For Quick Alerts
ALLOW NOTIFICATIONS  
For Daily Alerts

2018 ರಾಶಿಚಕ್ರ- ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ

By Divya Pandith
|

ಹೊಸ ವರ್ಷ ಎಂದರೆ ಎಲ್ಲರಿಗೂ ಅದೇನೋ ಒಂದು ಬಗೆಯ ಸಡಗರ ಹುಮ್ಮಸ್ಸು. ಹಳೆಯ ವರ್ಷಕ್ಕೆ ನಮಸ್ಕರಿಸಿ, ಹೊಸ ವರ್ಷಕ್ಕೆ ಸ್ವಾಗತಿಸುವ ಕಾತರ. ಇಷ್ಟು ದಿನಗಳ ಕಾಲ ಅನುಭವಿಸಿದ ಸಮಸ್ಯೆಗಳಿಂದ ಮುಂದಿನ ವರ್ಷದಲ್ಲಾದರೂ ನೆಮ್ಮದಿ ಸಿಗಬಹುದೇ? ಎನ್ನುವ ನಿರೀಕ್ಷೆ... ಬಹುತೇಕ ಜನರು ಹೊಸ ವರ್ಷದಲ್ಲಿ ಹೊಸದು ಆಗುವುದೋ ಬಿಡುವುದೋ, ಒಟ್ಟಿನಲ್ಲಿ ಹಳೆಯ ವರ್ಷಕ್ಕೆ ಟಾ ಟಾ ಎನ್ನುತ್ತಿದ್ದೇವಲ್ಲಾ ಎನ್ನುವ ಮನೋಭಾವದಲ್ಲಿಯೇ ಇರುತ್ತಾರೆ.

ಹಿಂದೂಗಳಿಗೆ ಹೊಸ ವರ್ಷ ಎಂದರೆ ಯುಗಾದಿಯ ಸಂಭ್ರಮ ಇರಬಹುದು. ಆದರೆ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿರುವ ಪಂಚಾಗ ಇಂಗ್ಲಿಷ್ ಅವರದ್ದಾಗಿರುವುದರಿಂದ ವರ್ಷಗಳ ತಾಳಮೇಳಗಳನ್ನು ನಿರೀಕ್ಷಿಸುವ ಕುತೂಹಲ ಅಷ್ಟೇ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂದಿನ ಅಂದರೆ 2018ರಲ್ಲಿ ಕೆಲವು ರಾಶಿಚಕ್ರದವರಿಗೆ ಅತ್ಯದ್ಭುತವಾದ ಅದೃಷ್ಟಗಳು ಒಲಿದು ಬರಲಿದೆ. ಈ ವಿಚಾರ ನಿಮಗೆ ಕೊಂಚ ಸಂತೋಷವನ್ನು ಉಂಟುಮಾಡುತ್ತಿರಬಹುದು ಅಲ್ವಾ?

ಹಾಗಾದರೆ ಇನ್ನೇಕೆ ತಡ? ಬೋಲ್ಡ್ ಸ್ಕೈ ನಿಮಗಾಗಿ ನೀಡುತ್ತಿರುವ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ರಾಶಿಚಕ್ರಗಳ ವಿವರಣೆಯನ್ನು ಪರಿಶೀಲಿಸಿ... ಅದರಲ್ಲಿ ಇರುವ ಅದೃಷ್ಟ ರಾಶಿಚಕ್ರಗಳಲ್ಲಿ ನಿಮ್ಮ ರಾಶಿಚಕ್ರವೂ ಇದ್ದರೆ ಅದೃಷ್ಟವನ್ನು ಅನುಭವಿಸಲು ಸಿದ್ಧರಾಗಿ... ಹಾಗೊಮ್ಮೆ ನಿಮ್ಮ ರಾಶಿ ಇಲ್ಲವೆಂದಾದರೆ ನಿಮ್ಮ ಯಶಸ್ಸಿನ ಹಾದಿಯಲ್ಲಿ ನೀವಿನ್ನೂ ಸ್ವಲ್ಪ ದೂರ ನಡೆಯಬೇಕಿದೆ ಎಂದು, ಸಾಧನೆಗಾಗಿ ಪೂರ್ವ ತಯಾರಿಯನ್ನು ಮುಂದುವರಿಸಿ...

ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ

1. ಸಿಂಹ

1. ಸಿಂಹ

ಈ ರಾಶಿಯವರಿಗೆ ಅದೃಷ್ಟ ಇರಲಿ ಅಥವಾ ಇಲ್ಲದಿರಲಿ ಸದಾ ಮಿನುಗುತ್ತಿರುತ್ತಾರೆ. ಇವರು ಎಲ್ಲಿ ಯಾವ ಕೆಲಸವನ್ನು ಮಾಡಿದರೂ ಹೆಚ್ಚಿನ ಶ್ರಮವಿಲ್ಲದೆಯೇ ಎಲ್ಲರ ಗಮನಸೆಳೆದುಕೊಳ್ಳುತ್ತಾರೆ. ಹಾಗಾಗಿ ಇವರದ್ದು ಕಾಂತೀಯ ಮತ್ತು ಪ್ರಬಲವಾದ ವ್ಯಕ್ತಿತ್ವ ಎಂದು ಹೇಳಲಾಗುತ್ತದೆ. ಆದದ್ದರಿಂದಲೇ ಇವರು ಎಲ್ಲರ ಇಷ್ಟಕ್ಕೆ ಪಾತ್ರರಾಗುತ್ತಾರೆ. ಇವರಿಗೆ 2018 ಅತ್ಯಂತ ಅದೃಷ್ಟವನ್ನು ಪಡೆದುಕೊಳ್ಳುವ ವರ್ಷ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ವರ್ಷ ಇವರ ಹಾದಿಯಲ್ಲಿ ಗೆಲುವು ಸುಲಭವಾಗಿ ದೊರೆಯುವುದು. ಎಲ್ಲರೂ ತಪ್ಪನ್ನು ಮಾಡುತ್ತಾರೆ. ಹಾಗೆಯೇ ಈ ರಾಶಿಯವರೂ ಪ್ರತಿಬಾರಿಯೂ ತಪ್ಪನ್ನು ಮಾಡುತ್ತಾರೆ. ಇದರೊಟ್ಟಿಗೆ ತಪ್ಪನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಾರೆ. ವೃತ್ತಿ ಕ್ಷೇತ್ರದಲ್ಲಿ ಅನೇಕ ಅವಕಾಶಗಳು ಕೈಗೂಡಿ ಬರುವುದು. ವೈಯಕ್ತಿಕ ಮತ್ತು ದಾಂಪತ್ಯದ ಜೀವನವೂ ಪ್ರೀತಿ ವಿಶ್ವಾಸದಿಂದ ಕೂಡಿರುತ್ತದೆ.

2. ಧನು

2. ಧನು

ಇವರು ಅತ್ಯಂತ ಸಾಹಸಮಯ ಕೆಲಸಕ್ಕೆ ಮುಂದಾಗುವ ವ್ಯಕ್ತಿತ್ವ ಹೊಂದಿರುತ್ತಾರೆ. ಇವರ ಚಿಂತನೆಗಳು ಬಹಳ ಮುಕ್ತವಾಗಿ ಮತ್ತು ಆಳವಾದ ಕಾಲ್ಪನಿಕ ಮಾರ್ಗವನ್ನು ಒಳಗೊಂಡಿರುತ್ತದೆ. ಇವರು ಬಯಸುವುದು ಅಥವಾ ಸಾಧಿಸುವ ಗುರಿಗಳಿಗೆ ಯಾವುದೇ ಮಿತಿ ಅಥವಾ ಗಡಿ ಎನ್ನುವುದು ಇರುವುದಿಲ್ಲ. 2018ರಲ್ಲಿ ಇವರ ಈ ಯೋಚನೆಗೆ ಅತ್ಯಂತ ಹೆಚ್ಚು ಅವಕಾಶಗಳು ಹಾಗೂ ಯಶಸ್ಸು ದೊರೆಯುವುದು. ಇವರ ಸಾಧನೆ ಅಥವಾ ಗುರಿಯನ್ನು ತಲುಪಲು ಯಾವುದೇ ಅಡೆತಡೆಗಳು ಅಡ್ಡವಾಗದೆ ಇರುವುದರಿಂದ ಬಹು ಬೇಗ ನಿಮ್ಮ ಕನಸು ನನಸಾಗುವುದು. ಲೆಕ್ಕವಿಲ್ಲದ ಹೊಸ ಹೊಸ ಅವಕಾಶಗಳು ಇವರ ಕಾಲ ಬಳಿ ಬರುವುದು. ಸ್ಥಿರತೆಯನ್ನು ಹೊಂದಿರುವ ಇವರು ತಮ್ಮ ಜೀವನದಲ್ಲಿ ಸಮತೋಲನವನ್ನು ಕಂಡುಕೊಳ್ಳುತ್ತಾರೆ.

