ಈತನಿಗೆ ಒಟ್ಟು 13 ಪತ್ನಿಯರು!! ಏಕಕಾಲದಲ್ಲಿ ಎಲ್ಲರೂ ಗರ್ಭಿಣಿಯರು!!

By: Deepu
Subscribe to Boldsky

ವಿಶಾಲವಾದ ಈ ಪ್ರಪಂಚದಲ್ಲಿ ನಿತ್ಯವೂ ಏನೇನೋ ನಿಗೂಢಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದು ವಿಸ್ಮಯ ಎನಿಸಿದರೆ ಇನ್ನೂ ಕೆಲವು ತಮಾಷೆ ಎನಿಸುತ್ತದೆ. ಅಂತಹದ್ದೇ ಒಂದು ವಿಚಾರ ಇಲ್ಲಿದೆ. ಇದನ್ನು ನೋಡಿದರೆ ಒಮ್ಮೆ ಆಶ್ವರ್ಯವನ್ನು ಮೂಡಿಸಿದರೆ, ಕ್ಷಣಾರ್ಧದಲ್ಲೇ ತಮಾಷೆ ಇರಬಹುದು ಎನಿಸುತ್ತದೆ. ಮತ್ತೊಂದು ಕ್ಷಣಕ್ಕೆ ಇದು ನಿಜಾನಾ? ಎನ್ನುವ ಪ್ರಶ್ನೆಗೆ ಉತ್ತರವನ್ನು ಹುಡುಕಲು ಪ್ರಯತ್ನಿಸುತ್ತೇವೆ.

ಮನೆಯಲ್ಲಿ ಮಹಿಳೆ ಗರ್ಭಿಣಿಯಾಗಿದ್ದಾಳೆ ಅಥವಾ ಮನೆಗೊಂದು ಹೊಸ ಮಗು ಬರುತ್ತದೆ ಎಂದರೆ ಅದರ ಸಡಗರ ಮನೆಮಂದಿಗೆಲ್ಲಾ ಇರುತ್ತದೆ. ಅದರಲ್ಲೂ ಅವಳಿ ಮಕ್ಕಳು ಹುಟ್ಟುತ್ತಿದ್ದಾರೆ ಎಂದರೆ ಖುಷಿಯು ಇಮ್ಮಡಿಯಾಗಿರುತ್ತದೆ. ಮನೆಯಲ್ಲಿರುವ ಮಹಿಳೆಯರೆಲ್ಲಾ ಗರ್ಭಿಣಿಯರಾಗಿದ್ದಾರೆ ಎಂದರೆ? ಮನಸ್ಸಿಗೆ ಖುಷಿಯಿದ್ದರೂ ಏನೋ ಒಂದು ಭಗೆಯ ಭಯ ಇರುತ್ತದೆ. ಯಾರ ಪ್ರಸವ ಮೊದಲು? ಯಾರ ಬಗ್ಗೆ ಕಾಳಜಿವಹಿಸಬೇಕು? ಹೀಗೆ ಅನೇಕ ಗೊಂದಲಮಯ ಪ್ರಶ್ನೆ ಕಾಡಲು ಆರಂಭಿಸುತ್ತದೆ.

ಇಂತಹದ್ದೇ ಪರಿಸ್ಥಿತಿಯಲ್ಲಿ ಇಲ್ಲೊಬ್ಬ ಯುವಕನಿದ್ದಾನೆ. ಇವನಿಗೆ 13 ಜನ ಹೆಂಡತಿಯರು. ಅವರೆಲ್ಲಾ ಈಗ ಒಮ್ಮೆಲೇ ಗರ್ಭಿಣಿಯರಾಗಿದ್ದಾರೆ. ಅದು ಹೇಗೆ ಸಾಧ್ಯ? ಇದು ನಿಜಾನಾ? ಸುಳ್ಳಾ? ಎನ್ನುವಂತಹ ವಿವಿಧ ಪ್ರಶ್ನೆಗೆ ಉತ್ತರ ಬೇಕೆಂದರೆ ಈ ಮುಂದಿರುವ ವಿಲಕ್ಷಣ ಕಥೆಯ ವಿವರಣೆಯನ್ನು ಪರಿಶೀಲಿಸಿ.....

ಎಲ್ಲೆಡೆ ಹರಡಿದೆ!

ಎಲ್ಲೆಡೆ ಹರಡಿದೆ!

ನೈಜೀರಿಯಾದ ವ್ಯಕ್ತಿಯ ಈ ಚಿತ್ರವೂ ಇದೀಗ ಎಲ್ಲೆಡೆ ಹರಡಿದೆ. ಸಾಮಾಜಿಕ ಮಾಧ್ಯಮಗಳೂ ಈ ವಿಚಾರದ ಕುರಿತು ಚರ್ಚಿಸುತ್ತಿದೆ. ಮಧ್ಯದಲ್ಲಿ ವ್ಯಕ್ತಿ ನಿಂತುಕೊಂಡಿದ್ದಾನೆ, ಆತನ ಸುತ್ತಲೂ ಗರ್ಭಿಣಿಯರು ನಿಂತಿದ್ದಾರೆ. ಆ ವಕ್ತಿಯು ಆ ಮಹಿಳೆಯರನ್ನು ವಿವಾಹವಾಗಿದ್ದಾನೆ. ಅವರೆಲ್ಲರೂ ಆತನ ಹೆಂಡತಿಯರು ಎಂದು ಹೇಳಲಾಗುತ್ತಿದೆ. ಇದು ಸತ್ಯವೇ? ಸುಳ್ಳೇ ಎನ್ನುವುದಕ್ಕೆ ಯಾವುದೇ ಆಧಾರಗಳು ದೊರೆತಿಲ್ಲ.

