For Quick Alerts
ALLOW NOTIFICATIONS  
For Daily Alerts

  ಅಬ್ಬಬ್ಬಾ! ಈ ಸ್ಥಳಗಳ ಹೆಸರು ಕೇಳಿದರೆಯೇ ಕೈಕಾಲು ನಡುಗುತ್ತದೆ!

  By Manu
  |

  ಕೆಲವು ಪ್ರದೇಶಗಳಿಗೆ ಹೋಗದಿರಲು, ಅದರಲ್ಲೂ ರಾತ್ರಿ ಹೊತ್ತು ಅಪ್ಪಿ ತಪ್ಪಿಯೂ ಹೋಗದಿರಲು ಹಿರಿಯರು ಅಪ್ಪಣೆ ನೀಡುತ್ತಾರೆ. ಇದಕ್ಕೆ ಕಾರಣವನ್ನು ಕೆದಕಿದರೆ ಹಿಂದೆ ನಡೆದ ಯಾವುದೋ ದುರ್ಘಟನೆಯ ಪರಿಣಾಮವಾಗಿ ಅಲ್ಲಿ ಭೂತಗಳು ನೆಲೆಸಿವೆ, ಇವು ಮನುಷ್ಯರಿಗೆ ಹಾನಿಯುಂಟುಮಾಡುತ್ತವೆ ಎಂದು ನಂಬುತ್ತಾರೆ. ಆದ್ದರಿಂದ ಈ ಪ್ರದೇಶಗಳು ಭಯಗ್ರಸ್ತವಾಗಿದ್ದು ನಿರ್ಮಾನುಷವಾಗಿವೆ. ಇದು ಕೇವಲ ಭಾರತದಲ್ಲಿ ಮಾತ್ರವಲ್ಲ. ಇಡಿಯ ವಿಶ್ವದಲ್ಲಿ ಹಲವಾರು ಪ್ರದೇಶಗಳಲ್ಲಿವೆ. ಅದರಲ್ಲೂ ಭೂತದ ಕಥೆಯ ಬಗ್ಗೆ ಕೇಳಿದರೆ, ಸಾವೀರಾರು ಕಥೆಗಳು ಹುಟ್ಟಿಕೊಳ್ಳುತ್ತವೆ, ಇದರಲ್ಲಿ ಮೊದಲ ಸ್ಥಾನ ಮಾತ್ರ ಭಾರತ, ಚೀನಾ ಹಾಗೂ ಬಾಂಗ್ಲಾದೇಶ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತವೆ.

  ಸಾವಿರಾರು ಹಳ್ಳಿ ನಗರಗಳಿಂದ ಕೂಡಿದ ಭಾರತ ಇಂದಿಗೂ ಹಳೆಯ ಸಂಪ್ರದಾಯಗಳನ್ನು ಮರೆಯದ ದೇಶ. ಜಗತ್ತಿನಲ್ಲಿ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿರುವ ದೇಶಗಳಲ್ಲಿ ಚೀನಾ ಪ್ರಮುಖವಾಗಿದೆ. ಆಧುನಿಕತೆಯತ್ತ ದಾಪುಗಾಲು ಹಾಕಿ ದೌಡಾಯಿಸುತ್ತಿರುವ ಚೀನಾದ ಒಂದು ಸುಂದರ ನಗರ ಓರ್ಡೋಸ್ (Ordos) ಆದರೆ ಈ ಸುಂದರ ನಗರ ಭೂತದ ಹೆದರಿಕೆಯಿಂದ ಈಗ ಬರಿದಾಗಿದೆ.

