ಈ ವ್ಯಕ್ತಿಯ ಹೊಟ್ಟೆಯಲ್ಲಿ 263 ನಾಣ್ಯಗಳು, ಸೂಜಿ ಮತ್ತು ಬ್ಲೇಡ್‌ಗಳು ಪತ್ತೆ!!

By Lekhaka
Subscribe to Boldsky

ಒಂದು ಸುತ್ತು ಸಾಮಾಜಿಕ ಜಾಲತಾಣದತ್ತ ಕಣ್ಣು ಹಾಯಿಸಿದರೆ ನಮಗೆ ಹಲವಾರು ರೀತಿಯ ವಿಚಿತ್ರವಾಗಿರುವ ಸುದ್ದಿಗಳು ಕಾಣಸಿಗುತ್ತದೆ. ಇದರಲ್ಲಿ ಕೆಲವು ನಿಜವಾದರೂ ಇನ್ನು ಕೆಲವು ಬೊಗಳೆ. ಆದರೆ ಇಲ್ಲೊಂದು ಸುದ್ದಿಯು ನಿಮ್ಮ ಬೆಕ್ಕಸ ಬೆರಗಾಗಿಸಬಹುದು. ಯಾಕೆಂದರೆ ವ್ಯಕ್ತಿಯೊಬ್ಬನ ಹೊಟ್ಟೆಯಿಂದ ನಾಣ್ಯ, ಸರ ಮತ್ತು ಬ್ಲೇಡ್ ಗಳು ಪತ್ತೆಯಾಗಿದೆ. ಕಳೆದ ಸಲ ಇದೇ ವಿಭಾಗದಲ್ಲಿ 48ರ ಹರೆಯದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ 639 ಮೊಳೆಗಳು ಪತ್ತೆಯಾಗಿದ್ದ ಬಗ್ಗೆ ಓದಿದ್ದೆವು.

ಕೊಲ್ಕತ್ತಾ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಆ ವ್ಯಕ್ತಿಯ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆತ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದ ಎಂದು ತಿಳಿದುಬಂತು. ಇದೇ ರೀತಿ ಅಮೃತಸರದಲ್ಲಿ ವ್ಯಕ್ತಿಯೊಬ್ಬನ ಹೊಟ್ಟೆಯಿಂದ 40 ಚಾಕುಗಳನ್ನು ಹೊರತೆಗೆಯಲಾಗಿತ್ತು.

ಈ ಮಹಿಳೆಯ ಕಾಲಿನಿಂದ ಸೂಜಿ, ಸಿರಿಂಜಿನ ಮುಳ್ಳು, ಪಿನ್ನುಗಳು ಹೊರಬರುತ್ತಿವೆ!

ಅಮೃತಸರ ಕಾರ್ಪೋರೇಟ್ ಆಸ್ಪತ್ರೆಯಲ್ಲಿ ಆತನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು ಮತ್ತು ಆತನ ಸ್ಥಿತಿ ಈಗ ಸುಧಾರಿಸುತ್ತಿದೆ. ಇಂಟರ್ನೆಟ್ ನಲ್ಲಿ ಹರಿದಾಡುತ್ತಿದ್ದ ಮತ್ತೊಂದು ಸುದ್ದಿಯೆಂದರೆ ವ್ಯಕ್ತಿಯೊಬ್ಬ ಪ್ರತಿನಿತ್ಯ ನಾಣ್ಯ, ಬ್ಲೇಡ್, ಮತ್ತು ಗ್ಲಾಸ್ ನ ಚೂರುಗಳನ್ನು ಸೇವಿಸುತ್ತಾ ಇದ್ದ. ಈ ವ್ಯಕ್ತಿಯ ಹೊಟ್ಟೆಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಮತ್ತು ತಜ್ಞರು ದಂಗಾಗಿ ಹೋಗಿದ್ದಾರೆ. 263 ನಾಣ್ಯಗಳನ್ನು ಹೊಟ್ಟೆಯಿಂದ ತೆಗೆಯಲಾಯಿತು ವರದಿಗಳಲ್ಲಿ ಬಂದಿರುವ ಪ್ರಕಾರ ಉತ್ತರ ಪ್ರದೇಶದ 32ರ ಹರೆಯದ ವ್ಯಕ್ತಿಯ ಹೊಟ್ಟೆಯಿಂದ ಸುಮಾರು 263 ನಾಣ್ಯ, ಬ್ಲೇಡ್‪ಗಳು ಮತ್ತು ಸೂಜಿಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿದೆ.... 

