Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಜೀವನದ ಯಶಸ್ಸಿನ ಮೆಟ್ಟಿಲೇರಲು ರತನ್ ಟಾಟಾ ಅವರ ಮಾರ್ಗದರ್ಶನ ಅರಿಯಿರಿ
ಜೀವನದಲ್ಲಿ ಯಶಸ್ಸು ಎನ್ನುವುದು ಕೇವಲ ಒಂದು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬರುವುದಿಲ್ಲ. ಯಶಸ್ಸು ಎನ್ನುವ ತುದಿಯನ್ನು ಮುಟ್ಟಬೇಕಾದರೆ ಸಾಕಷ್ಟು ಶ್ರಮ ಮತ್ತು ಶ್ರದ್ಧೆ ಇರಬೇಕು. ಇದರೊಟ್ಟಿಗೆ ಜೀವನದಲ್ಲಿ ಆಗಾಗ ಬರುವ ಅನೇಕ ಅಡೆತಡೆಗಳನ್ನು ದಾಟಬೇಕಾಗುತ್ತದೆ. ಅಡೆ ತಡೆಗಳು ಬಂದಾಗ ನಮ್ಮ ಗುರಿ ಹಾಗೂ ಉದ್ದೇಶಗಳನ್ನು ಮರೆಯಬಾರದು. ಅದರ ಕುರಿತಾಗಿಯೇ ಸುದೀರ್ಘವಾಗಿ ಶ್ರಮಪಡಬೇಕಾಗುತ್ತದೆ.
ಭಾರತದ ಯಶಸ್ವಿ ಉದ್ಯಮಿ ಎಂದು ಹೆಸರಾದವರು ರತನ್ ಟಾಟಾ. ಇವರು ತನ್ನ ಸ್ವಂತ ಶ್ರಮ ಹಾಗೂ ಯಶಸ್ಸಿನ ಹಾದಿಯ ಬಗ್ಗೆ ವಿವರಿಸಿದ್ದಾರೆ. ನಾವು ನಮ್ಮ ಯಶಸ್ಸನ್ನು ಸಾಧಿಸಬೇಕಾದರೆ ಯಾವೆಲ್ಲಾ ಪ್ರಯತ್ನವನ್ನು ಕೈಗೊಳ್ಳಬೇಕು? ಎನ್ನುವುದನ್ನು ತಿಳಿಯಬೇಕು. ಇದಕ್ಕೆ ಬೇಕಾದ ತಯಾರಿ ಮತ್ತು ಮಾರ್ಗದರ್ಶನ ಹೇಗಿರಬೇಕು ಎನ್ನುವುದನ್ನು ಟಾಟಾ ಅವರು ತಿಳಿಸಿಕೊಟ್ಟಿದ್ದಾರೆ. ಹಾಗಿದ್ದ ಮೇಲೆ ನೀವು ಇನ್ನೇಕೆ ತಡ ಮಾಡುತ್ತಿದ್ದೀರಿ? ಲೇಖನದ ಮುಂದಿನ ಭಾಗದಲ್ಲಿ ವಿವರಿಸಲಾದ ಯಶಸ್ಸಿನ ಪಥಗಳ ಬಗ್ಗೆ ಅರಿಯಿರಿ, ನಿಮ್ಮ ಯಶಸ್ಸನ್ನು ಸಾಧಿಸಲು ಸಿದ್ಧರಾಗಿ...

ನಿಮ್ಮ ಬಲವನ್ನು ನೀವು ಅರಿಯಿರಿ
ನಮ್ಮ ಶಕ್ತಿ ಏನು ಎನ್ನುವುದನ್ನು ನಾವು ಮೊದಲು ಅರಿಯಬೇಕು. ಅದರ ಆಧಾರದ ಮೇಲೆಯೇ ನಾವು ಅವಕಾಶಗಳು ಹಾಗೂ ಸವಾಲುಗಳನ್ನು ಸ್ವೀಕರಿಸಲು ಸಾಧ್ಯ ಎನ್ನುತ್ತಾರೆ ರತನ್ ಟಾಟಾ. ನಮ್ಮನ್ನು ನಾವೇ ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂದಾದರೆ ಬೇರೆಯವರು ಹೇಗೆ ಅರ್ಥಮಾಡಿಕೊಳ್ಳಲು ಸಾಧ್ಯ? ಹಾಗಾಗಿ ಮೊದಲು ನಿಮ್ಮ ಅರ್ಹತೆ ಮತ್ತು ಷರತ್ತುಗಳನ್ನು ತಿಳಿಯಿರಿ. ನಂತರ ನಿಮ್ಮ ಸುತ್ತಲಿರುವ ಅವಕಾಶಗಳನ್ನು ಪೂರ್ಣವಾಗಿ ಬಳಕೆಮಾಡಿಕೊಳ್ಳಿ. ಆಗ
ಯಶಸ್ಸು ಕಂಡಿತ ನಿಮ್ಮ ಬೆನ್ನೇರುತ್ತದೆ.

