ಈ ಊರಿನಲ್ಲಿ ಮಹಿಳೆಯರು ವರ್ಷದಲ್ಲಿ ಐದು ದಿನ ಬಟ್ಟೆ ಹಾಕುವಂತಿಲ್ಲ!

By: Jaya
Subscribe to Boldsky

ನಮ್ಮ ದೇಶದಲ್ಲಿ ಕಾನೂನು ಕಟ್ಟಲೆಗಳು ಅಧಿಕ ಪ್ರಮಾಣದಲ್ಲಿಯೇ ಇದ್ದು ಒಂದೊಂದು ರಾಜ್ಯದಲ್ಲಿ ಒಂದೊಂದು ಪದ್ಧತಿ ಸರ್ವೇ ಸಾಮಾನ್ಯವಾಗಿದೆ. ಜಾತಿ, ಪ್ರಾಂತ್ಯಗಳು, ಭಾಷೆಗಳನ್ನು ಮೀರಿದ ಸಂಪ್ರದಾಯ ದೇಶದಲ್ಲಿರುವುದರಿಂದಲೇ ವಿವಿಧತೆಯಲ್ಲಿ ಏಕತೆ ಎಂಬ ಪಟ್ಟವನ್ನು ದೇಶ ಪಡೆದುಕೊಂಡಿದೆ. ಆಚಾರ ವಿಚಾರಗಳು ಬೇರೆಯಾಗಿದ್ದರೂ ಐಕ್ಯತೆಯಲ್ಲಿ ನಾವು ಮುಂದಿದ್ದೇವೆ.

ಹಿಮಾಚಲ ಪ್ರದೇಶದಲ್ಲಿಯೂ ಕೂಡ ನಿಮಗೆ ಊಹಿಸಲು ಅಸಾಧ್ಯವಾದ ಹಾಗೂ ನಿಮಗೆ ತಿಳಿಯದ ಆಚಾರಗಳನ್ನು ಕೇಳಿದರೆ ನೀವು ಬೆರಗಾಗದೇ ಇರುವುದಿಲ್ಲ!, ಹೌದು ಹಿಮಾಚಲ ಪ್ರದೇಶ ನಮ್ಮ ದೇಶದ ಒಂದು ಸುಂದರ ತಾಣಕ್ಕೆ ಹೆಸರುವಾಸಿ. ತನ್ನದೇ ಆದ ಕೌಶಲ್ಯ ಹಾಗೂ ಹಿರಿಮೆಯಿಂದಾಗಿ ಪ್ರಖ್ಯಾತಿ ಪಡೆದಿರುವ ರಾಜ್ಯ. ಇಲ್ಲೂ ಕೂಡ ಕೆಲವು ವಿಚಿತ್ರ ಸಂಪ್ರದಾಯಗಳನ್ನು ಆಚಾರಿಸುತ್ತಾರೆ. ಹೀಗೆ ಪ್ರತ್ಯೇಕವಾಗಿ ಸಂಪ್ರದಾಯದ ಹಿಂದೆ ಮಹತ್ವವಾದ ಕಾರಣಗಳಿವೆ ಎಂದು ಸ್ಥಳೀಯರು ಹೇಳುತ್ತಾರೆ...

ಪ್ರವಾಸಿಗರ ಅಚ್ಚು ಮೆಚ್ಚಿನ ತಾಣ...

ಪ್ರವಾಸಿಗರ ಅಚ್ಚು ಮೆಚ್ಚಿನ ತಾಣ...

ಹಿಮಾಚಲ ಪ್ರದೇಶದ ವಾತಾವರಣ ಎಲ್ಲರಿಗೂ ಅಚ್ಚು ಮೆಚ್ಚು. ಸಾಮಾನ್ಯವಾಗಿ ಪ್ರವಾಸಿಗರು ಹಿಮಾಚಲ ಪ್ರದೇಶದ ಸುಂದರವಾದ ಸ್ಥಳಗಳಿಗೆ ಭೇಟಿ ನೀಡಲು ಬರುತ್ತಾರೆ. ಇಲ್ಲಿ ಹಲವಾರು ಹಿಂದೂ ದೇವಾಲಯಗಳು ಹಾಗೂ ಪ್ರವಾಸಿ ತಾಣಗಳಿವೆ. ಇಲ್ಲಿನ ಸಂಪ್ರದಾಯಗಳು, ಉಡುಗೆ ತೊಡುಗೆ ಆಚಾರಗಳು ವಿಭಿನ್ನತೆಯಿಂದ ಕೂಡಿದೆ. ಇಲ್ಲಿಗೆ ಬರುವ ಪ್ರವಾಸಿಗರಿಂದಲೇ ಉತ್ತಮ ಆದಾಯವನ್ನು ದೇಶವು ಪಡೆದುಕೊಳ್ಳುತ್ತಿದೆ.