  ಎಂತಹ ಧೈರ್ಯವಂತರನ್ನೂ ಬೆಚ್ಚಿ ಬೀಳಿಸುವ ಸ್ಮಶಾನಗಳು

  ಅಷ್ಟೇ ಏಕೆ ನಾಗರಿಕತೆಯ ಉತ್ತುಂಗದಲ್ಲಿರುವ ಜಪಾನ್ ದೇಶದಲ್ಲಿಯೂ ಭೂತದ ಕಾಟ ಬಹಳವಾಗಿದೆ. ಭೂತದ ಕಾಟ ತಾಳಲಾರದೇ ಊರನ್ನು ತ್ಯಜಿಸಿದುದರ ಪರಿಣಾಮವಾಗಿ ಆ ಊರು ಹಾಳೂರಾಗುತ್ತದೆ... ಬನ್ನಿ ಇಂತಹ ಕೆಲವೊಂದು ರೋಚಕ ಸ್ಥಳಗಳ ಬಗ್ಗೆ ಈ ಲೇಖನದಲ್ಲಿ ನೀಡಿದ್ದೇವೆ ಮುಂದೆ ಓದಿ...  

  ರಷ್ಯಾದ ಐದು ಬೆಟ್ಟಗಳು ಸುತ್ತುವರೆದಿರುವ ಭಯಾನಕ ಗ್ರಾಮ

  ರಷ್ಯಾದ ಐದು ಬೆಟ್ಟಗಳು ಸುತ್ತುವರೆದಿರುವ ಭಯಾನಕ ಗ್ರಾಮ

  ರಷ್ಯಾ ದೇಶದ ಉತ್ತರ ಭಾಗದಲ್ಲಿರುವ ನಾರ್ದರ್ನ್ ಒಸೆಟಿಯಾ ಎಂಬ ಪ್ರದೇಶದಲ್ಲಿದೆ ದಾರ್ಗೌಸ್ ಎಂಬ ಹೆಸರಿನ ಗ್ರಾಮ (Dargavs). ನಮಗೆ ಸಾಮಾನ್ಯವಾಗಿ ಕೇಳಿಬರುವ ಈ ಹೆಸರನ್ನು ರಷ್ಯನ್ನರು ಕೇಳಿದರೆ ಬೆಚ್ಚಿ ಬೀಳುತ್ತಾರೆ. ಏಕೆಂದರೆ ಇವರ ನಂಬಿಕೆಯ ಪ್ರಕಾರ ಈ ಗ್ರಾಮದಲ್ಲಿ ಸತ್ತವರು ಮಾತ್ರವೇ ಇರುತ್ತಾರೆ. ಐದು ಬೆಟ್ಟಗಳ ನಡುವಣ ತಪ್ಪಲಿನಲ್ಲಿರುವ ಈ ಸುಂದರ ಗ್ರಾಮದಲ್ಲಿ ಬೆಟ್ಟದ ಕಲ್ಲುಗಳನ್ನೇ ಬಳಸಿ ಕಟ್ಟಲಾಗಿರುವ ನೂರಾರು ಕುಟೀರಗಳೂ ಇವೆ. ಈ ಗ್ರಾಮವನ್ನು ದಾರ್ಗೌಸ್ ಎಂಬ ಹೆಸರಿಗಿಂತಲೂ ಸಿಟಿ ಆಫ್ ದ ಡೆಡ್ ಎಂದೇ ಹೆಚ್ಚಾಗಿ ರಷ್ಯನ್ನರು ಗುರುತಿಸುತ್ತಾರೆ. ಏಕೆಂದರೆ ಈ ಗ್ರಾಮದಲ್ಲಿರುವ ಕುಟೀರಗಳಲ್ಲಿ ಸ್ಥಳೀಯ ಗ್ರಾಮಗಳಲ್ಲಿರುವ ಜನರು ತೀರಿಹೋದ ತಮ್ಮವರ ಕಳೇ ಬರಗಳನ್ನಿರಿಸುತ್ತಿದ್ದರು ಎಂಬ ನಂಬಿಕೆ ಬೆಳೆದು ಬಂದಿದೆ. ಈ ಗ್ರಾಮವನ್ನು ಐದು ಬೆಟ್ಟಗಳು ಸುತ್ತುವರೆದಿರುವ ಕಾರಣ ಈ ಗ್ರಾಮಕ್ಕೆ ಪ್ರವೇಶ ಪಡೆಯುವುದು ಅಷ್ಟು ಸುಲಭವಲ್ಲ. ಅಷ್ಟೇ ಅಲ್ಲ, ಈ ನಗರದ ಇನ್ನೂ ರಹಸ್ಯಾತ್ಮಕ ಮಾಹಿತಿ ಎಂದರೆ ಇಲ್ಲಿ ಕಟ್ಟಲಾಗಿರುವ ಕಟ್ಟಡಗಳಿಗೆ ಭೂತಳದಲ್ಲಿ ಹಲವು ನೆಲಮಹಡಿಗಳೂ ಇವೆ. ಕೆಲವು ಕಟ್ಟಡಗಳಿಗೆ ನಾಲ್ಕು ಅಂತಸ್ತುಗಳಷ್ಟು ನೆಲದಡಿಯ ಮಹಡಿಗಳಿವೆ.