ಈ ಎಲ್ಲಾ ಮಹಿಳೆಯರನ್ನು ವಿವಾಹವಾಗಿದ್ದಾನೆ ಎಂದು ನಂಬಲಾಗಿದೆ

ಈ ಎಲ್ಲಾ ಮಹಿಳೆಯರನ್ನು ವಿವಾಹವಾಗಿದ್ದಾನೆ ಎಂದು ನಂಬಲಾಗಿದೆ

ಕೆಲವು ಮೂಲಗಳ ಪ್ರಕಾರ ಈ ವ್ಯಕ್ತಿ 13 ಮಹಿಳೆಯರನ್ನು ವಿವಾಹವಾಗಿದ್ದಾನೆ. ಅವರೆಲ್ಲಾ ತಮ್ಮ ಪತಿಯನ್ನು ಶಾಂತರೀತಿಯಲ್ಲಿ ಹಂಚಿಕೊಂಡಿದ್ದರಿಂದ ಎಲ್ಲರೂ ಆರಾಮದಾಯಕವಾಗಿದ್ದಾರೆ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಎಲ್ಲಾ ಮಹಿಳೆಯರು ಒಂದೇ ಸಮಯದಲ್ಲಿ ಗರ್ಭಿಣಿಯರಾಗಿದ್ದಾರೆ ಎನ್ನಲಾಗುತ್ತಿದೆ.

ದಿನಗಳು ಬೇರೆ ಬೇರೆ

ದಿನಗಳು ಬೇರೆ ಬೇರೆ

ಇವರೆಲ್ಲರೂ ಒಂದೇ ಸಮಯದಲ್ಲಿ ಗರ್ಭಿಣಿಯರಾಗಿದ್ದಾರೆ ಎಂದು ಹೇಳಿರುವುದು ನಿಜ. ಆದರೆ ಅವರ ಪ್ರಸವದ ಸಮಯ ಹಾಗೂ ಗರ್ಭಧಾರಣೆಯ ಹಂತಗಳು ವಿಭಿನ್ನವಾಗಿದೆ ಎಂದು ಹೇಳಲಾಗಿದೆ. ಪ್ರತಿಯೊಬ್ಬರ ತಮ್ಮ ಗರ್ಭಧಾರಣೆಯ ಸಮಯವು 3-5 ವಾರಗಳ ವ್ಯತ್ಯಾಸವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಇದು ಎರಡನೇ ಸುದ್ದಿ

ಇದು ಎರಡನೇ ಸುದ್ದಿ

ಈ ಮೊದಲು ಭಾರತದಲ್ಲಿರುವ ಮಿಜೊರಾಮ್ ಅವರಿಗೆ ಹೋಲಿಸಿದರೆ ಇದು ಎರಡನೆಯ ಸುದ್ದಿ. ಮಿಜೊರಾಮ್ 39 ಪತ್ನಿಯರನ್ನು ಹೊಂದಿರುವ ವಿಶ್ವದಲ್ಲೇ ಅತಿದೊಡ್ಡ ಸಂಸಾರ ಎಂದು ವಿಶ್ವದಾಖಲೆ ಮಾಡಿದ್ದಾರೆ. ಇದೀಗ ಈ ವ್ಯಕ್ತಿ 13 ಪತ್ನಿಯರೊಂದಿಗೆ ಎರಡನೇ ಸ್ಥಾನದಲ್ಲಿ ನಿಲ್ಲುತ್ತಾನೆ ಎನ್ನಲಾಗುತ್ತಿದೆ.

ನಿಜವೇ? ಅಥವಾ ಸುಳ್ಳೇ?

ನಿಜವೇ? ಅಥವಾ ಸುಳ್ಳೇ?

ನಿಮಗೆ ಏನು ಅನಿಸುತ್ತದೆ? ಈ ವ್ಯಕ್ತಿ ಹಾಗೂ ಅವನ ಹೆಂಡತಿಯರ ಬಗ್ಗೆ ಯಾವುದೇ ಸೂಕ್ತ ರೀತಿಯ ಪುರಾವೆ ಸಿಗದೆ ಇರುವುದರಿಂದ ಈ ಕುರಿತು ಚರ್ಚೆಗಳು ಮುಂದುವರಿಯುತ್ತಿದೆ ಅಷ್ಟೆ.

English summary

Man Who Made 13 Wives Pregnant At The Same Time

When a new baby is born in the family, there is a lot of chaos and happiness surrounding it and if the couple is expecting twins, then everything just doubles up. But what happens if the family has to welcome 13 babies at the same time? Sounds crazy, right? This is the story of a man from Nigeria who apparently made all of his 13 wives pregnant. Check out this bizarre story.
Subscribe Newsletter