Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅದೃಷ್ಟ ಬದಲಾಗಬೇಕೆಂದರೆ ಈ 'ಅದೃಷ್ಟದ ವಸ್ತು' ನಿಮ್ಮ ಬಳಿ ಇರಬೇಕು!
ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಬಾರಿ ಅದೃಷ್ಟ ಎನ್ನುವುದು ಒಲಿದು ಬರುತ್ತದೆ. ಆ ಅದೃಷ್ಟವು ವ್ಯಕ್ತಿಯನ್ನು ಎಲ್ಲಿಂದ ಎಲ್ಲಿಯ ವರೆಗಾದರೂ ಕೊಂಡೊಯ್ಯಬಹುದು. ಅದಕ್ಕೆ ಯವುದೇ ಮಿತಿ ಇರುವುದಿಲ್ಲ. ಅದೃಷ್ಟದ ಬಗ್ಗೆ ನಮ್ಮ ಪೂರ್ವಜರಿಗೆ ಗಾಢವಾದ ನಂಬಿಕೆಯಿದೆ. ಅಂದಿನಿಂದ ಇಂದಿನವರೆಗೂ ಜನರು ಈ ಕುರಿತು ಆಳವಾದ ನಂಬಿಕೆಯನ್ನು ಹೊಂದಿದ್ದಾರೆ.
ಕುಂಡಲಿ ಹಾಗೂ ರಾಶಿಗಳಿಗೆ ಅನುಗುಣವಾಗಿ ಕೆಲವು ವಿಶೇಷವಾದ ಅದೃಷ್ಟದ ಚಿಹ್ನೆಗಳು, ಸಂಖ್ಯೆ, ವಸ್ತು, ಬಣ್ಣ ಹೀಗೆ ಅನೇಕ ಬಗೆಯನ್ನು ಕಾಣಬಹುದು. ನಿಮಗೂ ನಿಮ್ಮ ಅದೃಷ್ಟದ ಸಂಕೇತವೇನು? ಎನ್ನುವುದನ್ನು ತಿಳಿದುಕೊಳ್ಳಬೇಕೆಂದುಕೊಂಡಿದ್ದರೆ ನಾವಿಲ್ಲಿ ನೀಡಿರುವ ವಿವರಣೆಯನ್ನು ಪರಿಗಣಿಸಿ. ಅದೃಷ್ಟದ ಬಗ್ಗೆ ಅರಿಯಿರಿ...

ಮೇಷ
ಮೇಷ ರಾಶಿಯವರು ಅತ್ಯಂತ ಶ್ರಮಜೀವಿಗಳಾಗಿರುತ್ತಾರೆ. ಅವರು ಬಯಸಿದ್ದನ್ನು ಪಡೆಯಲು ಹೆಚ್ಚು ಶ್ರಮ ಪಡುತ್ತಾರೆ. ಜೊತೆಗ ಮಧ್ಯದಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಿಕೊಂಡು ಮುಂದೆ ಸಾಗುತ್ತಾರೆ. ಇವರ ಅದೃಷ್ಟದ ಸಂಕೇತ ಕೀಲಿ. ಕೀಲಿಯನ್ನು ಸ್ವರ್ಗಕ್ಕೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಇದನ್ನು ಸ್ವರ್ಗಕ್ಕೆ ದಾರಿ ಎಂದು ನಂಬಲಾಗುವುದು. ಕೀಯು ಆರೋಗ್ಯ ಮತ್ತು ಸಮೃದ್ಧಿಯ ಮೂಲ.
