For Quick Alerts
ALLOW NOTIFICATIONS  
For Daily Alerts

ರಾಶಿ ಭವಿಷ್ಯ: ಈ 'ಅದೃಷ್ಟ ಚಿಹ್ನೆಗಳು' ನಿಮ್ಮ ಬಳಿಯಿದ್ದರೆ, ಮುಟ್ಟಿದೆಲ್ಲಾ ಚಿನ್ನ!

By Divya
|

ಜೀವನದಲ್ಲಿ ಯಶಸ್ಸನ್ನು ಕಾಣಬೇಕೆಂದರೆ ಕೇವಲ ಶ್ರಮಪಟ್ಟು ದುಡಿದರೆ ಸಾಲದು. ಶ್ರಮದ ಜೊತೆ ಅದೃಷ್ಟವು ಇರಬೇಕಾಗುತ್ತದೆ. ಅದೃಷ್ಟ ಕೈ ಕೊಟ್ಟಿತು ಎಂದಾದರೆ ನಾವೆಷ್ಟೇ ಕಷ್ಟಪಟ್ಟರೂ ಬೇಕಾದ್ದನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮನುಷ್ಯನ ಜೀವನದಲ್ಲಿ ಅದೃಷ್ಟ ಎನ್ನುವುದು ಮಹತ್ತರವಾದ ಪಾತ್ರವಹಿಸುತ್ತದೆ ಎಂದು ಹೇಳಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿ ತನ್ನ ಹುಟ್ಟಿದ ಸಮಯಕ್ಕೆ ಅನುಗುಣವಾಗಿ ವಿಶೇಷವಾದ ನಕ್ಷತ್ರ ಹಾಗೂ ರಾಶಿಯನ್ನು ಹೊಂದಿರುತ್ತಾನೆ. ಈ ರಾಶಿ ಮತ್ತು ನಕ್ಷತ್ರಗಳಿಗೆ ಕೆಲವು ಅದೃಷ್ಟದ ಸಂಕೇತಗಳಿರುತ್ತವೆ. ಅವುಗಳನ್ನು ನಾವು ಗುರುತಿಸಿ, ನಮ್ಮಲ್ಲಿ ಇಟ್ಟುಕೊಂಡರೆ ಅದೃಷ್ಟವು ನಮ್ಮ ಜೊತೆ ಸದಾ ಕಾಲ ಇರುವುದು.

ಆ ಅದೃಷ್ಟದ ವಸ್ತುಗಳು ಕೇವಲ ಒಂದು ಬಗೆಯ ವಸ್ತುಗಳಿಗೆ ಸೀಮಿತವಾಗಿರುವುದಿಲ್ಲ. ಅವು ಕೆಲವು ಚಿಹ್ನೆಗಳು, ಬಣ್ಣ, ವಸ್ತು, ಮುತ್ತು, ಹವಳ, ಕಲ್ಲು, ಹರಳು, ಖನಿಜ ಸೇರಿದಂತೆ ವಿಭಿನ್ನ ಆಯ್ಕೆಯನ್ನು ಹೊಂದಿರುತ್ತದೆ. ಅಂತಹವುಗಳನ್ನು ರಾಶಿ ಹಾಗೂ ನಕ್ಷತ್ರಕ್ಕೆ ಅನುಗುಣವಾಗಿ ನಮ್ಮ ಬಳಿ ಇಟ್ಟುಕೊಂಡಿರಬೇಕು. ಆಗ ಅದೃಷ್ಟವು ನಮ್ಮನ್ನು ಹಿಂಬಾಲಿಸುವುದು.