ಪ್ರೀತಿ-ಸಂಬಂಧ

ಪ್ರೀತಿ-ಸಂಬಂಧ

ಧನು ರಾಶಿಯವರು ಈ ವರ್ಷ ತಮ್ಮ ಆತ್ಮ ಸಂಗಾತಿಯನ್ನು ಪಡೆದುಕೊಳ್ಳುವ ಒಂದು ವಿಶೇಷ ಅದೃಷ್ಟವನ್ನು ಪಡೆದುಕೊಂಡಿದ್ದಾರೆ. 2018ರ ಇವರ ಪ್ರೀತಿ ಅತ್ಯಂತ ದೊಡ್ಡ ಹಾಗೂ ಅದೃಷ್ಟದ ಚಿಹ್ನೆ ಎಮದು ಪರಿಗಣಿಸಬಹುದು. ಧನು ರಾಶಿಯವರು ವರ್ಷದ ಆರಂಭದಲ್ಲಿ ಪ್ರೀತಿಯ ಜೀವನವನ್ನು ಪಡೆಯಲು ಹಾಗೂ ಅನುಭವಿಸಲು ವಿಶೇಷ ತಯಾರಿ ಅಥವಾ ಹುಡುಕಾಟವನ್ನು ನಡೆಸಬಹುದು. ಈ ವಿಚಾರದಲ್ಲಿ ನಿಮಗೆ ಯಾವುದೇ ಅಡೆತಡೆಗಳು ಅಥವಾ ಒತ್ತಡಗಳು ಇರುವುದಿಲ್ಲ. ನೀವು ಅತ್ಯಂತ ಸಂತೋಷವನ್ನು ಪಡೆದುಕೊಂಡಿದ್ದೀರಿ ಎನ್ನುವುದು ನಿಮಗೆ ಅರಿವಾಗುವುದು.

3. ಕನ್ಯಾ

3. ಕನ್ಯಾ

ಕನ್ಯಾ ರಾಶಿಯವರಿಗೆ 2017 ರಂತೆ 2018 ಸಹ ಅಸಾಧಾರಣ ವರ್ಷವಾಗಿದೆ. ಈ ವರ್ಷ ನಿಮ್ಮ ಎಲ್ಲಾ ರೀತಿಯ ಜೀವನವನ್ನು ಸುಧಾರಿಸುತ್ತದೆ. 2018 ನಿಮಗೆ ಅತ್ಯಂತ ಅದೃಷ್ಟದ ವರ್ಷವಾಗಿರುವುದರಿಂದ ನಿಮ್ಮ ಭಾವನಾತ್ಮಕ ಯೋಗ ಕ್ಷೇಮವೂ ಉತ್ತಮವಾಗಿರುತ್ತದೆ. ಈಗಾಗಲೇ ಇವರು ಯಾರನ್ನಾದರೂ ಇಷ್ಟ ಪಟ್ಟಿದ್ದರೆ ಅವರೊಂದಿಗೆ ದೀರ್ಘಕಾಲದ ಸಂಬಂಧವನ್ನು ಮುಂದುವರಿಸುತ್ತಾರೆ. ಅದರಂತೆಯೇ ಸಂಬಂಧವೂ ವಿಕಾಸಗೊಳ್ಳುತ್ತದೆ. 2018 ಇವರಿಗೆ ಎಲ್ಲಾರೀತಿಯ ಶುಭ ಸೂಚನೆಯನ್ನು ತಂದುಕೊಡುತ್ತದೆ. 2018ರ ಅದೃಷ್ಟವನ್ನು ಪಡೆಯಲಿರುವ ರಾಶಿಚಕ್ರಗಳಲ್ಲಿ ಕನ್ಯಾ ರಾಶಿಯು ಒಂದು ಎನ್ನುವುದನ್ನು ಇವರು ನೆನಪಿನಲ್ಲಿಟ್ಟುಕೊಂಡಿರಬೇಕಲು.

