ಅಚ್ಚರಿ!! ಈ ದೇಗುಲದಲ್ಲಿ ದೇವರಿಗೆ ಮದ್ಯ ಕುಡಿಸುತ್ತಾರಂತೆ!!

Posted By: Divya Pandith
Subscribe to Boldsky

ಸಾಮಾನ್ಯವಾಗಿ ದೇವರಿಗೆ ನೈವೇದ್ಯ ಎಂದರೆ ಹಣ್ಣು ಹಂಪಲು, ಸಿಹಿ ತಿನಿಸು, ಅನ್ನದ ಪದಾರ್ಥಗಳು ಹಾಗೂ ಹಾಲನ್ನು ಇಡುವುದನ್ನು ನೋಡಿದ್ದೇವೆ, ಕೇಳಿದ್ದೇವೆ ಸಹ. ಆದರೆ ಅದೇ ದೇವರಿಗೆ ಹೆಂಡದ ನೈವೇದ್ಯ ಹಾಗೂ ಅಭಿಷೇಕ ಮಾಡುತ್ತೇವೆ ಎಂದರೆ ಅದೊಂದು ವಿಲಕ್ಷಣ ಪದ್ಧತಿ ಅನಿಸುವುದು. ದೇವರೆಂದರೆ ಸಾತ್ವಿಕ ರೂಪ. ಹಾಗಾಗಿ ಮಧ್ಯಗಳಂತಹ ಪದಾರ್ಥಗಳನ್ನು ದೇವರೂ ಬಯಸುವುದಿಲ್ಲ ಎನ್ನುವುದು ನಮ್ಮ ಭಾವನೆ.

ನಿಜ, ಜಗತ್ತಿನಲ್ಲಿ ಅನೇಕ ತರ್ಕಬದ್ಧ ವಿಷಯಗಳಿವೆ. ಅಂತೆಯೇ ಭಾರತೀಯರು ಅನುಸರಿಸುವ ಮೂಢನಂಬಿಕೆಗಳು ಮತ್ತು ಅದರ ಕಲ್ಪನೆಗಳು ಮಾತ್ರ ವಿಶೇಷವಾದದ್ದು ಎಂದೇ ಹೇಳಬಹುದು. ಇಲ್ಲಿಯ ಭಕ್ತರು ದೇವರನ್ನು ಮೆಚ್ಚಿಸಲು ಕೆಲವು ವಿಪರೀತ ವರ್ತನೆಯನ್ನು ತೋರುವುದನ್ನು ಕಾಣಬಹುದು. ಅಂತಹ ಒಂದು ವಿಧಾನದಲ್ಲಿ ಮದ್ಯಪಾನವನ್ನು ದೇವರಿಗೆ ಅರ್ಪಿಸುವುದು. ಜೊತೆಗೆ ಆ ದೇವರನ್ನು " ಭಾರತದಲ್ಲಿರುವ ಮದ್ಯವನ್ನು ಕುಡಿಯುವ ದೇವರು" ಎಂದು ಕರೆಯುವುದು.  ಹೌದು, ಒಂದು ವಿಶಿಷ್ಟ ದೇವಸ್ಥಾನದಲ್ಲಿ ದೇವರಿಗೆ ಮದ್ಯವನ್ನು ನೀಡಲಾಗುತ್ತದೆ. ಹಾಗಾದರೆ ಈ ದೇವಾಲಯ ಎಲ್ಲಿದೆ? ಏಕೆ ಹೀಗೆ ಮಾಡುತ್ತಾರೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಈ ಕೆಳಗಿನ ವಿವರವನ್ನು ಪರಿಶೀಲಿಸಿ.... 

ದೇವಾಲಯ ಎಲ್ಲಿದೆ?

ದೇವಾಲಯ ಎಲ್ಲಿದೆ?

ಇದೊಂದು ಕಾಳ ಭೈರವ ದೇಗುಲ. ಮಧ್ಯಪ್ರದೇಶದ ಉಜ್ಜಯಿನಿ ಪ್ರದೇಶದಲ್ಲಿದೆ. ಈ ದೇವಸ್ಥಾನವು ಕಾಳ ಭೈರವನಿಗೆ ಅರ್ಪಿತವಾಗಿದೆ. ಇವರು ನಗರದ ರಕ್ಷಕ ದೇವತೆ. ಈ ದೇವಸ್ಥಾನವನ್ನು ಭದ್ರಸೆಮ್ಮನ್ ವರು ನಿರ್ಮಿಸಿದರು . ಇದನ್ನು ಪುರಾತನ ಹಿಂದೂ ದೇವಸ್ಥಾನವೆಂದೂ ಕರೆಯಲಾಗುತ್ತದೆ.

