ರಾಜಸ್ಥಾನದ ಈ ಗ್ರಾಮದಲ್ಲಿ, ಮೊದಲು ಮಕ್ಕಳು, ಆಮೇಲೆ ಮದುವೆ!!

By Arshad
Subscribe to Boldsky

ಅವಿವಾಹಿತ ಜೋಡಿಯೊಂದು ಮುಂದಿನ ಜೀವನವನ್ನು ಜೊತೆಯಾಗಿ ಕಳೆಯುವ ನಿರ್ಧಾರ ಕೈಗೊಂಡಾಗ ಇಬ್ಬರೂ ಮುಂದಿನ ಜೀವನದ ಸಾಧಕ ಬಾಧಕಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಯಾವ ಸಮಾಜ ತಮ್ಮನ್ನು ಸ್ವೀಕರಿಸುತ್ತದೆ ಎಂಬುದರಿಂದ ಹಿಡಿದು ಇತರ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ.

ಇಂದು ಭಾರತದಂತಹ ವಿವಿಧ ಸಂಸ್ಕೃತಿಗಳ ದೇಶದಲ್ಲಿ ಯುವಜನತೆ ವೈವಾಹಿಕ ಸಂಬಂಧಕ್ಕೆ ಧುಮುಕುವ ಮುನ್ನ ಮುಂದಿನ ದಿನಗಳಲ್ಲಿ ತಮ್ಮ ಜೋಡಿ ಸಮರ್ಪಕವಾಗಬಹುದೇ ಎಂದು ಪ್ರಮಾಣಿಸಿ ನೋಡಿದ ಬಳಿಕವೇ ಮುಂದಡಿಯಿಡುವ ಪರಿಯನ್ನು ನಿಧಾನವಾಗಿ ಅನ್ವಯಿಸಿಕೊಳ್ಳುತ್ತಿದೆ. 

ಇಲ್ಲಿ ಗಂಡನ ತಮ್ಮನೊಂದಿಗೂ ಹಾಸಿಗೆ ಹಂಚಿಕೊಳ್ಳಬೇಕಂತೆ! ಎಲ್ಲಿದೆ ನ್ಯಾಯ?

ವಿವಾಹ ಬಂಧನದ ಹೊರತಾದ ಲಿವಿನ್ ಎಂಬ ಸಂಬಂಧದ ಮೂಲಕ ಕೆಲವು ತಿಂಗಳು ಜೊತೆಯಾಗಿದ್ದು ಈ ಸಂಬಂಧ ಮುಂದುವರೆಯಬಹುದು ಎಂದಾದರೆ ಮಾತ್ರವೇ ವಿವಾಹ ಬಂಧನಕ್ಕೆ ಒಳಗಾಗುವ, ಇಲ್ಲದಿದ್ದರೆ ಪರಸ್ಪರ ಬೈ ಹೇಳಿ ಬೇರೊಬ್ಬ ಸಂಗಾತಿಯನ್ನು ಹುಡುಕುವ ಪರಿ ಸಾಮಾನ್ಯವಾಗುತ್ತಿದೆ. ಆದರೆ ರಾಜಸ್ಥಾನದ ಈ ಗ್ರಾಮದಲ್ಲಿ ಈ ಪರಿಯ ಸಂಬಂಧ ತುಂಬಾ ಹಳೆಯದಾಗಿದ್ದು ಇಲ್ಲಿ ಜೋಡಿಯೊಂದಕ್ಕೆ ಪ್ರಥಮ ಮಗುವಾದ ಬಳಿಕವೇ ವಿವಾಹ ಮಾಡಿಸುವ ಸಂಪ್ರದಾಯವಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ.... 

ಇವರು ಗರಾಸಿಯಾ ಜನಾಂಗಕ್ಕೆ ಸೇರಿದ ಜನರು

ಇವರು ಗರಾಸಿಯಾ ಜನಾಂಗಕ್ಕೆ ಸೇರಿದ ಜನರು

ತಮ್ಮ ವಿಶಿಷ್ಟ ಸಂಪ್ರದಾಯದಿಂದಲೇ ಭಾರತದ ಸಂಸ್ಕೃತಿಯ ವೈವಿಧ್ಯದಲ್ಲಿ ಸ್ಥಾನ ಪಡೆದಿರುವ ಈ ಜನಾಂಗದಲ್ಲಿ ಯುವಜನತೆಗೆ ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವ ಸರ್ವ ಸ್ವಾತಂತ್ರ್ಯವನ್ನು ಒದಗಿಸಲಾಗಿದೆ. ಇವರು ವಿವಾಹ ಬಂಧನದ ಗೊಡವೆಯೇ ಇಲ್ಲದೇ ಜೊತೆಯಾಗಿರಬಹುದು, ಈ ಅವಧಿಯಲ್ಲಿ ಮಕ್ಕಳನ್ನೂ ಪಡೆಯಬಹುದು.

