ಯಾವ ರಾಶಿಗೆ ಯಾವ ಬಣ್ಣ ಅದೃಷ್ಟ-ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್‌

By Manu
Subscribe to Boldsky

ಹೊಸ ವಾಹನ, ಮನೆಯ ಬಣ್ಣ, ಉಡುಗೆಯ ಬಣ್ಣಗಳು ನಮ್ಮ ರಾಶಿಚಕ್ರದ ಬಣ್ಣಗಳಾಗಿದ್ದರೆ ಅವು ನಮಗೆ ಅದೃಷ್ಟವನ್ನು ತರುತ್ತವೆ. ಸಂಖ್ಯೆಗಳು ಹೇಗೆ ನಮ್ಮ ಅದೃಷ್ಟವನ್ನು ನಿರ್ಧರಿಸುತ್ತವೆಯೋ ಅದೇ ರೀತಿ ಬಣ್ಣಗಳು ಸಹ ನಮ್ಮ ಅದೃಷ್ಟವನ್ನು ಬದಲಾಯಿಸುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ವಿವರಿಸುತ್ತದೆ. ಈ ವಿಚಾರ ನಿಮಗೆ ಆಶ್ಚರ್ಯವನ್ನುಂಟು ಮಾಡಿದರೂ ಇದು ಸತ್ಯ. ಇದರಲ್ಲಿ ಯಾವುದೇ ಸಂಶಯವಿಲ್ಲ.

ರಾಶಿಫಲದ ಪ್ರಕಾರ ದೇವರನ್ನು ಪೂಜಿಸಿ, ಸಂತೃಪ್ತಿ ಪಡೆಯಿರಿ

ಅದೃಷ್ಟ ಬಣ್ಣದ ದಾರ ಕೈಗೆ ಕಟ್ಟಿಕೊಳ್ಳುವುದರಿಂದ ಅಥವಾ ಬಟ್ಟೆ ತೊಡುವುದರಿಂದ ನಕಾರಾತ್ಮಕ ಶಕ್ತಿಯು ನಮ್ಮೆಡೆಗೆ ಸುಳಿಯದು. ಧನಾತ್ಮಕ ಗುಣಗಳು ಹಾಗೂ ಅದೃಷ್ಟಗಳು ನಾವು ಕೈಗೆತ್ತಿಕೊಂಡ ವ್ಯವಹಾರ ಮತ್ತು ಕೆಲಸಗಳು ಹೂವೆತ್ತಿದಷ್ಟು ಸುಲಭವಾಗುವುದು. ಇಂತಹ ಸುಲಭ ಉಪಾಯದಿಂದ ಒಳ್ಳೆಯದಾಗುತ್ತದೆ ಎಂದು ಖುಷಿ ಪಡುವ ಮೊದಲು ನಿಮ್ಮ ರಾಶಿಗೆ ಯಾವ ಬಣ್ಣ ಅದೃಷ್ಟ ತರುತ್ತವೆ ಎನ್ನುವುದನ್ನು ತಿಳಿಯಲು ಮುಂದೆ ಓದಿ...

ಮೇಷ

ಮೇಷ

ರಾಶಿ ಚಕ್ರಗಳಲ್ಲಿ ಮೊದಲನೇ ರಾಶಿ ಚಕ್ರ ಮೇಷ. ಇದಕ್ಕೆ ಅದೃಷ್ಟ ಬಣ್ಣವೆಂದರೆ ಕೆಂಪು. ಕೆಂಪು ಪ್ರೀತಿ, ಶಕ್ತಿ ಹಾಗೂ ಫಲವಂತಿಕೆಯನ್ನು ಸೂಚಿಸುತ್ತದೆ. ಈ ರಾಶಿ ಚಕ್ರದವರು ಈ ಬಣ್ಣವನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚುವರಿ ಧೈರ್ಯ ಹಾಗೂ ಅದೃಷ್ಟ ಒಲಿಯುವುದು.