ಇಲ್ಲಿ ಹೆಂಗಸರು ಐದು ದಿನಗಳ ಉಡುಪನ್ನು ಧರಿಸಬಾರದು!

ಇಲ್ಲಿ ಹೆಂಗಸರು ಐದು ದಿನಗಳ ಉಡುಪನ್ನು ಧರಿಸಬಾರದು!

ಆದರೆ ಈ ಪ್ರದೇಶದಲ್ಲಿರುವ ವಿಚಿತ್ರ ಆಚರಣೆಯೆಂದರೆ ಮದುವೆಯಾದ ಮೇಲೆ ವರ್ಷದಲ್ಲಿ ಐದು ದಿನಗಳ ಕಾಲ ಗಂಡ, ಹೆಂಡತಿ ನಗಬಾರದು, ಮಾತನಾಡಬಾರದು ಅಂತೆಯೇ ಅಪರಿಚಿತರಂತೆ ವರ್ತಿಸಬೇಕು, ಅಷ್ಟೇ ಅಲ್ಲದೆ ಹೆಂಗಸರು ಐದು ದಿನಗಳ ಉಡುಪನ್ನು ಧರಿಸಬಾರದು!!

ನಾಲ್ಕು ಗೋಡೆಯ ಮಧ್ಯೆಯೇ ಇರಬೇಕು!

ನಾಲ್ಕು ಗೋಡೆಯ ಮಧ್ಯೆಯೇ ಇರಬೇಕು!

ಇಂತಹ ಸಮಯದಲ್ಲಿ ಮಹಿಳೆಯರಿಗೆ ಮನೆಯಿಂದ ಹೊರಬರಲು ಸಾಧ್ಯವಿಲ್ಲ, ಹಾಗಾಗಿ ನಾಲ್ಕು ಗೋಡೆಯ ಮಧ್ಯೆಯೇ ಅವರು ಕಾಲ ಕಳೆಯಬೇಕು, ಅಲ್ಲದೆ ನೆರೆಮನೆಯವರು, ಕೂಡ ಅವರ ಮನೆ ಹೋಗಬಾರದು.. ಎಂತಹ ವಿಚಿತ್ರ ಆಚರಣೆ ಅಲ್ಲವೇ?

ನಾಲ್ಕು ಗೋಡೆಯ ಮಧ್ಯೆಯೇ ಇರಬೇಕು!

ನಾಲ್ಕು ಗೋಡೆಯ ಮಧ್ಯೆಯೇ ಇರಬೇಕು!

ಹಿಮಾಚಲ ಪ್ರದೇಶದಲ್ಲಿರುವ ಪಾನಿ ಎಂಬ ಗ್ರಾಮದಲ್ಲಿನ ಜನರು ಪುರಾತನವಾದ ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಪ್ರಾಯಶಃ ಇಂತಹ ಆಚಾರಗಳನ್ನು ಭಾರತದಲ್ಲಿ ನೀವೆಲ್ಲೂ ಕೇಳಿರುವುದಿಲ್ಲ, ಕಂಡಿರುವುದಿಲ್ಲ. ಹಾಗಾದರೆ ಇಲ್ಲಿದೆ ಆ ವಿಭಿನ್ನ ಸಂಪ್ರದಾಯ. ವರ್ಷದಲ್ಲಿನ 5 ದಿನಗಳು ಪತಿಯರು ತಮ್ಮ ಪತ್ನಿಯರ ಜೊತೆ ಮಾತನಾಡುವುದಿಲ್ಲ. ಇದು ವರ್ಷಕೊಮ್ಮೆ ನಡೆಯುವ ಈ ಗ್ರಾಮಸ್ಥರ ವಿಭಿನ್ನವಾದ ಆಚಾರಗಳಲ್ಲಿ ಒಂದಾಗಿದೆ. ಇದು ಈ ಪ್ರದೇಶದ ಒಂದು ವಿಶಿಷ್ಟವಾದ ಆಚಾರ.

ಇಡೀ ಊರೇ ಐದು ದಿನ ಮದ್ಯ ಸೇವಿಸುವುದಿಲ್ಲ!

ಇಡೀ ಊರೇ ಐದು ದಿನ ಮದ್ಯ ಸೇವಿಸುವುದಿಲ್ಲ!