 ರೋಗಿ ಯಾರು?

ರೋಗಿ ಯಾರು?

ಉತ್ತರ ಪ್ರದೇಶದ ಸತ್ನಾ ಜಿಲ್ಲೆಯ ಸೊಹಾವಲ್ ನಲ್ಲಿ ವಾಸಿಸುವ 32ರ ಹರೆಯದ ಮೊಹಮ್ಮದ್ ಮಕ್ಸೂದ್ ಎಂಬಾತನೇ ಈ ವ್ಯಕ್ತಿ. ಹೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಂಡ ಬಳಿಕ ಆತನನ್ನು ಸಂಜಯ್ ಗಾಂಧಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಗೆ ಸೇರಿಸಲಾಯಿತು. ಮೂರು ಗಂಟೆ ದೀರ್ಘ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ತೆಗೆಯಲಾಯಿತು.

 ಹೊಟ್ಟೆ ನೋವಿಗೆ ಕಾರಣ

ಹೊಟ್ಟೆ ನೋವಿಗೆ ಕಾರಣ

ನವಂಬರ್ 18ರಂದು ಮೊಹಮ್ಮದ್ ಮಕ್ಸೂದ್ ತೀವ್ರ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ. ಎಕ್ಸರೇ ತೆಗೆದ ಬಳಿಕ ಆತನ ಹೊಟ್ಟೆ ನೋವಿಗೆ ಕಾರಣ ತಿಳಿದುಬಂದಿದೆ. ಆದರೆ ಶಸ್ತ್ರಚಿಕಿತ್ಸೆ ವೇಳೆ ನಾಣ್ಯ ಮತ್ತು ಇತರ ಲೋಹದ ವಸ್ತುಗಳನ್ನು ತೆಗೆಯುವಾಗ ವೈದ್ಯರಿಗೆ ಅಚ್ಚರಿಯಾಗಿದೆ.

ನಾಣ್ಯಗಳು ಹೊಟ್ಟೆಯೊಳಗೆ ಹೋಗಿದ್ದಾದರೂ ಹೇಗೆ?

ನಾಣ್ಯಗಳು ಹೊಟ್ಟೆಯೊಳಗೆ ಹೋಗಿದ್ದಾದರೂ ಹೇಗೆ?

ಆ ವ್ಯಕ್ತಿಯು ಯಾರಿಗೂ ತಿಳಿಯದಂತೆ ನಾಣ್ಯಗಳನ್ನು ತಿನ್ನುತ್ತಿದ್ದ. ರೋಗಿಯ ಮಾನಸಿಕ ಸ್ಥಿತಿ ಸರಿಯಾಗಿ ಇಲ್ಲದೆ ಇರುವ ಕಾರಣದಿಂದ ಆತ ನಾಣ್ಯ, ಬ್ಲೇಡ್, ಸೂಜಿ ಮತ್ತು ಇತರ ಲೋಹದ ವಸ್ತುಗಳನ್ನು ತಿಂದಿದ್ದಾನೆ. ನಾಣ್ಯ ಮತ್ತು ಬ್ಲೇಡ್ ಗಳು ಹೊಟ್ಟೆಯೊಳಗಿನ ಯಾವುದೇ ಭಾಗಕ್ಕೆ ಹಾನಿಯುಂಟು ಮಾಡದೆ ಇರುವ ಕಾರಣದಿಂದ ರೋಗಿ ಸುರಕ್ಷಿತವಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಮುಂದೆ ತಾನು ಈ ರೀತಿಯ ಕೆಲಸ ಮಾಡುವುದಿಲ್ಲವೆಂದು ಖಾನ್ ವೈದ್ಯರಿಗೆ ಭರವಸೆ ನೀಡಿದ್ದಾನೆ