ಈ ರಾಶಿಯವರು ಜೀವನವನ್ನು ಸದಾ ಧನಾತ್ಮಕರೂಪದಲ್ಲಿ ಕಾಣುತ್ತಾರೆ ಹಾಗೂ ಸದಾ ಜೀವನದಲ್ಲಿ ಆಶಾವಾದಿಗಳಾಗಿರುತ್ತಾರೆ. ಇವರು ಹೆಚ್ಚಾಗಿ ಸ್ವಂತ ವ್ಯಕ್ತಿತ್ವವುಳ್ಳವರಾಗಿದ್ದು ಯಾವುದೇ ಹಂಗಿನಲ್ಲಿ ಇರಲು ಇಚ್ಛಿಸುವುದಿಲ್ಲ. ಈ ರಾಶಿಯವರು ಉತ್ತಮ ಮಾತುಗಾರಿಕೆಯನ್ನು ಹೊಂದಿರುತ್ತಾರೆ. ಇವರಲ್ಲಿ ಮಾತಿನ ಕಲೆ, ಆತ್ಮವಿಶ್ವಾಸ ಮತ್ತು ಹಠಾತ್ ಆಗಿ ನಿರ್ಧಾರಕ್ಕೆ ಬರುವ ಇವರಿಗೆ ಸರಿಯಾಗಿ ಹೊಂದಿಕೊಳ್ಳುವ ಕೆಲಸವೆಂದರೆ ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗ, ಕಾಮಗಾರಿ ವೃತ್ತಿ, ಹೊಟೇಲ್ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಉದ್ಯೋಗವು ಸೂಕ್ತವಾಗಿರುವುದು

ವೃಷಭ
ವೃಷಭ ರಾಸಿಯವರ ಅದೃಷ್ಟ ಸಂಖ್ಯೆ 7. ಇದು ಆಧ್ಯಾತ್ಮಿಕವಾಗಿ ವಿಕಸನಗೊಂಡ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ಗಣಿತದ ಪ್ರಕಾರ 7 ಅತ್ಯಂತ ಉತ್ತಮ ಹೆಜ್ಜೆಯೆಂದು ಕಂಡು ಬರುತ್ತದೆ. ಮತ್ತು ಅದನ್ನು ಅತ್ಯಂತ ಶಕ್ತಿಯುತ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ಪುರಾತನ ಗ್ರೀಕರು ಇದನ್ನು ಪರಿಪೂರ್ಣ ಸಂಖ್ಯೆ ಎಂದು ಪರಿಗಣಿಸುತ್ತಾರೆ. ವೃಷಭ ರಾಶಿಯವರು ಹೆಚ್ಚಿನದಾಗಿ ಗಣಿತದಲ್ಲಿ ಆಸಕ್ತಿ ಹಾಗೂ ಪ್ರೀತಿಯನ್ನು ಹೊಂದಿರುತ್ತಾರೆ ಎನ್ನಲಾಗುವುದು.
ಈ ರಾಶಿಯ ಜನರಿಗೆ ವಿಶಾಲವಾದ ಹೃದಯವಿದ್ದು ಎಲ್ಲಾ ಪ್ರಸಂಗಗಳಲ್ಲಿ ತಾಳ್ಮೆಯಿಂದ ವ್ಯವಹರಿಸುವ ಶಕ್ತಿಯಿದೆ. ಹತ್ತಿರದಿಂದ ಬಲ್ಲವರು ನಿಮ್ಮ ನಿಷ್ಠೆ ಮತ್ತು ನಂಬುಗೆಯನ್ನು ಇಷ್ಟಪಡುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಪುಸ್ತಕ. ಪ್ರತಿಬಾರಿ ನೀವು ಒಂದು ಪುಸ್ತಕವನ್ನು ಓದಿದಾಗ ಅದರಿಂದ ನಿಮಗೆ ಶಾಂತಿ ಮತ್ತು ನೆಮ್ಮದಿ ದೊರಕುತ್ತದೆ. ಅಲ್ಲದೆ ಇವರಿಗೆ ಹೊಂದಿಕೆಯಾಗುವಂತಹ ವೃತ್ತಿಗಳೆಂದರೆ ಹಣಕಾಸು, ಲೆಕ್ಕಪತ್ರ ನಿರ್ವಹಣಿ, ಇಂಟೀರಿಯರ್ ಡಿಸೈನ್, ನರ್ಸಿಂಗ್, ಇಂಜಿನಿಯರಿಂಗ್, ಕಾನೂನು, ಮಾರ್ಕೆಟಿಂಗ್ ಮತ್ತು ಪಿಆರ್ ವೃತ್ತಿ ಮಾಡಬಹುದಾಗಿದೆ.

