ಐದು ಬೆಟ್ಟಗಳ ನಡುವೆ ಇದೆ ಈ ಹಳ್ಳಿ! ಇಲ್ಲಿಗೆ ಹೋದವರು ಯಾರೂ ವಾಪಸು ಬರಲ್ಲ!!

By: Arshad
Subscribe to Boldsky

ಭಾರತದಲ್ಲಿ ನಿಗೂಢ ಸ್ಥಳಗಳಿಗೇನೂ ಕೊರತೆಯಿಲ್ಲ. ಸಾವಿರಾರು ಪಾಳು ಸ್ಥಳಗಳಿವೆ ಇವೆ. ಇವುಗಳಲ್ಲಿ ಯಾರೂ ಹೆಜ್ಜೆಯನ್ನು ಇಡುವ ಧೈರ್ಯವನ್ನೇ ಮಾಡದ ಸ್ಥಳಗಳೂ ಇವೆ. ಈ ಸ್ಥಳಕ್ಕೆ ಭೇಟಿ ನೀಡಿದರೆ ಮತ್ತೆ ಹಿಂದಿರುಗಲು ಸಾಧ್ಯವಿಲ್ಲ ಎಂಬ ವದಂತಿಗಳು ದಟ್ಟವಾಗಿ ಹರಡಿವೆ. ಭಾರತದಂತೆಯೇ ವಿಶ್ವದ ಇನ್ನೂ ಹಲವೆಡೆ ಇಂತಹ ಪಾಳುಬಿದ್ದ ಊರು-ಕಟ್ಟಡಗಳಿವೆ. 

ರಕ್ತ ಕುಡಿಯುವ ರಕ್ತಪಿಶಾಚಿಗಳ ಲೋಕದತ್ತ ಒಂದು ಪ್ರಯಾಣ

ಇಂತಹ ಒಂದು ಹಳ್ಳಿ ರಷ್ಯಾ ದೇಶದಲ್ಲಿದ್ದು ಈ ಊರನ್ನು ಪ್ರವೇಶಿಸಿದವರು ಜೀವಂತವಾಗಿ ಹಿಂದಿರುಗುವುದಿಲ್ಲ, ಶಾಶ್ವತವಾಗಿ ಅಲ್ಲಿಯೇ ಬಂದಿಯಾಗುತ್ತಾರೆ ಎಂಬ ವದಂತಿ ಇದೆ. ಭಾರತದಲ್ಲಿ ಈ ವದಂತಿಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವ ಕ್ರಮ ಇಲ್ಲವಾದರೂ ರಷ್ಯಾದಲ್ಲಿ ಮಾತ್ರ ಸಂಶೋಧನೆ ನಡೆದಿದೆ. ಈ ಸಂಶೋಧನೆಯಿಂದ ಏನು ತಿಳಿದುಬಂದಿದೆ ಎಂಬ ಕುತೂಹಲ ಮೂಡಿತೇ? ಒಳಹೋದವರು ಜೀವಂತವಾಗಿ ಬಂದರೇ? ಮುಂದೆ ಓದಿ....

ಈ ಸ್ಥಳಕ್ಕೆ ಒಂದು ಸಂಶೋಧನಾ ತಂಡವನ್ನು ಕಳಿಸಲಾಗಿತ್ತು

ಈ ಸ್ಥಳಕ್ಕೆ ಒಂದು ಸಂಶೋಧನಾ ತಂಡವನ್ನು ಕಳಿಸಲಾಗಿತ್ತು

ಈ ಸ್ಥಳದ ಬಗ್ಗೆ ಹಲವು ವಿವರಣೆಗಳನ್ನು ಹಾಗೂ ಮಾಹಿತಿಗಳನ್ನು ಸಂಗ್ರಹಿಸಿದ ವಿಜ್ಞಾನಿಗಳು ಈ ಸಿಟಿ ಆಫ್ ದ ಡೆಡ್ ಅಥವಾ ಸತ್ತವರ ನಗರ ಎಂದೇ ಪ್ರಸಿದ್ಧ ಗ್ರಾಮಕ್ಕೆ ಹಲವಾರು ಆಧುನಿಕ ಉಪಕರಣಗಳೊಂದಿಗೆ ಭೇಟಿ ನೀಡಿದ್ದರು.

ಎಲ್ಲಿದೆ ಈ ಊರು?

ಎಲ್ಲಿದೆ ಈ ಊರು?