 ಭಕ್ತರು ಮದ್ಯಪಾನವನ್ನು ದೇವರಿಗೆ ಅರ್ಪಿಸಬೇಕು

ಭಕ್ತರು ಮದ್ಯಪಾನವನ್ನು ದೇವರಿಗೆ ಅರ್ಪಿಸಬೇಕು

ಈ ದೇವಸ್ಥಾನದಲ್ಲಿ ಭಕ್ತರು ಮದ್ಯಪಾನ ಮಾಡುತ್ತಾರೆ. ಜೊತೆಗೆ ದೇವರಿಗೆ ಮದ್ಯವನ್ನು ನೈವೇದ್ಯವನ್ನಾಗಿ ನೀಡುತ್ತಾರೆ. ಹಾಗಾಗಿಯೇ ಇಲ್ಲಿಯ ಕುತೂಹಲಕಾರಿ ವಿಚಾರ ವೆಂದರೆ ದೇವರು ಮದ್ಯವನ್ನು ಕುಡಿಯುತ್ತಾನೆ ಎನ್ನುವುದು. ನೀವಿಲ್ಲಿ ಭೇಟಿ ನೀಡಿದರೆ, ದೇವಸ್ಥಾನದ ರಸ್ತೆಯ ಬಳಿ ಅನೇಕ ವ್ಯಾಪಾರಸ್ಥರು ಮದ್ಯವನ್ನು ವ್ಯಾಪಾರ ಮಾಡುತ್ತಾರೆ.

ದೇವರ ಬಗ್ಗೆ

ದೇವರ ಬಗ್ಗೆ

ಭೈರವ್ ಎನ್ನುವ ಹಿಂದೂ ದೇವರು ಶಿವನ ಅವತಾರವೆಂದು ಹೇಳಲಾಗುತ್ತದೆ. ಕಾಳಭೈರವ ಎಂಟು ಭೈರವರಲ್ಲಿ ಒಬ್ಬನು ಎನ್ನುವ ನಂಬಿಕೆಯಿದೆ. ಹಾಗಾಗಿ ಈ ದೇವರನ್ನು ಶಿವನ ರೂಪವೆಂದು ಪೂಜಿಸಲಾಗುವುದು.

ವಿಶೇಷ

ವಿಶೇಷ

ಈ ದೇಗುಲದಲ್ಲಿ ಭಕ್ತರು ದೇವರಿಗಾಗಿ ಮದ್ಯದ ಬಾಟಲಿಯನ್ನೇ ನೀಡುತ್ತಾರೆ. ಪೂಜಾರಿಯು ಮದ್ಯವನ್ನು ಮೂರ್ತಿಯ ಬಾಯಿಯಬಳಿ ಸುರಿಯುತ್ತಾನೆ. ಇದು ಎಲ್ಲಿಗೆ ಹೋಗುತ್ತದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಆದರೆ ಈ ಪ್ರಕ್ರಿಯೆಯೂ ವರ್ಷಕ್ಕೊಮ್ಮೆ ನಡೆಯುತ್ತದೆ ಎನ್ನಲಾಗುತ್ತದೆ.

ಸಂಶೋಧಕರ ಪರೀಕ್ಷೆ

ಸಂಶೋಧಕರ ಪರೀಕ್ಷೆ

ಭಕ್ತರು ನೀಡಿದ ಮದ್ಯವನ್ನು ಪುರೋಹಿತರು ದೇವರ ಬಾಯಿಗೆ ಹಾಕುತ್ತಾರೆ. ನಂತರ ಅದು ಎಲ್ಲಿಗೆ ಹೋಗುತ್ತದೆ ಎನ್ನುವುದನ್ನು ಅರಿಯಲು ಅನೇಕ ಸಂಶೋಧಕರು ಹಾಗೂ ವಿಜ್ಞಾನಿಗಳು ಪರೀಕ್ಷೆ ನಡೆಸಿದರು. ಆದರೆ ಅದಕ್ಕೆ ಯಾವುದೇ ರೀತಿಯ ಸೂಕ್ತ ಉತ್ತರ ದೊರಕಿಲ್ಲ. ಬನ್ನಿ ಇನ್ನಷ್ಟು ಮೈನವಿರೇಳಿಸುವ ದೇವಾಲಯದ ಕುರಿತ ಸಂಗತಿಗಳನ್ನು ನೀಡಿದ್ದೇವೆ ಮುಂದೆ ಓದಿ...