ಮಿಥುನ
ಈ ರಾಶಿಯವರು ಮಲಗುವ ಕೋಣೆ ಹಾಗೂ ಕಾರುಗಳಲ್ಲಿ ಅಲಂಕಾರಿ ವಸ್ತುಗಳನ್ನು ಇಡಲು ಬಯಸುತ್ತಾರೆ. ಇದು ಚಿಕ್ಕ ವಿಷಯ ಎನಿಸಬಹುದು ಆದರೆ ಅವರಿಗೆ ಈ ಸಂಗತಿಯೇ ಅದ್ಭುತವನ್ನು ಸೃಷ್ಟಿ ಮಾಡಿಕೊಡುತ್ತದೆ. ಫ್ಯೂಜಿ ಡೈಸ್ ಇವರಿಗೆ ಅದೃಷ್ಟದ ಸಂಕೇತ ಎಂದು ಹೇಳಬಹುದು. ಎರಡನೇ ವಿಶ್ವಯುದ್ಧದಲ್ಲಿ ಇದೇ ಫೈಟರ್ ಗಳ ಅದೃಷ್ಟವನ್ನು ಬದಲಾಯಿಸಿತು ಎಂದು ಹೇಳಲಾಗುತ್ತದೆ. ಈ ರಾಶಿಯ ಜನರು ಸದಾ ಚಟುವಟಿಕೆಯುಳ್ಳವರಾಗಿದ್ದು ಸ್ನೇಹಪರ ಮತ್ತು ತಮಾಷೆಯ ವ್ಯಕ್ತಿತ್ವದವರಾಗಿದ್ದಾರೆ. ಇವರ ಕಲ್ಪನೆ ವಿಪರೀತ ತೂಪ ಪಡೆದು ಇದಕ್ಕೆ ವಿಚಿತ್ರವಾದ ಉತ್ತರವನ್ನೂ ಪಡೆಯುವಲ್ಲಿ ಸಫಲಾರಾಗುತ್ತಾರೆ. ಈ ರಾಶಿಯ ಜನರಿಗೆ ಅದೃಷ್ಟ ತರುವ ಗುಣವೆಂದರೆ ಅವರ ಕುಟುಂಬ. ಪ್ರತಿ ಬಾರಿ ವಿಚಿತ್ರ ಕಲ್ಪನೆಯ ಕಾರಣ ಅಸಂಭವವನ್ನು ಸಾಧಿಸಲು ಹೋಗಿ ತೊಂದರೆಗೆ ಒಳಗಾದಾಗ ನಿಮ್ಮ ಕುಟುಂಬವೇ ನಿಮ್ಮನ್ನು ರಕ್ಷಿಸುತ್ತದೆ. ಅಲ್ಲದೆ ಈ ರಾಶಿಯವರಿಗೆ ಹೊಂದಿಕೊಳ್ಳುವ ವೃತ್ತಿಗಳೆಂದರೆ ಕಲೆ, ವಿನ್ಯಾಸ, ವಾಸ್ತುಶಿಲ್ಪ, ನರ್ಸಿಂಗ್, ಮಾರಾಟ, ಕಾನೂನು ಜಾರಿ ಮತ್ತು ಅಗ್ನಿಶಾಮಕದಲ್ಲಿ ಕೆಲಸಗಳು.

