For Quick Alerts
ALLOW NOTIFICATIONS  
For Daily Alerts

  ಭಾರತದಲ್ಲಿರುವ ಭಯ ಹುಟ್ಟಿಸುವ ಸ್ಥಳಗಳು! ಇದರ ರಹಸ್ಯ ಇನ್ನೂ ನಿಗೂಢ!

  By Deepu
  |

  ಭಾರತ ವಿಭಿನ್ನ ಜಾತಿ ಧರ್ಮಗಳನ್ನು ಒಳಗೊಂಡಿರುವ ಪವಿತ್ರ ಸ್ಥಳ. ಇಲ್ಲಿ ಪ್ರಸಿದ್ಧ ದೇವಾಲಯಗಳು ಸ್ಮಾರಕಗಳು ಇರುವುದನ್ನು ಕಾಣಬಹುದು. ಇದರೊಟ್ಟಿಗೆ ವಿಚಿತ್ರ ಹಾಗೂ ಭಯ ಹುಟ್ಟಿಸುವಂತಹ ತಾಣಗಳು ಇವೆ. ಅವುಗಳ ಬಗ್ಗೆ ಅನೇಕರು ತಿಳಿದಿಲ್ಲ. ಆ ಸ್ಥಳಗಳನ್ನು ಅಸ್ತಿ ಪಂಜರಗಳ ಸರೋವರ, ಪ್ರೇತಗಳು ಅಥವಾ ಆತ್ಮಹತ್ಯಾ ಸರೋವರ ಎಂದು ಸಹ ಕರೆಯುತ್ತಾರೆ.

  ಅತ್ಯಂತ ಭಯಾನಕವಾದಂತಹ ಚಿತ್ರಣವನ್ನು ಒಳಗೊಂಡಿರುವ ಈ ಸ್ಥಳಗಳಲ್ಲಿ ಸಾಕಷ್ಟು ಭೂತ ಪ್ರೇತಗಳಿವೆ ಎಂದು ಹೇಳಲಾಗುತ್ತದೆ. ಈ ಸ್ಥಳಕ್ಕೆ ಸಂಜೆ 6 ಗಂಟೆಯ ನಂತರ ಯಾರಿಗೂ ಪ್ರವೇಶಕ್ಕೆ ಅನುಮತಿ ನೀಡಲಾಗುವುದಿಲ್ಲ. ಇಂತಹ ಭಯವನ್ನು ಹುಟ್ಟಿಸುವಂತಹ ಸ್ಥಳಗಳಿಗೆ ಭೇಟಿ ನೀಡಿದರೆ ತೊಂದರೆ ಹಾಗೂ ಆಪತ್ತನ್ನು ನಾವೇ ಕೈಯಾರೆ ಕರೆದುಕೊಂಡಂತಾಗುವುದು. ಸಾಂಸ್ಕೃತಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಶ್ರೀಮಂತಗೊಂಡ ನಮ್ಮ ದೇಶದಲ್ಲಿ ಆದಷ್ಟು ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿ. ಅಪ್ಪಿತಪ್ಪಿಯೂ ಇಂತಹ ನಿಗೂಢ ಹಾಗೂ ಭಯಾನಕ ಸ್ಥಳಗಳಿಗೆ ಭೇಟಿ ನೀಡದಿರಿ. ಆ ಪ್ರದೇಶಗಳ ಕಿರು ಪರಿಚಯ ಈ ಕೆಳಗಿನಂತಿದೆ ನೋಡಿ... 

