಆಕೆಯ ತಾಯಿ ಆಸ್ಪತ್ರೆಗೆ ಕರೆತಂದಿದ್ದಳು. ತನ್ನ ಮಗಳ ಈ ಸ್ಥಿತಿಗೆ ತನ್ನ ಉದ್ಯೋಗದಾತಳೇ ಕಾರಣ ಎಂದು ಆಕೆಗೆ ಈಗ ಗೊತ್ತಾಗಿತ್ತು. ಬಾಲಕಿ ಅತಿ ಹೆಚ್ಚಿನ ಜ್ವರದಿಂದ ನರಳುತ್ತಿದ್ದಳು.

ಈಕೆ ಮೈಯಲ್ಲಿ ಹಲವಾರು ಸೂಜಿಗಳಿದ್ದವು!

ಈಕೆ ಮೈಯಲ್ಲಿ ಹಲವಾರು ಸೂಜಿಗಳಿದ್ದವು!

ವೈದ್ಯರು ಈಕೆಯ ದೇಹದ ವಿವಿಧ ಭಾಗಗಳಿಂದ ಏಳು ನಾಲ್ಕಿಂಚು ಉದ್ದ ಸೂಜಿಗಳನ್ನು ಹೊರತೆಗೆದರು. ಇವುಗಳಲ್ಲಿ ಕೆಲವು ಆಕೆಯ ಗುಪ್ತಾಂಗಳಲ್ಲಿಯೂ ಇದ್ದವು. ಎರಡು ಸೂಜಿಗಳು ಯಕೃತ್ ಹಾಗೂ ಮೂತ್ರಕೋಶಗಳನ್ನು ತೂರಿದ್ದರೆ ಒಂದೊಂದು ಮೂತ್ರಪಿಂಡದಲ್ಲಿಯೂ ಒಂದೊಂದು ಸೂಜಿ, ಗುಪ್ತಾಂಗದಲ್ಲೊಂದು ಹಾಗೂ ಕೆಳಹೊಟ್ಟೆಯಲ್ಲಿ ಇನ್ನೊಂದು ಸೂಜಿ ಚುಚ್ಚಲಾಗಿತ್ತು.

ಈ ಬಾಲಕಿಯನ್ನು ಉಳಿಸಲು ಸಾಧ್ಯವಾಗಲಿಲ್ಲ

ಈ ಬಾಲಕಿಯನ್ನು ಉಳಿಸಲು ಸಾಧ್ಯವಾಗಲಿಲ್ಲ

ಸೂಜಿಗಳ ಮೂಲಕ ಪ್ರಮುಖ ಅಂಗಗಳು ಘಾಸಿಗೊಂಡಿದ್ದು ಮಾತ್ರವಲ್ಲ, ಈಕೆಯನ್ನು ಆಸ್ಪತ್ರೆಗೆ ಕರೆತಂದಾಗ ಸೂಜಿಗಳಿಂದ ಆಗಮಿಸಿದ್ದ ಸೋಂಕು ಇಡಿಯ ದೇಹವನ್ನು ವ್ಯಾಪಿಸಿಬಿಟ್ಟಿತ್ತು. ಈ ಸೋಂಕುಗಳನ್ನು ತಡೆಯಲು ವೈದ್ಯರು ಇನ್ನಿಲ್ಲದ ಪ್ರಯತ್ನ ಮಾಡಿದರೂ ಚಿಕಿತ್ಸೆಗೆ ಸ್ಪಂದಿಸದೇ ಈ ಬಾಲಕಿ ಕೊನೆಯುಸಿರೆಳೆದಳು.

ಈ ದೌರ್ಜನ್ಯಕ್ಕೆ ಕೊನೆಯೇ ಇಲ್ಲವೇ?

ಈ ದೌರ್ಜನ್ಯಕ್ಕೆ ಕೊನೆಯೇ ಇಲ್ಲವೇ?

ಈ ತರಹದ ಪ್ರಕರಣಗಳು ಆಗಾಗ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದರೂ ಈ ಬಗ್ಗೆ ಹೆಚ್ಚಿನ ಚರ್ಚೆಗಳಾಗಲೀ ಇವನ್ನು ನಿಷೇಧಿಸುವತ್ತ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಲೀ ನಮ್ಮ ದೇಶದಲ್ಲಿ ಆಗುತ್ತಿಲ್ಲ. ಯಾರೂ ವಿರೋಧಿಸುತ್ತಿಲ್ಲ ಎಂಬ ಕುಹಕವನ್ನೇ ಈ ತಾಂತ್ರಿಕರು ತಮ್ಮ ಪ್ರಯೋಜನಕ್ಕೆ ಬಳಸಿಕೊಂಡು ಇನ್ನಷ್ಟು ಉಗ್ರರಾಗುತ್ತಿರಬಹುದೇ?

ಈ ದೌರ್ಜನ್ಯಕ್ಕೆ ಕೊನೆಯೇ ಇಲ್ಲವೇ?

ಈ ದೌರ್ಜನ್ಯಕ್ಕೆ ಕೊನೆಯೇ ಇಲ್ಲವೇ?

ಕೆಲವರ ಪ್ರಕಾರ ಮಾಂತ್ರಿಕರಲ್ಲಿ ಒಳ್ಳೆಯವರೂ ಕೆಟ್ಟವರೂ ಇರುತ್ತಾರೆ, ಇವರನ್ನು ನಿಷೇಧಿಸಿದರೆ ಒಳ್ಳೆಯ ಮಾಂತ್ರಿಕರೂ ಇಲ್ಲವಾಗುತ್ತಾರೆ, ಆಗ ಇದರ ಪರಿಣಾಮ ಇದಕ್ಕೂ ಘೋರವಾಗಿರುತ್ತದೆ ಎಂಬ ವಾದವನ್ನು ಮುಂದಿಡುತ್ತಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಿ.

All Images Source: Reuters

English summary

Needles Were Found Inside A Girl’s Body After Horrific 'Black Magic' Abuse

Black magic is a practice that is still widely followed in many parts of India. There are many incidents that we read and hear about in the news almost every other day regarding black magic. There are many shocking cases of black magic being practiced and this incident will simply shock you.
Subscribe Newsletter