ಈತನ ವಯಸ್ಸು 50, ಆದರೆ ನೋಡುವುದಕ್ಕೆ 20ರ ಯುವಕನಂತೆ ಕಾಣುತ್ತಾನೆ!

By: Arshad
Subscribe to Boldsky

ಯಾವುದೇ ಪುರುಷ ಸುಂದರಾಂಗನಾಗಿದ್ದರೆ ಮಹಿಳೆಯರ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಉತ್ತಮ ದೇಹದಾರ್ಢ್ಯ, ಚುರುಕು ಕಣ್ಣು, ನಡೆದಾಡುವ ಶೈಲಿ, ಮಾತನಾಡುವ ಶೈಲಿ, ಒಟ್ಟಾರೆ ಮನಸೂರೆಗೊಳ್ಳುವ ವ್ಯಕ್ತಿತ್ವವನ್ನು ಮೆಚ್ಚಿಕೊಳ್ಳದ ಮಹಿಳೆಯೇ ಇರಲಾರಳು. ಕೆಲವು ರೂಪದರ್ಶಿ ಪುರುಷರು ತಮ್ಮ ವಯಸ್ಸಿಗೂ ಮೀರಿದ ಆಕರ್ಷಣೆಯನ್ನು ಬಹುಕಾಲದವರೆಗೆ ಉಳಿಸಿಕೊಳ್ಳಲು ಯಶಸ್ವಿಯಾಗುತ್ತಾರೆ.

ಹೀಗೆ ಮನಸೂರೆಗೊಳ್ಳುವ ಪುರುಷ ರೂಪದರ್ಶಿಯೊಬ್ಬರನ್ನು ನೋಡಿದರೆ ಇವರಿಗೇನು ಸುಮಾರು ಇಪ್ಪತ್ತು ಇಪ್ಪತ್ತೈದಾಗಿರಬಹುದು ಎಂದುಕೊಂಡಿದ್ದರೆ ಅವರ ನಿಜವಾದ ವಯಸ್ಸು ತಿಳಿದ ಬಳಿಕ ಅವಾಕ್ಕಾಗುವುದು ಖಂಡಿತ. ಏಕೆಂದರೆ ಇಂದು ಇಂಟರ್ನೆಟ್ ಮೂಲಕ ವಿಶ್ವದ ಗಮನ ಸೆಳೆದಿರುವ ಈ ಐವತ್ತು ವರ್ಷದ ಯುವಕ ಒಂದು ವೇಳೆ ನೀವು ಮಹಿಳೆಯಾಗಿದ್ದರೆ ಕೊಂಚ ಹೆಚ್ಚೇ ಹೊತ್ತು ತನ್ನ ಚಿತ್ರವನ್ನು ಗಮನಿಸುವಂತೆ ಮಾಡುವುದು ಖಚಿತ.

ಈ ಅದ್ಭುತ ವ್ಯಕ್ತಿಯ ಚಿತ್ರಗಳನ್ನು ನೋಡಿದ ಬಳಿಕ ಈತಯ ವಯಸ್ಸನ್ನು ಯಾವ ಕೋನದಲ್ಲಿ ನೋಡಿದಾಗ ಐವತ್ತಾಗಿರುವಂತೆ ಕಾಣಿಸುತ್ತದೆ ಎಂದು ನಿಮ್ಮನ್ನು ಚಿಂತನೆಗೆ ಹಚ್ಚುವುದರಲ್ಲಿ ಸಂದೇಹವೇ ಇಲ್ಲ. ಅಷ್ಟಕ್ಕೂ ಈ ಯುವಕ ಒಮ್ಮಿದೊಮ್ಮೇ ಪ್ರಕಟವಾಗಿಲ್ಲ, ರೂಪದರ್ಶಿಯಾಗಿಯೇ ತನ್ನ ವೃತ್ತಿಯನ್ನು ಆರಂಭಿಸಿ ಛಾಯಾಗ್ರಾಹಕನಾಗಿದ್ದು ಐವತ್ತು ವಸಂತಗಳನ್ನು ಕಳೆದ ಬಳಿಕವೇ ಯಾವುದೋ ಪ್ರವಾಹವೆಂಬಂತೆ ಈತನ ಚಿತ್ರಗಳು ಇಂಟರ್ನೆಟ್ ನಲ್ಲಿ ಬಹುಖ್ಯಾತಿ ಗಳಿಸಿವೆ. ಬನ್ನಿ, ಈ ವ್ಯಕ್ತಿಯ ಬಗ್ಗೆ ಅರಿಯೋಣ....

ಈ ವ್ಯಕ್ತಿ ಯಾರು

ಈ ವ್ಯಕ್ತಿ ಯಾರು

ಸಿಂಗಪುರ ರಾಷ್ಟ್ರೀಯರಾದ ರೂಪದರ್ಶಿ ಹಾಗೂ ಛಾಯಾಗ್ರಾಹಕರಾದ ಇವರ ಹೆಸರು 'ಚುವಾಂಡೋ ಟ್ಯಾನ್'. ತನ್ನ ಖ್ಯಾತಿಯ ಬಗ್ಗೆ ತಮಗೇ ನಂಬಿಕೆ ಇಲ್ಲದಂತೆ ಇವರನ್ನು ಒಂದು ಲಕ್ಷ ಅರವತ್ತು ಸಾವಿರಕ್ಕೂ ಹೆಚ್ಚು ಜನರು ಇವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಅನುಸರಿಸುತ್ತಿದ್ದಾರೆ. ಅಷ್ಟೇ ಅಲ್ಲ, ಇವರು ಪಾಲುದಾರಿಕೆಯಲ್ಲಿ ಚುವಾಂಡೋ ಅಂಡ್ ಫ್ರೇ ಎಂಬ ಛಾಯಾಚಿತ್ರ ಆಧಾರಿತ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ.