ನಿಮ್ಮನ್ನು ನೀವು ನಂಬಿ
ಯಾವುದೇ ವಿಷಯವನ್ನು ತೆಗೆದುಕೊಂಡರೂ ಮೊದಲು ನಾವೇನು ಎನ್ನುವುದನ್ನು ಮೊದಲು ಅರಿಯಬೇಕು. ಸತ್ಯವನ್ನು ನಾವು ಸ್ವೀಕರಿಸಲು ಸಿದ್ಧರಾಗಿದ್ದೇವೆ ಎಂದರೆ ನಮ್ಮ ನಾವು ಅರಿಯಲು ಸಾಧ್ಯ. ದಿನನಿತ್ಯದ ಸವಾಲು ಹಾಗೂ ಸನ್ನಿವೇಶವನ್ನು ಎದುರಿಸಲು ಸಿದ್ಧರಾಗಿರಬೇಕು. ಕೆಲವೊಮ್ಮೆ ನಿಮ್ಮ ಸ್ವಂತ ನಂಬಿಕೆಯಿಂದ ಮಾತ್ರ ಜೀವನದಲ್ಲಿ ಮುಂದೆ ಸಾಗಲು ಸಾಧ್ಯವಿಲ್ಲ. ನಿಮ್ಮೆಡೆಗೆ ಗಮನವನ್ನು ಕೇಂದ್ರಿಕರಿಸುವಂತೆ ಮಾಡಿ.

ಮಾನವೀಯತೆಯನ್ನು ಮರೆಯದಿರಿ
ಜನಪ್ರಿಯತೆ, ವ್ಯವಹಾರ ಮತ್ತು ಸಂಪತ್ತನ್ನು ಗುರುತಿಸಬೇಕೆಂದರೆ ಮೊದಲು ಮಾನವೀಯತೆಯಿಂದ ವರ್ತಿಸುವುದನ್ನು ಅರಿಯಬೇಕು. ಆಗಲೇ ನೀವು ಅತ್ಯಂತ ವಿನಮ್ರ ವ್ಯಕ್ತಿಗಳಾಗುತ್ತೀರಿ. ಜೊತೆಗೆ ಸುತ್ತಲಿನ ವ್ಯಕ್ತಿಗಳು ನಿಮ್ಮನ್ನು ಗೌರವಿಸುತ್ತಾರೆ. ವಿನಮ್ರತೆ ಎನ್ನುವುದು ಕೇವಲ ಗೌರವ ಸಾಧಿಸಲು
ಸೀಮಿತವಲ್ಲ, ನಿಮ್ಮ ಯಶಸ್ಸಿಗೂ ಪ್ರಮುಖ ಕಾರಣವಾಗಿರುತ್ತದೆ.

ದೊಡ್ಡದು ಮತ್ತು ಚಿಕ್ಕ ಕೆಲಸ ಎಂದು ತಿಳಿಯಬೇಡಿ
ಕೆಲಸದಲ್ಲಿ ಯಾವುದೂ ದೊಡ್ಡದು ಮತ್ತು ಚಿಕ್ಕದು ಎನ್ನುವ ತಾರತಮ್ಯ ವಿಲ್ಲ. ಎಲ್ಲಾ ಕೆಲಸವೂ ಶ್ರೇಷ್ಠವಾದ್ದೇ. ಯಾವುದೇ ಕೆಲಸವನ್ನಾದರೂ ನಾವು ಹೃದಯಪೂರ್ವಕವಾಗಿ ಸ್ವೀಕರಿಸಬೇಕು. ಆ ಕೆಲಸ ಪೂರ್ಣಗೊಳಿಸಲು ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಜೀವನದಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ. ಅವುಗಳನ್ನು ನೋಡಿ ನಾವು ಓಡಿಹೋಗಬಾರದು. ಅದನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯ ನಮಗಿರಬೇಕು.

ದೊಡ್ಡ ಗುರಿ
ಜೀವನದಲ್ಲಿ ಯಾವಾಗಲೂ ದೊಡ್ಡ ಗುರಿಯನ್ನು ಹೊಂದಿರಬೇಕು. ಆಗಲೇ ನಮ್ಮ ಸಾಧನೆ ಸಾರ್ಥಕವಾಗುತ್ತದೆ. ಉದಾ: ಕಬ್ಬಿಣ ಎನ್ನುವುದು ಬಹಳ ಗಟ್ಟಿಯಾದ ವಸ್ತು. ಇದನ್ನು ಯಾರೂ ಹಾಳು ಮಾಡಲು ಸಾಧ್ಯವಿಲ್ಲ. ಆದರೆ ಅದರಿಮದಲೇ ಬರುವ ತುಕ್ಕಿನಿಂದಾಗಿ ಹಾಳಾಗುತ್ತದೆ. ಹಾಗೆಯೇ ನಾವು ಸಹ. ನಾವು ಎಂದಿಗೂ ಕೆಳಕ್ಕೆ ಬೀಳಲು ಸಾಧ್ಯವಿಲ್ಲ. ನಮ್ಮ ಮನಸ್ಥಿತಿಯಿಂದಲೇ ನಾವು ಹಾಳಾಗುತ್ತೇವೆ.