  ಬ್ರಿಜ್ ರಾಜ್ ಭವನ್ ಅರಮನೆ

  ಬ್ರಿಜ್ ರಾಜ್ ಭವನ್ ಅರಮನೆ

  ಈ ಅರಮನೆಯು ಭಾರತದ ಭೀಕರ ಅಥವಾ ಭಯಾನಕ ಸ್ಥಳಗಳಲ್ಲಿ ಒಂದು. ಇಲ್ಲಿಯ ಕಾವಲುಗಾರರಿಗೆ ಪ್ರೇತಗಳು ಕಪಾಳಕ್ಕೆ ಹೊಡೆಯುತ್ತವೆ ಎನ್ನಲಾಗುತ್ತದೆ. ರಾಜಸ್ಥಾನದ ಕೋಟಾದಲ್ಲಿರುವ ಈ ಅರಮನೆ ಅತ್ಯಂತ ಪ್ರಾಚೀನ ಅರಮನೆ. ಇಲ್ಲಿ ಒಂದು ನಿರುಪದ್ರವ ಪ್ರೇತ ವಾಸಿಸುತ್ತಿದೆ ಎಂದು ಹೇಳಲಾಗುತ್ತದೆ. 1857ರಲ್ಲಿ ಕೋಟಾದಲ್ಲಿ ಬ್ರಿಟಿಷ್ ನಿವಾಸಿಯಾಗಿ ಸೇವೆ ಸಲ್ಲಿಸುತ್ತಿದ್ದ ಮೇಜರ್ ಬರ್ಟ್‍ನ್ನ ಪ್ರೇತವಾಗಿದ್ದಾನೆ. ಎಂದು ನಂಬಲಾಗಿದೆ. ಈ ಪ್ರೇತ 178 ವರ್ಷಗಳಿಂದಲೂ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.

  ಮಾರ್ಕೋನಹಳ್ಳಿ ಅಣೆಕಟ್ಟು

  ಮಾರ್ಕೋನಹಳ್ಳಿ ಅಣೆಕಟ್ಟು

  ಮಾರ್ಕೋನಹಳ್ಳಿ ಅಣೆಕಟ್ಟು ಪ್ರಿಸ್ಧವಾದ ನಿಗೂಢ ಸ್ಥಳಗಳಲ್ಲಿ ಒಂದು. ಇಲ್ಲಿ ಬೈಕ್ ಸವಾರರು ಇದ್ದಕ್ಕಿದ್ದಂತೆಯೇ ನಾಪತ್ತೆಯಾಗುತ್ತಾರೆ ಎನ್ನಲಾಗುತ್ತದೆ. ಈ ಮಾರ್ಗದಲ್ಲಿ ನೀವು ಹೋಗುವಾಗ ಬೈಕ್‍ಗಳನ್ನು ನಿಲ್ಲಿಸಿದರೆ ಜಾಗೃತವಾಗಿರಬೇಕಾಗುತ್ತದೆ. ಇಲ್ಲವಾದರೆ ಆಪತ್ತು ಕಟ್ಟಿಟ್ಟ ಬುತ್ತಿ ಎನ್ನಲಾಗುವುದು. ಈ ಸ್ಥಳದಲ್ಲಿ ಒಮ್ಮೆ ಒಬ್ಬ ಮಹಿಳೆಯನ್ನು ಬಲವಂತವಾಗಿ ಕೊಂದು ಹೂಳಲ್ಪಟ್ಟ ಸ್ಥಳ ಎಂದು ಹೇಳುತ್ತಾರೆ. ಈ ಸ್ಥಳದಲ್ಲಿ ಆದ ಕೆಟ್ಟ ಅನುಭವವನ್ನು ಅನೇಕ ಬೈಕ್ ಸವಾರರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

  ರಾಜಸ್ಥಾನದ ಭಂಗಾರ್

  ರಾಜಸ್ಥಾನದ ಭಂಗಾರ್

  ರಾಜಸ್ಥಾನದ ಭಂಗಾರ್‍ಅನ್ನು ಅಧಿಕೃತವಾಗಿ ಭಾರತದ ಪಿಶಾಚಿಗಳಿಂದ ಕೂಡಿರುವ ಭಯಾನಕ ಸ್ಥಳವೆಂದು ಕರೆಯುತ್ತಾರೆ. ಈ ಸ್ಥಳಕ್ಕೆ ಸೂರ್ಯೋದಯದ ಮೊದಲು ಹಾಗೂ ಸೂರ್ಯೋದಯದ ನಂತರದ ಸಮಯದಲ್ಲಿ ಹೋಗುವುದನ್ನು ನಿಷೇಧಿಸಲಾಗಿದೆ. ಹಾಗೊಮ್ಮೆ ಯಾವುದೇ ಭಯವಿಲ್ಲವೆಂದು ಹೋದವರು ಹಿಂತಿರುಗಿ ಬಂದಿಲ್ಲ ಎಂದು ಹೇಳಲಾಗುತ್ತದೆ. ಇಲ್ಲಿಯ ನಿಗೂಢ ಸ್ಥಳಗಳ ಬಗ್ಗೆ ದೂರದರ್ಶಗಳಲ್ಲೂ ಪ್ರಸಾರಗೊಳಿಸಲಾಗುತ್ತು ಎನ್ನಲಾಗುತ್ತದೆ. ಇಲ್ಲಿ ನಡೆಯುವ ಭಯಂಕರ ಘಟನೆಗಳ ಬಗ್ಗೆ ಸ್ಥಳೀಯರು ವಿವರಿಸುತ್ತಾರೆ.