ಪುರಿಯ ಜಗನ್ನಾಥ ದೇವಾಲಯ

ಪುರಿಯ ಜಗನ್ನಾಥ ದೇವಾಲಯ

ರಥ ಯಾತ್ರೆಯ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಒರಿಸ್ಸಾದ ಜಗನ್ನಾಥ ದೇವಾಲಯ ಭಾರತದ ಅತಿ ಹೆಚ್ಚು ಜನರು ಭೇಟಿ ನೀಡುವ ದೇವಾಲಯವಾಗಿದ್ದು ಈ ದೇವಾಲಯದಲ್ಲಿ ವಿತರಿಸಲಾಗುವ ಮಹಾಪ್ರಸಾದವೂ ವಿಶಿಷ್ಟವಾಗಿದೆ. ಈ ಪ್ರಸಾದದಲ್ಲಿ ಐವತ್ತಾರು ಬಗೆಯ ಬೆಂದ ಮತ್ತು ಬೇಯದೇ ಇರುವ ಆಹಾರವಸ್ತುಗಳನ್ನು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಮಿಶ್ರಣ ಮಾಡಿ ನೀಡಲಾಗುತ್ತದೆ. ದೇವಾಲಯದಲ್ಲಿ ವಿತರಿಸಲಾಗುವ ಚಿಕ್ಕ ಪ್ರಮಾಣವನ್ನು ಸವಿದು ತೃಪ್ತರಾಗದ ಭಕ್ತರ ಬೇಡಿಕೆಯನ್ನು ಪೂರೈಸಲು ಪ್ರಸಾದವನ್ನು ಬಳಿಯ ಆನಂದ ಬಾಜಾರ್‌ನಲ್ಲಿರುವ ಮಳಿಗೆಗಳಲ್ಲಿ ನಿಗದಿತ ಬೆಲೆಗೆ ಮಾರಲಾಗುತ್ತದೆ. ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಈ ಪ್ರಸಾದವನ್ನು ತಮ್ಮೊಂದಿಗೆ ಕೊಂಡೊಯ್ದು ತಮ್ಮ ಸ್ನೇಹಿತರು ಮತ್ತು ಬಂಧುಬಳಗದವರಿಗೂ ವಿತರಿಸುತ್ತಾರೆ.

ಗುವಾಹಟಿಯಲ್ಲಿರುವ ಕಾಮಾಕ್ಯ ದೇವಿ

ಗುವಾಹಟಿಯಲ್ಲಿರುವ ಕಾಮಾಕ್ಯ ದೇವಿ

ಅಸ್ಸಾಂ ರಾಜ್ಯದಲ್ಲಿರುವ ಕಾಮಾಕ್ಯ ದೇವಿ ದೇವಾಲಯ ವಾಸ್ತವವಾಗಿ ಆರು ದೇವಾಲಯಗಳ ಒಟ್ಟು ಸಮೂಹವಾಗಿದೆ. ಪ್ರತಿವರ್ಷ ಆಹಾರ್ ತಿಂಗಳ ಏಳನೆಯ ದಿನ ಅಸ್ಸಾಂ ಸಂಸ್ಕೃತಿಯ ಪ್ರಕಾರ ಆಚರಿಸಲ್ಪಡುವ ಅಂಬುಬಾಚಿ ಮೂರು ದಿನಗಳ ಉತ್ಸವವಾಗಿದೆ. ಈ ಉತ್ಸವದ ಸಮಯದಲ್ಲಿ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಮೂರೂ ದಿನಗಳಂದು ಕಡ್ಡಾಯವಾಗಿ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಭಂದಿಸಲಾಗಿದ್ದು ನಾಲ್ಕನೆಯ ದಿನ ತೆರೆಯಲಾಗುತ್ತದೆ. ಆಗ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿನ ಪ್ರಸಾದ ಸ್ವೀಕರಿಸಲು ಮುಗಿಬೀಳುತ್ತಾರೆ. ಇಲ್ಲಿ ಪ್ರಸಾದದ ರೂಪದಲ್ಲಿ ಚಿಕ್ಕ ಬಟ್ಟೆಯ ತುಂಡೊಂದನ್ನು ತೇವಗೊಳಿಸಿ ವಿತರಿಸಲಾಗುತ್ತದೆ. ಈ ಬಟ್ಟೆಯಲ್ಲಿ ಕಾಮಾಖ್ಯ ದೇವಿಯ ಕನ್ಯಾರಸದ ಅಂಶವಿದೆ ಎಂದು ಭಕ್ತರು ನಂಬುತ್ತಾರೆ.

