ಅಂದು ಕೋಟಿ-ಕೋಟಿ ಹಣ ಪಡೆದವರು ಈಗ ಏನು ಮಾಡುತ್ತಿದ್ದಾರೆ?

Posted By: Divya Pandith
Subscribe to Boldsky

ಒಂದು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಶ್ರೀಮಂತರಾಗುತ್ತಾರೆ ಎನ್ನುವುದನ್ನು ಸಾಮಾನ್ಯವಾಗಿ ಮಕ್ಕಳ ಕಥೆಯಲ್ಲಿ ಕೇಳಿರುತ್ತೇವೆ. ಕಲವೊಮ್ಮೆ ಕಥೆಯಂತೆಯೇ ನಿಜ ಜೀವನದಲ್ಲೂ ವಿಸ್ಮಯಗಳು ಸಂಭವಿಸುತ್ತದೆ ಎನ್ನುವುದನ್ನು ಟಿವಿ ಚಾನೆಲ್ ಒಂದು ತೋರಿಸಿಕೊಟ್ಟಿತು. ಅದೇ "ಹೂ ವಾಂಟ್ಸ್ ಟು ಬಿ ಮಿಲಿಯನೇರ್" ಎನ್ನುವ ಕಾರ್ಯಕ್ರಮ. ಇಂಗ್ಲಿಷ್ ಚಾನೆಲ್ ಒಂದರಲ್ಲಿ ಪ್ರಸಾರವಾದ ಈ ಕಾರ್ಯಕ್ರಮ ಪ್ರಪಂಚದಾದ್ಯಂತ ಬಹಳ ಜನಪ್ರಿಯಗೊಂಡಿತು. ನಂತರ ನಮ್ಮ ಹಿಂದಿ ವಾಹಿನಿಯೊಂದರಲ್ಲಿ "ಕೌನ್ ಬನೇಗಾ ಕರೋಡ್ ಪತಿ" ಎಂದು ಪ್ರಾರಂಭಿಸಿದರು.

ಸಾಮಾನ್ಯ ಜ್ಞಾನ ಹಾಗೂ ಬುದ್ಧಿವಂತಿಕೆಯಿಂದ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದರೆ ಲಕ್ಷಗಟ್ಟಲೆ ಹಣವನ್ನು ಪಡೆಯಬಹುದು. ಗೆಲುವಿನ ಪತಾಕೆ ಹಾರಿಸಿದರೆ ಕೋಟಿ ಹಣವನ್ನು ಪಡೆಯಬಹುದು ಎನ್ನುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಉದ್ದೇಶದ ಅನುಸಾರವೇ ಸಾವಿರಾರು ಸ್ಪರ್ಧಿಗಳು ಭಾಗವಹಿಸಿ, ಹಣವನ್ನು ಗಳಿಸುವ ಅವಕಾಶವನ್ನು ಪಡೆದುಕೊಂಡರು. ಅದರಲ್ಲಿ ಬೆರಳೆಣಿಕೆಯಷ್ಟು ಮಂದಿ ಕೋಟಿ ಹಣವನ್ನು ಪಡೆದಿದ್ದಾರೆ.

ಸುಮಾರು 17 ವರ್ಷಗಳ ಕಾಲದಿಂದ ನಡೆದುಕೊಂಡು ಬಂದ ಈ ಕಾರ್ಯಕ್ರಮದಲ್ಲಿ ಕೋಟಿ ಹಣವನ್ನು ಪಡೆದ ವಿಜೇತರು ಇತಿಹಾಸ ಸೃಷ್ಟಿಸಿರುವುದು ವಿಶೇಷ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಜಾರ್ಖಂಡ್‍ನ 41 ವರ್ಷದ ಮಹಿಳೆ 9ನೇ ಸೀಸನ್‍ನ ವಿಜೇತಳಾಗಿದ್ದಾಳೆ. ಮೂರು ವರ್ಷಗಳಿಂದ ಎನ್ ಜಿ ಓ ನಡೆಸುತ್ತಿರುವ ಮಂಜುದಾರ್ ಅವರು ಕೋಟಿ ಹಣವನ್ನು ಪಡೆದಿದ್ದಾರೆ. ಹೀಗೆ ವಿಜೇತರಾದವರು ಇಂದು ಏನು ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದೆ ಓದಿ...