 ವೃಷಭ

ವೃಷಭ

ಇವರಿಗೆ ಹಚ್ಚ ಹಸಿರು ಬಣ್ಣ ಶುಭಕೋರುತ್ತದೆ. ಕೆಲವೊಮ್ಮೆ ತಿಳಿ ನೀಲಿ ಬಣ್ಣವೂ ಸಹ ಇವರಿಗೆ ಅದೃಷ್ಟವನ್ನು ತಂದುಕೊಡುತ್ತದೆ ಎನ್ನಲಾಗುವುದು.

ಮಿಥುನ

ಮಿಥುನ

ಈ ರಾಶಿಯವರಿಗೆ ಅದೃಷ್ಟ ತರುವ ಬಣ್ಣ ಹಳದಿ. ಈ ಬಣ್ಣ, ಚುರುಕುತನ, ಬುದ್ಧಿಶಕ್ತಿ ಮತ್ತು ಸ್ಫೂರ್ತಿದಾಯಕ ಚಿಂತನೆಯನ್ನು ವ್ಯಕ್ತಪಡಿಸುತ್ತದೆ. ಅದೃಷ್ಟಗಳಿಂದ ವಂಚಿತರಾದಾಗ ಈ ಬಣ್ಣವನ್ನು ಆಯ್ಕೆ ಮಾಡಿಕೊಂಡರೆ ನಿಮ್ಮಲ್ಲಿ ಆಶಾದಾಯಕ ಭಾವನೆಯನ್ನು ಹೆಚ್ಚಿಸಿ, ಕೆಲಸಗಳು ಕೈಗೂಡುವಂತೆ ಮಾಡುತ್ತದೆ.

ಅಪ್ರಾಮಾಣಿಕ ಜನರ, ರಾಶಿ ಭವಿಷ್ಯದಲ್ಲೂ ಮೋಸದ ಗುಣವಿದೆ!

ಕರ್ಕ

ಕರ್ಕ

ಕರ್ಕ ರಾಶಿಯವರ ಅದೃಷ್ಟ ಬಣ್ಣವೆಂದರೆ ಶ್ವೇತವರ್ಣ. ಅದೃಷ್ಟವನ್ನು ತಂದುಕೊಡುವ ಬಿಳಿ ಬಣ್ಣ ಚಂದ್ರನನ್ನು ಪ್ರತಿಬಿಂಬಿಸುತ್ತದೆ. ಸೂಕ್ಷ್ಮ ಮತ್ತು ಭಾವನಾತ್ಮಕ ಗುಣವನ್ನು ವ್ಯಕ್ತಪಡಿಸುವ ಈ ಬಣ್ಣ ಒಳ್ಳೆಯ ಅದೃಷ್ಟವನ್ನು ನೀಡುತ್ತದೆ.

ಸಿಂಹ

ಸಿಂಹ

ಈ ರಾಶಿ ಚಕ್ರದ ಚಿಹ್ನೆಯನ್ನು ಸೂರ್ಯನ ರಾಜ ಎಂದು ಕರೆಯಲಾಗುತ್ತದೆ. ಈ ರಾಶಿಯ ಅದೃಷ್ಟ ಬಣ್ಣ ಚಿನ್ನ ಮತ್ತು ಕಿತ್ತಳೆ ಹಳದಿ. ಈ ಬಣ್ಣವು ಸಿಂಹ ರಾಶಿಯವರಿಗೆ ಉತ್ತಮ ಅದೃಷ್ಟ ತಂದು ಕೊಡುವುದು.

ಕನ್ಯಾ

ಕನ್ಯಾ

ಕನ್ಯಾರಾಶಿಯ ಅದೃಷ್ಟ ಬಣ್ಣಗಳು ಕಂದು ಬಣ್ಣ, ಹಸಿರು ಮತ್ತು ಗಾಢ ನೀಲಿ ಎಂದು ಹೇಳಲಾಗುತ್ತದೆ. ಈ ಬಣ್ಣವು ರಾಶಿ ಚಕ್ರದವರಿಗೆ ಆತ್ಮವಿಶ್ವಾಸವನ್ನು ತುಂಬುತ್ತದೆ. ಅಲ್ಲದೆ ನರಗಳು ಸ್ಥಿರವಾಗಿ ಇರುವಂತೆ ಮಾಡುತ್ತದೆ.