ಕತ್ರಾದಲ್ಲಿರುವ ಮಾತಾ ವೈಷ್ಣೋದೇವಿ ಮಂದಿರ

ಕತ್ರಾದಲ್ಲಿರುವ ಮಾತಾ ವೈಷ್ಣೋದೇವಿ ಮಂದಿರ

ಜೈ ಮಾತಾ ದೀ!. ಈ ಮೂರು ಪದಗಳು ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಂದ ಸತತವಾಗಿ ಕೇಳುಬರುತ್ತಲೇ ಇರುತ್ತವೆ. ಪ್ರತಿವರ್ಷ ದುರ್ಗಮ ಸ್ಥಳದಲ್ಲಿರುವ ಈ ಮಂದಿರವನ್ನು ತಲುಪಲು ಲಕ್ಷಾಂತರ ಜನರು ಕಷ್ಟಪಡುತ್ತಾರೆ. ಈ ದೇವಾಲಯದಲ್ಲಿ ನೀಡುವ ಪ್ರಸಾದ ಮಂಡಕ್ಕಿ, ಸಕ್ಕರೆ ಉಂಡೆ, ಒಣ ಸೇಬು ಮತ್ತು ಕೊಬ್ಬರಿಯ ಚಿಕ್ಕ ಚಿಕ್ಕ ಚೂರುಗಳನ್ನು ಒಳಗೊಂಡಿದ್ದು ಪರಿಸರ ಸ್ನೇಹಿ ಸೆಣಬಿನ ಚಿಕ್ಕ ಚೀಲದಲ್ಲಿ ವಿತರಿಸಲಾಗುತ್ತದೆ. ಇನ್ನೊಂದು ವಿಶೇಷವೆಂದರೆ ನಮಗೆ ಪ್ರಸಾದವನ್ನು ಮನೆಗೆ ಕಳಿಸಿಕೊಡಿ ಎಂದು ವಿಳಾಸ ನೀಡಿ ಕೇಳಿಕೊಂಡರೆ ಈ ಪ್ರಸಾದ ಅಂಚೆ ಮೂಲಕ ನಿಮ್ಮ ಮನೆಗೆ ಬಂದು ತಲುಪುತ್ತದೆ.

ಮದುರೈ ಯಲ್ಲಿರುವ ಅಳಘರ್ ಕೋವಿಲ್

ಮದುರೈ ಯಲ್ಲಿರುವ ಅಳಘರ್ ಕೋವಿಲ್

ಅಲಗಾರ್ ದೇವಾಲಯ ಎಂದೇ ಪ್ರಖ್ಯಾತವಾಗಿರುವ ಈ ದೇವಸ್ಥಾನ ತಮಿಳುನಾಡಿನ ಮದುರೈ ನಿಂದ ಇಪ್ಪತ್ತೊಂದು ಕಿಮೀ ದೂರದಲ್ಲಿದೆ. ವಿಷ್ಣುದೇವರಿಗೆ ಮುಡಿಪಾದ ಈ ದೇವಾಲಯದಲ್ಲಿಯೂ ವಿಶಿಷ್ಟವಾದ ಪ್ರಸಾದವನ್ನು ತಯಾರಿಸಿ ಭಕ್ತರಿಗೆ ವಿತರಿಸಲಾಗುತ್ತದೆ. ಈ ವೈಶಿಷ್ಟ್ಯದಲ್ಲಿಯೂ ಇನ್ನೊಂದು ವಿಶಿಷ್ಟತೆ ಇದೆ. ಅದೆಂದರೆ ಈ ಪ್ರಸಾದವನ್ನು ಭಕ್ತರು ಕಾಣಿಕೆಯಾಗಿ ನೀಡುವ ಅಕ್ಕಿಯಿಂದಲೇ ತಯಾರಿಸಲಾಗುತ್ತದೆ. ಅಂದರೆ ವಿವಿಧ ಭಕ್ತ ನೀಡುವ ಭಿನ್ನವಾದ ಅಕ್ಕಿಯನ್ನೆಲ್ಲಾ ಬೆರೆಸಿ ನೆನೆಸಿ ಕಡೆದು ದೋಸೆ ಹಿಟ್ಟು ತಯಾರಿಸಿ ಬಿಸಿಬಿಸಿ ದೋಸೆ ತಯಾರಿಸಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ.

English summary

Meet The Drunken God Of India

There are many illogical things that happen in the world. But the superstition and beliefs that Indians follow are something way beyond one's imagination. The devotees can go to any extremes, when it comes to pleasing their deity. One such offering is of alcohol to a God, and this God is known as the Drunken God Of India!
Story first published: Friday, November 17, 2017, 23:44 [IST]