ಹರ್ಷವರ್ಧನ್ ನವಥೆ

ಹರ್ಷವರ್ಧನ್ ನವಥೆ

ಕೆಬಿಸಿಯ ಮೊದಲ ಸೀಸನ್ ಗೆದ್ದ ವ್ಯಕ್ತಿ ಹರ್ಷವರ್ಧನ್ ನವಥೆ. ಒಂದು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಹರ್ಷವರ್ಧನ್ ಕೋಟ್ಯಾಧಿಪತಿಯಾಗಿ ಮಿಂಚಿದ್ದರು. ಮೊದಲು ಇವರು ಇಂಡಿಯನ್ ಸಿವಿಲ್ ಸರ್ವಿಸ್ ನಲ್ಲಿ ಕೆಲಸ ವಹಿಸುತ್ತಿದ್ದರು. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೆಲಸವನ್ನು ಬಿಟ್ಟರು. ಆದರೆ ಪರೀಕ್ಷೆ ಬರೆಯಲಿಲ್ಲ. ತನ್ನ 27ನೇ ವರ್ಷದಲ್ಲಿ ಕೆಬಿಸಿಯಲ್ಲಿ ವಿಜೇತರಾದರು. ಇದೀಗ ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ರವಿ ಮೋಹನ್ ಸೈನಿ

ರವಿ ಮೋಹನ್ ಸೈನಿ

ರವಿ ಮೋಹನ್ ಸೈನಿ ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಕೆಬಿಸಿಯ ಜೂನಿಯರ್ ವಿಜೇತರಾಗಿ ಹೊರ ಹೊಮ್ಮಿದರು. 14ನೇ ವರ್ಷದಲ್ಲಿರುವ ಇವರು ಉತ್ತಮ ಜ್ಞಾನದಿಂದ ಒಂದು ಕೋಟಿ ರೂಪಾಯಿ ಹಣವನ್ನು ಪಡೆದುಕೊಂಡರು. ನಂತರ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಇದೀಗ ಭಾರತೀಯ ಪೋಲಿಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಉತ್ತಮ ಜ್ಞಾನ ಹಾಗೂ ಕೆಲಸದಿಂದ ತಂದೆ ತಾಯಿಗೆ ಹೆಮ್ಮೆಯ ಪುತ್ರನಾಗಿದ್ದಾರೆ.

ರಹಾತ್ ತಸ್ಲಿಮ್ ರಹಾತ್

ರಹಾತ್ ತಸ್ಲಿಮ್ ರಹಾತ್

ಸಾಂಪ್ರದಾಯಿಕ ಕುಟುಂಬದಿಂದ ಬೆಳೆದು ಬಂದ ರಹಾತ್ ತಸ್ಲಿಮ್ ಗೃಹಿಣಿಯಾಗಿದ್ದರು. ಮಹಿಳೆ ಕೇವಲ ಗೃಹಿಣಿಯಾಗಿ ಕೆಲಸ ಮಾಡುವುದರ ಜೊತೆಗೆ ಉತ್ತಮ ಜ್ಞಾನವನ್ನು ಹೊಂದಿದ್ದಳು ಎನ್ನುವುದನ್ನು ಜಗತ್ತಿಗೆ ತಿಳಿಸಿಕೊಟ್ಟರು. ಕೆಬಿಸಿಯ ನಾಲ್ಕನೇ ಸೀಸನ್‍ನ ವಿಜೇತರಾಗಿದ್ದರು. ಇವರು ಗೆಲುವಿನ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗಲು ಉತ್ಸುಕರಾಗಿದ್ದರು. ನಂತರ ಗಿರಿದಿಯಲ್ಲಿ ಸ್ವತಂತ್ರವಾಗಿ ಗಾರ್ಮೆಂಟ್ ಶೋ ರೂಮ್ ತೆರೆದರು.

ಸುಶೀಲ್ ಕುಮಾರ್

ಸುಶೀಲ್ ಕುಮಾರ್

ಒಂದು ರಾತ್ರಿ ಬೆಳಗಾಗುವಷ್ಟರಲ್ಲಿ ಐದು ಕೋಟಿ ಹಣವನ್ನು ಗಳಿಸಿ ಇತಿಹಾಸ ಸೃಷ್ಟಿಸಿದವರು ಸುಶೀಲ್ ಕುಮಾರ್. ಐದನೇ ಸೀಸನ್ ನಲ್ಲಿ ಗೆದ್ದ ಇವರಿಗೆ ತೆರಿಗೆ ಹಣವನ್ನು ಮುರಿದು ನಂತರ 3.5 ಕೋಟಿ ಹಣವನ್ನು ನೀಡಲಾಗಿತ್ತು. ಆದರೀಗ ಹಣ ಹಾಗೂ ಕೆಲಸವಿಲ್ಲದೆ ಕಷ್ಟ ಪಡುತ್ತಿದ್ದಾರೆ. ಸಂಸಾರ, ಜಮೀನು ಹಾಗೂ ಇನ್ನಿತರ ಐಷಾರಾಮಿ ವಸ್ತುಗಳನ್ನು ಖರೀದಿಸಲು ಹಣವನ್ನು ವ್ಯಯಿಸಿ ಕಳೆದುಕೊಂಡರು. ಇದೀಗ ಶಾಲಾ ಶಿಕ್ಷಕನಾಗಿ ಕೆಲಸ ನಿರ್ವಹಿಸುವ ಹಂಬಲದಲ್ಲಿದ್ದಾರೆ.