ನಿಮ್ಮ ಯಶಸ್ಸಿನ ರಹಸ್ಯ ಬಿಚ್ಚಿಡುವ 'ರಾಶಿ ಭವಿಷ್ಯ' ಪರಿಶೀಲಿಸಿಕೊಳ್ಳಿ

ನಿಮಗೂ ಈ ವಿಚಾರ ಸ್ವಲ್ಪ ಅಚ್ಚರಿ ಮೂಡಿಸುತ್ತಿದೆ, ಅಂತಹ ಅದೃಷ್ಟವನ್ನು ನೀವು ಪಡೆದುಕೊಳ್ಳಬೇಕು ಎನ್ನುವ ಮನಸ್ಸಾದರೆ, ನಿಮ್ಮ ಅದೃಷ್ಟದ ಸಂಕೇತಗಳು ಯಾವುದು ಎನ್ನುವುದನ್ನು ತಿಳಿದುಕೊಳ್ಳಿ. ಹೌದು, ನಿಮ್ಮ ಅನುಕೂಲಕ್ಕಾಗಿಯೇ ನಮ್ಮ ಬೋಲ್ಡ್ ಸ್ಕೈ ವಿಶೇಷ ವಿವರಣೆಯನ್ನು ಜನ್ಮ ರಾಶಿಗೆ ಅನುಗುಣವಾಗಿ ವಿವರಣೆಯನ್ನು ನಿಮ್ಮ ಮುಂದಿಟ್ಟಿದೆ. ನೀವು ವಿವರಣೆಯನ್ನು ಪರಿಗಣಿಸಿ. ಅದೃಷ್ಟದ ಬಗ್ಗೆ ಅರಿಯಿರಿ..

ಮೇಷ

ಮೇಷ

ಇವರಿಗೆ ಗಾಢ ಬಣ್ಣಗಳಾದ ಕೆಂಪು ಮತ್ತು ಕಿತ್ತಳೆ ಬಣ್ಣವು ಮಂಗಳವನ್ನು ತರುತ್ತದೆ. ಅದೃಷ್ಟ ಚಿಹ್ನೆಗಳೆಂದರೆ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು. ಮೇಷ ರಾಶಿಯವರು ಅತ್ಯಂತ ಶ್ರಮಜೀವಿಗಳಾಗಿರುತ್ತಾರೆ. ಅವರು ಬಯಸಿದ್ದನ್ನು ಪಡೆಯಲು ಹೆಚ್ಚು ಶ್ರಮ ಪಡುತ್ತಾರೆ. ಜೊತೆಗ ಮಧ್ಯದಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಿಕೊಂಡು ಮುಂದೆ ಸಾಗುತ್ತಾರೆ. ಗ್ರೀಕ್ ಶಾಸ್ತ್ರದ ಇವರ ಅದೃಷ್ಟದ ಸಂಕೇತ ಕೀಲಿ. ಕೀಲಿಯನ್ನು ಸ್ವರ್ಗಕ್ಕೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಇದನ್ನು ಸ್ವರ್ಗಕ್ಕೆ ದಾರಿ ಎಂದು ನಂಬಲಾಗುವುದು. ಕೀಯು ಆರೋಗ್ಯ ಮತ್ತು ಸಮೃದ್ಧಿಯ ಮೂಲ.

ವೃಷಭ

ವೃಷಭ

ಇವರಿಗೆ ಶುಕ್ರ ಶುಭವನ್ನು ತರುತ್ತಾನೆ. ಆತನ ನೆಚ್ಚಿನ ವಸ್ತು ತಾಮ್ರ. ತಾಮ್ರದಿಂದ ತಯಾರಿಸಿದ ಆಭರಣಗಳನ್ನು ಧರಿಸುವುದರಿಂದ ಶುಭ ಉಂಟಾಗುವುದು. ಭೂಮಿಯು ಇವರಿಗೆ ಶುಭ ಸಂಕೇತವಾಗಿದ್ದರಿಂದ ಭೂಮಿಗೆ ಸಮಬಂಧಿಸಿದ ವಿಚಾರದಲ್ಲಿ ಯಶಸ್ಸು ದೊರೆಯುವುದು. ಗ್ರೀಕ್ ಶಾಸ್ತ್ರದ ಪ್ರಕಾರ ಇವರ ಅದೃಷ್ಟ ಸಂಖ್ಯೆ 7. ಇದು ಆಧ್ಯಾತ್ಮಿಕವಾಗಿ ವಿಕಸನಗೊಂಡ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ಗಣಿತದ ಪ್ರಕಾರ 7 ಅತ್ಯಂತ ಉತ್ತಮ ಹೆಜ್ಜೆಯೆಂದು ಕಂಡು ಬರುತ್ತದೆ. ಮತ್ತು ಅದನ್ನು ಅತ್ಯಂತ ಶಕ್ತಿಯುತ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ಪುರಾತನ ಗ್ರೀಕರು ಇದನ್ನು ಪರಿಪೂರ್ಣ ಸಂಖ್ಯೆ ಎಂದು ಪರಿಗಣಿಸುತ್ತಾರೆ. ವೃಷಭ ರಾಶಿಯವರು ಹೆಚ್ಚಿನದಾಗಿ ಗಣಿತದಲ್ಲಿ ಆಸಕ್ತಿ ಹಾಗೂ ಪ್ರೀತಿಯನ್ನು ಹೊಂದಿರುತ್ತಾರೆ ಎನ್ನಲಾಗುವುದು.