ಇಲ್ಲಿ ಮಹಿಳೆಗೆ ಹೆಚ್ಚಿನ ಅಧಿಕಾರವಿದೆ

ಇಲ್ಲಿ ಮಹಿಳೆಗೆ ಹೆಚ್ಚಿನ ಅಧಿಕಾರವಿದೆ

ಈ ಸಮಾಜದಲ್ಲಿ ಮಹಿಳಾ ಪ್ರಾತಿನಿಧ್ಯವಿದ್ದು ಇವರಿಗೆ ಹೆಚ್ಚಿನ ಸ್ಥಾನಮಾನವನ್ನು ನೀಡಲಾಗುತ್ತದೆ. ಈ ಸಮಾಜದಲ್ಲಿ ಅತ್ಯಾಚಾರ ಅಥವಾ ವರದಕ್ಷಿಣೆಯ ಪ್ರಕರಣಗಳು ಇಲ್ಲವೇ ಇಲ್ಲವೆನ್ನಬಹುದು. ಕೃಷಿಯನ್ನೇ ಆಧರಿಸಿದ ಈ ಜನಾಂಗದಲ್ಲಿ ಮೊದಲ ಆದ್ಯತೆ ಈ ಜೋಡಿ ವಿವಾಹವಾಗಬೇಕಾದರೆ ಇವರು ಅವಲಂಬಿಸಿರುವ ಕೃಷಿ ಕುಟುಂಬ ನಿರ್ವಹಣೆಗೆ ಸಾಲುತ್ತದೆಯೇ ಎಂಬುದನ್ನೇ ಪ್ರಮುಖವಾಗಿ ಆಧರಿಸುತ್ತದೆ. ಅಂದರೆ ಕುಟುಂಬ ನಿರ್ವಹಣೆಗೆ ಸಾಕಷ್ಟು ಆದಾಯ ಜಮಾ ಆದ ಬಳಿಕವೇ ಮದುವೆಯ ವಿಚಾರ.

ಇವರ ಬಗ್ಗೆ ತಿಳಿದುಬಂದಿದ್ದು ಹೇಗೆ?

ಇವರ ಬಗ್ಗೆ ತಿಳಿದುಬಂದಿದ್ದು ಹೇಗೆ?

ಎಪ್ಪತ್ತು ವರ್ಷದ ನಾನಿಯಾ ಗಾರಾಸಿಯಾ ಎಂಬ ವೃದ್ಧೆಯೊಬ್ಬರ ಮದುವೆಯ ಬಗ್ಗೆ ವಿವರಗಳು ಪ್ರಕಟವಾದ ಬಳಿಕವೇ ಇವರು ಹೆಚ್ಚೂ ಕಡಿಮೆ ಜೀವನಪರ್ಯಂತ ಕಾಳಿ ಎಂಬ ಪುರುಷರೊಂದಿಗೆ ಲಿವಿನ್ ಸಂಬಂಧದಲ್ಲಿದ್ದುದು ಹೊರಜಗತ್ತಿಗೆ ತಿಳಿದುಬಂದಿದೆ. ಆದರೆ ಈ ಜೋಡಿಗೆ ಈಗಾಗಲೇ ಮೂವರು ಗಂಡುಮಕ್ಕಳಿದ್ದು ಈ ಮೂವರು ಗಂಡು ಮಕ್ಕಳೂ ಒಂದೇ ದಿನ ಒಂದೇ ಮಂಟಪದಲ್ಲಿ ಮದುವೆಯಾಗಿದ್ದುದು ಇನ್ನೊಂದು ವಿಶೇಷ.