  ಡಿಸೋಜಾ ಚಾವ್ಲಾ

  ಡಿಸೋಜಾ ಚಾವ್ಲಾ

  ಮಹೀಮ್‍ನಲ್ಲಿರುವ ಡಿಸೋಜಾ ಚಾವ್ಲಾ ಇನ್ನೊಂದು ಭಯಾನಕ ಸ್ಥಳಗಳಲ್ಲಿ ಒಂದು. ಈ ಸ್ಥಳದಲ್ಲಿ ಹೇಳಲು ಅಸಾಧ್ಯವಾದಂತಹ ಭಯಾನಕ ಚಟುವಟಿಕೆಗಳು ನಡೆಯುತ್ತವೆ. ಈ ಸ್ಥಳದ ಹಿನ್ನೆಲೆಯ ಪ್ರಕಾರ ಒಬ್ಬ ಮಹಿಳೆ ನೀರಿನಲ್ಲಿ ಬಿದ್ದು ಅಸಹಾಯಕವಾಗಿ ಕೂಗುತ್ತಿದ್ದಳು. ಆ ಸಂದರ್ಭದಲ್ಲಿ ಯಾರ ಸಹಾಯವಿಲ್ಲದೆ ನಿಧನಳಾದಳು ಎಂದು ಹೇಳಲಾಗುತ್ತದೆ. ಅಂತೆಯೇ ಈ ಬಾವಿಯ ಬಳಿ ಬಂದರೆ ಏನಾದರೂ ಒಂದು ಆಘಾತವಾಗುತ್ತದೆ ಎಂದು ಹೇಳುತ್ತಾರೆ.

   ಜಿಪಿ ಬ್ಲಾಕ್ ಮೀರುತ್

  ಜಿಪಿ ಬ್ಲಾಕ್ ಮೀರುತ್

  ಇಲ್ಲಿ ಭಯಾನಕವಾದ ಪೈಶಾಚಿಕ ಕೃತ್ಯಗಳು ನಡೆಯುತ್ತವೆ ಎನ್ನುವುದಕ್ಕೆ ಪ್ರಸಿದ್ಧಿಯಾಗಿದೆ. ಇಲ್ಲಿ ನಾಲ್ಕು ಹುಡುಗರು ಒಂದು ದೀಪದ ಬೆಳಕಿನಲ್ಲಿ ಕುಳಿತು ಮಧ್ಯವನ್ನು ಕುಡಿಯುತ್ತಿರುವಂತೆ ಗೋಚರವಾಗುತ್ತದೆ. ಆದರೆ ಆ ನಾಲ್ಕು ಜನರು ಪ್ರೇತಾತ್ಮಗಳು ಎಂದು ಹೇಳುತ್ತಾರೆ. ಅಲ್ಲದೆ ಇಲ್ಲೊಬ್ಬ ಯುವತಿ ಕೆಂಪು ಬಟ್ಟೆಯನ್ನು ತೊಟ್ಟು ಹೊರಗೆ ಹೋಗುತ್ತಿರುವಂತೆ ಗೋಚರಿಸುತ್ತಾಳೆ ಎಂದು ಸಹ ಹೇಳುತ್ತಾರೆ. ಆದರೆ ಇದೊಂದು ಭಯಾನಕ ಸ್ಥಳವೆಂದು ಜನರು ಹೇಳುತ್ತಾರೆ.