ಮಿಥುನ

ಮಿಥುನ

ಇವರಿಗೆ ಅದೃಷ್ಟವು ಗಾಳಿ, ರೆಕ್ಕೆಯ ಚಿಹ್ನೆ ಹಾಗೂ ಪಕ್ಷಿಗಳು. ಈ ಎಲ್ಲದರ ಸಂಕೇತ ವಾದ ವಸ್ತುಗಳನ್ನು ಇಟ್ಟುಕೊಳ್ಳುವುದು ಮತ್ತು ಪಕ್ಷಿಯನ್ನು ಸಾಕುವುದರಿಂದ ಕೆಟ್ಟ ಅದೃಷ್ಟವನ್ನು ಓಡಿಸಿ. ಒಳ್ಳೆಯ ಅದೃಷ್ಟವನ್ನು ಪಡೆದು ಕೊಳ್ಳಬಹುದು. ಗ್ರೀಕ್ ಶಾಸ್ತ್ರದ ಈ ರಾಶಿಯವರು ಮಲಗುವ ಕೋಣೆ ಹಾಗೂ ಕಾರುಗಳಲ್ಲಿ ಅಲಂಕಾರಿ ವಸ್ತುಗಳನ್ನು ಇಡಲು ಬಯಸುತ್ತಾರೆ. ಇದು ಚಿಕ್ಕ ವಿಷಯ ಎನಿಸಬಹುದು ಆದರೆ ಅವರಿಗೆ ಈ ಸಂಗತಿಯೇ ಅದ್ಭುತವನ್ನು ಸೃಷ್ಟಿ ಮಾಡಿಕೊಡುತ್ತದೆ. ಫ್ಯೂಜಿ ಡೈಸ್ ಇವರಿಗೆ ಅದೃಷ್ಟದ ಸಂಕೇತ ಎಂದು ಹೇಳಬಹುದು. ಎರಡನೇ ವಿಶ್ವಯುದ್ಧದಲ್ಲಿ ಇದೇ ಫೈಟರ್‌ಗಳ ಅದೃಷ್ಟವನ್ನು ಬದಲಾಯಿಸಿತು ಎಂದು ಹೇಳಲಾಗುತ್ತದೆ.

