Latest Updates
-
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ! -
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ!
ಮದುವೆಗೆ ಈ 4 ರಾಶಿಗಳಲ್ಲಿ ಜನಿಸಿದ ಹುಡುಗ ಸಿಕ್ಕಿದರೆ ಅವರೇ ಅದೃಷ್ಟವಂತರು!
ಹದಿಹರೆಯದಲ್ಲಿ ಸ್ವಾಭಾವಿಕವಾಗಿ ಭಿನ್ನಲಿಂಗಿಯರ ಬಗ್ಗೆ ಆಕರ್ಷಣೆಯುಂಟಾಗಲು ಯಾವುದಾದರೊಂದು ಲಕ್ಷಣವೇ ಸಾಕಾಗುತ್ತದೆ. ಕೆಲವರಿಗೆ ಸೌಂದರ್ಯ ಆಕರ್ಷಿಸಿದರೆ ಕೆಲವರಿಗೆ ಇನ್ನಾವುದೋ ಒಂದು ಲಕ್ಷಣ ಹೆಚ್ಚು ಆಕರ್ಷಿಸುತ್ತದೆ. ಆದರೆ ಜೀವನಸಂಗಾತಿಯಾಗಿ ಪಡೆಯಬಯಸುವ ವ್ಯಕ್ತಿಯನ್ನು ಪಡೆಯಲು ಈ ಬಾಹ್ಯ ಆಕರ್ಷಣೆಗಳಿಗಿಂತಲೂ ಹೃದಯ ಒಪ್ಪುವ ಲಕ್ಷಣಗಳೇ ಪ್ರಮುಖವಾಗುತ್ತವೆ.
ಜೀವನಸಂಗಾತಿಯನ್ನು ಪಡೆಯುವಲ್ಲಿ ಪ್ರತಿ ಯುವತಿಯೂ ತನ್ನ ಮನದಲ್ಲಿ ಕನಸಿನ ರಾಜಕುಮಾರನೊಬ್ಬನನ್ನು ಆರಾಧಿಸುತ್ತಿರುತ್ತಾಳೆ. ಒಂದು ವೇಳೆ ನಿಮ್ಮ ಕನಸಿನ ರಾಜಕುಮಾರನ ಆಯ್ಕೆ ಕಠಿಣ ಎನಿಸುತ್ತಿದ್ದರೆ ಕೆಳಗಿನ ಮಾಹಿತಿ ನಿಮಗೆ ನೆರವಾಗಲಿದೆ....

ಸೂಕ್ತ ರಾಜಕುಮಾರನನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?
ಈ ಜಗತ್ತಿನಲ್ಲಿ ನೂರಾರು ಸುಂದರ, ಕಾಳಜಿ ವಹಿಸುವ, ಉತ್ತಮ ದೇಹದಾರ್ಢ್ಯದ, ನೀಳಕಾಯದ ಯುವಕರಿದ್ದಾರೆ. ಆದರೆ ನಿಮ್ಮ ಮನಸ್ಸಿಗೆ ಒಪ್ಪುವ ಕನಸಿನ ರಾಜಕುಮಾರನನ್ನು ಹುಡುಕುವುದು ನಿಜವಾಗಿಯೂ ಕಷ್ಟದ ಕೆಲಸ. ಆತನ ಇಷ್ಟದ ಹಾಗೂ ಇಷ್ಟವಿಲ್ಲದ ಕೆಲಸಗಳನ್ನು ಅರಿತುಕೊಳ್ಳುವ ಬದಲು ನಿಮ್ಮಿಬ್ಬರ ಯೋಚನೆ ಹಾಗೂ ವ್ಯಕ್ತಿತ್ವಗಳು ಪರಸ್ಪರ ಹೊಂದಿಕೊಳ್ಳುವಂತಿರಬೇಕು, ಆಗಲೇ ನಿಮ್ಮ ಜೋಡಿ ಅನುರೂಪದ ಜೋಡಿಯಾಗುವುದು ಖಂಡಿತ.

