ಎಲ್ಲಿಗೆ ಹೋದರೂ ಅಷ್ಟೇ, ಮಹಿಳೆಯರಿಗೆ ಈಗ ಸುರಕ್ಷತೆಯೇ ಇಲ್ಲ!!

By Arshad
Subscribe to Boldsky

ಈ ಘಟನೆ ನಡೆದಿರುವುದು ಫಿಲಿಪ್ಪೀನ್ಸ್‌ನಲ್ಲಿ. ಇಲ್ಲಿ ಸಾರ್ವಜನಿಕ ಸಾರಿಗೆಯ ರೂಪದಲ್ಲಿ ಜೀಪ್ನಿ ಎಂಬ ವಾಹನವನ್ನು ಬಳಸಾಗುತ್ತದೆ. ನಮ್ಮಲ್ಲಿ ಪ್ರವಾಸಕ್ಕೆ ಬಳಸುವ ತೂಫಾನ್ ವಾಹನದಂತೆಯೇ ಕಾಣುವ, ಕೊಂಚವೇ ದೊಡ್ಡದಿರುವ ಈ ಜೀಪ್ನಿಯಲ್ಲಿ ಮಹಿಳೆಯರಿಗೆಂದು ಪ್ರತ್ಯೇಕ ಸ್ಥಳಾವಕಾಶ ಇಲ್ಲದಿರುವುದರಿಂದ ಎಲ್ಲರೂ ಜೊತೆಯಲ್ಲಿಯೇ ಕುಳಿತುಕೊಳ್ಳುತ್ತಾರೆ. ಆದರೆ ಇತ್ತೀಚೆಗ ನಡೆದ ಒಂದು ಘಟನೆಯಲ್ಲಿ ಮಾನವತೆ ನಿಧಾನವಾಗಿ ನಶಿಸುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತಿರುವಂತಿದೆ.

ಅತ್ಯಾಚಾರ ಪ್ರಕರಣ ಹೆಚ್ಚಾಗಿರುವ ವಿಶ್ವದ ಪ್ರತಿಷ್ಠಿತ ರಾಷ್ಟ್ರಗಳು

ಛಾ ವಿನುಯಾ ಎಂಬ ಫಿಲಿಪ್ಪೀನ್ಸ್ ಯುವತಿ ತನ್ನ ಮನೆಗೆ ಒಂದು ದಿನ ಜೀಪ್ನಿಯಲ್ಲಿ ಮರಳುತ್ತಿದ್ದಾರ ಸಹಪ್ರಯಾಣಿಕನೊಬ್ಬ ಆಕೆಯನ್ನು ಲೈಂಗಿಕವಾಗಿ ಪೀಡಿಸಿದ್ದ. ಆದರೆ ಇಲ್ಲಿ ಆತ ಯುವತಿಯನ್ನು ಮುಟ್ಟಲೂ ಇಲ್ಲ, ಬದಲಿಗೆ ಆಕೆಯ ಎದುರಿನಲ್ಲಿಯೇ ಸ್ವಮೈಥುನ ಮಾಡಿಕೊಂಡಿದ್ದ. ಅಲ್ಲದೆ ತನ್ನ ಮೊಬೈಲಿನಲ್ಲಿ ಚಿತ್ರೀಕರಿಸಿ ಸಾರ್ವಜನಿಕ ತಾಣದಲ್ಲಿ ಹರಿಬಿಟ್ಟ ಬಳಿಕ ಇಡಿಯ ಫಿಲಿಪ್ಪೀನ್ಸ್ ದೇಶವೇ ಬೆರಗಾಗಿ ಅಸಹ್ಯಕರ ಘಟನೆಯನ್ನು ಖಂಡಿಸಿದೆ. ವಿವರಗಳು ಇಲ್ಲಿವೆ... 

ಆಕೆ ಮನೆಗೆ ಹಿಂದಿರುಗುತ್ತಿದ್ದಳು

ಆಕೆ ಮನೆಗೆ ಹಿಂದಿರುಗುತ್ತಿದ್ದಳು

ಛಾ ವಿನುಯಾ ಓರ್ವ ಬಡ ವಿದ್ಯಾರ್ಥಿನಿಯಾಗಿದ್ದು ತನ್ನ ತರಗತಿಗಳ ಬಳಿಕ ಮನೆಗೆ ವಾಪಸ್ಸಾಗುತ್ತಿದ್ದಳು. ಈಕೆ ಪ್ರಯಾಣಿಸುತ್ತಿದ್ದ ಜೀಪ್ನಿಯಲ್ಲಿಯೇ ಈ ದುರುಳನೂ ಪ್ರಯಾಣಿಸುತ್ತಿದ್ದು ಆಕೆಯ ಪಕ್ಕದಲ್ಲಿಯೇ ಕುಳಿತಿದ್ದ ಹಾಗೂ ಪ್ರಯಾಣದ ಸಮಯದಲ್ಲಿ ತನ್ನ ಕೆಲಸ

ಮುಂದುವರೆಸಿದ.

ಇತರ ಪ್ರಯಾಣಿಕರೂ ಗಮನಿಸಿದರು

ಇತರ ಪ್ರಯಾಣಿಕರೂ ಗಮನಿಸಿದರು

ಈತ ಏನು ಮಾಡುತ್ತಿದ್ದನೆಂಬುದನ್ನು ಈಕೆಯ ಸಹಿತ ಜೀಪ್ನಿಯಲ್ಲಿ ಪಯಣಿಸುತ್ತಿದ್ದ ಇತರ ವ್ಯಕ್ತಿಗಳೂ ಕಂಡಿದ್ದರು. ಆದರೆ ಈತನ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಇವರು ಭಯಭೀತರಾಗಿ ಹಿಂದೇಟು ಹಾಕುತ್ತಿದ್ದರು. ಏಕೆಂದರೆ ಈತ ಈ ಬಡವಿದ್ಯಾರ್ಥಿನಿಯ ಪಕ್ಕದಲ್ಲಿಯೇ ಇದ್ದು ಈತನಿಂದ ಆಕೆಗೇನಾದರೂ ಅಪಾಯವಾಗಬಹುದೆಂಬ ಭಯವಿತ್ತು. ಏಕೆಂದರೆ ಈತನಲ್ಲಿ ಯಾವ ಆಯುಧವಿದೆಯೋ ಅಥವಾ ಈತನ ಇರಾದೆ ಏನು ಎಂಬ ಬಗ್ಗೆ ಏನೂ ಅರಿಯದ ವ್ಯಕ್ತಿಗಳು ಯುವತಿಗೆ ಯಾವುದೇ ಅಪಾಯವಾಗಬಾರದೆಂದೇ ಆ ಕ್ಷಣಕ್ಕೆ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ.

ಈಕೆಗೆ ಗೊತ್ತಿತ್ತು, ಎಲ್ಲರೂ ತನ್ನ ಕಡೆಗೇ ಬೆರಳು ತೋರುವರೆಂದು

ಈಕೆಗೆ ಗೊತ್ತಿತ್ತು, ಎಲ್ಲರೂ ತನ್ನ ಕಡೆಗೇ ಬೆರಳು ತೋರುವರೆಂದು

ಈ ದುರುಳ ಯುವತಿಗೆ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ದೌರ್ಜನ್ಯ ಎಸಗುತ್ತಿದ್ದರೂ ಬಳಿಕ ಯಾವುದೇ ವಿಚಾರಣೆಯಲ್ಲಿ ಕಾರಣವಿಲ್ಲದೇ ಸಮಾಜ ತನ್ನ ಮೇಲೇ ಬೆರಳು ತೋರುತ್ತದೆ ಎಂದು ಭಾವಿಸಿದ ಯುವತಿ ಈ ಕ್ರಿಯೆಯನ್ನು ತನ್ನ ಮೊಬೈಲಿನಲ್ಲಿ ಚಿತ್ರೀಕರಿಸಿ ಸಾಮಾಜಿಕ ತಾಣದಲ್ಲಿ ಪ್ರಕಟಿಸಿದಳು.

ಈಕೆಗೆ ಗೊತ್ತಿತ್ತು, ಎಲ್ಲರೂ ತನ್ನ ಕಡೆಗೇ ಬೆರಳು ತೋರುವರೆಂದು

ಈಕೆಗೆ ಗೊತ್ತಿತ್ತು, ಎಲ್ಲರೂ ತನ್ನ ಕಡೆಗೇ ಬೆರಳು ತೋರುವರೆಂದು

ಅಲ್ಲದೇ ತಾನು ಆ ಸಮಯದಲ್ಲಿ ಶಾಲಾ ಸಮವಸ್ತ್ರ ಧರಿಸಿದ್ದಾಗಿಯೂ ಯಾವುದೇ ರೀತಿಯ ಪ್ರಚೋದನಾಕಾರಿ ಉಡುಪು ತೊಟ್ಟಿರಲಿಲ್ಲವೆಂದೂ ಸ್ಪಷ್ಟಪಡಿಸಿದ್ದಾಳೆ. ಈ ಮಾತನ್ನು ಹೇಳಲು ಆಕೆ ಇಷ್ಟು ಕಷ್ಟ ಏಕೆ ಪಡಬೇಕಾಯ್ತೆಂದರೆ ಇಂದಿನ ದಿನಗಳಲ್ಲಿ ಫಿಲಿಪ್ಪೀನ್ಸ್ ನಲ್ಲಿ ನಡೆಯುವ ದೌರ್ಜನ್ಯಗಳಿಗೆ ಮಹಿಳೆಯರು ತೊಡುವ ಪ್ರಚೋದನಾಕಾರಿ ಬಟ್ಟೆಗಳೇ ಕಾರಣ ಎಂದು ಬಿಂಬಿಸಲಾಗುತ್ತಿದೆ.

For Quick Alerts
ALLOW NOTIFICATIONS
For Daily Alerts

    English summary

    Man M*sturbated And Stared At A Girl Inside A Public Jeepney

    A young girl named "Cha Vinuya", who was getting back home, was harassed by a pervert who masturbated on her in a moving jeep. This incident took place in the Philippines. She shared the harrowing experience on her social site and the world is disgusted about it! Check out more details on this below.
    Story first published: Sunday, August 6, 2017, 23:47 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more