ಕರ್ಕ

ಕರ್ಕ

ಇವರ ಅದೃಷ್ಟದ ಚಿಹ್ನೆಗಳು ನಕ್ಷತ್ರ ಮೀನು, ಮೀನು, ಡಾಲ್‍ಫಿನ್. ಇವರು ನೀರಿನಲ್ಲಿರುವಂತಹ ವಸ್ತುಗಳಾದ ಚಿಪ್ಪುಗಳು, ಮುತ್ತುಗಳಂತಹ ವಸ್ತುಗಳನ್ನು ಧರಿಸುವುದರಿಂದ ಅತ್ಯಂತ ಸಂತೋಷ ಲಭಿಸುವುದು. ಗ್ರೀಕ್ ಶಾಸ್ತ್ರದ ಪ್ರಕಾರ ಈ ರಾಶಿಯವರು ಸದಾ ಸಂತೋಷದಿಂದ ಇರಲು ಬಯಸುತ್ತಾರೆ. ಇವರ ಲಕ್ಕಿ ಅದೃಷ್ಟವು ನಗು ಎಂದೇ ಹೇಳಬಹುದು. ಪ್ರಾಣಿಗಳನ್ನು ಪ್ರೀತಿಸುವ ಇವರು ವಿಶಾಲ ಮನಸ್ಸನ್ನು ಹೊಂದಿರುತ್ತಾರೆ. ಇವರ ಒಂದು ಕಿರು ನಗೆಯೇ ಅನೇಕರನ್ನು ಆಕರ್ಷಿಸುತ್ತದೆ. ಲೇಡಿ ಬಗ್ ಇವರ ಅದೃಷ್ಟದ ಸಂಕೇತ. ಲೇಡಿ ಬಗ್ ಈ ರಾಶಿಯವರ ದಿನವನ್ನು ಗಂಭೀರವವಾಗಿ ಪ್ರಕಾಶಿಸುತ್ತದೆ. ಅಲ್ಲದೆ ಸಂತೋಷ ಮತ್ತು

ಸಮೃದ್ಧಿಯನ್ನು ಸೂಚಿಸುತ್ತದೆ.

ಸಿಂಹ

ಸಿಂಹ

ಇವರು ಸೂರ್ಯನ ಆಕಾರದಲ್ಲಿರುವ ಆಭರಣವನ್ನು ಧರಿಸಬೇಕು. ಅದು ಒಳ್ಳೆಯ ಅದೃಷ್ಟವನ್ನು ತಂದು ಕೊಡುವುದು. ಬೆಕ್ಕಿನ ಚಿಹ್ನೆಯು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸನ್ನು ತಂದುಕೊಡುವುದು. ಗ್ರೀಕ್ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಚಿತ್ತಾಕರ್ಷಕ ಮತ್ತು ಹೊಳೆಯುವ ಹರಳುಗಳು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತವೆ. ಜೆಮ್‍ಸ್ಟೋನ್ ಅಥವಾ ನೀಲಿ ಮಣಿ ಇವರಿಗೆ ಅತ್ಯಂತ ಅದೃಷ್ಟದ ವಸ್ತು ಎಂದು ಪರಿಗಣಿಸಲಾಗುತ್ತದೆ.

ಕನ್ಯಾ

ಕನ್ಯಾ

ಇವರಿಗೆ ಭೂಮಿಯು ಅತ್ಯಂತ ಅದೃಷ್ಟದ ಚಿಹ್ನೆಯಾಗಿದೆ. ಸೇಬು ದ್ರಾಕ್ಷಿ, ಪೀಚ್ ಹಣ್ಣುಗಳನ್ನು ಸಂಕೇತಿಸುವ ಹಣ್ಣುಗಳನ್ನು ಧರಿಸುವುದರಿಂದ ಅದೃಷ್ಟವನ್ನು ಪಡೆದುಕೊಳ್ಳಬಹುದು. ಗ್ರೀಕ್ ಶಾಸ್ತ್ರದ ಪ್ರಕಾರ ದುಷ್ಟ ಕಣ್ಣುಗಳೇ ಈ ರಾಶಿಯವರಿಗೆ ಅತ್ಯಂತ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ದುಷ್ಟ ಕಣ್ಣುಗಳು ಸುತ್ತಲಿರುವ ಕೆಟ್ಟ ಶಕ್ತಿಯಿಂದ ರಕ್ಷಿಸುತ್ತದೆ. ಸುತ್ತಲಿನ ಶಕ್ತಿಯು ಹೆಚ್ಚು ಸಂವೇದನಾ ಶೀಲವಾಗಿರುತ್ತದೆ.

