ಈತ ಮದ್ಯ ಎಂದು ಭಾವಿಸಿ 'ಸಾರಜನಕ ಕುಡಿದು', ಹೊಟ್ಟೆ ತೂತು ಮಾಡಿಕೊಂಡ!

By: Hemanth
Subscribe to Boldsky

ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಗುಂಡು ಹಾಕಿಕೊಂಡು ಒಂದು ಕೈಯಿಂದ ತುಂಡು ಜಗಿಯುತ್ತಾ ಇರಬೇಕೆನ್ನುವುದು ಹೆಚ್ಚಿನವರಿಗೆ ಭಾರೀ ಆಸೆ. ಕೆಲವರು ಇದನ್ನು ಈಡೇರಿಸಿಕೊಂಡರೆ ಇನ್ನು ಉಳಿದವರು ಇದನ್ನು ನೋಡುತ್ತಾ ಇರುತ್ತಾರೆ. ಇನ್ನು ಪಾರ್ಟಿಯಲ್ಲಿ ಕುಡಿದು ಮೈಮರೆಯುವವರು ಬಹಳಷ್ಟು ಮಂದಿ ಇದ್ದಾರೆ.

ಅವರಿಗೆ ತಮ್ಮ ಕುಡಿತದ ಮೇಲೆ ನಿಯಂತ್ರಣವೇ ಇರುವುದಿಲ್ಲ. ಇದು ಕೆಲವು ಸಲ ಭಾರೀ ಅನಾಹುತ ಉಂಟು ಮಾಡಬಹುದು. ಯಾಕೆಂದರೆ ಮೋಜು ಮಾಡಲು ಹೋಗಿ ಏನೇನೋ ಆಗಬಹುದು. ಹೀಗೆ ಪಾರ್ಟಿ ಮಾಡುತ್ತಾ ಇದ್ದ ವೇಳೆ ವ್ಯಕ್ತಿಯೊಬ್ಬ ನೈಟ್ರೋಜನ್(ಸಾರಜನಕ) ದ್ರವ ಕುಡಿದ ಕಾರಣದಿಂದ ಆತನ ಹೊಟ್ಟೆ ತೂತು ಬಿದ್ದಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮುಂದಿನ ವಿವರದ ಬಗ್ಗೆ ತಿಳಿಯಲು ಓದುತ್ತಾ ಸಾಗಿ....

ನಿಜವಾಗಿಯೂ ನಡೆದಿರುವುದು ಏನು?

ನಿಜವಾಗಿಯೂ ನಡೆದಿರುವುದು ಏನು?

ದೆಹಲಿಯಲ್ಲಿ ವ್ಯಕ್ತಿಯೊಬ್ಬ ಪಾರ್ಟಿ ಮಾಡುತ್ತಿರುವ ದ್ರವ ಸಾರಜನಕವನ್ನು ತಪ್ಪಿ ಕುಡಿದುಬಿಟ್ಟ. ಆತ ಬಾರ್ ಹೋಗಿ ಒಳ್ಳೆಯ ಶರಾಬು ಕುಡಿಯಲು ಬಯಸಿದ್ದ. ಆದರೆ ಅಂತಿಮವಾಗಿ ಮದ್ಯದೊಂದಿಗೆ ಸಾರಜನಕ ಕುಡಿದು ಹೊಟ್ಟೆಯಲ್ಲಿ ತೂತು ಮಾಡಿಕೊಂಡ. ದ್ರವ ಸಾರಜನಕವನ್ನು ಐಸ್ ಕ್ರೀಮ್ ಅನ್ನು ಬೇಗ ಗಟ್ಟಿ ಮಾಡಲು ಮತ್ತು ಕೆಲವೊಂದು ಶಸ್ತ್ರಚಿಕಿತ್ಸೆಗಳಲ್ಲಿ ಬಳಸಿಕೊಳ್ಳುತ್ತಾರೆ.

ಆತ ಏನು ಮಾಡಿದ?

ಆತ ಏನು ಮಾಡಿದ?