ವಿವಾಹಕ್ಕೆ ಸೂಕ್ತ ವ್ಯಕ್ತಿಯ ಆಯ್ಕೆ
ನಿಮ್ಮ ಜನ್ಮರಾಶಿಗೆ ಸೂಕ್ತವಾಗುವ ವ್ಯಕ್ತಿ ಯಾರು ಎಂಬುದನ್ನು ಅರಿತುಕೊಳ್ಳಲು ಅಂತರ್ಜಾಲದಲ್ಲಿ ನೂರಾರು ಲೇಖನಗಳಿವೆ. ಆದರೆ ವಿವಾಹವಾಗಲು ಯೋಗ್ಯನಾದ ಪುರುಷನನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು? ಈ ನಿಟ್ಟಿನಲ್ಲಿ ಒಟ್ಟು ನಾಲ್ಕು ಜನ್ಮರಾಶಿಗಳಲ್ಲಿ ಹುಟ್ಟಿರುವ ಪುರುಷರನ್ನು ಆಯ್ಕೆ ಮಾಡಲಾಗಿದ್ದು ನಿಮಗೆ ಅತ್ಯುತ್ತಮನೆನಿಸುವ ಪುರುಷನನ್ನು ಕಂಡುಕೊಳ್ಳಲು ಕಷ್ಟವಾಗಲಾರದು.

1. ಮಿಥುನ
ನಿಮಗೆ ಸದಾ ಸಮೀಪವೇ ಇರುವ ಹಾಗೂ ನಿಮ್ಮನ್ನು ರಂಜಿಸುತ್ತಾ ಇರುವ ಪುರುಷನ ಅಗತ್ಯವಿದೆಯೇ? ಹೌದು ಎಂದಾದರೆ ಮಿಥುನ ರಾಶಿಯಲ್ಲಿ ಜನಿಸಿದ ಪುರುಷ ನಿಮಗೆ ಸೂಕ್ತವಾಗಲಿದ್ದಾನೆ. ಈ ರಾಶಿಯ ಜನರು ಅತಿ ವಿನೋದ ಪ್ರಿಯರಾಗಿದ್ದು ಸುತ್ತಮುತ್ತಲಿನವರಲ್ಲಿ ನಗುವನ್ನು ಉಕ್ಕಿಸುತ್ತಾ ಇರುತ್ತಾರೆ. ಸಂಬಂಧದಲ್ಲಿರುವವರೊಂದಿಗೆ ಈ ವ್ಯಕ್ತಿಗಳು ಅತಿ ಹೆಚ್ಚಿನ ಬದ್ಧತೆಯನ್ನು ಕಾಪಾಡುವವರಾಗಿದ್ದು ಸುತ್ತಮುತ್ತಲಿನ ಯಾರಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ತಮ್ಮ ಸಂಗಾತಿಗೆ ನೀಡುತ್ತಾರೆ.

ಇವರೊಟ್ಟಿಗೆ ವಿವಾಹವಾದರೆ ಜೀವನದಲ್ಲಿ ಸದಾ ಸಂತೋಷ
ಇವರು ಉತ್ತಮ ವಾಗ್ಮಿಗಳು ಹಾಗೂ ಮಾತುಗಾರಿಕೆಯಲ್ಲಿ ನಿಷ್ಣಾತರಾಗಿರುತ್ತಾರೆ. ಇವರು ಸಾಮಾನ್ಯವಾಗಿ ಇನ್ನೊಬ್ಬರ ಆಧಾರದ ಮೇಲೆ ನಿಲ್ಲುವವರಾದರೂ ಸಾಮಾಜಿಕವಾಗಿ ಬೆರೆಯುವವರೂ ಉಲ್ಲಸಿತ ವ್ಯಕ್ತಿಗಳೂ ಆಗಿರುತ್ತಾರೆ. ಈ ವ್ಯಕ್ತಿಯೊಂದಿಗೆ ವಿವಾಹವಾದರೆ ನಿಮ್ಮ ಜೀವನದಲ್ಲಿ ಸದಾ ಸಂತೋಷ, ವಿನೋದ ಹಾಗೂ ನೆಮ್ಮದಿ ನೆಲೆಸಿರುತ್ತದೆ ಹಾಗೂ ನಿಮ್ಮ ದಾಂಪತ್ಯ ಆದರ್ಶಮಯವಾಗಿರುತ್ತದೆ.