ತುಲಾ

ತುಲಾ

ಇವರಿಗೆ ಪಕ್ಷಿ ಮತ್ತು ಗಾಳಿಯ ಚಿಹ್ನೆಯು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ. ವ್ಯವಹಾರವು ಉತ್ತಮ ಪಡಿಸಿಕೊಳ್ಳಲು ಈ ಚಿಹ್ನೆಗಳನ್ನು ನಿಮ್ಮ ಬಳಿ ಇಟ್ಟುಕೊಂಡಿರಬೇಕು. ಗ್ರೀಕ್ ಶಾಸ್ತ್ರದ ಪ್ರಕಾರ ಇವರಿಗೆ ತ್ರಿಕೋನವನ್ನು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಈ ಚಿಹ್ನೆಯನ್ನು ಮಾನವ ಮತ್ತು ದೇವರ ನಡುವಿನ ಸಂಬಂಧವನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗುತ್ತಿದೆ. ಇದು ಜಗತ್ತಿನ ಸಮತೋಲನವನ್ನು ಪ್ರತಿನಿಧಿಸುತ್ತದೆ. ಈ ರಾಶಿಯವರಿಗೆ ತ್ರಿಕೋನವೇ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುವುದು.

ವೃಶ್ಚಿಕ

ವೃಶ್ಚಿಕ

ಇವರಿಗೆ ನೀರು ಮತ್ತು ಚಂದ್ರನ ಆಜೃತಿಯು ಹೆಚ್ಚು ಅದೃಷ್ಟವನ್ನು ತಂದು ಕೊಡುತ್ತದೆ. ಸ್ಟಾರ್ ಆಕಾರದ ಬೆಳ್ಳಿಯ ಆಭರಣ ಧರಿಸಿದರೆ ಯಶಸ್ಸು ನಿಮ್ಮ ಜೊತೆಗೆ ಇರುವುದು. ಗ್ರೀಕ್ ಶಾಸ್ತ್ರದ ಪ್ರಕಾರ ಈ ರಾಶಿಯವರ ಅದೃಷ್ಟದ ಸಂಕೇತವು ಕುದುರೆ ಲಾಳ ಎನ್ನಲಾಗುತ್ತದೆ. ಹೆಚ್ಚಿನ ಶಕ್ತಿ ಹಾಗೂ ನಕಾರಾತ್ಮಕ ಶಕ್ತಿಯನ್ನು ದೂರವಿರಿಸಲು ಕುದುರೆ ಲಾಳವು ಹೆಚ್ಚು ಸಹಕಾರಿಯಾಗಿರುತ್ತದೆ. ಯು ಚಿಹ್ನೆಯಲ್ಲಿರುವ ವಸ್ತುವು ಅದೃಷ್ಟ ಹಾಗೂ ಸಮೃದ್ಧಿಯನ್ನು ತರುವುದು.

ಧನು

ಧನು

ಇವರಿಗೆ ಬಿಲ್ಲು, ಬಾಣ, ಹೃದಯದ ಚಿಹ್ನೆಯು ಅದೃಷ್ಟದ ಸಂಕೇತ. ಇವುಗಳನ್ನು ಹೊಂದಿರುವ ಆಕೃತಿಯನ್ನು ಆಭರಣದಲ್ಲಿ ಧರಿಸಿದರೆ ಉತ್ತಮ ಫಲವನ್ನು ಪಡೆಯಬಹುದು. ಗ್ರೀಕ್ ಶಾಸ್ತ್ರದ ಪ್ರಕಾರ ಧಾರ್ಮಿಕ ಸಂಪ್ರದಾಯಗಳಲ್ಲಿ ಅನೇಕ ಅದೃಷ್ಟದ ಮೋಡಿಗಳನ್ನು ನೋಡಬಹುದು. ಈ ರಾಶಿಯವರು ಧಾರ್ಮಿಕ ಮತ್ತು ತೆರೆದ ಮನಸ್ಸಿನವರಾಗಿರುತ್ತಾರೆ. ಮೊಲದ ಪಾದದ ಚಿಹ್ನೆಗಳು ಈ ರಾಶಿಯವರಿಗೆ ಹೆಚ್ಚಿನ ಅದೃಷ್ಟವನ್ನು ತಂದುಕೊಡುತ್ತದೆ.