ಅಷ್ಟೇ ಅಲ್ಲ ಈ ಗ್ರಾಮದಲ್ಲಿರುವ ಜನರು ಮದ್ಯ ಸೇವಿಸುವ ಆಭ್ಯಾಸವಿದ್ದರೆ ಅದನ್ನು ವರ್ಷದ 5 ದಿನಗಳ ಕಾಲ ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕಾಗುತ್ತದೆ. ಅಂದರೆ ಗ್ರಾಮಸ್ಥರು 5 ದಿನಗಳು ಯಾವುದೇ ರೀತಿಯಲ್ಲೂ ಮದ್ಯಪಾನವನ್ನು ಮಾಡುವುದಿಲ್ಲ.

ಅಶುಭದ ಸಂಕೇತ ಕಾಡುವ ಭಯ!

ಅಶುಭದ ಸಂಕೇತ ಕಾಡುವ ಭಯ!

ಇಲ್ಲಿನ ಅತ್ಯಂತ ವಿಭಿನ್ನವಾದ ಆಚಾರವೆಂದರೆ ವರ್ಷದ 5 ದಿನಗಳ ಕಾಲ ಪ್ರತಿ ಕೆಲಸವನ್ನು ವಸ್ತ್ರವಿಲ್ಲದೆ ಮಾಡಬೇಕು. ಅಂದರೆ ಶರೀರದ ಮೇಲೆ ಯಾವುದೇ ರೀತಿ ವಸ್ತ್ರಗಳಿಂದ ದೇಹವನ್ನು ಮುಚ್ಚಿಕೊಳ್ಳುವಂತಿಲ್ಲ. ಈ ಆಚಾರಗಳನ್ನು ಗ್ರಾಮಸ್ಥರು ಪಾಲಿಸದಿದ್ದರೆ ಗ್ರಾಮಕ್ಕೆ ಹಾಗೂ ಪ್ರಜೆಗಳಿಗೆ ಅಶುಭದ ಸಂಕೇತ ಎಂದು ಭಾವಿಸುತ್ತಾರೆ. ಈ ಆಚಾರವು ಹಿಮಾಚಲ ಪ್ರದೇಶದ ಗ್ರಾಮಸ್ಥರಲ್ಲಿ ಇನ್ನೂ ಉಳಿದಿದೆ. ಇದೊಂದು ಪುರಾತನವಾದ ಆಚಾರಗಳಲ್ಲಿ ಒಂದಾಗಿದ್ದು ಜನರ ನಂಬಿಕೆ ಇಲ್ಲಿ ಕಾಣಬಹುದಾಗಿದೆ.

ಐದು ದಿನ ಇವರಿಗೆ ಕರಾಳ ದಿನ

ಐದು ದಿನ ಇವರಿಗೆ ಕರಾಳ ದಿನ

ಇಂತಹ ನಂಬಿಕೆಗಳನ್ನು ನೀವು ತಿಳಿದುಕೊಂಡ ನಂತರ ಈ ವಿಚಿತ್ರ ಆಚರಣೆಯನ್ನು ಅವರುಗಳು ಯಾಕೆ ಪಾಲಿಸಿಕೊಂಡು ಬರುತ್ತಿದ್ದಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು? ವಸ್ತ್ರವಿಲ್ಲದೆ ಐದು ದಿನಗಳ ಕಾಲ ಮಹಿಳೆಯರು ಇರುವ ದಿನಗಳನ್ನು ಕರಾಳ ದಿನವೆಂದು ಕರೆಯಲಾಗಿದೆ.

ದೇವರಿಂದ ಶಾಪ ದೊರೆಯಬಹುದೆಂಬ ಭೀತಿ!

ದೇವರಿಂದ ಶಾಪ ದೊರೆಯಬಹುದೆಂಬ ಭೀತಿ!

ಅಂತೆಯೇ ಈ ದಿನಗಳಲ್ಲಿ ಅವರು ಮದ್ಯಪಾನವನ್ನು ಸೇವಿಸುವುದಿಲ್ಲ. ದೇವರು ಅಸುರ ಶಕ್ತಿಯನ್ನು ವಧಿಸಿದ ದಿನವೆಂದು ಈ ದಿನಗಳನ್ನು ಅವರು ನಂಬುತ್ತಾರೆ. ಈ ಆಚರಣೆಗಳನ್ನು ಅವರು ಪಾಲಿಸದೇ ಇದ್ದರೆ ಅವರಿಗೆ ದೇವರಿಂದ ಶಾಪ ದೊರೆಯಬಹುದೆಂಬ ಭೀತಿ ಇದೆ.

English summary

Married women here do not wear clothes for 5 days!

In Himalayan there is a tradition for women in this village that everyone can not play. Women of this village do not wear clothes for five days of the year. During this time they do not even come in front of men. In this context it is believed that if a woman does not do it, then her house becomes inauspicious.
Story first published: Tuesday, July 4, 2017, 23:31 [IST]
Subscribe Newsletter