Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಕೆಲವೇ ಕ್ಷಣಗಳಲ್ಲಿ ಈಕೆಯ ದೇಹ ವಿರೂಪವಾಗಿ, ತಲೆಯೇ ಇಲ್ಲವಾಗುತ್ತದೆ!!
ಎದುರಿನವರ ಗಮನವನ್ನು ಥಟ್ಟನೇ ಸೆಳೆಯುವಂತೆ ಸೌಂದರ್ಯವನ್ನು ವೃದ್ಧಿಸಿಕೊಳ್ಳುವ ಕಲೆ ಅಷ್ಟು ಸುಲಭವಲ್ಲ. ಅದರಲ್ಲೂ ಒಂದು ವೇಳೆ ನೀವು ಸೌಂದರ್ಯ ಪರಿಣಿತರಾಗಿದ್ದರೆ ನಿಮ್ಮ ಕಲಾವಂತಿಕೆಯಲ್ಲಿ ಶ್ರೇಷ್ಠತೆ ಇರಬೇಕಾದುದುದು ಅಗತ್ಯ ಹಾಗೂ ನಿಮ್ಮ ಉದ್ಯೋಗಕ್ಕೆ ಇದು ಅನಿವಾರ್ಯ ಸಹಾ. ಎಲ್ಲರೂ ಮಾಡುವುದಕ್ಕಿಂತ ಕೊಂಚ ಭಿನ್ನವಾಗಿ, ಆದರೆ ಪ್ರಮುಖವಾಗಿ ಗಮನ ಸೆಳೆಯುವಂತಹ ಕಲಾವಂತಿಕೆ ತೋರಿದರೆ ನೀವು ಸಹಾ ಎಲ್ಲರ ಗಮನ ಪಡೆಯಲು ಸಾಧ್ಯ.
ಮಿರ್ಜಾನಾ ಕಿಕಾ ಮಿಲೋಸೆವಿಕ್ ಎಂಬ ಸೌಂದರ್ಯತಜ್ಞೆ ತನ್ನ ಕಲಾವಂತಿಕೆಯನ್ನು ಯೂಟ್ಯೂಬ್ ಮೂಲಕ ಯಾವಾಗ ಪ್ರಚಾರ ಮಾಡಿದಳೋ, ಆಗ ಖ್ಯಾತಿ ಆಕೆಯನ್ನು ಅರಸಿ ಬಂದಿದೆ. ಆಕೆಯ ಕಲಾವಂತಿಕೆ ಹಾಗೂ ನಾಜೂಕುತನ ಹೇಗೆ ವಿಜೃಂಬಿಸುತ್ತಿದೆ, ಒಂದಿನಿತೂ ತಪ್ಪಿಗೆ ಅವಕಾಶವಿಲ್ಲದ ಕರಾವಾಕ್ಕುತನ ಹೇಗೆ ನಿಮ್ಮ ಕಲ್ಪನೆಯನ್ನೇ ಅಲ್ಲಾಡಿಸುತ್ತದೆ ಎಂಬುದನ್ನು ಈ ಚಿತ್ರಗಳಲ್ಲಿ ನೋಡಬಹುದು....
ಆಕೆ ತನ್ನ ಶರೀರವನ್ನೇ ರೂಪದರ್ಶಿಯಾಗಿಸಿದ್ದಾಳೆ
ಮಿರ್ಜಾನಾರವರು ರೂಪದರ್ಶಿಯಾಗಿ ಬೇರಾರನ್ನೂ ಆಶ್ರಯಿಸುವುದಿಲ್ಲ. ಬದಲಿಗೆ ತಮ್ಮ ಶರೀರದ ಮೇಲೆ ತಾವೇ ಬಣ್ಣ ಬಳಿದುಕೊಳ್ಳುತ್ತಾರೆ. ವಿನ್ಯಾಸ, ಬಣ್ಣಗಳ ಆಯ್ಕೆ, ಚಿತ್ರ ರಚನೆ, ಬಣ್ಣ ತುಂಬುವುದು ಮೊದಲಾದ ಅಪಾರ ತಾಳ್ಮೆ ಹಾಗೂ ಸಮಯ ಬಳಸುವ ಎಲ್ಲಾ ಕಾರ್ಯಗಳನ್ನು ಆಕೆಯೊಬ್ಬಳೇ ನಿರ್ವಹಿಸುತ್ತಾರೆ. ಹಿನ್ನೆಲೆಯ ಬಣ್ಣಗಳನ್ನೂ ಅವರೇ ತಯಾರಿಸುತ್ತಾರೆ. ಒಂದರ್ಥದಲ್ಲಿ ಆಕೆ ಒನ್ ವುಮನ್ ಶೋ ಆಗಿದ್ದಾರೆ.
