ದೆವ್ವ ಬಾಧೆ ಪೀಡಿತ, ಸ್ಥಳಗಳಿವು, ಇದರ ರಹಸ್ಯ ಇನ್ನೂ ನಿಗೂಢವಾಗಿದೆ!

By: Deepu
Subscribe to Boldsky

ದೇವರನ್ನು ನಂಬಿದವರು ಭೂತಪ್ರೇತಗಳನ್ನು ಕೂಡ ನಂಬಲೇಬೇಕಾಗುತ್ತದೆ ಎನ್ನುವ ಮಾತಿದೆ. ಪ್ರೇತಭಾದೆ ಇರುವ ಬಗ್ಗೆ ನಾವು ಹಲವಾರು ಘಟನೆಗಳಿಂದ ತಿಳಿದುಕೊಂಡಿದ್ದೇವೆ. ಇಂತಹ ಕೆಲವೊಂದು ಘಟನೆಗಳು ನಡೆಯುತ್ತಲೇ ಇರುತ್ತದೆ. ಕೆಲವರು ಇದನ್ನು ಮೂಢನಂಬಿಕೆ ಎಂದರೆ ಇನ್ನು ಕೆಲವರು ಇದು ನಿಜವೆನ್ನುತ್ತಾರೆ, ಆದರೆ ಒಂದೊಂದು ಊರಿನ ಭೂತದ ಕಥೆಯೂ ಭಿನ್ನ, ಭಯಾನಕವಾಗಿರುತ್ತವೆ!

ಕೆಲವು ಕಥೆಗಳಂತೂ ಅಮೂಲ್ಯ ಸ್ಥಳಗಳಲ್ಲಿ ಕಟ್ಟಡವನ್ನು ಖಾಲಿ ಮಾಡಿಸುವಷ್ಟಿವೆ. ಬಿಳಿಸೀರೆ ತೊಟ್ಟು ಕಾಡುವ ಮಹಿಳೆ, ಸಾಮೂಹಿಕ ಆತ್ಮಹತ್ಯೆ, ಪಾಳುಬಿದ್ದ ಬಂಗಲೆ, ನಿಗೂಢ ಸಾವುಗಳು ಇತ್ಯಾದಿಗಳು ನೂರಾರಿವೆ. ಆದರೆ ನಮ್ಮ ದೇಶವು ವೈಜ್ಞಾನಿಕ ಹಾಗೂ ಆಧುನಿಕತೆ ಭರದಿಂದ ಸಾಗುತ್ತಿರುವಾಗ ಭೂತಪ್ರೇತದಂತಹ ವಿಷಯಗಳ ವಿಶ್ವಾಸಾರ್ಹತೆಯನ್ನು ನಂಬಲು ಇಂದಿನ ಜನರು ತಯಾರಿಲ್ಲ.

ಇವರಲ್ಲಿ ಹೆಚ್ಚಿನವರು ಈ ಭೂತಗಳ ಭಯವನ್ನು ಮೀರಿ ಆ ಸ್ಥಳಗಳಲ್ಲಿ ವಾಸಿಸಲು ಮುಂದಾಗುತ್ತಾರೆ. ಆದರೆ ಜನರು ವಾಸಿಸಲು ಹೆದರುವ ಕೆಲವು ಸ್ಥಳಗಳು ಇಂದಿಗೂ ನಮ್ಮ ದೇಶದಲ್ಲಿದೆ ಎಂದರೆ, ನೀವೂ ನಂಬಲೇಬೇಕು! ಭೂತದ ಬಗ್ಗೆ ಇರುವ ಕಥೆಗಳನ್ನು ಕೆದಕಿದರೆ ಭಾರತ ಮತ್ತು ಬಾಂಗ್ಲಾದೇಶ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತವೆ. ಬನ್ನಿ ಭಾರತದಲ್ಲಿಯೇ ನಡೆದಿರುವಂತಹ ಕೆಲವೊಂದು ಘಟನೆಗಳನ್ನು ಇಂದಿನ ಲೇಖನದಲ್ಲಿ ನೀಡಿದ್ದೇವೆ, ಮುಂದೆ ಓದಿ.... 

ಅಕ್ಕಪಕ್ಕದಲ್ಲಿರುವ ಯಾವುದೇ ಗ್ರಾಮದ ಮನೆಗಳಿಗೆ ಛಾವಣಿಗಳಿಲ್ಲ!

ಅಕ್ಕಪಕ್ಕದಲ್ಲಿರುವ ಯಾವುದೇ ಗ್ರಾಮದ ಮನೆಗಳಿಗೆ ಛಾವಣಿಗಳಿಲ್ಲ!