ಪ್ರೀತಿ-ಸಂಬಂಧ

ಪ್ರೀತಿ-ಸಂಬಂಧ

ಕನ್ಯಾ ರಾಶಿಯವರಿಗೆ 2017ನೇ ವರ್ಷ ಅತ್ಯಂತ ವಿಶೇಷವಾಗಿತ್ತು. ಅದರಲ್ಲೂ ಪ್ರೀತಿ ಪ್ರೇಮವನ್ನು ಪಡೆದುಕೊಳ್ಳುವ ವಿಚಾರದಲ್ಲಿ ಎನ್ನಬಹುದು. ಆಗ ಕಂಡ ಪ್ರೀತಿ ಪ್ರೇಮಗಳು 2018ರಲ್ಲೂ ಮುಂದುವರಿಯುವುದು. ಇವರ ನಕ್ಷತ್ರಗಳು ಪಾಲುದಾರರೊಂದಿಗೆ ಉತ್ತಮ ಸಂಬಂಧಗಳೊಂದಿಗೆ ಇರಲು ಸಹಾಯ ಮಾಡುತ್ತದೆ. ಹುಡುಕಾಟದಲ್ಲಿರುವವರಿಗೆ ಉತ್ತಮ ಸಂಗಾತಿಯ ಪರಿಚಯ ಆಗುವುದು. ಹಾಗೆಯೇ ಈಗಾಗಲೇ ಸಂಬಂಧದಲ್ಲಿ ಇರುವವರು ಸಂಗಾತಿಯೊಂದಿಗೆ ಉತ್ತಮ ಸಂವಹನ ಹಾಗೂ ಪ್ರೀತಿವಾತ್ಸಲ್ಯದಿಂದ ಸಮಯವನ್ನು ಕಳೆಯುವರು.

4. ವೃಶ್ಚಿಕ

4. ವೃಶ್ಚಿಕ

ವೃಶ್ಚಿಕ ಜನರು 2018ರಲ್ಲಿ ಸ್ಥಿರವಾದ ಪಾಲುದಾರರನ್ನು ಹುಡುಕುವ ಮತ್ತು ಅವಕಾಶವವನ್ನು ಪಡೆದುಕೊಳ್ಳುವಂತಹ ಸಮಯವನ್ನು ಒದಗಿಸಿಕೊಡುತ್ತದೆ. ಇವರು ಇಲ್ಲವನ್ನೂ ತನ್ನಿಂದಲೇ ನಿಯಂತ್ರಿಸಬೇಕು ಎನ್ನುವ ಭಾವನೆಯನ್ನು ಹೊಂದಿರುವುದಿಲ್ಲವಾದ್ದರಿಂದ ಸಂಬಂಧವು ಸುಂದರವಾಗಿ ವಿಕಾಸಗೊಳ್ಳುತ್ತದೆ. ಅದರಂತೆಯೇ ನಿಮ್ಮ ಪ್ರಯತ್ನ ಹಾಗೂ ನಿರೀಕ್ಷೆಗೆ ಅನುಗುಣವಾಗಿ ಪ್ರತಿಫಲವನ್ನು 2018ರಲ್ಲಿ ಅನುಭವಿಸಲಿದ್ದೀರಿ.

5. ಮೀನ

5. ಮೀನ

2018ರಲ್ಲಿ ಅತ್ಯಂತ ಅದೃಷ್ಟವನ್ನು ಅನುಭವಿಸಲಿರುವ ಇನ್ನೊಂದು ರಾಶಿಯೆಂದರೆ ಮೀನ. ವರ್ಷದ ಆರಂಭದಲ್ಲಿ ಆಭರಣಗಳ ಖರೀದಿ, ಸಂಬಂಧಗಳ ಆರಂಭದ ಸಂಗತಿಗಳೊಂದಿಗೆ ಆರಂಭಿಸುತ್ತೀರಿ. ವರ್ಷದ ಮಧ್ಯದ ಅವಧಿಯಿಂದ ಸಂಬಂಧಗಳು ಬಲಪಡುತ್ತವೆ.

ಮೀನ

ಮೀನ

ಕೈಗೊಂಡ ಕೆಲಸಗಳಿಗೆ ಉತ್ತಮ ಫಲಿತಾಂಶ ದೊರೆಯುತ್ತಲಿರುತ್ತದೆ. ಹಾಗೆಯೇ ಮುಂದಿನ ದಿನಗಳನ್ನು ಕಳೆಯಲು ಉತ್ತಮವಾದ ಅವಕಾಶಗಳು ಮುಂದುವರಿಯುತ್ತವೆ. ಜೊತೆಗೆ ಪಾಲುದಾರರೊಂದಿಗೆ ಸಂಬಂಧವೂ ಸುಗಮವಾಗಿ ಸಾಗುವುದು.

English summary

Most luckiest zodiac signs in 2018

The year 2018 brings luck on all aspects for three signs that are thought to be the spoiled signs of the zodiac this year. So, find out if your sign is one of them. Here are the lucky signs of the year 2018.
X
Desktop Bottom Promotion