2. ಕಟಕ
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ತಮ್ಮ ಕುಟುಂಬಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುವವರಾಗಿದ್ದು ಆದರ್ಶ ಪತಿ ಹಾಗೂ ಆದರ್ಶ ತಂದೆಯರೂ ಆಗಿರುತ್ತಾರೆ. ಇವರು ತಮ್ಮ ಸಂಬಂಧದ ಕುರಿತು ಅತಿ ಹೆಚ್ಚಿನ ಬದ್ದತೆಯನ್ನು ಪ್ರಕಟಿಸುವವರಾಗಿದ್ದು ಇವರ ಪತ್ನಿಯರು ಈ ಬಗ್ಗೆ ಹೆಮ್ಮೆ ಪಡುವಂತಿರುವಂತಿರುತ್ತಾರೆ. ಇವರು ಮಕ್ಕಳ ಭವಿಷ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುವ ಹಾಗೂ ಸೂಕ್ತ ಮಾರ್ಗದರ್ಶನ ನೀಡುವ ವ್ಯಕ್ತಿಗಳಾಗಿರುತ್ತಾರೆ. ಮಕ್ಕಳು ಉತ್ತಮ ವ್ಯಕ್ತಿಗಳಾಗಿರಲು ಸಾಕಷ್ಟು ಶಿಸ್ತನ್ನು ಬೆಳೆಸಿಕೊಳ್ಳಲು ಶ್ರಮವಹಿಸುತ್ತಾರೆ.

ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ...
ಈ ವ್ಯಕ್ತಿಗಳನ್ನು ವಿವಾಹವಾದರೆ ಅವರ ಕುಟುಂಬದವರನ್ನೇ ಹತ್ತಿರ ಮಾಡಿಕೊಂಡಂತೆ. ದಿನಗಳೆದಂತೆ ಈ ಜೋಡಿ ಎಷ್ಟು ಆತ್ಮೀಯವಾಗುತ್ತದೆಯೋ ಅಷ್ಟೇ ಆತ್ಮೀಯತೆ ಎರಡು ಕುಟುಂಬಗಳ ನಡುವೆಯೂ ಪಡೆಯುತ್ತದೆ. ಈ ವ್ಯಕ್ತಿ ನಿಮ್ಮನ್ನು ಕೇವಲ ತಮ್ಮ ಧರ್ಮಪತ್ನಿಯಾಗಿ ಬರಮಾಡಿಕೊಳ್ಳುವುದಿಲ್ಲ, ಬದಲಿಗೆ ತನ್ನ ಜೀವನದ ಪ್ರಮುಖ ವ್ಯಕ್ತಿಯಾಗಿ ಹಾಗೂ ಮುಂಬರುವ ಸಂತತಿಯನ್ನು ಉತ್ತಮ ವ್ಯಕ್ತಿಗಳಾಗಿ ರೂಪಿಸಲು ಶ್ರಮವಹಿಸುತ್ತಾರೆ.