  ಬ್ರೆಜಿಲ್‌ನ ಭಯಾನಕ 'ಹಾವಿನ ದ್ವೀಪ'

  ಬ್ರೆಜಿಲ್‌ನ ಭಯಾನಕ 'ಹಾವಿನ ದ್ವೀಪ'

  ಬ್ರೆಜಿಲ್ ತೀರದಿಂದ ಕೊಂಚ ದೂರ ಇರುವ ಈ ದ್ವೀಪವನ್ನು ಸ್ಥಳೀಯರು ಹಾವುಗಳ ದ್ವೀಪವೆಂದೇ ಕರೆಯುತ್ತಾರೆ. ಏಕೆಂದರೆ ಈ ದ್ವೀಪದಲ್ಲಿ ಚಿನ್ನದ ಬಣ್ಣದ ಬೋತ್ರೋಪ್ಸ್ ಎಂಬ ವಿಷದ ಹಾವುಗಳು (golden lancehead vipers)(ವೈಜ್ಞಾನಿಕ ಹೆಸರು Bothrops insularis) ಅತಿ ಹೆಚ್ಚಿನ ಸಂಖ್ಯೆಯಲ್ಲಿವೆ. ಎಷ್ಟು ಎಂದರೆ ಇತ್ತೀಚಿನ ಗಣತಿಯ ಪ್ರಕಾರ ಪ್ರತಿ ಐದು ಚದರ ಮೀಟರಿಗೆ ಒಂದು ಹಾವಿದೆ. ದ್ವೀಪಕ್ಕೆ ಭೀಟಿ ನೀಡುವವರಿಗೆ ಯಾವುದೇ ಸಮಯದಲ್ಲಿ ಕಚ್ಚುವ ಸಂಭವವಿದೆ.ಅಲ್ಲದೇ ಇದರ ವಿಷವೂ ಅತ್ಯಂತ ತೀಕ್ಷ್ಣವಾಗಿದ್ದು ಕೆಲವೇ ನಿಮಿಷದಲ್ಲಿ ಸಾವು ಸಂಭವಿಸುವ ಅಪಾಯವಿದೆ. ಈ ದ್ವೀಪದಲ್ಲಿ ಕಾಲಿಟ್ಟವರು ಹಾವಿನ ಕಡಿತಕ್ಕೊಳಗಾಗಿ ಯಾರೂ ಹಿಂದೆ ಬರದೇ ಇರುವ ಕಾರಣ ಬ್ರೆಜಿಲ್ ದೇಶದ ನೌಕಾಪಡೆ ಈ ದ್ವೀಪಕ್ಕೆ ಯಾರೂ ಕಾಲಿಡದಂತೆ ನಿಷೇಧ ಹೇರಿದೆ.

