ಅಚ್ಚರಿಯ ಲೋಕ: ಅಂದು ಹತ್ತೇ ನಿಮಿಷ ಬದುಕಿತ್ತು ಈ ಮತ್ಸಕನ್ಯೆ ಮಗು!

By: Arshad
Subscribe to Boldsky

ದೇಹದ ಕೆಳಭಾಗ ಮೀನಿನಂತೆ ಹಾಗೂ ಮೇಲ್ಭಾಗ ಮಾನವರಂತೆ ಇರುವ ಮತ್ಸಕನ್ಯೆ ಅಥವಾ ಮರ್ಮೇಯ್ಡ್ ಒಂದು ದಂತಕಥೆಯಾಗಿದ್ದರೂ ವಿಶ್ವದ ಹಲವೆಡೆ ಇವರು ಇದ್ದಾರೆ ಎಂದು ಜನರು ನಂಬುತ್ತಾರೆ. ಡೆನ್ಮಾರ್ಕ್ ನಲ್ಲಿರುವ ಲಿಟ್ಲ್ ಮರ್ಮೇಯ್ಡ್ ವಿಗ್ರಹವಂತೂ ವಿಶ್ವವಿಖ್ಯಾತಿ ಪಡೆದಿದೆ. ಆದರೆ ಕೆಲವೊಮ್ಮೆ ವಿರೂಪಗೊಂಡ ಮಾನವ ಶಿಶುಗಳು ಜನಿಸಿದಾಗ ಇವು ಮರ್ಮೇಯ್ಡ್ ಆಕಾರವನ್ನು ಹೊಂದಿರುವುದು ಮಾತ್ರ ಕಾಕತಾಳೀಯ. 

ಗರ್ಭಾವಸ್ಥೆಯಲ್ಲಿ ಗರ್ಭಿಣಿ ಸೇವಿಸುವ ಔಷಧಿ ಹಾಗೂ ಇತರ ಅಂಶಗಳು ಮಗುವಿನ ಕಾಲುಗಳೆರೆಡನ್ನೂ ಬೆಸೆದಿದ್ದು ಪಾದಗಳು ಮಾತ್ರವೇ ಅತ್ತಿತ್ತ ಚಾಚಿದಂತೆ ಬೆಳವಣಿಗೆ ಹೊಂದಿದ್ದು ಹೆಚ್ಚೂ ಕಡಿಮೆ ಮತ್ಸಕನ್ಯೆಯನ್ನು ಹೋಲುವ ವಿಕಲತೆಯನ್ನು ಹೊಂದಿರುವ ಮಕ್ಕಳು ಆಗಾಗ ಜನಿಸುತ್ತಿರುತ್ತಾರೆ. Sirenomelia ಎಂದು ಕರೆಯಲ್ಪಡುವ ಈ ವಿಕಲತೆಗೆ ತುತ್ತಾಗಿ ಹುಟ್ಟುವ ಈ ಮಕ್ಕಳು ಬದುಕಿ ಉಳಿಯುವ ಸಾಧ್ಯತೆ ತೀರಾ ಕಡಿಮೆ. ಮರ್ಮೇಯ್ಡ್ ಅನ್ನು ಹೋಲುವ ಕಾರಣದಿಂದಾಗಿ ಈ ರೋಗಕ್ಕೆ ಮರ್ಮೇಯ್ಡ್ ಸಿಂಡ್ರೋಂ ಎಂದೂ ಕರೆಯಲಾಗುತ್ತದೆ.

ಇಂತಹ ಪ್ರಕರಣಗಳು ಎಲ್ಲೋ ಶತಮಾನದಲ್ಲಿ ಒಂದೆರಡು ಕಂಡುಬರಬಹುದಷ್ಟೇ. ಈ ವರ್ಷ ಭಾರತದಲ್ಲಿಯೇ ಈ ವಿಕಲತೆಯನ್ನು ಹೊಂದಿದ್ದ ಮಗುವೊಂದು ಜನಿಸಿದ್ದು ಕೇವಲ ಹತ್ತು ನಿಮಿಷಗಳ ಬಳಿಕ ಸಾವನ್ನಪ್ಪಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯೋಣ... 