3. ತುಲಾ
ಒಂದು ವೇಳೆ ನೀವು ಉನ್ನತ ಸ್ಥಾನಮಾನ ಪಡೆಯಬಯಸುವ ಮಹಿಳೆಯಾಗಿದ್ದರೆ ನಿಮಗೆ ತುಲಾರಾಶಿಯಲ್ಲಿ ಹುಟ್ಟಿದ ಪುರುಷನೇ ಸೂಕ್ತ ಜೋಡಿಯಾಗಬಲ್ಲರು. ಈ ವ್ಯಕ್ತಿಗಳು ಅಸಹ್ಯವನ್ನು ಸಹಿಸದವರು ಹಾಗೂ ಎಲ್ಲಾ ವಿಧದಲ್ಲಿಯೂ ಸಹಕಾರ ನೀಡುವ ವ್ಯಕ್ತಿಗಳಾಗಿರುತ್ತಾರೆ. ಸಾಮಾಜಿಕವಾಗಿ ಇವರು ತಮ್ಮ ಸುತ್ತಮುತ್ತಲ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವವರಾಗಿದ್ದು ಇವರು ನಂಬಿಕಸ್ತರೂ ಆಗಿರುತ್ತಾರೆ. ಈ ವ್ಯಕ್ತಿಯ ಧರ್ಮಪತ್ನಿಯಾಗಿ ನಾಲ್ಕು ಜನರ ನಡುವೆ ಓಡಾಡುವುದು ನಿಮೆಗೆ ಹೆಮ್ಮೆಯ ವಿಷಯವಾಗಲಿದೆ.

ಈ ವ್ಯಕ್ತಿಗೆ ನಿಮ್ಮ ಸಂತೋಷವೇ ಪ್ರಥಮ ಆದ್ಯತೆ
ಇವರು ಉತ್ತಮ ಗುಣದ ವ್ಯಕ್ತಿಗಳು ಹಾಗೂ ನಿಮ್ಮ ಸಂತೋಷಕ್ಕಾಗಿ ಏನನ್ನೂ ಮಾಡುವ ವ್ಯಕ್ತಿಗಳಾಗಿರುವ ಕಾರಣ ನಿಮ್ಮೊಂದಿಗೆ ಪತಿಗಿಂತಲೂ ಹೆಚ್ಚಾಗಿ ಓರ್ವ ಪ್ರಾಣಸ್ನೇಹಿತನಾಗಿರುತ್ತಾರೆ. ಈ ರಾಶಿಯ ವ್ಯಕ್ತಿಯೊಂದಿಗೆ ವಿವಾಹವಾಗಲು ಕೊಂಚ ಹೆಣಗಾಡಬೇಕಾದರೂ ವಿವಾಹದ ಬಳಿಕ ಈ ವ್ಯಕ್ತಿಗೆ ನಿಮ್ಮ ಸಂತೋಷವೇ ಪ್ರಥಮ ಆದ್ಯತೆಯಾದ ಕಾರಣ ಜೀವನವಿಡೀ ಸುಖಮಯವಾಗಿರುತ್ತದೆ.

4. ವೃಶ್ಚಿಕ
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಕ್ರಿಯಾತ್ಮಕರಾಗಿದ್ದು ಈ ವ್ಯಕ್ತಿಯೊಂದಿಗೆ ಜೀವನ ಕಳೆಯುವುದಕ್ಕಿಂತ ಹೆಚ್ಚಿನ ಭಾಗ್ಯ ಇನ್ನೊಂದಿಲ್ಲ. ಈ ವ್ಯಕ್ತಿಗಳು ಪತಿಗಿಂತಲೂ ಹೆಚ್ಚಾಗಿ ಹೃದಯಕ್ಕೆ ಸಮೀಪದ ವ್ಯಕ್ತಿಗಳಾಗಿ ನಿಮ್ಮ ಜೀವನವನ್ನು ಸುಂದರವಾಗಿಸಬಲ್ಲದು. ಯಾವುದೇ ಸಂದರ್ಭದಲ್ಲಿ ಇವರು ನಿಮಗೆ ಬೆಂಬಲ ನೀಡುವ ವ್ಯಕ್ತಿಗಳಾಗಿದ್ದು ನಿಮ್ಮ ಒಳನೋಟವನ್ನು ನೀವು ಹೇಳದೆಯೇ ಗ್ರಹಿಸುವವರಾಗಿರುತ್ತಾರೆ.