ಸನ್ಮೀತ್ ಕೌರ್

ಸನ್ಮೀತ್ ಕೌರ್

ಫ್ಯಾಷನ್ ಡಿಸೈನ್‍ಅಲ್ಲಿ ಡಿಗ್ರಿಯನ್ನು ಪಡೆದ ಸನ್ಮೀತ್ ಕೌರ್ ವೃತ್ತಿ ಜೀವನದಲ್ಲಿ ಡಿಸೈನಿಂಗ್ ನಲ್ಲಿ ಮುಂದುವರೆದಿಲ್ಲ. ನಂತರ ಟಿಫಿನ್ ವ್ಯವಹಾಋ ಮಾಡುವುದರ ಮೂಲಕ ಕೆಲವು ಸಮಯ ಕಳೆದರು. ಅದರಲ್ಲಿ ಯಶಸ್ಸು ಪಡೆಯಲು ಕಷ್ಟವಾಯಿತು. ನಂತರ ಮಕ್ಕಳಿಗೆ ಟ್ಯೂಷನ್ ನೀಡಲು ಪ್ರಾರಂಭಿಸಿದಳು. ಈ ಸಮಯದಲ್ಲೇ ಸೀಸನ್ 6 ರಲ್ಲಿ ವಿಜೇತರಾರಿ 5 ಕೋಟಿ ರೂ. ಪಡೆದುಕೊಂಡರು. ಇದೀಗ ತನ್ನ ಸ್ನೇಹಿತನೊಂದಿಗೆ ಫ್ಯಾಷನ್ ಹೌಸ್ ಪ್ರಾರಂಭಿಸಿದರು. ಇದೀಗ ವ್ಯವಹಾರದಲ್ಲಿ ಪಾಲುದಾರರಾಗಿ ಮುಂದುವರೆದಿಲ್ಲ.

ತಾಜ್ ಮೊಹಮ್ಮದ್ ರಂಗ್ರೇಜ್

ತಾಜ್ ಮೊಹಮ್ಮದ್ ರಂಗ್ರೇಜ್

ಏಳನೇ ಸೀಸನ್‍ನ ವಿಜೇತರಾಗಿ ತಾಜ್ ಮೊಹಮ್ಮದ್ ರಂಗ್ರೇಜ್ 1 ಕೋಟಿ ರೂ. ಹಣವನ್ನು ಪಡೆದುಕೊಂಡರು. ಮಗಳ ದೃಷ್ಟಿ ದೋಷದ ನಿವಾರಣೆಗೆ ಹಣವನ್ನು ವ್ಯಯಿಸಿದರು. ತನಗಾಗಿ ಒಂದು ಮನೆಯನ್ನು ಖರೀದಿಸಿದರು. ಜೊತೆಗೆ ಅನಾಥಾಶ್ರಮದ ಎರಡು ಹುಡುಗಿಯರ ಮದುವೆಗೆ ಹಣ ನೀಡಿದರು.

ಅಚಿನ್ ನರುಲ್ ಮತ್ತು ಸಾರ್ಥಕ್ ನರುಲ್

ಅಚಿನ್ ನರುಲ್ ಮತ್ತು ಸಾರ್ಥಕ್ ನರುಲ್

ಹತ್ತು ವರ್ಷಗಳಿಂದ ಕೆಬಿಸಿ ಹಾಟ್ ಸೀಟ್‍ನಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಿದ್ದರು. ನಂತರ ಈ ಇಬ್ಬರು ಸಹೋದರರಿಗೆ ಸೀಸನ್ 7ರಲ್ಲಿ ಅವಕಾಶ ಲಭಿಸಿತು. ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಸಹೋದರರು 7 ಕೋಟಿ ರೂ. ಹಣವನ್ನು ಪಡೆದುಕೊಂಡರು. ಗೆದ್ದ ಹಣದಿಂದ ತಾಯಿಗೆ ಕ್ಯಾನ್ಸರ್ ಚಿಕಿತ್ಸೆ ಮಾಡಿಸಿದರು. ನಂತರ ಉಳಿದ ಹಣದಲ್ಲಿ ಸ್ವಂತ ವ್ಯವಹಾರವನ್ನು ತೆರೆದಿದ್ದಾರೆ.

English summary

KBC Winners And What They Are Up To Now

Based on a popular British game show 'Who Wants To Be A Millionaire?', Kaun Banega Crorepati has been debuted on the TV screens for more than 17 years now. The show promises to give bundles of money to the contestants who give the right answers to the questions. While many failed to grab the event, few of them came back home richer than what they were before arriving on the sets of the show.