  ಭಾನಗಡ ಕೋಟೆ, ರಾಜಸ್ಥಾನ

  ಭಾನಗಡ ಕೋಟೆ, ರಾಜಸ್ಥಾನ

  ಒಂದು ಕಥೆಯ ಪ್ರಕಾರ ಈ ಕೋಟೆಯಲ್ಲಿದ್ದ ತಾಂತ್ರಿಕನೊಬ್ಬ ಛೂಮಂತ್ರ ಮಾಡಿ ಇಡಿಯ ಊರಿನಲ್ಲಿದ್ದ ಅಷ್ಟೂ ಜನರನ್ನು ಸಾವಿಗೀಡಾವಂತೆ ಮಾಡಿದ್ದ. ಬಳಿಕ ಈ ಊರಿಗೆ ಕಾಲಿಡಲು ಯಾರಿಗೂ ಧೈರ್ಯವಾಗುತ್ತಿಲ್ಲ. ಊರಿನ ನಡುವೆ ಇರುವ ಕೋಟೆಯಲ್ಲಿ ಸೂರ್ಯಾಸ್ತ ವಾಗುತ್ತಿದ್ದಂತೆಯೇ ಪ್ರಾರಂಭವಾಗುವ ಭೂತದ ಕಾಟದ ಕಾರಣ ಯಾರೂ ಊರಿನಲ್ಲಿ ಹೊರಗೆ ಕಾಲಿಡುವಂತಿಲ್ಲ! ಕಾಲಿಟ್ಟರೆ ಭೂತ ಏನು ಮಾಡುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಏಕೆಂದರೆ ಈ ಕಾಟ ಅನುಭವಿಸಿದವರಾರೂ ಬದುಕಿ ಉಳಿದಿಲ್ಲ. ಇನ್ನೊಂದು ಕಥೆಯ ಪ್ರಕಾರ ಭಾನಗಡ ಕೋಟೆಯ ಅಕ್ಕಪಕ್ಕದಲ್ಲಿರುವ ಯಾವುದೇ ಗ್ರಾಮದ ಮನೆಗಳಿಗೆ ಛಾವಣಿಗಳಿಲ್ಲ! ಏಕೆಂದರೆ ಛಾವಣಿ ಕಟ್ಟಿದ ಮರುಕ್ಷಣವೇ ಕುಸಿದು ಬೀಳುವ ಮರ್ಮವನ್ನು ಯಾರಿಗೂ ಅರಿಯಲಾಗಿಲ್ಲ.

  ಜನರು ಇದ್ದಕಿದ್ದಂತೆ ಮಾಯವಾಗಿ ಬಿಟ್ಟಿದರು!!

  ಜನರು ಇದ್ದಕಿದ್ದಂತೆ ಮಾಯವಾಗಿ ಬಿಟ್ಟಿದರು!!

  ರಾಜಸ್ಥಾನದ ಕುಲ್ಧಾರಾ ಸುಮಾರು ಹದಿನೆಂಟನೇ ಶತಮಾನದಲ್ಲಿಯೇ ಕುಲ್ಧಾರಾ ಪ್ರದೇಶವನ್ನು ಅಲ್ಲಿನ ನಿವಾಸಿಗಳು ತ್ಯಜಿಸಿ ಗುಳೆಹೋಗಿದ್ದರು. ಇದಕ್ಕೆ ಕಾರಣ ಈ ಪ್ರದೇಶ ಶಾಪಗ್ರಸ್ತವಾಗಿದೆ ಎಂಬ ನಂಬಿಕೆ. ಗುಳೆಹೋದವರ ಕ್ರಮವನ್ನು ವಿರೋಧಿಸಿ ಅಲ್ಲಿಯೇ ಉಳಿದಿದ್ದವರು ಏಕಾಏಕಿ ಒಂದು ರಾತ್ರಿ ಅಷ್ಟೂ ಜನರು ಮಾಯವಾಗಿದ್ದುದು ಈ ಕಥೆಗೆ ಇಂಬು ನೀಡುತ್ತದೆ. ಇನ್ನೂ ಕೆಲವರು ಇದಕ್ಕೆ ವ್ಯತಿರಿಕ್ತವಾದ ಕಥೆಯನ್ನು ಹೇಳುತ್ತಾರೆ. ಈ ಕಥೆಯ ಪ್ರಕಾರ ಈ ಪ್ರದೇಶದ ಯುವತಿಯೊಬ್ಬಳನ್ನು ಮಂತ್ರಿಯೊಬ್ಬ ಬಲವಂತವಾಗಿ ವಿವಾಹವಾಗಿದ್ದನೆಂದೂ ಬಳಿಕ ಆಕೆಯ ಶಾಪ ಊರಿಗೆ ತಟ್ಟಿತೆಂದೂ ಕಥೆ ಹೇಳಲಾಗುತ್ತದೆ. ಕಥೆಗಳು ಏನೇ ಇರಲಿ, ಇಂದಿಗೂ ಕುಲ್ಧಾರಾ ಪಾಳುಬಿದ್ದಿದ್ದು ಚಲನಚಿತ್ರಗಳ ಚಿತ್ರೀಕರಣಕ್ಕೆ ಮಾತ್ರ ಉಪಯೋಗಿಸಲಾಗುತ್ತಿದೆ.