ಈ ವ್ಯಕ್ತಿಗಳೊಂದಿಗೆ ವಿವಾಹವಾದರೆ ಜೀವನ ಸುಖಕರವಾಗಿರುತ್ತದೆ
ನಿಜವಾಗಿ ಹೇಳಬೇಕೆಂದರೆ ಈ ರಾಶಿಯ ಜನರ ಒಂದು ದೌರ್ಬಲ್ಯವೆಂದರೆ ಸುಳ್ಳು ಹೇಳುವುದು. ಇವರ ಮಾತುಗಳು ಸದಾ ಸತ್ಯವೇ ಆಗಿರುವುದಿಲ್ಲ ಇದೊಂದು ಕಾರಣದಿಂದ ನಿಮ್ಮ ಮನೋಭಾವ ಕುಗ್ಗಬಹುದು. ಆದರೆ ಇವರ ಮೇಲೆ ನಿಮ್ಮ ನಂಬಿಕೆಯನ್ನು ಕಳೆದುಕೊಳ್ಳದೇ ಇದ್ದಲ್ಲಿ ಮಾತ್ರ ನಿಮ್ಮ ಜೀವನವನ್ನು ಅವರು ಸುಂದರವಾಗಿಸಬಲ್ಲರು. ಇವರು ನಿಮಗೆ ಸುಂದರವಾದ ಹಾಗೂ ಸಿಹಿಯಾದ ಅಚ್ಚರಿಯ ಉಡುಗೊರೆಗಳನ್ನು ನೀಡುತ್ತಾ ನಿಮ್ಮ ಮನಸ್ಸು ಉಲ್ಲಸಿತವಾಗಿರುವಂತೆ ನೋಡಿಕೊಳ್ಳುತ್ತಾರೆ. ಇವರು ನಿಮ್ಮ ವೈಯಕ್ತಿಯ ಸಮಯಕ್ಕೆ ಹಾಗೂ ಖಾಸಗಿತನಕ್ಕೆ ಹೆಚ್ಚಿನ ಬೆಲೆ ನೀಡುವವರಾಗಿದ್ದು ಈ ಬಗ್ಗೆ ಚಕಾರವೆತ್ತುವುದಿಲ್ಲ. ಈ ಗುಣದ ಕಾರಣದಿಂದಲೇ ಈ ವ್ಯಕ್ತಿಗಳೊಂದಿಗೆ ವಿವಾಹವಾಗುವ ಮೂಲಕ ಜೀವನ ಸುಖಕರವಾಗಿರುತ್ತದೆ.

ಜೀವನವಿಡೀ ಸುಖ, ಸರಸ ಹಾಗೂ ಉಲ್ಲಾಸದಿಂದಿರುತ್ತದೆ
ಈ ವ್ಯಕ್ತಿಗಳು ವಿವಾಹಬಂಧನದ ಬದ್ಧತೆಗೆ ನಿಧಾನವಾಗಿ ಒಗ್ಗುವವರಾಗಿರುತ್ತಾರೆ. ಆದರೆ ಕೊಂಚ ಸಮಯದ ಬಳಿಕ ಇವರು ಸಂಬಂಧದ ಕುರಿತು ಬದ್ಧರೂ ಹಾಗೂ ನಂಬಲರ್ಹರೂ ಆಗಿ ಮಾರ್ಪಡುತ್ತಾರೆ. ಈ ವ್ಯಕ್ತಿಗಳನ್ನು ವಿವಾಹವಾಗುವ ಮೂಲಕ ಜೀವನವಿಡೀ ಸುಖ, ಸರಸ ಹಾಗೂ ಉಲ್ಲಾಸಗಳು ನಿಮ್ಮ ಜೀವನದಲ್ಲಿ ತುಂಬಿರುತ್ತವೆ.



Click it and Unblock the Notifications