ಕಠಿಣ ಶಸ್ತ್ರಚಿಕಿತ್ಸೆ

ಕಠಿಣ ಶಸ್ತ್ರಚಿಕಿತ್ಸೆ

ಸುಮಾರು ಆರು ಮಂದಿ ತಜ್ಞ ವೈದ್ಯರ ತಂಡವು ಮೊಹಮ್ಮದ್ ಮಕ್ಸೂದ್ ಹೊಟ್ಟೆಯೊಳಗೆ ಇದ್ದ ಲೋಹಗಳನ್ನು ತೆಗೆಯಲು ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾಯಿತು. ಸುಮಾರು 5 ಕೆಜಿ ಭಾರದ ಲೋಹಗಳನ್ನು ವೈದ್ಯರ ತಂಡವು ಹೊಟ್ಟೆಯಿಂದ ಹೊರತೆಗೆದಿದೆ. ಮಕ್ಸೂದ್ ಹೊಟ್ಟೆಯಿಂದ ನಾಲ್ಕು ದೊಡ್ಡ ಸೂಜಿ, ಒಂದು ಸರ, 263 ನಾಣ್ಯ, 10-12 ಬ್ಲೇಡ್ ಗಳು ಮತ್ತು ಕೆಲವು ತುಂಡು ಗಾಜುಗಳಿದ್ದವು. ಇದು ತುಂಬಾ ಆಘಾತಕಾರಿ ಪ್ರಕರಣವಾಗಿದೆ ಮತ್ತು ವೃತ್ತಿಯಲ್ಲಿ ಇದೇ ಮೊದಲ ಸಲ ಇಂತಹ ಪ್ರಕರಣ ನೋಡುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆ ತುಂಬಾ ಬೇಗನೆ ಮಾಡಬೇಕಿತ್ತು. ಯಾಕೆಂದರೆ ಕೆಲವು ಲೋಹಗಳು ಹೊಟ್ಟೆಯಲ್ಲಿ ಚುಚ್ಚಿಕೊಂಡು ರಕ್ತಸ್ರಾವವಾಗುತ್ತಿತ್ತು. ಇದರಿಂದ ಹಿಮೋಗ್ಲೋಬಿನ್ ಕಡಿಮೆಯಾಗುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ರೋಗಿಯ ಪರಿಸ್ಥಿತಿ

ರೋಗಿಯ ಪರಿಸ್ಥಿತಿ

ಮೊಹಮ್ಮದ್ ಮಕ್ಸೂದ್ ಸ್ಥಿತಿ ಈಗ ಉತ್ತಮವಾಗಿದೆ ಮತ್ತು ವೈದ್ಯರ ನಿಗಾದಲ್ಲಿದ್ದಾನೆ. ಆರು ತಿಂಗಳ ಕಾಲ ಮಕ್ಸೂದ್ ಗೆ ಸತ್ನಾದಲ್ಲಿ ಚಿಕಿತ್ಸೆ ನೀಡಿದ ಬಳಿಕ ರೆವಾಗೆ ತರಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಹೊಟ್ಟೆಯಿಂದ ತೆಗೆದ ಲೋಹಗಳು ಆರು ತಿಂಗಳ ಹಿಂದ ಹೊಟ್ಟೆ ಸೇರಿದ್ದವು. ಆತ ತುಂಬಾ ದೀರ್ಘ ಸಮಯದಿಂದ ಇದನ್ನು ತಿನ್ನುತ್ತಿದ್ದ ಎಂದು ವೈದ್ಯರು ವಿವರಿಸಿದ್ದಾರೆ.

ತುಂಬಾ ವಿಚಿತ್ರ ಅಭ್ಯಾಸ

ತುಂಬಾ ವಿಚಿತ್ರ ಅಭ್ಯಾಸ

ಮಕ್ಸೂದ್ ಕುಟುಂಬದವರು ಹೇಳುವ ಪ್ರಕಾರ ಆತ ಖಿನ್ನತೆಗೆ ತೆರಳುವ ಮೊದಲೇ ಲೋಹದ ವಸ್ತುಗಳನ್ನು ತಿನ್ನಲು ಆರಂಭಿಸಿದ್ದ. ಇದರ ಬಗ್ಗೆ ಆತ ಕುಟುಂಬದ ಯಾರೊಬ್ಬರಿಗೂ ತಿಳಿಸಿರಲಿಲ್ಲ. ಆತ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮತ್ತು ಜನರು ನೀಡುತ್ತಿದ್ದ ನಾಣ್ಯಗಳನ್ನು ತಿಂದು ಬಿಡುತ್ತಿದ್ದ ಎಂದು ಆತನ ಕುಟುಂಬಿಕರು ಹೇಳಿರುವುದಾಗಿ ವರದಿಯಾಗಿದೆ.

For Quick Alerts
ALLOW NOTIFICATIONS
For Daily Alerts

    English summary

    Man Stunned Doctors With 263 Coins, Blades-Chains In His Tummy!

    Like we are familiar with, the internet is a funny and bizarre place with different eye-opening and hilarious stories circulating around each day.This story is one among those which has managed to trend worldwide, thanks to some coins, chains and, of course, a few shaving blades found in a man's stomach.Well, one more case that is shocking the internet is that of a man who kept swallowing coins, needles, blades and some pieces of glasses on a daily basis. This case has left the doctors and surgeons totally shocked!
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more