  ಅಂಡಮಾನಿನ ನಾರ್ಥ್ ಸೆಂಟಿನಲ್ ದ್ವೀಪ

  ಅಂಡಮಾನಿನ ನಾರ್ಥ್ ಸೆಂಟಿನಲ್ ದ್ವೀಪ

  ಬಂಗಾಳ ಕೊಲ್ಲಿಯಲ್ಲಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹಗಳಲ್ಲಿರುವ ನೂರಾರು ದ್ವೀಪಗಳಲ್ಲೊಂದಾದ ನಾರ್ಥ್ ಸೆಂಟಿನಲ್ ದ್ವೀಪ ಕೇವಲ ಇಪ್ಪತ್ತೆಂಟು ಚದರ ಕಿ.ಮೀ. ವಿಸ್ತೀರ್ಣದ ಪುಟ್ಟ ದ್ವೀಪವಾಗಿದೆ. ಸುತ್ತಲೂ ಮೊಣಕಾಲಿನಷ್ಟು ಆಳವಿರುವ ಹವಳದ ಪ್ರವಾಳ ಅಥವಾ ಕೋರಾಲ್ ರೀಫ್ (coral reef) ಸುತ್ತುವರೆದಿದೆ. ಸಾಗರ ವಿಜ್ಞಾನಿಗಳ ಪಾಲಿಗೆ ಇದು ಸಂಶೋಧನೆಗೆ ಅತ್ಯಂತ ಪ್ರಶಸ್ತ ಸ್ಥಳವಾಗಿದ್ದರೂ ಈ ದ್ವೀಪದಲ್ಲಿರುವ ಮೂಲನಿವಾಸಿಗಳ ಕಾರಣ ಈ ದ್ವೀಪಕ್ಕೆ ಸರ್ಕಾರ ಭೇಟಿಯನ್ನು ನಿಷೇಧಿಸಿದೆ. ಈ ಮೂಲನಿವಾಸಿಗಳು ನಾಗರಿಕತೆಯನ್ನು ದ್ವೇಷಿಸುವ ಜನರಾಗಿದ್ದು ತಮ್ಮ ದ್ವೀಪಕ್ಕೆ ಯಾರನ್ನೂ ಬರಮಾಡಿಕೊಳ್ಳಲು ಇಚ್ಛಿಸುವುದಿಲ್ಲ. ಪ್ರಾಯಶಃ ಈ ಜನರು ಇಂದು ಭೂಮಿಯಲ್ಲಿ ಉಳಿದಿರುವ ಕೆಲವೇ ಮೂಲನಿವಾಸಿಗಳಲ್ಲಿ ಒಬ್ಬರಾಗಿರಬಹುದು ಎಂದು ನಂಬಲಾಗಿದೆ. ಈ ದ್ವೀಪಕ್ಕೆ ಭೇಟಿ ನೀಡುವವರನ್ನು ಅವರು ಅತಿಕ್ರಮಿಗಳೆಂದು ಪರಿಗಣಿಸಿ ಬಾಣ ಹೂಡಿ ಕೊಲ್ಲಲು ಯತ್ನಿಸುತ್ತಾರೆ.