ರಷ್ಯಾ ದೇಶದ ಉತ್ತರ ಭಾಗದಲ್ಲಿರುವ ನಾರ್ದರ್ನ್ ಒಸೆಟಿಯಾ ಎಂಬ ಪ್ರದೇಶದಲ್ಲಿದೆ ದಾರ್ಗೌಸ್ ಎಂಬ ಹೆಸರಿನ ಗ್ರಾಮ (Dargavs). ನಮಗೆ ಸಾಮಾನ್ಯವಾಗಿ ಕೇಳಿಬರುವ ಈ ಹೆಸರನ್ನು ರಷ್ಯನ್ನರು ಕೇಳಿದರೆ ಬೆಚ್ಚಿ ಬೀಳುತ್ತಾರೆ. ಏಕೆಂದರೆ ಇವರ ನಂಬಿಕೆಯ ಪ್ರಕಾರ ಈ ಗ್ರಾಮದಲ್ಲಿ ಸತ್ತವರು ಮಾತ್ರವೇ ಇರುತ್ತಾರೆ. ಐದು ಬೆಟ್ಟಗಳ ನಡುವಣ ತಪ್ಪಲಿನಲ್ಲಿರುವ ಈ ಸುಂದರ ಗ್ರಾಮದಲ್ಲಿ ಬೆಟ್ಟದ ಕಲ್ಲುಗಳನ್ನೇ ಬಳಸಿ ಕಟ್ಟಲಾಗಿರುವ ನೂರಾರು ಕುಟೀರಗಳೂ ಇವೆ.

ಈ ಗ್ರಾಮಕ್ಕೆ ಸಿಕ್ಕ ಅನ್ವರ್ಥನಾಮ

ಈ ಗ್ರಾಮಕ್ಕೆ ಸಿಕ್ಕ ಅನ್ವರ್ಥನಾಮ

ಈ ಗ್ರಾಮವನ್ನು ದಾರ್ಗೌಸ್ ಎಂಬ ಹೆಸರಿಗಿಂತಲೂ ಸಿಟಿ ಆಫ್ ದ ಡೆಡ್ ಎಂದೇ ಹೆಚ್ಚಾಗಿ ರಷ್ಯನ್ನರು ಗುರುತಿಸುತ್ತಾರೆ. ಏಕೆಂದರೆ ಈ ಗ್ರಾಮದಲ್ಲಿರುವ ಕುಟೀರಗಳಲ್ಲಿ ಸ್ಥಳೀಯ ಗ್ರಾಮಗಳಲ್ಲಿರುವ ಜನರು ತೀರಿಹೋದ ತಮ್ಮವರ ಕಳೇಬರಗಳನ್ನಿರಿಸುತ್ತಿದ್ದರು ಎಂಬ ನಂಬಿಕೆ ಬೆಳೆದು ಬಂದಿದೆ.

ಈ ಗ್ರಾಮಕ್ಕೆ ಹಲವು ನೆಲಮಾಳಿಗೆಗಳೂ ಇವೆ

ಈ ಗ್ರಾಮಕ್ಕೆ ಹಲವು ನೆಲಮಾಳಿಗೆಗಳೂ ಇವೆ

ಈ ಗ್ರಾಮವನ್ನು ಐದು ಬೆಟ್ಟಗಳು ಸುತ್ತುವರೆದಿರುವ ಕಾರಣ ಈ ಗ್ರಾಮಕ್ಕೆ ಪ್ರವೇಶ ಪಡೆಯುವುದು ಅಷ್ಟು ಸುಲಭವಲ್ಲ. ಅಷ್ಟೇ ಅಲ್ಲ, ಈ ನಗರದ ಇನ್ನೂ ರಹಸ್ಯಾತ್ಮಕ ಮಾಹಿತಿ ಎಂದರೆ ಇಲ್ಲಿ ಕಟ್ಟಲಾಗಿರುವ ಕಟ್ಟಡಗಳಿಗೆ ಭೂತಳದಲ್ಲಿ ಹಲವು ನೆಲಮಹಡಿಗಳೂ ಇವೆ. ಕೆಲವು ಕಟ್ಟಡಗಳಿಗೆ ನಾಲ್ಕು ಅಂತಸ್ತುಗಳಷ್ಟು ನೆಲದಡಿಯ ಮಹಡಿಗಳಿವೆ.

