ಮದುವೆ ವಿಚಾರದಲ್ಲಿ ಈ ಮೂರು ರಾಶಿಚಕ್ರದ ಪುರುಷರ ಗುಣ-ನಡತೆ ಸರಿಬರಲ್ಲ!

Posted By: Deepu
Subscribe to Boldsky

ದಾಂಪತ್ಯ ಅಥವಾ ವೈವಾಹಿಕ ಜೀವನ ಸುಖಮಯ ಆಗಿರಬೇಕೆಂದರೆ ಸಂಗಾತಿಗಳು ಪರಸ್ಪರ ಹೊಂದಾಣಿಕೆ ಹಾಗೂ ಪ್ರೀತಿ ವಿಶ್ವಾಸದಿಂದ ವರ್ತಿಸಬೇಕು. ಆಗಲೇ ಜೀವನವು ಸುಖಮಯವಾಗಿ ಇರಲು ಸಾಧ್ಯ. ಸಂಸಾರದಲ್ಲಿ ಗಂಡು ಮತ್ತು ಹೆಣ್ಣಿನ ಪಾತ್ರ ಬಹಳ ಪ್ರಮುಖವಾದದ್ದು. ಇಬ್ಬರಲ್ಲಿ ಒಬ್ಬರು ಬೇಜವಾಬ್ದಾರರಂತೆ ವರ್ತಿಸಿದರೂ ಸಹ ಬದುಕಲ್ಲಿ ಸಂತೋಷ ಕಾಣಲು ಸಾಧ್ಯವಾಗದು. ಅಂತಹ ಸಂಸಾರದಲ್ಲಿ ಸದಾ ಕಿತ್ತಾಟ, ನಡೆಯುತ್ತಲೇ ಇರುತ್ತವೆ. ಪ್ರೀತಿ , ಸ್ನೇಹ ಇಲ್ಲದೆ ಸಂಬಂಧವು ಅಭದ್ರತೆಯನ್ನು ಪಡೆದುಕೊಳ್ಳುತ್ತದೆ.

ಸಮಾಜದಲ್ಲಿ ಸುಂದರವಾದ ಸಂಸಾರವನ್ನು ಹೊಂದಲು ಹಾಗೂ ಪರಿಪೂರ್ಣವಾದ ಅನುಭವವನ್ನು ಪಡೆದುಕೊಳ್ಳಲು ಪತಿಯ ಸಹಕಾರ ಹಾಗೂ ಪ್ರೀತಿಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯವರು ಸಹ ವಿಶೇಷವಾದ ವ್ಯಕ್ತಿತ್ವ ಹಾಗೂ ಸಾಮಾನ್ಯವಾದ ವರ್ತನೆಗಳು ಇರುತ್ತವೆ. ಅಂತೆಯೇ ಕೆಲವು ರಾಶಿ ಚಕ್ರದವರ ಸ್ವಭಾವವು ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಕಾಣದು. ಬದಲಿಗೆ ನೋವು ಭರಿತ ವರ್ತನೆಯಿಂದ ಸಂಬಂಧವು ಅಂತ್ಯಕಾಣುವುದು ಎಂದು. ಈ ವಿಚಾರ ನಿಮಗೂ ಕುತೂಹಲ ತಂದಿದ್ದರೆ ಅಥವಾ ನೀವು ಸಂಗಾತಿಯ ಹುಡುಕಾಟದಲ್ಲಿದ್ದರೆ ಈ ಮೂರು ರಾಶಿಯವರನ್ನು ಆಯ್ಕೆ ಮಾಡದಿರಿ... 

ಮೀನ

ಮೀನ

ಈ ರಾಶಿಯ ಪುರುಷರು ದಾಂಪತ್ಯ ಜೀವನದಲ್ಲಿ ಅಷ್ಟು ನಿಷ್ಟರಾಗಿರುವುದಿಲ್ಲ ಎನ್ನಲಾಗುತ್ತದೆ. ಇವರು ಸದಾ ತಮ್ಮ ಸಂಗಾತಿಯ ತಪ್ಪುಗಳನ್ನು ಹುಡುಕುತ್ತಿರುತ್ತಾರೆ. ತಮ್ಮ ತಪ್ಪಿನ ಅರಿವೇ ಅವರಿಗಿರುವುದಿಲ್ಲ. ಅವರು ಸಂಬಂಧದಲ್ಲಿ ಅತಿಹೆಚ್ಚು ಕಾಳಜಿಯಿಂದ ನೋಡಿಕೊಳ್ಳುವವರಂತೆ ವರ್ತಿಸಿದರೂ ವಾಸ್ತವವಾಗಿ ಅವರ ಮನಸ್ಸು ಆ ರೀತಿಯಲ್ಲಿ ಇರುವುದಿಲ್ಲ.