ತುಲಾ

ತುಲಾ

ತುಲಾ ರಾಶಿಯವರ ಅದೃಷ್ಟ ಬಣ್ಣ ಗುಲಾಬಿ, ತಿಳಿ ನಿಂಬೆ ಹಳದಿ ಮತ್ತು ಕೆಂಪು ಬಣ್ಣ. ಈ ರಾಶಿಗೆ ಶುಕ್ರ ಗ್ರಹವು ಹೆಚ್ಚು ಸಹಕಾರಿಯಾಗಿರುವುದರಿಂದ, ನಿಂಬೆ ಹಳದಿಯು ಅದೃಷ್ಟವನ್ನು ತಂದು ಕೊಡುವುದು.

ವೃಶ್ಚಿಕ

ವೃಶ್ಚಿಕ

ಈ ರಾಶಿ ಚಕ್ರದವರಿಗೆ ಶರತ್ಕಾಲದ ಹಣ್ಣಿನ ಬಣ್ಣವನ್ನು ಪ್ರತಿಬಿಂಬಿಸಲಾಗುತ್ತದೆ. ಗಾಢ ಕೆಂಪು ಬಣ್ಣವು ಹೆಚ್ಚು ಅದೃಷ್ಟವನ್ನು ತಂದು ಕೊಡುವುದು.

ಧನು

ಧನು

ಇವರಿಗೆ ಕೆನ್ನೇರಳೆ ಅಥವಾ ಗಾಢ ನೀಲಿ ಬಣ್ಣವು ಹೆಚ್ಚು ಅದೃಷ್ಟವನ್ನು ತರುವುದು. ಈ ಬಣ್ಣಗಳಿಂದ ವಿಶ್ವಾಸ, ಶಾಂತ ಮನೋಭಾವಗಳನ್ನು ಹುಟ್ಟಿಸುತ್ತದೆ ಎಂದು ಹೇಳಲಾಗುತ್ತದೆ.

ಮಕರ

ಮಕರ

ಈ ರಾಶಿಯವರಿಗೆ ಶನಿ ಗ್ರಹವು ಹೆಚ್ಚು ಮಿತ್ರತ್ವದಲ್ಲಿರುವುದರಿಂದ ಕಡು ಕಂದು, ಗಾಢ ಬೂದು ಮತ್ತು ಕಪ್ಪು ಬಣ್ಣವು ಹೆಚ್ಚು ಅದೃಷ್ಟ ತಂದು ಕೊಡುವುದು.

ಕುಂಬ

ಕುಂಬ

ಇವರಿಗೆ ಆಕಾಶ ನೀಲಿ ಅಥವಾ ತಿಳಿನೀಲಿ ಬಣ್ಣ ಅದೃಷ್ಟದ ಬಣ್ಣ ಎನ್ನಲಾಗುವುದು. ಇದು ಪ್ರಗತಿ ಶೀಲ ಮಾನವೀಯತೆಯ ಗುಣ, ವಿಶಿಷ್ಟವಾದ ಆಕರ್ಷಣೆಯನ್ನು ತಂದು ಒಡ್ಡುತ್ತದೆ.

ಮೀನ

ಮೀನ

ಈ ರಾಶಿಯವರಿಗೆ ನೇರಳೆ ಬಣ್ಣವು ಹೆಚ್ಚು ಅದೃಷ್ಟವನ್ನು ತಂದು ಕೊಡುತ್ತದೆ. ಆದರೆ ಕೆಲವು ಸಮಯದಲ್ಲಿ ಸಮುದ್ರ ಹಸಿರು, ಬಿಳಿ ಮತ್ತು ಲ್ಯಾವೆಂಡರ್ ಬಣ್ಣಗಳು ಅದೃಷ್ಟವನ್ನು ತರುತ್ತವೆ.

For Quick Alerts
ALLOW NOTIFICATIONS
For Daily Alerts

    English summary

    Know Your Lucky Colours According To Your Zodiac

    Do you know that there are different colours that define your zodiac sign? These are the colours that can turn lucky for you. Apart from learning about the different lucky numbers, it is important to know the fact about various colours and their importance based on the zodiac signs.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more