 ಇದೊಂದು ವಿಶಾಲ ಸ್ಮಶಾನವೇ ಸರಿ

ಇದೊಂದು ವಿಶಾಲ ಸ್ಮಶಾನವೇ ಸರಿ

ಪ್ರತಿ ಮಹಡಿಯಲ್ಲಿಯೂ ಇಲ್ಲಿ ಕಳೇಬರಗಳನ್ನು ದಫನ ಮಾಡಲಾಗಿದೆ. ಯಾವ ಕಟ್ಟಡದಲ್ಲಿ ಎಷ್ಟು ಹೆಚ್ಚು ಮಹಡಿಗಳಿವೆಯೋ ಅಷ್ಟು ಹೆಚ್ಚು ಕಳೇಬರಗಳಿಗೆ ಸ್ಥಳಾವಕಾಶ ಲಭಿಸಿದೆ. ಈ ಊರಿನಲ್ಲಿ ಸರಿಸುಮಾರು 99 ಕಟ್ಟಡಗಳಿದ್ದು ಎಲ್ಲಾ ಕಟ್ಟಡಗಳಲ್ಲಿ ಸುಮಾರು ಹದಿನಾರು ಶತಮಾನಗಳಿಂದಲೂ ಕಳೇಬರಗಳನ್ನು ಹೂಳಲಾಗುತ್ತಾ ಬರಲಾಗಿದೆ.

 ಸ್ಥಳೀಯರ ನಂಬಿಕೆಯ ಪ್ರಕಾರ....

ಸ್ಥಳೀಯರ ನಂಬಿಕೆಯ ಪ್ರಕಾರ....

ಸ್ಥಳೀಯರು ಈ ವಿಶಿಷ್ಟ ಗ್ರಾಮದ ಬಗ್ಗೆ ಹಲವಾರು ನಂಬಿಕೆಗಳನ್ನು ಹೊಂದಿದ್ದಾರೆ. ಅವರ ಪ್ರಕಾರ ಈ ಕಟ್ಟಡಗಳಿಗೆ ಭೇಟಿ ನೀಡಿದವರು ಮತ್ತೆ ಜೀವಂತರಾಗಿ ಹಿಂದಿರುಗಲಾರರು. ಇದೇ ಕಾರಣಕ್ಕೆ ಈ ಗ್ರಾಮಕ್ಕೆ ಭೇಟಿ ನೀಡಲು ಪ್ರವಾಸಿಗರೇ ಬರುವುದಿಲ್ಲ. ಅಷ್ಟೇ ಅಲ್ಲ, ಐದು ಪರ್ವತಗಳ ತಪ್ಪಲಿನಲ್ಲಿರುವ ಕಾರಣದಿಂದಲೇ ಇಲ್ಲಿನ ಹವಾಮಾನವೂ ವಿಪರೀತವಾಗಿದ್ದು ವಾಸ್ತವ್ಯಕ್ಕೆ ಸೂಕ್ತವೂ ಅಲ್ಲ.

ವಿಚಿತ್ರ ನಂಬಿಕೆ

ವಿಚಿತ್ರ ನಂಬಿಕೆ

ಸ್ಥಳೀಯರು ನಂಬಿಕೊಂಡು ಬಂದಿರುವ ಪ್ರಕಾರ ಸುಮಾರು ಹದಿನೆಂಟನೆಯ ಶತಮಾನದಲ್ಲಿ ಇಲ್ಲಿ ವಾಸಿಸುತ್ತಿದ್ದ ಜನರು ತಮ್ಮ ಮನೆಯಲ್ಲಿದ್ದ ಕಾಯಿಲೆ ಬಿದ್ದ ಸಂಬಂಧಿಕರನ್ನು ಇಲ್ಲಿನ ಕಟ್ಟಡಗಳಲಿಟ್ಟು ಕಾಲಕಾಲಕ್ಕೆ ಅನ್ನಾಹಾರಗಳು ದೊರಕುವಂತೆ ಮಾಡುತ್ತಿದ್ದರಂತೆ. ಏಕೆಂದರೆ ಅಲ್ಲಿನ ಕ್ರಮದ ಪ್ರಕಾರ ಕಾಯಿಲೆ ಬಿದ್ದವರು ಕಟ್ಟಡದೊಳಗೇ ಇರುವುದು ಕಡ್ಡಾಯವಾಗಿದ್ದು ಅಲ್ಲಿಯೇ ಸಾವನ್ನು ಎದುರುಗೊಳ್ಳಬೇಕಾಗಿತ್ತು.

ಈ ಗ್ರಾಮಸ್ಥರು ಹೇಗೆ ಜೀವಿಸುತ್ತಿದ್ದರು?