ನಿತ್ಯವೂ ಹೊಸದನ್ನು ಮಾಡಿ
ನಿತ್ಯವೂ ಹೊಸದನ್ನು ಮಾಡಲು ಪ್ರಯತ್ನಿಸಬೇಕು. ಆಗಲೇ ಹೊಸ ತಿರುವುಗಳು ನಮ್ಮೆದು ನಿಲ್ಲುತ್ತವೆ. ಹೊಸದನ್ನು ಸಾಧಿಸಿರುತ್ತೇವೆ. ಅದೇ ನಾನು ಈ ದಿನ ತುಂಬಾ ದೂರ ಹಾರಲು ಸಾಧ್ಯವಿಲ್ಲ ಎಂದುಕೊಂಡರೆ ಬೇಸರ ಹಾಗೂ ದುರಾದೃಷ್ಟ ನಮ್ಮ ಮುಂದೆ ನಿಲ್ಲುತ್ತದೆ. ನಿತ್ಯವೂ ನಾವು ಮುಂದುವರಿಯುತ್ತಾ ಸಾಗಿದರೆ ಮಾತ್ರ ಗುರಿಗೆ ಬಹಳ ಹತ್ತಿರವಾತ್ತೇವೆ. ಜೊತೆಗೆ ಎಷ್ಟು ದೂರ ಸಾಗಿ ಬಂದಿದ್ದೇವೆ ಎನ್ನುವುದು ಅರ್ಥವಾಗುತ್ತದೆ.

ನಂಬಿಕೆಯನ್ನು ಬೆಳೆಸಿಕೊಳ್ಳಿ
ನಂಬಿಕೆ ಎನ್ನುವುದೇ ನಮ್ಮ ಜೀವನದ ಮುಖ್ಯ ಅಂಶ ಎಂದು ಟಾಟಾಅವರು ಹೇಳುತ್ತಾರೆ. ನಂಬಿಕೆ ಎನ್ನುವುದು ಅಮೂಲ್ಯವಾದದ್ದು ಮತ್ತು ಶಾಶ್ವತವಾದ ಸ್ವತ್ತು ಎಂದು ಹೇಳಬಹುದು. ನಾವು ಕೆಲಸ ಮಾಡುವ ವ್ಯಕ್ತಿಗಳೊಂದಿಗೆ ನಂಬಿಕೆ ಇರಿಸಿಕೊಳ್ಳುವುದು ಬಹಳ ಪ್ರಮುಖವಾದದ್ದು." ನೀವು ಉದ್ಯಮಿಯಾಗಿದ್ದರೆ ಮೊದಲು ನಿಮ್ಮ ಗ್ರಾಹಕರ ವಿಶ್ವಾಸಸವನ್ನು ಪಡೆದುಕೊಳ್ಳಿ"ಅದೇ ನಿಮ್ಮ ಯಶಸ್ಸಿಗೆ ಹತ್ತಿರವಾಗುತ್ತದೆ.

ಶ್ರಮಪಡಬೇಕು
ನಮ್ಮ ಜೀವನದಲ್ಲಿ ಹೊಸದನ್ನು ಸಾಧಿಸಬೇಕು ಎಂದರೆ ಬಹಳಷ್ಟು ಶ್ರಮವಹಿಸಬೇಕು. ಜೀವನದಲ್ಲಿ ಏನಾದರೂ ಸಾಧನೆಯನ್ನು ಮಾಡಬೇಕೆಂದರೆ ಮೊದಲು ಗುಂಪಿನಿಂದ ಪ್ರತ್ಯೇಕವಾದ ಮಾರ್ಗವನ್ನು ಕಂಡುಕೊಳ್ಳಿ. ಪ್ರತಿಯೊಬ್ಬ ವ್ಯಕ್ತಿಯು ತನ್ನ ವಿಶೇಷತೆಯನ್ನು ಗುರುತಿಸಿ ಅದನ್ನು ಆಕರ್ಷಿಸುವಂತೆ ಮಾಡಲು ಆತನೇ ಹೆಚ್ಚು ಶ್ರಮ ಪಡಬೇಕಾಗುವುದು.



Click it and Unblock the Notifications