 ಈ ಪ್ರಕರಣ ಉತ್ತರಪ್ರದೇಶದಲ್ಲಿ ಕಂಡುಬಂದಿದೆ

ಈ ಪ್ರಕರಣ ಉತ್ತರಪ್ರದೇಶದಲ್ಲಿ ಕಂಡುಬಂದಿದೆ

ಉತ್ತರಪ್ರದೇಶದ ಸಹಾರನ್ ಪುರ್ ಎಂಬ ಪಟ್ಟಣದಲ್ಲಿ ಇಪ್ಪತ್ತೆರಡು ವರ್ಷ ವಯಸ್ಸಿನ ತಾಯಿಗೆ ಜನಿಸಿದ ಈ ಮಗುವನ್ನು ಕಂಡ ಬಳಿಕ ಈಕೆಯ ಸಹಿತ ವೈದ್ಯರೂ ಜೀವಮಾನದ ಆಘಾತವನ್ನು ಪಡೆದಿದ್ದಾರೆ. ಏಕೆಂದರೆ ಗರ್ಭಾವಸ್ಥೆಯಲ್ಲಿ ಈ ಸ್ಥಿತಿ ಇದ್ದುದನ್ನು ಸಾಮಾನ್ಯವಾದ ಸ್ಕ್ಯಾನ್ ಗಳು ಕಂಡುಹಿಡಿದಿರಲಿಲ್ಲ.

ಚಕಿತರಾದ ವೈದ್ಯರು

ಚಕಿತರಾದ ವೈದ್ಯರು

ಈ ಪ್ರಕರಣವನ್ನು ಕಂಡ ವೈದ್ಯರು ಸಹಾ ಚಕಿತರಾಗಿದ್ದು ತಮ್ಮ ಸೇವಾವಧಿಯಲ್ಲಿಯೇ ಇಂತಹ ಪ್ರಕರಣವನ್ನು ಕಂಡಿರಲಿಲ್ಲ, ಮಗುವಿನ ಕೆಲವು ಅಂಗಗಳು ಬೆಸೆದಿದ್ದು ಹುಟ್ಟಿದ್ದ ಪ್ರಕರಣಗಳನ್ನು ಕಂಡಿದ್ದು ಬಿಟ್ಟರೆ ಎರಡೂ ಕಾಲುಗಳು ಬೆಸೆದಿರುವುದನ್ನು ಪ್ರಥಮ ಬಾರಿಗೆ ಕಾಣುತ್ತಿದ್ದೇನೆ ಎಂದು ಉದ್ಗರಿಸಿದ್ದಾರೆ.

ಮೀನಿನಾಕೃತಿಯ ಮಗು

ಮೀನಿನಾಕೃತಿಯ ಮಗು

ಈ ಮಗುವಿನ ಎರಡೂ ಕಾಲುಗಳು ಬೆಸೆದಿದ್ದು ಒಂದೇ ಕಾಲಿನಂತಾಗಿದ್ದು ಎರಡೂ ಪಾದಗಳು ಅತ್ತಿತ್ತ ಚಾಚಿದಂದಿತ್ತು ಮೀನಿನ ಬಾಲವನ್ನು ಹೋಲುತ್ತಿತ್ತು. ಎರಡೂ ಕೈಗಳು ಹೆಚ್ಚೂಕಡಿಮೆ ಪೂರ್ಣಬೆಳವಣಿಗೆ ಪಡೆದಿದ್ದು ಎರಡೂ ಕಡೆ ಚಾಚಿದಂತಿದ್ದು ಮೀನಿನ ರೆಕ್ಕೆಗಳನ್ನೇ ಹೋಲುತ್ತವೆ. ವೈದ್ಯರ ಪ್ರಕಾರ ಈ ಮಗುವಿನ ದೇಹದ ಮೇಲ್ಭಾಗ ಸರಿಯಾಗಿ ಕಾರ್ಯನಿರ್ವಹಿಸುತ್ತಿತ್ತು, ಆದರೆ ಕೆಳಭಾಗ ಸರಿಯಾಗಿ ಬೆಳವಣಿಗೆ ಹೊಂದಿರಲಿಲ್ಲ.