ಆತ ಕಾಕ್ ಟೇಲ್‌ಗೆ ದ್ರವ ಸಾರಜನಕ ಹಾಕಿದ. ಈ ವೇಳೆ ಗ್ಲಾಸ್‌ನಿಂದ ಹೊಗೆ ಬರಲು ಶುರುವಾಯಿತು. ಹೊಗೆ ಹೋದ ಬಳಿಕ ಇದನ್ನು ಕುಡಿದಿದ್ದರೆ ಏನೂ ಆಗುತ್ತಾ ಇರಲಿಲ್ಲ. ಆದರೆ ಹೊಗೆ ಬರುತ್ತಿರುವಾಗಲೇ ಇದನ್ನು ಕುಡಿದ. ಹೊಟ್ಟೆಯಲ್ಲಿ ತಳಮಳವಾದ ಕಾರಣ ತಕ್ಷಣವೇ ಅದನ್ನು ಕುಡಿದುಬಿಟ್ಟೆ ಎಂದು ಹೇಳಿದ್ದಾನೆ.

 ಮೋಜಿಗೆ ಮೊದಲು ತಿಳುವಳಿಕೆ ಅಗತ್ಯ

ಮೋಜಿಗೆ ಮೊದಲು ತಿಳುವಳಿಕೆ ಅಗತ್ಯ

ಯಾವ್ಯಾವ ವಸ್ತುಗಳು ಏನೆಲ್ಲಾ ಪರಿಣಾಮ ಬೀಳುತ್ತದೆ ಎಂದು ತಿಳಿದುಕೊಂಡರೆ ತುಂಬಾ ಒಳ್ಳೆಯದು. ಇದರಿಂದ ಇಂತಹ ದುರ್ಘಟನೆಗಳು ನಡೆಯುತ್ತಾ ಇರಲಿಲ್ಲ. ಹೊಗೆ ಬರುತ್ತಿರುವ ಮದ್ಯವನ್ನು ಕುಡಿದ ತಕ್ಷಣ ಆತನ ಹೊಟ್ಟೆಯಲ್ಲಿ ತುಂಬಾ ನೋವು, ಹೊಟ್ಟೆಯಲ್ಲಿ ಊತ ಮತ್ತು ಉಸಿರಾಡಲು ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆತನಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆತನ ಹೊಟ್ಟೆಯಲ್ಲಿ ದೊಡ್ಡ ರಂಧ್ರವೊಂದು ಕಾಣಿಸಿಕೊಂಡಿತ್ತು ಮತ್ತು ಅದು ಪುಸ್ತಕದಂತೆ ತೆರೆದುಕೊಂಡಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಆತ ಕುಡಿದ ಮದ್ಯದಲ್ಲಿ ಏನಿತ್ತು?

ಆತ ಕುಡಿದ ಮದ್ಯದಲ್ಲಿ ಏನಿತ್ತು?

ಆತ ಕುಡಿದಿರುವಂತಹ ದ್ರವ ಸಾರಜನಕ ಮದ್ಯದಲ್ಲಿ ಸಾರಜನಕರು 195.8 ಡಿಗ್ರಿಯಲ್ಲಿ ಕುದಿಯುತ್ತಾ ಇತ್ತು. ಇಂತಹ ಮದ್ಯವನ್ನು ಸಾರಜನಕವು ಸರಿಯಾಗಿ ಕರಗಿದ ಬಳಿಕವಷ್ಟೇ ಕುಡಿಯಬೇಕಾಗಿದೆ. ಆದರೆ ಇದರ ಬಗ್ಗೆ ಆತನಿಗೆ ಯಾವುದೇ ಮಾಹಿತಿ ಇರಲಿಲ್ಲ.