ಭಾನಗಡ ಕೋಟೆ, ರಾಜಸ್ಥಾನ ಒಂದು ಕಥೆಯ ಪ್ರಕಾರ ಈ ಕೋಟೆಯಲ್ಲಿದ್ದ ತಾಂತ್ರಿಕನೊಬ್ಬ ಛೂಮಂತ್ರ ಮಾಡಿ ಇಡಿಯ ಊರಿನಲ್ಲಿದ್ದ ಅಷ್ಟೂ ಜನರನ್ನು ಸಾವಿಗೀಡಾವಂತೆ ಮಾಡಿದ್ದ. ಬಳಿಕ ಈ ಊರಿಗೆ ಕಾಲಿಡಲು ಯಾರಿಗೂ ಧೈರ್ಯವಾಗುತ್ತಿಲ್ಲ. ಊರಿನ ನಡುವೆ ಇರುವ ಕೋಟೆಯಲ್ಲಿ ಸೂರ್ಯಾಸ್ತ ವಾಗುತ್ತಿದ್ದಂತೆಯೇ ಪ್ರಾರಂಭವಾಗುವ ಭೂತದ ಕಾಟದ ಕಾರಣ ಯಾರೂ ಊರಿನಲ್ಲಿ ಹೊರಗೆ ಕಾಲಿಡುವಂತಿಲ್ಲ! ಕಾಲಿಟ್ಟರೆ ಭೂತ ಏನು ಮಾಡುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಏಕೆಂದರೆ ಈ ಕಾಟ ಅನುಭವಿಸಿದವರಾರೂ ಬದುಕಿ ಉಳಿದಿಲ್ಲ. ಇನ್ನೊಂದು ಕಥೆಯ ಪ್ರಕಾರ ಭಾನಗಡ ಕೋಟೆಯ ಅಕ್ಕಪಕ್ಕದಲ್ಲಿರುವ ಯಾವುದೇ ಗ್ರಾಮದ ಮನೆಗಳಿಗೆ ಛಾವಣಿಗಳಿಲ್ಲ! ಏಕೆಂದರೆ ಛಾವಣಿ ಕಟ್ಟಿದ ಮರುಕ್ಷಣವೇ ಕುಸಿದು ಬೀಳುವ ಮರ್ಮವನ್ನು ಯಾರಿಗೂ ಅರಿಯಲಾಗಿಲ್ಲ.

ನಂಬುತ್ತೀರೋ ಬಿಡುತ್ತೀರೋ, ಇಲ್ಲಿ ಪ್ರೇತ-ಭೂತಗಳದ್ದೇ ಕಾಟವಂತೆ!

ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್!

ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್!

ಮುಂಬೈ ನಗರದ ಸುಪ್ರಸಿದ್ಧ ತಾಜ್ ಪ್ಯಾಲೇಸ್ ಹೋಟೆಲ್ ಸಹಾ ಭೂತಗ್ರಸ್ತವಾಗಿದೆ. ಈ ಹೋಟೆಲನ್ನು ವಿನ್ಯಾಸ ಗೊಳಿಸಿದ ವ್ಯಕ್ತಿ ಈ ಹೋಟೆಲಿನೊಳಗೇ ಆತ್ಮಹತ್ಯೆ ಮಾಡಿಕೊಂಡಿದ್ದನಂತೆ. ಏಕೆಂದರೆ ಆತನ ವಿನ್ಯಾಸದ ಪ್ರಕಾರ ಹೋಟೆಲಿನ ಅಂತಿಮ ವಿನ್ಯಾಸವನ್ನು ಮಾಡದಿರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡನಂತೆ ಎಂದು ಕಥೆ ಹೇಳಲಾಗುತ್ತದೆ. ಇದಕ್ಕೆ ಪೂರಕವಾಗಿ ಹೋಟೆಲಿನಲ್ಲಿ ಉಳಿದುಕೊಂಡಿರುವವರು ಹೋಟೆಲಿನ ಕಾರಿಡಾರ್ ಮತ್ತು ಜಗಲಿಗಳಲ್ಲಿ ಯಾರೋ ಓಡಾಡುತ್ತಿರುವುದನ್ನು ಗಮನಿಸಿದ್ದಾರೆ.

ಶಿಮ್ಲಾದ ಸುರಂಗ ಸಂಖ್ಯೆ 103

ಶಿಮ್ಲಾದ ಸುರಂಗ ಸಂಖ್ಯೆ 103

ಶಿಮ್ಲಾ ಮತ್ತು ಕಾಲ್ಕಾ ನಗರಗಳ ನಡುವೆ ಹಾದುಹೋಗುವ ಹೆದ್ದಾರಿ ಯಾವಾಗ ಸುರಂಗ ಸಂಖ್ಯೆ 103 ಪ್ರವೇಶಿಸಿತೋ ಆಗ ಜನರ ಎದೆಯಲ್ಲಿ ಡವಡವ ಪ್ರಾರಂಭವಾಗುತ್ತದೆ. ಏಕೆಂದರೆ ಬ್ರಿಟಿಷರ ಕಾಲದಲ್ಲಿ ಕೊರೆಯಲಾದ ಈ ಸುರಂಗದಲ್ಲಿ ಕೆಲವು ಭೂತಗಳು ಮಾತನಾಡುವುದನ್ನು ಕೇಳಿದವರಿದ್ದಾರೆ. ಇನ್ನಷ್ಟು ಭಯಪಡಿಸುವ ವಿಷಯವೆಂದರೆ ಮಹಿಳೆಯ ಆಕಾರವೊಂದು ಸುರಂಗದೊಳಗಣ ಗೋಡೆಯನ್ನೇ ತೂರಿ ಮಾಯವಾಗಿರುವುದನ್ನು ಹಲವರು ಕಂಡಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆ

ವಿಕ್ಟೋರಿಯಾ ಆಸ್ಪತ್ರೆ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶತಮಾನದ ಸಂಭ್ರಮ. ಸಿಟಿ ಮಾರ್ಕೆಟ್ ಬಳಿ ಇರುವ ಈ ಆಸ್ಪತ್ರೆ ನೂರಕ್ಕಿಂತಲೂ ಹೆಚ್ಚಿನ ವರ್ಷಗಳಿಂದ ಬಡಜನರಿಗೆ ಅಗತ್ಯ ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಾ ಅಪತ್ಬಾಂಧವನಾಗಿ ಪರಿಣಮಿಸಿದೆ. ಆದರೆ ಜೀವ ಉಳಿಸುವ ಈ ಸ್ಥಳದಲ್ಲಿಯೂ ಕೆಲವು ಅತೀಂದ್ರಿಯ ಅನುಭವಗಳಾಗಿವೆ. ಆಸ್ಪತ್ರೆಯ ಆವರಣದಲ್ಲಿರುವ ಮರಗಳ ಮೇಲೆ ಹಲವರಿಗೆ ಭೂತದಂತಹ ಆಕೃತಿಗಳು ಕಂಡುಬಂದಿವೆ. ಆದರೆ ಈ ಭೂತಗಳು ಯಾರಿಗೂ ಇದುವರೆಗೆ ತೊಂದರೆ ಅಥವಾ ಅಪಾಯವನ್ನು ಕೊಟ್ಟಿಲ್ಲವಂತೆ!

Image courtesy- wekepedia

 ಖೂನಿ ದರ್ವಾಜಾ

ಖೂನಿ ದರ್ವಾಜಾ

ಇದು ದೆಹಲಿಯಲ್ಲಿರುವ ಮೊಘಲ್ ಸ್ಮಾರಕವಾಗಿದೆ. ಬ್ರಿಟಿಷರು ಬಹದೂರ್ ಷಾ ಜಫರ್ ನ 3 ಗಂಡು ಮಕ್ಕಳನ್ನು ಕೊಂದರು. ಈ ಮಕ್ಕಳು ದೆವ್ವವಾಗಿ ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಳ್ಳಲು ಬಾಗಿಲ ಬಳಿ ಕಾಯುತ್ತಿದೆ. ಇಲ್ಲಿಗೆ ಬ್ರಿಟಿಷರು ಹೋದರೆ ಏನಾದರೂ ಸಂಭವಿಸುತ್ತದೆ ಎಂಬ ಅಂತೆ-ಕಂತೆಗಳು ಈ ಸ್ಮಾರಕದ ಬಗ್ಗೆ ಕೇಳಿ ಬರುತ್ತದೆ.

ಗೋವಾದ ಮೂರು ರಾಜರ ಚರ್ಚ್

ಗೋವಾದ ಮೂರು ರಾಜರ ಚರ್ಚ್

ಗೋವಾದಲ್ಲಿರುವ The Church Of Three Kings ಎಂಬ ಇಗರ್ಜಿಯೇ ಭೂತದ ವಾಸಸ್ಥಾನ ಎಂದು ನಂಬಲಾಗಿದೆ. ಗೋವಾ ರಾಜ್ಯದಲ್ಲಿಯೇ ಅತಿ ಪ್ರಸಿದ್ಧವಾಗಿರುವ ಈ ಸ್ಥಳದಲ್ಲಿ ಹಿಂದೆ ಗೋವಾದಲ್ಲಿ ಪೋರ್ಚುಗೀಸರ ಆಡಳಿತವಿದ್ದಾಗ ಓರ್ವ ರಾಜ ಇನ್ನಿಬ್ಬರು ರಾಜರನ್ನು ಕೊಲೆ ಮಾಡಿದ ಬಳಿಕ ವಿರಕ್ತಿ ಹೊಂದಿ ಆತ್ಮಹತ್ಯೆ ಮಾಡಿಕೊಂಡನೆಂಬ ಕಥೆ ಹೇಳಲಾಗುತ್ತದೆ. ಇಂದಿಗೂ ಈ ಮೂರೂ ರಾಜರ ಇರುವಿಕೆಯನ್ನು ಗಮನಿಸಬಹುದು.

English summary

Most Haunted Places In India And Their Real Ghost Stories

Everybody has heard a real-life tale or two about some of the scariest places in India. Some people act brave, but the fact remains that a few uncanny stories are spooky, like really spooky. Blame it on circumstances, but spine-chilling accounts confirm the presence of ghosts and spirits, especially when they come from locals. This most haunted places in India just won’t stop haunting as long as their weird tales keep spooking you.
Subscribe Newsletter