  ದುಮಾಸ್ ಬೀಚ್

  ದುಮಾಸ್ ಬೀಚ್

  ಗುಜರಾತನ ಸೂರತ್‍ನಲ್ಲಿರುವ ದುಮಾಸ್ ಬೀಚ್ ಸಹ ಅತ್ಯಂತ ಭಯಾನಕ ಸ್ಥಳಗಳಲ್ಲಿ ಒಂದು. ಇದನ್ನು ಕಪ್ಪು ಮರಳುಗಳ ತೀರ ಎಂದು ಕರೆಯುತ್ತಾರೆ. ಈ ಸ್ಥಳದ ಸೌಂದರ್ಯವನ್ನು ವೀಕ್ಷಿಸಲು ಬಂದವರೆಲ್ಲಾ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ ಎನ್ನಲಾಗುತ್ತದೆ. ಈ ಕಡಲ ತೀರವನ್ನು ಹಿಂದೂಗಳ ಸಮಾಧಿ ನೆಲವೆಂದು ಹೇಳಲಾಗುತ್ತದೆ. ಆದ್ದರಿಂದಲೇ ಇಲ್ಲಿ ಅನೇಕ ಪ್ರೇತಗಳ ಚಟುವಟಿಕೆಗಳು ನಡೆಯುತ್ತವೆ ಎಂದು ಹೇಳುತ್ತಾರೆ. ಇಲ್ಲಿ ನಿಗದಿಸಿರುವ ನಿರ್ದಿಷ್ಟ ಸ್ಥಳಗಳಿಗಿಂತ ಮುಂದೆ ಹೋಗಲು ಅನುಮತಿ ನೀಡುವುದಿಲ್ಲ. ಹಾಗೊಮ್ಮೆ ಹೋದರೆ ಜನರು ನಿಗೂಢ ರೀತಿಯಲ್ಲಿ ಕಣ್ಮರೆಯಾಗುತ್ತಾರೆ ಎಂದು ಹೇಳಲಾಗುತ್ತದೆ.

  ಜಟಿಂಗಾ

  ಜಟಿಂಗಾ

  ಅಸ್ಸಾಂನ ಜಟಿಂಗ ಗ್ರಾಮದ ಪ್ರದೇಶ. ಇಲ್ಲಿ ನಿಗೂಢವಾಗಿ ಅಸಂಖ್ಯಾತ ಹಕ್ಕಿಗಳು ಸತ್ತು ಬೀಳುತ್ತವೆ. ಇದೊಂದು ನಿಗೂಢ ಪ್ರದೇಶ ಎಂದು ಹೇಳಲಾಗುತ್ತದೆ. ಕೆಲವು ಮಾಹಿತಿಯ ಪ್ರಕಾರ ಸಪ್ಟೆಂಬರ್ ನಿಂದ ಅಕ್ಟೋಬರ್ ತಿಂಗಳ ಒಳಗೆ ಬರುವ ಅಮವಾಸ್ಯೆಯ ದಿನ ಸಂಜೆ 6 ರಿಂದ ರಾತ್ರಿ 9 ಗಂಟೆಯೊಳಗೆ ಅನೇಕ ಪಕ್ಷಿಗಳು ಸಾವನ್ನಪ್ಪುತ್ತವೆ. ಈ ಹಿಂದೆ ಸಾವನ್ನಪ್ಪಿದ ಪಕ್ಷಿಗಳ ಕುರಿತು ಯಾವುದೇ ನಿಖರವಾದ ಕಾರಣ ತಿಳಿದುಬಂದಿಲ್ಲ ಎನ್ನಲಾಗುತ್ತದೆ.

  ಅಗ್ರಸೆಂಕಿ ಬಾವೂಲಿ

  ಅಗ್ರಸೆಂಕಿ ಬಾವೂಲಿ

  ಕಾನಾಟ್ ಪ್ಲೇಸ್ ಸಮೀಪದ ಹೇಯ್ಲೆ ರಸ್ತೆಯ ಅಗ್ರಸೆಂಕಿ ಬಾವೂಲಿ ಅತ್ಯಂತ ಭಯಾನಕ ಸ್ಥಳಗಳಲ್ಲಿ ಒಂದು. ಇದು 14ನೇ ಶತಮಾನದಷ್ಟು ಪುರಾತನವಾದದ್ದು. ಈ ಸೆಂಕಿ ಕಪ್ಪು ನೀರಿನಿಂದ ತುಂಬಿರುತ್ತಿತ್ತು. ಆತ್ಮಹತ್ಯೆ ಮಾಡಿಕೊಳ್ಳಲು ಜನರು ಇಲ್ಲಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತದೆ. ಅಗ್ರಸೇನ ಎನ್ನುವ ಮಹಾರಾಜನ ರಚನೆ ಎಂಬ ಪುರಾಣ ಇತಿಹಾಸವಿದೆ. ಪಿಶಾಚಿಗಳಿಂದ ಕೂಡಿರುವ ಸ್ಥಳವಿದು ಎಂದು ಹೇಳಲಾಗುತ್ತದೆ.

  English summary

  Mysterious Places Of India You Need To Avoid Visiting

  India is one among those places which has a numerous number of monuments, temples, historical heritage sites and many mysterious places as well. Not only this, India is infamously known for having a lake full of skeletons, guards being slapped by ghosts or the bird suicide lake.Spooky enough, eh? No that's not enough because there is a city in India which is declared to be legally haunted and also you're not allowed to enter this place after 6 PM at any cost.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more