  Image courtesy - www.tripoto.com

  ಫ್ರಾನ್ಸ್ ನಲ್ಲಿರುವ ಲಾಸ್ಕಾಸ್ಕ್ ಗುಹೆಗಳು

  ಫ್ರಾನ್ಸ್ ನಲ್ಲಿರುವ ಲಾಸ್ಕಾಸ್ಕ್ ಗುಹೆಗಳು

  (Lascaux Caves) ದಕ್ಷಿಣ ಫ್ರಾನ್ಸ್ ನಲ್ಲಿರುವ ಈ ಗುಹೆಗಳಲ್ಲಿ ಶಿಲಾಯುಗದ ಕಾಲದ ಗುಹಾಚಿತ್ರಗಳು ದೊರಕಿವೆ. ಪ್ರಾಕ್ತನಶಾಸ್ತ್ರಜ್ಞರ ಪ್ರಕಾರ ಇವು ಇಪ್ಪತ್ತು ಸಾವಿರ ವರ್ಷಗಳಿಗೂ ಹಿಂದಿನವು. ಇವುಗಳಲ್ಲಿ ಹೆಚ್ಚಿನವು ಪ್ರಾಣಿಗಳ ಚಿತ್ರಗಳಾಗಿವೆ. ಸೆಪ್ಟೆಂಬರ್ 12, 1940ರಂದು ಫ್ರಾನ್ಸಿನ ಮಾರ್ಸೆಲ್ ರ್‍ಯಾವಿಡಾಟ್ ಎಂಬ ಯುವಕ ಈ ಗುಹೆಗಳ ಪ್ರವೇಶದ್ವಾರವನ್ನು ಕಂಡುಹಿಡಿದ. ಇದರೊಳಗೆ ಏನಿರಬಹುದು ಎಂಬ ಕುತೂಹಲವನ್ನು ತಾಳಲಾರದೇ ಮನೆಗೆ ಹಿಂದಿರುಗಿದ ಬಳಿಕ ತನ್ನ ಇನ್ನೂ ಮೂವರು ಸ್ನೇಹಿತರೊಂದಿಗೆ ಈ ಸ್ಥಳಕ್ಕೆ ತಾವೇ ತಯಾರಿಸಿದ ತೆಪ್ಪವೊಂದರ ಮೇಲೆ ಆಗಮಿಸಿದ. ಟಾರ್ಚ್ ಬೆಳಗಿಸಿ ಗುಹೆಯನ್ನು ಪ್ರವೇಶಿಸಿದ ಈ ತರುಣರು ಒಳಗಿನ ಗೋಡೆಗಳ ಮೇಲೆಲ್ಲಾ ಪುರಾತನ ಚಿತ್ರಗಳಿದ್ದುದನ್ನು ಕಂಡು ದಂಗಾದರು. ಹೆಚ್ಚಿನವು ಪ್ರಾಣಿಗಳ ವಿವಿಧ ಭಂಗಿಗಳ ಚಿತ್ರಗಳಾಗಿದ್ದವು.