ಮಕರ

ಮಕರ

ಕಲ್ಲು, ಗುಲಾಬಿ ಸ್ಫಟಿಕ ಇವರಿಗೆ ಅದೃಷ್ಟದ ಸಂಕೇತ. ಇವುಗಳನ್ನು ನೀವು ಧರಿಸುವ ಆಭರಣದಲ್ಲಿ ಸೇರಿಸಿಕೊಂಡರೆ ಉತ್ತಮ ಫಲವನ್ನು ಪಡೆಯಬಹುದು. ಗ್ರೀಕ್ ಶಾಸ್ತ್ರದ ಪ್ರಕಾರ ನಾಲ್ಕೆಲಗ ಈ ರಾಶಿಯವರಿಗೆ ಅದೃಷ್ಟದ ಚಿಹ್ನೆ. ನಾಲ್ಕೆಲಗವನ್ನು ನಂಬಿಕೆ, ಭರವಸೆ, ಪ್ರೀತಿ, ಆರೋಗ್ಯ, ಖ್ಯಾತಿ ಹಾಗೂ ಸಂಪತ್ತನ್ನು ಸೂಚಿಸುತ್ತದೆ ಎನ್ನಲಾಗುವುದು. ಮಕರ ರಾಶಿಯವರಿಗೆ ನಾಲ್ಕೆಲಗವು ಅತ್ಯಂತ ಅದೃಷ್ಟವನ್ನು ತರುವ ವಸ್ತು ಎಂದು ಹೇಳಲಾಗುತ್ತದೆ.

ಕುಂಬ

ಕುಂಬ

ಇವರಿಗೆ ರೆಕ್ಕೆಯನ್ನು ಹೊಂದಿರುವ ಜೀವಿಗಳ ಚಿಹ್ನೆಯು ಅದೃಷ್ಟವನ್ನು ತಂದುಕೊಡುತ್ತವೆ. ಲೇಡಿ ಬಗ್ ಆಕೃತಿಯು ಆಭರಣದಲ್ಲಿ ಧರಿಸಿದರೆ ಒಳ್ಳೆಯದು. ಗ್ರೀಕ್ ಶಾಸ್ತ್ರದ ಪ್ರಕಾರ ಕುಂಬರಾಶಿಯವರಿಗೆ ಕ್ರಿಕೆಟ್ಸ್ ಬಹಳ ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಪುರಾತನ ಕಾಲದಿಂದಲೂ ಇದನ್ನು ಅದೃಷ್ಟದ ಸಂಕೇತ ಎಂದು ನಂಬಲಾಗಿದೆ. ಇವರು ಮನೆಯಲ್ಲಿ, ಕೈಚೀಲದ ಮೇಲೆ ಅಥವಾ ಬೀರುಗಳ ಮೇಲೆ ಈ ಚಿಹ್ನೆಯನ್ನು ಹೊಂದಿದ್ದರೆ ಉತ್ತಮ ಅದೃಷ್ಟ ಒಲಿದು ಬರುವುದು.

ಮೀನ

ಮೀನ

ಇವರ ಅದೃಷ್ಟದ ಆಯ್ಕೆ ಬೆಳ್ಳಿ ಮತ್ತು ಪಚ್ಚೆ ಹರಳು. ಇವುಗಳನ್ನು ಆಭರಣದಲ್ಲಿ ಧರಿಸಿದರೆ ಜೀವನದಲ್ಲಿ ಮಂಗಳ ಉಂಟಾಗುವುದು. ಗ್ರೀಕ್ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಕನಸು ಕಾಣುವುದೇ ಅದೃಷ್ಟದ ಸಂಕೇತ. ಕೆಟ್ಟ ಕನಸುಗಳನ್ನು ವಿಶ್ಲೇಸಿಸುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಇವು ಕನಸು ಕಾಣುವುದರಿಂದಲೇ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಎನ್ನಲಾಗುವುದು.

English summary

lucky charm you need according to your Zodiac sign

For thousands of years, lucky charms have been used to usher in some positive vibes for people. Lucky charms are still as prevalent in our society as they were for our ancestors. Lucky Charms based on your Zodiac Signs works wonders - once you have an idea what is your Lucky Charm, just get one for yourself and see if it can create some magic in your life.
X
Desktop Bottom Promotion