ಮಗುವಿನ ಆರೋಗ್ಯ ಸ್ಥಿತಿ

ಮಗುವಿನ ಆರೋಗ್ಯ ಸ್ಥಿತಿ

ಈ ಮಗುವಿಗೆ Sirenomelia ಅಥವಾ ಮರ್ಮೇಯ್ಡ್ ಸಿಂಡ್ರೋಮ್ ಎಂಬ ಅತ್ಯಪರೂಪದ ವಿಕಲತೆಯಿದ್ದು ಈ ವಿಕಲತೆಯಿಂದ ಬದುಕಿ ಉಳಿಯುವ ಸಾಧ್ಯತೆ ಇಲ್ಲವೇ ಇಲ್ಲವೆನ್ನುವಷ್ಟಿದೆ. ಈ ಸ್ಥಿತಿಯಲ್ಲಿ ಮಗುವಿನ ಎರಡೂ ಕಾಲುಗಳು ತಿರುಚಿಕೊಂಡು ಬೆಸೆದುಕೊಂಡಿದ್ದು ಒಂದೇ ಕಾಲಿನಂತಾಗಿರುತ್ತವೆ.

ವೈದ್ಯರ ವಿವರಣೆಯ ಪ್ರಕಾರ

ವೈದ್ಯರ ವಿವರಣೆಯ ಪ್ರಕಾರ

ಈ ಮಗು ಮೀನಿನ ಆಕೃತಿಯನ್ನು ಹೊಂದಿರುವುದು ನಿಜವಾಗಿದ್ದು ಕೈಗಳು ರೆಕ್ಕೆಗಳಂತೆ ಚಾಚಿಕೊಂಡಿದ್ದುದು ಈ ಪ್ರಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಒದಗಿಸಿದೆ. ದೇಹದ ಮೇಲ್ಭಾಗ ಸರಿಯಾಗಿ ಕಾರ್ಯನಿರ್ವಹಿಸುತ್ತಿತ್ತು ಆದರೆ ಕೆಳಭಾಗ ಪೂರ್ಣವಾಗಿ ಬೆಳವಣಿಗೆಯಾಗಿರಲಿಲ್ಲ.

ಈ ಮಗುವಿನ ಆಯಸ್ಸು : ಹತ್ತು ನಿಮಿಷಗಳು

ವಿಶ್ವದಲ್ಲಿ ಇದುವರೆಗೆ ಇಂತಹ ನಾಲ್ಕೇ ಪ್ರಕರಣಗಳು ವರದಿಯಾಗಿದ್ದು ಇದು ನಾಲ್ಕನೆಯದ್ದಾಗಿದೆ. ಹುಟ್ಟಿದ ಹತ್ತು ನಿಮಿಶಗಳ್ ಕಾಲ ಇದರ ಹೃದಯ ಬಡಿತ ಮುಂದುವರೆದಿದ್ದು ಬಳಿಕ ಸ್ಥಗಿತವಾಗಿದೆ. ಅಲ್ಲದೇ ಜನನಾಂಗಗಳು ಬೆಳೆಯದೇ ಇರುವ ಕಾರಣ ಈ ಮಗು ಹೆಣ್ಣಾಗಿತ್ತೋ ಗಂಡಾಗಿತ್ತೋ ಹೇಳುವುದು ಅಸಾಧ್ಯವಾಗಿದೆ. ಒಂದು ವೇಳೆ ನಿಮ್ಮಲ್ಲಿಯೂ ಇಂತಹ ಸ್ವಾರಸ್ಯಕರ ಕಥೆ ಇದ್ದರೆ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿ.

English summary

Mermaid Baby Who Lived For Just 10 Minutes!

This is the case of a baby who was born with a very rare condition known as "Sirenomelia", where the baby looked similar to a mermaid and it eventually died within minutes after its birth. Find out more about this rare birth defect and the case.
Story first published: Friday, August 18, 2017, 23:32 [IST]
Subscribe Newsletter