ಕರ್ಕ
ಈ ರಾಸಿಯವರು ಸದಾ ಸಂತೋಷದಿಂದ ಇರಲು ಬಯಸುತ್ತಾರೆ. ಇವರ ಲಕ್ಕಿ ಅದೃಷ್ಟವು ನಗು ಎಂದೇ ಹೇಳಬಹುದು. ಪ್ರಾಣಿಗಳನ್ನು ಪ್ರೀತಿಸುವ ಇವರು ವಿಶಾಲ ಮನಸ್ಸನ್ನು ಹೊಂದಿರುತ್ತಾರೆ. ಇವರ ಒಂದು ಕಿರು ನಗೆಯೇ ಅನೇಕರನ್ನು ಆಕರ್ಷಿಸುತ್ತದೆ. ಲೇಡಿ ಬಗ್ ಇವರ ಅದೃಷ್ಟದ ಸಂಕೇತ. ಲೇಡಿ ಬಗ್ ಈ ರಾಶಿಯವರ ದಿನವನ್ನು ಗಂಭೀರವವಾಗಿ ಪ್ರಕಾಶಿಸುತ್ತದೆ. ಅಲ್ಲದೆ ಸಂತೋಷ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ಈ ರಾಶಿಯ ಜನರು ನಿಷ್ಠಾವಂತರು ಹಾಗೂ ನಂಬಿಕೆಗೆ ಅರ್ಹರಾದ ಜನರಾಗಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮನ್ನು ನಂಬಿದವರನ್ನು ಕೈಬಿಡದ ಗುಣ ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ತಳೆಯಲು ಸಾಧ್ಯವಾಗುತ್ತದೆ. ಅದೃಷ್ಟ ತರುವ ಗುಣವೆಂದರೆ ನಿಮ್ಮ ಸಾಕುಪ್ರಾಣಿ. ಇದು ಅವರಿಗೆ ನಿಷ್ಠೆಯಿಂದಿದ್ದು ಸದಾ ನಿಮ್ಮ ಬೆಂಗಾವಲಿಗಿರುತ್ತದೆ.ಇವರಿಗೆ ಹೊಂದಿಕೆಯಾಗುವ ವೃತ್ತಿಗಳೆಂದರೆ ಸರ್ಕಾರಿ ಕೆಲಸ, ಕಾನೂನು ಸೇವೆ, ಜಾಹೀರಾತು, ಉನ್ನತ ಶಿಕ್ಷಣ, ಯಂತ್ರಗಳ ನಿರ್ವಹಣೆ, ಸಾರಿಗೆ ಮತ್ತು ಸೇನೆ.

ಸಿಂಹ
ಈ ರಾಶಿಯವರಿಗೆ ಚಿತ್ತಾಕರ್ಷಕ ಮತ್ತು ಹೊಳೆಯುವ ಹರಳುಗಳು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತವೆ. ಜೆಮ್‍ಸ್ಟೋನ್ ಅಥವಾ ನೀಲಿ ಮಣಿ ಇವರಿಗೆ ಅತ್ಯಂತ ಅದೃಷ್ಟದ ವಸ್ತು ಎಂದು ಪರಿಗಣಿಸಲಾಗುತ್ತದೆ.ಈ ರಾಶಿಯ ಜನರು ಸಿಂಹದಂತೆಯೇ ದೃಢನಿಶ್ಚಯವುಳವರು ಮತ್ತು ದಿಟ್ಟ ಸ್ವಭಾವದವರಾಗಿರುತ್ತಾರೆ. ನಿಮಗೆ ಬಹಳಷ್ಟು ಕನಸುಗಳಿದ್ದು ಮಹತ್ವಾಕಾಂಕ್ಷಿಗಳೂ ಆಗಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಸ್ನೇಹ. ಜೀವನಸಂಗಾತಿ ಅಥವಾ ಪ್ರಾಣಸ್ನೇಹಿತ/ಸ್ನೇಹಿತೆಯ ಸ್ನೇಹಕ್ಕೆ ನೀವು ಅತಿಹೆಚ್ಚಿನ ಪ್ರಾಮುಖ್ಯತೆ ನೀಡುತ್ತೀರಿ. ಇವರಿಗೆ ಸರ್ಕಾರಿ ಕೆಲಸ, ಕಾನೂನು ಸೇವೆ, ಕಲೆ, ವಿನ್ಯಾಸ, ವಾಸ್ತುಶಿಲ್ಲ, ಇಂಜಿನಿಯರಿಂಗ್, ಮನೋರಂಜನೆ, ರಿಯಲ್ ಎಸ್ಟೇಟ್ ಅಥವಾ ಶಿಕ್ಷಣ ಕ್ಷೇತ್ರವು ಹೊಂದಿಕೆಯಾಗುತ್ತದೆ.