ಇವರ ಚಿರಯೌವನದ ರಹಸ್ಯ....

ಇವರ ಚಿರಯೌವನದ ರಹಸ್ಯ....

ಇವರು ತಡರಾತ್ರಿಯಲ್ಲಿಯೂ ಸ್ನಾನ ಮಾಡುವುದಿಲ್ಲ ಅಥವಾ ಅತಿ ಬೆಳಗ್ಗಿನ ಹೊತ್ತಿನಲ್ಲಿಯೂ ಸ್ನಾನ ಮಾಡುವುದಿಲ್ಲ. ಇವರು ತಮ್ಮ ಆರೋಗ್ಯಕ್ಕೆ ನಿಯಮಿತವಾಗಿ ಹೈನಾನ್ ಚಿಕನ್ ಖಾದ್ಯವನ್ನು ತಿನ್ನುವುದು ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇವರು ನಿಯಮಿತವಾಗಿ ವ್ಯಾಯಾಮ ಮಾಡುವುದೂ ಈ ದೇಹದಾರ್ಢ್ಯಕ್ಕೆ ಇನ್ನೊಂದು ಕಾರಣ.

ಇವರ ಇತಿಹಾಸ

ಇವರ ಇತಿಹಾಸ

ಇವರ ತಾರುಣ್ಯದಲ್ಲಿ ನಗೆಪಾಟಲಿಗೆ ಈಡಾಗುವಂತಹ ಮೈಕಟ್ಟು ಹೊಂದಿದ್ದು ಈ ಮೈಕಟ್ಟಿನ ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಸತತ ವ್ಯಾಯಾಮದಿಂದ ಈಗ ಶಿಲ್ಪಿ ಕಡೆದಂತಹ ಮೈಕಟ್ಟು ಹೊಂದಿದ್ದು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಇವರೊಬ್ಬ ನಿಜವಾದ ತಾರೆ

ಇವರೊಬ್ಬ ನಿಜವಾದ ತಾರೆ

ಇವರನ್ನು ಸುಮಾರು 160,000 ಜನರು ಇನ್ಸ್ಟಾಗ್ರಾಂ ಮೂಲಕ ಹಿಂಬಾಲಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಇವರ ನಿಜವಾದ ವಯಸ್ಸು ಏನು ಎಂಬುದನ್ನು ತಿಳಿಯುವುದರಲ್ಲಿಯೇ ಹೆಚ್ಚಿನ ಉತ್ಸುಕತೆ ತೋರುತ್ತಿದ್ದಾರೆ. ಅಲ್ಲದೇ ಇವರು ತೊಡುವ ಉಡುಗೆಗಳೂ ಇಪ್ಪತ್ತರ ತರುಣರು ತೊಡುವಂತಹದ್ದೇ ಇದ್ದು ಇವರ ಸಮಕಾಲೀನ ವಯಸ್ಸಿನವರೂ ನಂಬದಂತಹ ಪರಿಸ್ಥಿತಿ ಇದೆ.

ಈಗ ಇವರು ಅಪರೂಪಕ್ಕೆ ರೂಪದರ್ಶಿಯ ಕೆಲಸ ಮಾಡುತ್ತಾರೆ

ಈಗ ಇವರು ಅಪರೂಪಕ್ಕೆ ರೂಪದರ್ಶಿಯ ಕೆಲಸ ಮಾಡುತ್ತಾರೆ

ಛಾಯಾಗ್ರಹಣವನ್ನು ವೃತ್ತಿಯಾಗಿ ಪರಿಗಣಿಸಿದ ಬಳಿಕ ಇವರು ರೂಪದರ್ಶಿಯ ಕೆಲಸಕ್ಕೆ ಆಗಾಗ ಮಾತ್ರವೇ ಹೋಗುತ್ತಿದ್ದರು. ಆದರೆ ಇತ್ತೀಚೆಗೆ ಚೀನೀ ಭಾಷೆಯ ತಾಣವಾದ Yidian Zixun ನಲ್ಲಿ ಒಂದು ಜಾಹೀರಾತಿನ ಮೂಲಕ ಕಾಣಿಸಿಕೊಂಡಿದ್ದೇ ತಡ, ಇವರು ಒಮ್ಮೆಲೇ ಜನಪ್ರಿಯತೆಯ ಉತ್ತಂಗಕ್ಕೇರಿಬಿಟ್ಟಿದ್ದಾರೆ. ಇವರ ಫೋನು ಒಂದು ಕ್ಷಣವೂ ಬಿಡದೇ ರಿಂಗಿಣಿಸುತ್ತಿದೆ. ಇವರಿಗೆ ಐವತ್ತು ಎಂದು ಹೇಳಿರುವುದನ್ನು ನಂಬಲಿಕ್ಕೇ ತಯಾರಿರದ ಕುತೂಹಲಿಗಳಿಂದ ಇವರು ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ.

English summary

Model Who Is 50 Year Old With A Body Of A 20 Year Old!

When men are really hot, women cannot just stop admiring them. Ain't it right, ladies? They become an eye candy for sure, as they can simply sweep the women off their feet with their mantastic looks. The case of a 50-year-old model, who looks nothing like his age and more like in his 20's, will simply shock you. And if you are a woman, we bet, you'd surely drool over this photographer of his, who is turning out to be the latest sensation on the internet!
Story first published: Tuesday, August 8, 2017, 7:05 [IST]
Subscribe Newsletter