ಮೀನ

ಮೀನ

ತಮ್ಮ ನಿರೀಕ್ಷೆಯಂತೆಯೇ ಸಂಬಂಧವು ಇರಬೇಕು ಎಂದು ಅಧಿಕಾರ ಚಲಾಯಿಸಲು ನೋಡುತ್ತಾರೆ. ಸಂಬಂಧದಲ್ಲಿ ತೊಡಕು ಉಂಟಾದಾಗ ಪುನಃ ಸಂಗಾತಿಯ ವರ್ತನೆ ಹಾಗೂ ದೋಷಗಳಿಂದಲೇ ಹೀಗೆ ಉಂಟಾಯಿತು ಎಂದು ಹೇಳುತ್ತಾರೆ. ಇವರ ಅನುಮಾನ ಹಾಗೂ ಅತಿಯಾದ ಬಯಕೆಗಳು ಸಂಗಾತಿಯನ್ನು ಉಸಿರುಗಟ್ಟಿಸುವಂತಹ ಪರಿಸ್ಥಿತಿಗೆ ದೂಡುತ್ತದೆ.

ಕನ್ಯಾ

ಕನ್ಯಾ

ಇವರು ಎಂದಿಗೂ ತಮ್ಮ ಸಂಗಾತಿಯೊಂದಿಗೆ ಸಂತೋಷದಿಂದ ಕಾಲಕಳೆಯದರು. ಸದಾ ಕಿರಿಕಿರಿ ಹಾಗೂ ವಾಗ್ವಾದಗಳಲ್ಲೇ ಮುಳುಗಿರುವರು. ತಾವು ಪರಿಪೂರ್ಣರು ಎನ್ನುವ ರೀತಿಯಲ್ಲಿ ವರ್ತಿಸುವರು. ಸಂಗಾತಿಯು ತನ್ನ ಕೈಯಲ್ಲಿರುವ ಗೊಂಬೆಯಾಗಿರಬೇಕು ಎಂದು ಬಯಸುತ್ತಾರೆ. ಸದಾ ಸಂಗಾತಿಯನ್ನು ತನ್ನ ನಿಯಂತ್ರಣದಲ್ಲಿಯೇ ಇರಬೇಕು ಎಂದು ಬಯಸುತ್ತಾರೆ.

ಕನ್ಯಾ

ಕನ್ಯಾ

ಇವರು ಒಮ್ಮೆ ಉದ್ವೇಗಕ್ಕೆ ಒಳಗಾದರು ಎಂದರೆ ಸಂಬಂಧದಿಂದ ಹೊರ ಬರಲು ಇಷ್ಟಪಡುತ್ತಾರೆ. ಅವರು ಎಂದಿಗೂ ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದು ಅಥವಾ ಅದನ್ನು ತಿದ್ದಿಕೊಳ್ಳಲು ಪ್ರಯತ್ನಿಸುವುದಿಲ್ಲ. ಅವರ ಕೆಲವು ಕೆಟ್ಟ ವರ್ತನೆ ಸಂಸಾರದ ಸುಖ ಹಾಗೂ ಶಾಂತಿಯನ್ನು ಕೆಡಿಸುವುದು.

ವೃಷಭ

ವೃಷಭ

ಇವರು ಭಾವನಾತ್ಮಕವಾಗಿ ಹೊರಗುಳಿದವರಾಗಿರುತ್ತಾರೆ. ಇವರು ತಮ್ಮ ಸಂಗಾತಿಯ ಪ್ರೀತಿಯನ್ನು ತಮ್ಮ ವೈಯಕ್ತಿಕ ಪ್ರಯೋಜನಗಳಿಗೆ ಬಳಸಿಕೊಳ್ಳುತ್ತಾರೆ. ಇವರು ಪ್ರಣಯ ಅಥವಾ ಲೈಂಗಿಕ ಸಂಬಂಧಗಳಿಗೆ ವಿಶೇಷವಾದ ಆಧ್ಯತೆಯನ್ನು ನೀಡುವುದಿಲ್ಲ. ಸಂಗಾತಿಯ ಯಾವುದೇ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಆಧ್ಯತೆ ನೀಡುವುದಿಲ್ಲ.

ವೃಷಭ

ವೃಷಭ

ಸಂಗಾತಿಯು ಸದಾ ತನ್ನನ್ನು ಗೌರವಿಸುತ್ತಲೇ ಇರಬೇಕು ಎಂದು ಬಯಸುತ್ತಾರೆ. ತಮ್ಮ ನಡವಳಿಕೆಯನ್ನೇ ಸದಾ ಶ್ಲಾಘಿಸುತ್ತಾರೆ. ಪ್ರಣಯದ ವಿಚಾರದಲ್ಲಿ ಯಾವುದೇ ಆಸಕ್ತಿ ಇಲ್ಲದವರಂತೆ ವರ್ತಿಸುತ್ತಾರೆ. ತಾವು ಇಲ್ಲದೆಯೇ ಸಂಸಾರದ ಘನತೆ ಹಾಗೂ ಸಂತೋಷದಿಂದ ಕೂಡಿರುವುದಿಲ್ಲ ಎನ್ನುವ ಭಾವನೆಯನ್ನು ತಳೆದಿರುತ್ತಾರೆ.

English summary

men-of-these 3-zodiac-signs-turn-out-to-worst-life-partners

These things never happen overnight. Astrology explains that certain zodiac signs find it difficult to keep up with a romantic relationship because of their personality traits. Hence, it’s been narrowed down to these three zodiac signs, which give out world’s worst boyfriend and husbands ever!
Story first published: Monday, December 18, 2017, 23:24 [IST]