ಕನ್ಯಾ
ದುಷ್ಟ ಕಣ್ಣುಗಳೇ ಈ ರಾಶಿಯವರಿಗೆ ಅತ್ಯಂತ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ದುಷ್ಟ ಕಣ್ಣುಗಳು ಸುತ್ತಲಿರುವ ಕೆಟ್ಟ ಶಕ್ತಿಯಿಂದ ರಕ್ಷಿಸುತ್ತದೆ. ಸುತ್ತಲಿನ ಶಕ್ತಿಯು ಹೆಚ್ಚು ಸಂವೇದನಾ ಶೀಲವಾಗಿರುತ್ತದೆ.ಈ ರಾಶಿಯ ಜನರು ಇತರರಿಗಿಂತ ಎರಡು ಹೆಜ್ಜೆ ಮುಂದಿರುತ್ತಾರೆ. ಇದಕ್ಕೆ ನೀವು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವ ಗುಣವೇ ಕಾರಣ. ನೀವು ಸಾಮಾನ್ಯವಾಗಿ ಎಲ್ಲರಿಗೂ ಸಹಾಯ ಮಾಡುವ ಮನಸ್ಸುಳ್ಳವರಾಗಿದ್ದು ವ್ಯವಹಾರಿಕ ಅಥವಾ ಕಾರ್ಯರೂಪದ ಕೆಲಸಗಳನ್ನೇ ಹಮ್ಮಿಕೊಳ್ಳುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಒಂಟಿತನ. ಇನ್ನು ಇವರು ಜ್ಞಾನ ಮತ್ತು ಅರ್ಥದ ಕಡೆ ಆಕರ್ಷಿತರಾಗುವಂತಹ ವ್ಯಕ್ತಿಗಳಾಗಿರುತ್ತಾರೆ. ನಿಖರತೆ, ವಿವರ ಮತ್ತು ಸಂಶೋಧನೆ ಎನ್ನುವುದು ಇವರ ವ್ಯಕ್ತಿತ್ವದಲ್ಲೇ ಇರುತ್ತದೆ. ಇವರಿಗೆ ಹೊಂದಿಕೆಯಾಗುವಂತಹ ಕೆಲಸಗಳೆಂದರೆ ಸಮಾಜ ಸೇವೆ, ಮಾರಾಟ, ಸಂಕಲನ, ಬರಹ ಮತ್ತು ಅಡುಗೆಯಲ್ಲಿ ತೊಡಗಿಕೊಳ್ಳಬಹುದು.

ತುಲಾ
ಅನೇಕ ಸಂಸ್ಕ್ರತಿಯಲ್ಲಿ ತ್ರಿಕೋನವನ್ನು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಈ ಚಿಹ್ನೆಯನ್ನು ಮಾನವ ಮತ್ತು ದೇವರ ನಡುವಿನ ಸಂಬಂಧವನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗುತ್ತಿದೆ. ಇದು ಜಗತ್ತಿನ ಸಮತೋಲನವನ್ನು ಪ್ರತಿನಿಧಿಸುತ್ತದೆ. ಈ ರಾಶಿಯವರಿಗೆ ತ್ರಿಕೋನವೇ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುವುದು. ಈ ರಾಶಿಯ ಜನರು ಶಾಂತಿಪ್ರಿಯರಾಗಿದ್ದು ಆದರ್ಶವಾದಿಗಳಾಗಿರುತ್ತಾರೆ. ನಿಮ್ಮ ಸುತ್ತಮುತ್ತ ಶಾಂತಿ ಮತ್ತು ಸೌಹಾರ್ದತೆ ಪಡೆಯಲು ಸದಾ ಯತ್ನಿಸುತ್ತಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ಹೂವುಗಳು. ನಿಮ್ಮ ಸುತಮುತ್ತ ಹೂವುಗಳಿರುವಂತೆ ಮತ್ತ ಸದಾ ನಗುನಗುತಾ ಇರುವಂತೆ ನೋಡಿಕೊಳ್ಳುತ್ತೀರಿ. ಅಂತೆಯೇ ಸದಾ ಹಸನ್ಮುಖಿಯಾಗಿರಲು ಹೂವುಗಳ ನಡುವೆಯೇ ಇರಲು ಇಚ್ಛಿಸುತ್ತೀರಿ. ಇನ್ನು ವೃತ್ತಿಯಲ್ಲಿ ಇವರಿಗೆ ಸಂತೋಷ ಸಿಗಬೇಕಾದರೆ ಮನುಷ್ಯರೊಂದಿಗೆ ಸಂವಾದ ಮಾಡುತ್ತಾ ಇರಬೇಕು. ಇವರು ತುಂಬಾ ಸಹಕಾರಿಗಳು ಮತ್ತು ಹೊಂದಾಣಿಕೆಯ ಸ್ವಭಾವದವರು. ಇವರಲ್ಲಿ ನ್ಯಾಯ ಹಾಗೂ ನಿಷ್ಠೆಯಿರುತ್ತದೆ. ಇವರಿಗೆ ಸರ್ಕಾರಿ, ಸಾಮಾಜಿಕ ಕೆಲಸ ಮತ್ತು ಕಾನೂನು ಜಾರಿ ವೃತ್ತಿ ಸೂಕ್ತವಾಗಿರುತ್ತದೆ.