ವಿವಾಹವಾಗದಿದ್ದರೂ ಇವರು ಬದ್ಧತೆ ಅನುಸರಿಸುತ್ತಾರೆ

ವಿವಾಹವಾಗದಿದ್ದರೂ ಇವರು ಬದ್ಧತೆ ಅನುಸರಿಸುತ್ತಾರೆ

ಈ ಜೋಡಿಗಳು ಪರಸ್ಪರರಿಗೆ ಬದ್ಧರಾಗಿದ್ದು ಮದುವೆಯಾಗಿಲ್ಲ ಎಂಬ ಒಂದೇ ಕಾರಣವನ್ನು ಬಿಟ್ಟರೆ ಉಳಿದಂತೆ ಜಗತ್ತಿನ ಬೇರೆಲ್ಲಾ ಗಂಡಹೆಂಡಿರಂತೆಯೇ ಕಾಲ ಕಳೆಯುತ್ತಾರೆ. ಇವರಿಗೆ ಜೀವನ ನಿರ್ವಹಣೆಗೆ ಸಾಕಷ್ಟು ಹಣ ಜಮಾ ಆಗುವುದೇ ವಿವಾಹವಾಗುವ ಅರ್ಹತೆಯಾಗಿದ್ದು ಅದುವರೆಗೆ ಜೊತೆಯಾಗಿಯೇ ಸಂಸಾರ ನಡೆಸಿ ಮಕ್ಕಳನ್ನೂ ಪಡೆಯಬಹುದು

ಇನ್ನೊಂದು ವಿಚಿತ್ರ ಸಂಪ್ರದಾಯ

ಇನ್ನೊಂದು ವಿಚಿತ್ರ ಸಂಪ್ರದಾಯ

ಈ ಜನಾಂಗದ ಇನ್ನೊಂದು ವಿಚಿತ್ರ ಸಂಪ್ರದಾಯವೆಂದರೆ ಇನ್ನೂ ಹದಿಹರೆಯದಲ್ಲಿರುವ ಹೆಣ್ಣು ಮಕ್ಕಳನ್ನು ತಮಗೆ ಇಷ್ಟವೆನಿಸಿದ ಹದಿಹರೆಯದ ಯುವಕರನ್ನು ಆಯ್ದುಕೊಳ್ಳಲು ಎರಡು ದಿನಗಳ ಮೇಳವೊಂದನ್ನು ಆಯೋಜಿಸಲಾಗುತ್ತದೆ. ರಾಜಸ್ಥಾನ ಮತ್ತು ಗುಜರಾತ್ ರಾಜ್ಯದ ಕೆಲವು ಆಯ್ದ ಸ್ಥಳಗಳಲ್ಲಿ ಈ ಮೇಳ ನಡೆಯುತ್ತದೆ.

ಇನ್ನೊಂದು ವಿಚಿತ್ರ ಸಂಪ್ರದಾಯ

ಇನ್ನೊಂದು ವಿಚಿತ್ರ ಸಂಪ್ರದಾಯ

ಎರಡು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಈ ಜನಾಂಗಕ್ಕೆ ಸೇರಿದ ಎಲ್ಲಾ ಜನರು ತಮ್ಮ ತಮ್ಮ ಯುವ ಮಕ್ಕಳನ್ನು ಕರೆತರುತ್ತಾರೆ ಹಾಗೂ ಅಲ್ಲಿಯೇ ಬಿಟ್ಟು ಹಿರಿಯರೆಲ್ಲಾ ಹಿಂದಿರುಗುತ್ತಾರೆ. ಯುವಜನತೆ ತಮಗೆ ಇಷ್ಟವಾದ ವ್ಯಕ್ತಿಯನ್ನು ಆರಿಸಿಕೊಂಡು ತಮ್ಮ ಕುಟುಂಬಗಳಿಗೆ ಹಿಂದಿರುಗುತ್ತಾರೆ. ಬಳಿಕ ಈ ಜೋಡಿ ವಿವಾಹದ ಬಂಧನವಿಲ್ಲದೇ ಮುಂದಿನ ದಿನಗಳನ್ನು ಗಂಡಹೆಂಡಿರಂತೆಯೇ ಜೊತೆಯಾಗಿ ಕಳೆಯುತ್ತಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಅಭಿಪ್ರಾಯ ತಿಳಿಸಿ

ಈ ಬಗ್ಗೆ ತಮಗೇನಿನಿಸಿ ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆಯುವ ಮೂಲಕ ನಮಗೆ ಖಂಡಿತಾ ತಿಳಿಸಿ

For Quick Alerts
ALLOW NOTIFICATIONS
For Daily Alerts

    English summary

    Live-in Relationships Is A “No Big Deal” In This Indian Village!

    This is a village from Rajasthan, where people make babies first and then get married, when they think that they can take up the responsibility of having a family! Check out more on this awesome Indian village!
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more