  Image courtesy wikipedia.org

  ಜಪಾನಿನ ಐಸೆ ಗ್ರಾಂಡ್ ಮಂದಿರ

  ಜಪಾನಿನ ಐಸೆ ಗ್ರಾಂಡ್ ಮಂದಿರ

  ಜಪಾನ್ ದೇಶದ ಭೂಪಟವನ್ನು ಗಮನಿಸಿದರೆ ಇದರ ತೀರಪ್ರದೇಶದಲ್ಲಿ ಮಾತ್ರ ಜನವಾಸವಿದ್ದು ಉಳಿದ ಸ್ಥಳಗಳು ನಿರ್ಜನವಾಗಿವೆ. ಆದರೆ ನಡುನಡುವೆ ಸುಮಾರು ನೂರಕ್ಕೂ ಹೆಚ್ಚು ಮಂದಿರಗಳಿವೆ. ಅದರಲ್ಲಿ ಐಸೆ ಗ್ರಾಂಡ್ ಮಂದಿರ (The Ise Grand Shrine) ಅತ್ಯಂತ ಪವಿತ್ರ ಎಂದು ಭಾವಿಸಲಾಗಿದೆ. ಇದು ಸೂರ್ಯದೇವಿಗೆ (Amaterasu, the Sun goddess) ಮುಡಿಪಾದ ಮಂದಿರವಾಗಿದ್ದು ಇದು ಕ್ರಿ. ಪೂರ್ವ ನಾಲ್ಕನೆಯ ಇಸವಿಯಲ್ಲಿ ಕಟ್ಟಲಾಗಿದೆ ಎಂದು ಅಂದಾಜಿಸಲಾಗಿದೆ. ಈ ಮಂದಿರಕ್ಕೆ ಕೇವಲ ಜಪಾನಿನ ರಾಜಮನೆತನದ ಅತ್ಯುನ್ನತ ಹುದ್ದೆ ಹೊಂದಿರುವ ವ್ಯಕ್ತಿಗಳು ಮತ್ತು ಮಂದಿರದ ಪೂಜಾರಿ ಅಥವಾ ಪೂಜಾರ್ತಿಯವರಿಗೆ ಮಾತ್ರ ಪ್ರವೇಶ ಸಾಧ್ಯ. ಇನ್ನುಳಿದಂತೆ ಜಗತ್ತಿನ ಬೇರೆ ಯಾರಿಗೂ ಈ ಹುಲ್ಲಿನ ಛಾವಣಿಯ ಮಂದಿರಕ್ಕೆ ಪ್ರವೇಶ ಸಾಧ್ಯವಿಲ್ಲ.

  en.wikipedia.org

  ಕಿಲಕಿಲ ನಗುವ ಗೊಂಬೆಗಳು!!

  ಕಿಲಕಿಲ ನಗುವ ಗೊಂಬೆಗಳು!!

  ಮೆಕ್ಸಿಕೋದ ಐಲಾ ಡೆ ಲಾಸ್ ಮ್ಯೂನೆಕಾಸ್ (ಗೊಂಬೆಗಳ ದ್ವೀಪ) ಇಡಿಯ ದ್ವೀಪದಲ್ಲಿ ಮರಗಳ, ಗಿಡಗಳ, ಒಟ್ಟಾರೆ ಎಲ್ಲೆಲ್ಲಿ ತೂಗು ಹಾಕಬಹುದೋ ಅಲ್ಲೆಲ್ಲಾ ಗೊಂಬೆಗಳನ್ನು ತೂಗು ಹಾಕಿರುವ ಈ ದ್ವೀಪ ಪ್ರಾಯಶಃ ವಿಶ್ವದಲ್ಲಿಯೇ ಅತಿ ಹೆಚ್ಚು ಭಯಹುಟ್ಟಿಸುವ ದ್ವೀಪವಾಗಿದೆ. ರಾತ್ರಿ ಹೊತ್ತು ಈ ಗೊಂಬೆಗಳಲ್ಲಿ ಆತ್ಮಸಂಚಾರವಾಗಿ ಜೀವತಳೆಯುತ್ತವೆ, ತಮ್ಮತಮ್ಮಲ್ಲಿ ಮಾತನಾಡಿಕೊಳ್ಳುತ್ತವೆ, ಕಿಲಕಿಲ ನಗುತ್ತವೆ ಎಂದು ಸ್ಥಳೀಯರು ತಿಳಿಸುತ್ತಾರೆ.

  wikipedia.org

  English summary

  Most Terrifying Haunted Places around the World

  Most of these haunted houses have been scarred by brutal murders, suicides and terrible crimes against humanity. The ghost stories tell us about the terrible crimes against humanity that have led to these houses becoming haunted. For example, the notorious Rose Hall in Jamaica was the place where the sadistic Annie Palmer tortured and killed Black slaves for her sexual satisfaction. Other haunted houses like the Myrtles Plantation are places where the painful history of Black slaves have been written in blood.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more