ಈ ಗ್ರಾಮಸ್ಥರು ಹೇಗೆ ಜೀವಿಸುತ್ತಿದ್ದರು?

ಕಾಯಿಲೆ ಬಿದ್ದು ಸಾಯುತ್ತಿದ್ದವರ ಕಥೆಯೇನೋ ಸರಿ, ಆದರೆ ಉಳಿದ ಆರೋಗ್ಯವಂತರು ಹೇಗೆ ಜೀವಿಸುತ್ತಿದ್ದರು? ಈ ಪ್ರಶ್ನೆಗೆ ಯಾರಲ್ಲಿಯೂ ಸೂಕ್ತವಾದ ಉತ್ತರವಿಲ್ಲ. ಆದರೆ ಈ ಪ್ರಶ್ನೆಯನ್ನು ಹೊತ್ತು ಬಂದ ಸಂಶೋಧಕರಿಗೆ ಈ ಬಗ್ಗೆ ಸಂಶೋಧನೆಗಾಗಿ ಬಹಳ ಗ್ರಾಸ ಸಿಕ್ಕಿದೆ.

ಸಾವಿನ ದೋಣಿ

ಸಾವಿನ ದೋಣಿ

ಈ ಹಳ್ಳಿಯಲ್ಲಿ ಉತ್ಖತನ ನಡೆಸಿದ ಪ್ರಾಕ್ತನಶಾಸ್ತ್ರಜ್ಞರಿಗೆ ಈ ಕಟ್ಟಡಗಳ ಬಳಿ ಇರುವ ಕೆಲವು ಗೋರಿಗಳ ಬಳಿ ಕೆಲವು ದೋಣಿಗಳು ಸಿಕ್ಕಿವೆ. ಇವರ ಪ್ರಕಾರ ದೋಣಿಯ ಆಕಾರದಲ್ಲಿದ್ದ ಶವಪೆಟ್ಟಿಗೆಗಳನ್ನು ಇವರು ಅಂತ್ಯಸಂಸ್ಕಾರಕ್ಕಾಗಿ ಬಳಸುತ್ತಿದ್ದಿರಬಹುದು. ಹಿಂದಿನ ಜನರ ನಂಬಿಕೆಯಂತೆ ದೋಣಿಯಾಕೃತಿಯ ಶವಪೆಟ್ಟಿಗೆಯನ್ನು ಬಳಸುವ ಮೂಲಕ ದೇಹದಿಂದ ಹೊರಟ ಆತ್ಮ ದೋಣಿಯಲ್ಲಿ ಸಾಗಿ ಸ್ವರ್ಗವನ್ನು ಸೇರುತ್ತದೆ.

ಬಾವಿಯ ರಹಸ್ಯ

ಬಾವಿಯ ರಹಸ್ಯ

ಈ ಸಂಶೋಧಕರು ಈ ಹಳ್ಳಿಯ ಪ್ರತಿ ಕೆಳಮಹಡಿಯ ಸ್ಥಳದ ನಡುವೆ ಒಂದು ಬಾವಿಯನ್ನೂ ಕಂಡುಹಿಡಿದಿದ್ದಾರೆ. ಶವಸಂಸ್ಕಾರ ಮಾಡಿದ ಬಳಿಕ ಈ ಬಾವಿಗಳಲ್ಲಿ ನಾಣ್ಯಗಳನ್ನು ಎಸೆಯುತ್ತಿದ್ದರು. ಒಂದು ವೇಳೆ ಮೊದಲು ಬಿದ್ದ ನಾಣ್ಯದ ಮೇಲೆ ಇನ್ನೊಂದು ನಾಣ್ಯ ಬಿದ್ದು ಟಣ್ ಎಂಬ ಶಬ್ದ ಕೇಳಿಸಿದರೆ ಸತ್ತ ವ್ಯಕ್ತಿಯ ಆತ್ಮ ನೇರವಾಗಿ ಸ್ವರ್ಗಕ್ಕೆ ಹೋಗುತ್ತದೆ ಎಂದು ಈ ಜನರು ಭಾವಿಸಿದ್ದರು.

English summary

Mysterious Village From Where Nobody Returns Alive

We hear stories about various haunted places. Some of these haunted places are for real, while there are those structures that have been left abandoned for long. It is believed that people who visit these places tend to never return. So is the story of a village in Russia, where people are believed to never return alive.
Subscribe Newsletter