ವೃಶ್ಚಿಕ
ಈ ರಾಶಿಯವರ ಅದೃಷ್ಟದ ಸಂಕೇತವು ಕುದುರೆ ಲಾಳ ಎನ್ನಲಾಗುತ್ತದೆ. ಹೆಚ್ಚಿನ ಶಕ್ತಿ ಹಾಗೂ ನಕಾರಾತ್ಮಕ ಶಕ್ತಿಯನ್ನು ದೂರವಿರಿಸಲು ಕುದುರೆ ಲಾಳವು ಹೆಚ್ಚು ಸಹಕಾರಿಯಾಗಿರುತ್ತದೆ. ಯು ಚಿಹ್ನೆಯಲ್ಲಿರುವ ವಸ್ತುವು ಅದೃಷ್ಟ ಹಾಗೂ ಸಮೃದ್ಧಿಯನ್ನು ತರುವುದು. ಈ ರಾಶಿಯ ಜನರು ಕ್ರಿಯಾತ್ಮಕರಾಗಿದ್ದು ತಾವಂದುಕೊಂಡಿದ್ದನ್ನೇ ಸಾಧಿಸುವ ಛಲವುಳ್ಳವರಾಗಿರುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಸ್ವಂತಿಕೆ. ನಿಮ್ಮ ಸ್ವಂತಿಕೆಯ ಮೇರೆಯಂತೆಯೇ ನಡೆಯುವ ನಿಮಗೆ ಬೇರೆಯವರಿಂದ ಎರವಲು ಪಡೆದ ಯಾವುದೇ ಕ್ರಮ ಇಷ್ಟವಾಗುವುದಿಲ್ಲ. ಇನ್ನು ಇವರು ಒಳ್ಳೆಯ ಪತ್ತೆದಾರರು ಮತ್ತು ಸತ್ಯವನ್ನು ಹೊರತೆಗೆಯುವ ಸಾಮರ್ಥ್ಯವನ್ನು ಹೊಂದಿರುವವರಾಗಿರುತ್ತಾರೆ. ಇವರಿಗೆ ಹೊಂದಿಕೆಯಾಗುವಂತಹ ಕೆಲಸವೆಂದರೆ ಕಾನೂನು ಸೇವೆ, ಇಂಜಿನಿಯರಿಂಗ್, ವಿಜ್ಞಾನ, ಶಿಕ್ಷಣ ಮತ್ತು ಕಾಮಗಾರಿ.

ಧನು
ಧಾರ್ಮಿಕ ಸಂಪ್ರದಾಯಗಳಲ್ಲಿ ಅನೇಕ ಅದೃಷ್ಟದ ಮೋಡಿಗಳನ್ನು ನೋಡಬಹುದು. ಈ ರಾಶಿಯವರು ಧಾಮಿಕ ಮತ್ತು ತೆರೆದ ಮನಸ್ಸಿನವರಾಗಿರುತ್ತಾರೆ. ಮೊಲದ ಪಾದದ ಚಿಹ್ನೆಗಳು ಈ ರಾಶಿಯವರಿಗೆ ಹೆಚ್ಚಿನ ಅದೃಷ್ಟವನ್ನು ತಂದುಕೊಡುತ್ತದೆ. ಈ ರಾಶಿಯ ಜನರು ಸದಾ ಧನಾತ್ಮಕ ಚಿಂತನೆ ನಡೆಸುವವರಾಗಿದ್ದು ಜೀವನದ ಚಿಕ್ಕ ಪುಟ್ಟ ತೊಂದರೆಗಳಿಗೆ ಇವರು ಕಿಂಚಿತ್ತೂ ಚಿಂತಿಸುವುದಿಲ್ಲ. ಯಾವುದೇ ಪರಿಸ್ಥಿತಿಗೆ ಒಳಗಾದರೂ ಇದರಿಂದ ಹೊರಬರಲು ಸತತ ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಬಾಲ್ಯದ ಗೆಳೆಯರು. ನಿಮ್ಮ ಬಾಲ್ಯದ ಗೆಳೆತನವನ್ನು ಇಡಿಯ ಜೀವಮಾನ ಕಾಪಾಡುವ ನಿಮಗೆ ಬಾಲ್ಯದ ನೆನಪುಗಳು ಅತಿಹೆಚ್ಚಿನ ಸಂತೋಷ ನೀಡುತ್ತದೆ.ಇವರಿಗೆ ಹೊಂದಾಣಿಕೆಯಾಗುವ ಕೆಲಸವೆಂದರೆ ಸಂಕಲನ, ಬರಹ, ಮಾರ್ಕೆಟಿಂಗ್, ಮನೋರಂಜನೆ, ಸೇನೆ ಮತ್ತು ಸಾರ್ವಜನಿಕ ಸಂಪರ್ಕ.

ಮಕರ
ನಾಲ್ಕೆಲಗವನ್ನು ನಂಬಿಕೆ, ಭರವಸೆ, ಪ್ರೀತಿ, ಆರೋಗ್ಯ, ಖ್ಯಾತಿ ಹಾಗೂ ಸಂಪತ್ತನ್ನು ಸೂಚಿಸುತ್ತದೆ ಎನ್ನಲಾಗುವುದು. ಮಕರ ರಾಶಿಯವರಿಗೆ ನಾಲ್ಕೆಲಗವು ಅತ್ಯಂತ ಅದೃಷ್ಟವನ್ನು ತರುವ ವಸ್ತು ಎಂದು ಹೇಳಲಾಗುತ್ತದೆ.ಈ ರಾಶಿಯ ಜನರು ವ್ಯವಹಾರ ಕುಶಲರಾಗಿದ್ದು ಕೆಲಸವನ್ನು ಹೇಗೆ ಮಾಡಿಸಿಕೊಳ್ಳಬೇಕು ಎಂದು ಗೊತ್ತಿರುವ ಜನರಾಗಿದ್ದಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ಸಿನೇಮಾ ವೀಕ್ಷಣೆ. ಸಿನೇಮಾ ಅಥವಾ ನೆಚ್ಚಿನ ಧಾರಾವಾಹಿಯಲ್ಲಿ ಸಂಪೂರ್ಣವಾಗಿ ಮುಳುಗುವ ನೀವು ಆ ಲೋಕದಲ್ಲಿಯೇ ಮುಳುಗಿಬಿಡುತ್ತೀರಿ. ಜೀವನದಲ್ಲಿ ಯಾವಾಗ ತೊಂದರೆ ಕಾಡಿತೋ ಆಗೆಲ್ಲಾ ಈ ಸಿನೆಮಾದಲ್ಲಿ ಎದುರಾದ ಸನ್ನಿವೇಶದಲ್ಲಿ ನಾಯಕ ಅನುಸರಿಸಿದ ನೀತಿಯನ್ನೇ ಅನುಸರಿಸಿ ಈ ತೊಂದರೆಯಿಂದ ಬಿಡುಗಡೆ ಪಡೆಯಲು ಯತ್ನಿಸುತ್ತೀರಿ. ಇವರಿಗೆ ಹೊಂದಿಕೆಯಾಗುವ ವೃತ್ತಿಯೆಂದರೆ ಕಲೆ, ವಿನ್ಯಾಸ, ವಾಸ್ತುಶಿಲ್ಪ, ನರ್ಸಿಂಗ್, ಕೃಷಿ ಮತ್ತು ಅಡುಗೆ.

ಕುಂಬ
ಕುಂಬರಾಶಿಯವರಿಗೆ ಕ್ರಿಕೆಟ್ಸ್ ಬಹಳ ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಪುರಾತನ ಕಾಲದಿಂದಲೂ ಇದನ್ನು ಅದೃಷ್ಟದ ಸಂಕೇತ ಎಂದು ನಂಬಲಾಗಿದೆ. ಇವರು ಮನೆಯಲ್ಲಿ, ಕೈಚೀಲದ ಮೇಲೆ ಅಥವಾ ಬೀರುಗಳ ಮೇಲೆ ಈ ಚಿಹ್ನೆಯನ್ನು ಹೊಂದಿದ್ದರೆ ಉತ್ತಮ ಅದೃಷ್ಟ ಒಲಿದು ಬರುವುದು.ಈ ರಾಶಿಯ ವ್ಯಕ್ತಿಗಳು ಮಾನವತಾವಾದಿಗಳಾಗಿದ್ದು ಸುತ್ತಮುತ್ತಲ ಜನರಲ್ಲಿ ನೋವು ಕಾಣಲು ಇಷ್ಟಪಡುವುದಿಲ್ಲ. ಇವರ ಕಷ್ಟಗಳಿಗೆ ಸ್ಪಂದಿಸುವ ನೀವು ಸದಾ ನಿಮ್ಮ ಕೈಲಾದ ಸಹಾಯವನ್ನು ಮಾಡಲು ಯತ್ನಿಸುತ್ತಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನೀರು. ನಿಮ್ಮ ಸುತ್ತ ಮುತ್ತ ನೀರು ಇದ್ದಾಗ ನೀವು ಸದಾ ಶಾಂತರಾಗಿ ಉದ್ವೇಗರಹಿತರಾಗಿರುತ್ತೀರಿ. ಇವರಿಗೆ ಹೊಂದಿಕೆಯಾಗುವ ವೃತ್ತಿಗಳೆಂದರೆ ಖಗೋಲಶಾಸ್ತ್ರ, ಫೋಟೋಗ್ರಾಫಿ, ವಾಯುಯಾನ ಮತ್ತು ಕಂಪ್ಯೂಟರ್ ತಂತ್ರಜ್ಞಾನ.

ಮೀನ
ಕನಸು ಕಾಣುವುದೇ ಇವರ ಅದೃಷ್ಟದ ಸಂಕೇತ. ಕೆಟ್ಟ ಕನಸುಗಳನ್ನು ವಿಶ್ಲೇಸಿಸುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಇವು ಕನಸು ಕಾಣುವುದರಿಂದಲೇ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಎನ್ನಲಾಗುವುದು. ಈ ರಾಶಿಯ ಜನರು ಸಹಾನುಭೂತಿ ತೋರುವ ವ್ಯಕ್ತಿಗಳಾಗಿದ್ದು ಜನರ ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಸಮಯ ವಿನಿಯೋಗಿಸುವುದರಲ್ಲಿಯೇ ಪರಿಪೂರ್ಣತೆಯನ್ನು ಅನುಭವಿಸುತ್ತಾರೆ. ಜನರನ್ನು ಅವರಿದ್ದ ಹಾಗೇ ಸ್ವೀಕರಿಸುವ ನಿಮ್ಮ ಪರಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ಸಂಗೀತ. ನಿಮ್ಮ ಮನೋಭಾವವನ್ನು ಉತ್ತಮಗೊಳಿಸಲು ಸಂಗೀತ ನಡೆಯುತ್ತಿದ್ದರೆ ಸಾಕಾಗುತ್ತದೆ. ಸಂಗೀತದ ಅಲೆ ಸುತ್ತ ತೇಲುತ್ತಿರುವಾಗ ನಿಮಗೆ ಹೊಸ ವಿಷಯಗಳು ಹೊಳೆಯುತ್ತವೆ ಹಾಗೂ ಹೆಚ್ಚು ಕ್ರಿಯಾತ್ಮಕರಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.ಇವರಿಗೆ ಹೊಂದಿಕೆಯಾಗುವ ವೃತ್ತಿಯೆಂದರೆ ಆರೋಗ್ಯ, ಆರೈಕೆ, ಸಾಮಾಜಿಕ ಕೆಲಸ ಮತ್ತು ಲೋಕೋಪಕಾರ.



Click it and Unblock the Notifications