ಮದ್ಯವನ್ನು ಆಕರ್ಷಕವಾಗಿಸಲು

ಮದ್ಯವನ್ನು ಆಕರ್ಷಕವಾಗಿಸಲು

ದ್ರವ ಸಾರಜನಕವನ್ನು ಮದ್ಯವನ್ನು ತುಂಬಾ ಆಕರ್ಷಕವಾಗಿ ಕಾಣಿಸಲು ಬಳಸಿಕೊಳ್ಳಲಾಗುತ್ತದೆ. ಪಾನೀಯ ಮತ್ತು ಆಹಾರವನ್ನು ಘನೀಕರಿಸಲು ಕೂಡ ದ್ರವ ಸಾರಜನಕ ಬಳಸಲಾಗುತ್ತದೆ. ಹಾನಿಕಾರಕವಾಗಿ ಕಾಣಿಸದ ಯಾವುದೇ ಬಣ್ಣವಿಲ್ಲದ ಈ ದ್ರವವನ್ನು ಕಂಪ್ಯೂಟರ್ ನ್ನು ತಂಪಾಗಿಡಲು ಮತ್ತು ಕೆಲವೊಂದು ಶಸ್ತ್ರಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ.

ಆತ ಬಹಿರಂಗಪಡಿಸಿರುವುದು

ಆತ ಬಹಿರಂಗಪಡಿಸಿರುವುದು

ನಾನು ಮದ್ಯ ಕುಡಿದ ಬಳಿಕ ದೇಹದಲ್ಲಿ ಆ್ಯಸಿಡ್ ಉಂಟು ಮಾಡುವಂತಹ ಪ್ರತಿಕ್ರಿಯೆಯಂತೆ ತುಂಬಾ ಅಹಿತಕರ ಅನುಭವವಾಯಿತು. ಬಾರ್ ಟೆಂಡರ್ ಮತ್ತೊಂದು ಪಾನೀಯ ನೀಡಿದ. ನಾನು ಅದನ್ನು ಕುಡಿದೆ. ದೇಹದಲ್ಲಿ ಆಗುತ್ತಿರುವ ಅಹಿತಕರ ಘಟನೆ ಬಗ್ಗೆ ಚಿಂತೆ ಮಾಡಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ನನ್ನ ಹೊಟ್ಟೆಯಲ್ಲಿ ಊತ ಕಾಣಿಸಿಕೊಂಡಿತು. ನೋವು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಉಸಿರಾಡಲು ಕಷ್ಟವಾಗುತ್ತಾ ಇತ್ತು ಎಂದು ಆತ ಸಂದರ್ಶನದ ವೇಳೆ ಹೇಳಿದ್ದಾನೆ.

ವೈದ್ಯರು ಹೇಳಿರುವುದೇನು?

ವೈದ್ಯರು ಹೇಳಿರುವುದೇನು?

ಇಂತಹ ಘಟನೆಗಳಲ್ಲಿ ಸಾವು ಸಂಭವಿಸಿರುವುದು ಕಂಡು ಬಂದಿದೆ. ಹೊಸ ಟ್ರೆಂಡ್ ನಂತೆ ಕುಡಿಯುತ್ತಿರುವಾಗ ಐಸ್ ಕ್ರೀಮ್ ತಿನ್ನುವುದು ಅಪಾಯಕಾರಿ. ಇದರಿಂದ ಜನರ ಆರೋಗ್ಯದ ಮೇಲೆ ಭಾರೀ ಕೆಟ್ಟ ಪರಿಣಾಮ ಉಂಟಾಗುತ್ತದೆ. ಇಂತಹ ಆಹಾರ ಮತ್ತು ಪಾನೀಯಗಳು ಅವರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ದ್ರವ ಸಾರಜನಕ ಸೇವನೆ ಮಾಡುವುದರಿಂದ ದೇಹಕ್ಕೆ ತುಂಬಾ ಹಾನಿಯಾಗಬಹುದು ಎಂದು ತಿಳಿದುಬಂದಿದೆ.

English summary

Man Drank Liquid Nitrogen In Bar; Ended With A Hole In His Stomach

Partying with friends is something that most of us crave for. We tend to ignore the consequences and do crazy things at that very moment. But we need to understand that sometimes partying can be quite dangerous as well. A man is said to have been left with a hole in his stomach after he had a drink that had liquid nitrogen in it. Check out the bizarre incident in which the man was hospitalized after he consumed a cocktail with the liquid.
Subscribe Newsletter