ತಲೆಯೇ ಇಲ್ಲದ ಶರೀರ
ಆಕೆಯ ವಿನ್ಯಾಸಗಳಲ್ಲಿ ಅತಿ ಹೆಚ್ಚು ಗಮನ ಸೆಳೆಯುವುದು ತಲೆಯೇ ಇಲ್ಲದ ಶರೀರ ಅಥವಾ ಎದೆಭಾಗದಲ್ಲಿ ದೊಡ್ಡ ತೂತು ಇರುವ ಶರೀರ. ಈ ವೀಡಿಯೋ ಮುಂದುವರೆಯುತ್ತಿದ್ದಂತೆಯೇ ಅವರ ಇನ್ನೂ ಚಿತ್ರವಿಚಿತ್ರ ವಿನ್ಯಾಸಗಳು ನಿಮ್ಮ ಕಲ್ಪನೆಯನ್ನು ಎಲ್ಲೆಲ್ಲೋ ಕರೆದೊಯ್ಯುತ್ತವೆ.
ಈ ವಿಡಿಯೋದಲ್ಲಿ ನೋಡಿ ಖಚಿತ ಪಡಿಸಿಕೊಳ್ಳಿ
ವಿಡಿಯೋ ನೋಡುತ್ತಿದ್ದಂತೆಯೇ ಆಕೆ ತನ್ನ ಮುಖಕ್ಕೆ ಬಳಿದುಕೊಳ್ಳುವ ಮೇಕಪ್ ಗಾಢವಾಗುತ್ತಾ ಹೋದಂತೆ ಇದು ತದ್ವತ್ ಬಣ್ಣದ ಹಿನ್ನೆಲೆಯಲ್ಲಿ ಕರಗುತ್ತಾ ನೋಡುನೋಡುತ್ತಿದ್ದಂತೆ ತಲೆಯೇ ಮಾಯವಾಗಿರುವಂತಹ ಭಾವನೆ ಮೂಡುತ್ತದೆ. ಗಂಟಲಿನಲ್ಲಿ ಮೂಡಿಸುವ ತೂತಂತೂ ನಿಜವಾಗಿಯೂ ಗಂಟಲಿನಲ್ಲಿ ತೂತಾಗಿಯೇ ಹೋಯಿತೇ ಎನ್ನುವಷ್ಟು ಸಾದೃಶವಾಗಿದೆ.
ಈಕೆಯ ತಲೆ ಎಲ್ಲಿ ಹೋಯಿತು?
ಈಕೆಯ ವಿನ್ಯಾಸಗಳಲ್ಲಿಯೇ ಅತ್ಯಮೋಘವಾದ ತಲೆ ನಾಪತ್ತೆಯಾಗಿರುವ ಚಿತ್ರ ಎಷ್ಟೊಂದು ತದ್ವತ್ತಾಗಿದೆ ಎಂದರೆ ಕೆಲವೇ ನಿಮಿಷಗಳಲ್ಲಿ ಆಕೆಯ ತಲೆ ಅಲ್ಲಿ ಇರಲೇ ಇಲ್ಲವೆನ್ನುವಷ್ಟು ಸಹಜವಾಗಿ ಕಂಡುಬರುತ್ತದೆ. ತಲೆ ಇದ್ದ ಭಾಗದಲ್ಲಿ ದೊಡ್ಡ ಚಮಚವೊಂದನ್ನು ಬಳಸಿ ಐಸ್ ಕ್ರೀಂ ಸ್ಕೂಪ್ ಬಳಸಿ ಕುತ್ತಿಗೆಯ ಬುಡದಿಂದ ನಿವಾರಿಸಿದರೆ ಹೇಗಾಗಬಹುದೋ ಹಾಗೇ ಇರುವಂತೆ ದೃಷ್ಟಿಭ್ರಮೆ ಉಂಟಾಗುತ್ತದೆ.
ಈಕೆ ನಿಜವಾಗಿಯೂ ಪ್ರತಿಭಾವಂತಳು
ದೃಷ್ಟಿಭ್ರಮೆ ಮೂಡಿಸುವಲ್ಲಿ ಈಕೆ ಅಪ್ಪಟ ಸಹಜ ಪ್ರತಿಭಾವಂತೆಯಾಗಿದ್ದು ಯಾವ ಬಣ್ಣಗಳನ್ನು ಯಾವ ಸ್ಥಳದಲ್ಲಿ ಹೇಗೆ ಬಳಸಬೇಕೆಂಬುದನ್ನು ಈಕೆ ಥಟ್ಟನೇ ನಿರ್ಧರಿಸಿ ತಪ್ಪಿಗೆ ಅವಕಾಶವಿಲ್ಲದಂತೆ ತನ್ನ ದೇಹವನ್ನೇ ಉಜ್ವಲ ಕಲಾಕೃತಿಯಾಗಿಸುವ ಕಲಾವಂತಿಕೆಯನ್ನು ಪಡೆದ ವಿಶ್ವದ ಕೆಲವೇ ಕಲಾವಿದರಲ್ಲಿ ಒಬ್ಬಳಾಗಿದ್ದಾಳೆ.
ವಿಡಿಯೋ
ಬನ್ನಿ, ಈಕೆಯ ಪ್ರತಿಭೆಯನ್ನು ಈ ವಿಡಿಯೋ ಮೂಲಕ ನೋಡೋಣ: