For Quick Alerts
ALLOW NOTIFICATIONS  
For Daily Alerts

  ಹತ್ಯೆಗೊಳಗಾದ ಪತ್ರಕರ್ತರು: ಅನ್ಯಾಯದ ವಿರುದ್ಧ ಧ್ವನಿ ಎತ್ತಿದೇ ತಪ್ಪಾಯಿತೇ?

  By Arshad
  |

  ಪ್ರತಿ ಬಾರಿ ಯಾವುದಾದರೂ ಅಮಾಯಕರು, ಮುಗ್ಧರು ಅಥವಾ ಇನ್ನಾರದೋ ತಪ್ಪಿಗೆ ತಮ್ಮ ಜೀವವನ್ನು ಕಳೆದುಕೊಂಡವರ ಬಗ್ಗೆ ಕೇಳಿದಾಗ ನಮ್ಮ ರಕ್ತ ಕುದಿಯುತ್ತದೆ ಹಾಗೂ ಈ ಅನ್ಯಾಯವನ್ನು ವಿರೋಧಿಸಿ ನ್ಯಾಯವನ್ನು ಆಗ್ರಹಿಸುತ್ತೇವೆ. ಇಂದಿನ ದಿನಗಳಲ್ಲಿ ಅನ್ಯಾಯದ ವಿರುದ್ಧ ದನಿ ಎತ್ತಿದವರನ್ನೇ ಭೀಕರವಾಗಿ ಹತ್ಯೆ ಮಾಡಿ ಅವರ ದನಿಯನ್ನು ಅಡಗಿಸುವ ಹಲವಾರು ಘಟನೆಗಳನ್ನು ಕಾಣುತ್ತಿದ್ದೇವೆ.

  ವಾಸ್ತವದಲ್ಲಿ ಈ ಹತ್ಯೆಗಳ ಮರುದಿನ ಭಾರೀ ಪ್ರಮಾಣದ ಪ್ರತಿಭಟನೆ, ವಿರೋಧ ಹಾಗೂ ಶಿಕ್ಷೆಯನ್ನು ಆಗ್ರಹಿಸಿ ಚಳುವಳಿಗಳು ನಡೆಯುತ್ತವೆ. ದಿನಕಳೆದಂತೆ ನಿಧಾನವಾಗಿ ಒಬ್ಬೊಬ್ಬರೇ ಹಿಂದೆ ಸರಿದು ತಮ್ಮ ನಿತ್ಯದ ಜೀವನದಲ್ಲಿ ಮಗ್ನರಾಗುತ್ತಾರೆ ಹಾಗೂ ಈ ಪ್ರತಿಭಟನೆ, ಚಳುವಳಿಗಳೂ ಕ್ರಮೇಣ ಮಾಯವಾಗುತ್ತವೆ. ಈ ಹತ್ಯೆಯನ್ನು ಎಲ್ಲರೂ ಮರೆತೇ ಬಿಡುತ್ತಾರೆ. ಇದು ನೆನಪಾಗುವುದು ಮುಂದಿನ ದಿನದಲ್ಲಿ ಈ ಘಟನೆ ಮರುಕಳಿಸಿದಾಗ ಮಾತ್ರ.

  ಪತ್ರಕರ್ತರ ಬಗ್ಗೆ ಹೇಳುವುದಾದರೆ ವಿಶ್ವದದ್ಯಂತ ಅನ್ಯಾಯದ ವಿರುತ್ತ ದನಿ ಎತ್ತಿದ ಹಲವು ಪತ್ರಕರ್ತರ ಕಥೆಯೂ ಹೀಗೆಯೇ ಕೊನೆಗೊಂಡಿದೆ. ಅನ್ಯಾಯ, ಬ್ರಷ್ಟಾಚಾರದ ವಿರುದ್ಧ ದನಿ ಎತ್ತಿದ ಯಾವುದೇ ವ್ಯಕ್ತಿಯನ್ನು ಹತ್ಯೆಯ ಮೂಲಕ ಅವರ ಜೀವನ ಕೊನೆಗೊಳಿಸಿರುವುದನ್ನು ಗಮನಿಸಬಹುದು. ಎಷ್ಟೋ ಬಾರಿ ಅನ್ಯಾಯದ ದನಿಯನ್ನು ಮೊದಲ ಬಾರಿಗೆ ಎತ್ತಿದವರು ಥಟ್ಟನೇ ಅದೃಶ್ಯರಾಗಿಬಿಡುತ್ತಾರೆ. ಇವರ ದನಿಯನ್ನು ಕಂಡವರು ಮುಂದೆ ಬರಲಿರುವ ಅಪಾಯವನ್ನು ಮನಗಂಡು ಮೊಳಕೆಯನ್ನೇ ಚಿವುಟುವ ಕ್ರಿಯೆಯಾಗಿದೆ. ವಿಶೇಷವಾಗಿ ಪತ್ರಕರ್ತರ ವೃತ್ತಿಯಲ್ಲಿ ಪ್ರಾಮಾಣಿಕತೆ, ಸ್ಪಷ್ಟತೆ ಹಾಗೂ ಧೈರ್ಯ ಅಗತ್ಯವಾಗಿದ್ದು ಸಮಾಜದಲ್ಲಿ ಆಗುತ್ತಿರುವ ತಪ್ಪುಗಳನ್ನು ಜನರ ಎದುರಿಗೆ ಸ್ಪಷ್ಟವಾಗಿ ವರದಿ ಮಾಡುವುದೂ ಅಗತ್ಯವಾಗಿದೆ.

  ಆದರೆ ಈ ಕೆಲಸದಲ್ಲಿ ಹಲವರು ಪ್ರಾಣ ಕಳೆದುಕೊಳ್ಳುತ್ತಾರೆ. ಹೀಗೆ ಹತ್ಯೆಗೀಡಾದ ಪತ್ರಕರ್ತರಿಗೆ ಯುದ್ಧದಲ್ಲಿ ಮಡಿದ ಯೋಧರಿಗೆ ಸಲ್ಲುವಂತಹ ಗೌರವವನ್ನೇ ಸಮಾಜ ಸಲ್ಲಿಸುತ್ತದೆ. ಆದರೆ ಈ ವ್ಯಕ್ತಿಗಳ ಮರಣದಿಂದ ಈ ವ್ಯಕ್ತಿಗಳಿಗೆ ನ್ಯಾಯ ದೊರಕುತ್ತದೆಯೇ? ಪ್ರಶ್ನೆಗೆ ಉತ್ತರ ಅಷ್ಟು ಸುಲಭವಲ್ಲ. ಇದೇ ರೀತಿಯಾಗಿ ತಮ್ಮ ಧೀರೋದಾತ್ತ ಚಿಂತನೆಗಳಿಂದ ವಿರೋಧಿಗಳ ಎದೆಯಲ್ಲಿ ಒನಕೆ ಕುಟ್ಟಿಸಿ ಕಡೆಗೆ ಪ್ರತೀಕಾರದ ರೂಪದಲ್ಲಿ ಹತ್ಯೆಗೀಡಾದ ಕೆಲವು ವೀರರ ಬಗ್ಗೆ ಇಂದು ಕೆಲವು ಮಾಹಿತಿಗಳನ್ನು ನೀಡಲಾಗಿದೆ...

   ಗೌರಿ ಲಂಕೇಶ್

  ಗೌರಿ ಲಂಕೇಶ್

  ಈ ಹತ್ಯೆಗಳ ಸರಣಿಯಲ್ಲಿ ತೀರಾ ಇತ್ತೀಚಿನ ಸೇರ್ಪಡೆ ಎಂದರೆ ಪತ್ರಕರ್ತೆ ಗೌರಿ ಲಂಕೇಶ್. ದಿವಂಗತ ಪಿ. ಲಂಕೇಶ್ ರವರ ಪುತ್ರಿಯಾಗಿದ್ದು ತಂದೆಯಂತೆಯೇ ಪತ್ರಿಕೋದ್ಯಮವನ್ನೇ ನೆಚ್ಚಿಕೊಂಡಿದ್ದ ಗೌರಿಯವರು ತಮ್ಮದೇ ಆದ 'ಗೌರಿ ಲಂಕೇಶ್ ಪತ್ರಿಕೆ' ಎಂಬ ವಾರಪತ್ರಿಕೆಯ ಸಂಪಾದಕಿಯೂ ಆಗಿದ್ದರು. ಜಾತಿಯನ್ನೇ ಬಂಡವಾಳವಾಗಿಸಿ ನಡೆಸುತ್ತಿರುವ ರಾಜಕೀಯದ ವಿರುದ್ಧ ದನಿ ಎತ್ತಿದ ಅವರು ಜಾತಿ ಆಧರಿಸಿ ಮತ ಪಡೆಯುವ ಹಾಗೂ ಜಾತಿಯನ್ನೇ ನೆಚ್ಚಿರುವ ವ್ಯವಸ್ಥೆಯ ವಿರುದ್ಧ ತಮ್ಮ ಲೇಖನಗಳಿಂದ ಚುರುಕು ಮುಟ್ಟಿಸುತ್ತಿದ್ದರು. ಇವರ ದಿಟ್ಟತನದ ಕ್ರಮ ಯಾರಿಗೆ ಮುಳುವಾಗಿತ್ತೆಂದು ಅನ್ನಿಸಿತೋ ಸಧ್ಯಕ್ಕಂತೂ ಗೊತ್ತಿಲ್ಲ, ಆದರೆ ಸೆ. 5 ರಂದು ಅವರು ತಮ್ಮ ಮನೆಯ ಅಂಗಳದಲ್ಲಿಯೇ ಹಂತಕರ ಮೂರು ಗುಂಡುಗಳಿಗೆ ಬಲಿಯಾದರು.

   ಸಂದೀಪ್ ಕೊಠಾರಿ

  ಸಂದೀಪ್ ಕೊಠಾರಿ

  ಇವರು ಜಬಲ್ಪುರದಿಂದ ಹೊರಡಿಸಲ್ಪಡುವ ಹಿಂದಿ ಭಾಷೆಯ ದಿನಪತ್ರಿಕೆಯ ಒಂದು ವಿಭಾಗದ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಅಂತ್ಯ ಹೇಗಾಯಿತು? ಅನಧಿಕೃತ ಗಣಿಗಾರಿಕೆಯ ವಿರುದ್ಧ ದನಿ ಎತ್ತಿದ ಇವರನ್ನು ಇದೇ ಗಣಿಕಾರಿಕೆಯಲ್ಲಿ ತೊಡಗಿದ್ದರು ಎನ್ನಲಾದ ಮೂವರು ವ್ಯಕ್ತಿಗಳಿಂದ ಹತ್ಯೆಗೀಡಾದರು. ಮೊದಲು ಇವರು ಸಂದೀಪ್ ರನ್ನು ಅಪಹರಿಸಿ ಇವರು ನ್ಯಾಯಾಲಯದಲ್ಲಿ ಹೂಡಿದ್ದ ಮೊಕದ್ದಮೆಯನ್ನು ಹಿಂತೆಗೆದುಕೊಳ್ಳಲು ಬಲವಂತ ಮಾಡಲಾಯಿತು. ಇದನ್ನು ವಿರೋಧಿಸಿದ ಬಳಿಕ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಅಲ್ಲಿಯೇ ಸಾಯಲು ಬಿಡಲಾಗಿತ್ತು.

  ರಾಜದೇವ್ ರಂಜನ್

  ರಾಜದೇವ್ ರಂಜನ್

  ಇವರನ್ನು ರಾಜ್ದಿಯೋ ರಂಜನ್ ಎಂದೂ ಕರೆಯಲಾಗುತ್ತಿತ್ತು. ಇವರು ಬಿಹಾರದಲ್ಲಿರುವ ಸಿವಾನ್ ಎಂಬ ಪಟ್ಟಣದಲ್ಲಿ ಪ್ರಕಟವಾಗುತ್ತಿರುವ ಹಿಂದುಸ್ತಾನ್ ಡೈಲಿ ಎಂಬ ಪತ್ರಿಕೆಯ ಪತ್ರಕರ್ತರಾಗಿದ್ದರು. ಇವರ ಅಂತ್ಯ ಹೇಗಾಯಿತು? ಇವರನ್ನು ಅತಿ ಹತ್ತಿರದಿಂದ 0.9 mm ಪಿಸ್ತೂಲಿನಿಂದ ಹಣೆಗೊಂದು, ಕುತ್ತಿಗೆಗೊಂದು ಗುಂಡು ಹೊಡೆದು ಹಂತಕರು ಓಡಿ ಹೋದರು. ತಕ್ಷಣವೇ ಇವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದಾರಿಯಲ್ಲಿಯೇ ಇವರು ಸಾವನ್ನಪ್ಪಿದರು.

  ಜಗೇಂದ್ರ ಸಿಂಗ್

  ಜಗೇಂದ್ರ ಸಿಂಗ್

  ಇವರು ಸ್ವತಂತ್ರೋದ್ಯೋಗದ ಮೂಲಕ ಹಿಂದಿ ಮಾಧ್ಯಮಗಳಿಗೆ ಬರೆಯುವವರಾಗಿದ್ದರು ಹಾಗೂ ಇವರು ರಾಜಕೀಯ ಹಾಗೂ ಪ್ರಸ್ತುತ ವಿದ್ಯಮಾನದ ಕುರಿತು ವೃತ್ತಪತ್ರಿಕೆಗಳಲ್ಲಿಯೂ ಫೇಸ್ ಬುಕ್ ನಲ್ಲಿಯೂ ಜಾಗೃತಿ ಮೂಡಿಸುವ ಲೇಖನಗಳನ್ನು ಬರೆಯುತ್ತಿದ್ದರು.ಇವರ ಅಂತ್ಯ ಹೇಗಾಯಿತು? ಇವರ ಮನೆಯ ಮೇಲೆ ಆದ ಪೋಲೀಸರ ಧಾಳಿಯಲ್ಲಿ ಇವರ ಮೇಲೆ ಎರಚಲಾದ ಪ್ರಬಲ ಆಮ್ಲದ ಪ್ರಭಾವದಿಂದ ಮೈಯೆಲ್ಲಾ ಸುಟ್ಟು ಇವರು ಸಾವಿಗೆ ಶರಣಾದರು. ಇಂತಹ ಕೃತ್ಯಗಳಿಗೆ ಬಲಿಯಾದವರು ಕೇವಲ ಪತ್ರಕರ್ತರು ಮಾತ್ರವಲ್ಲ, ಇತರ ಕ್ಷೇತ್ರಗಳಿಗೆ ಸಂಬಂಧಿಸಿದ ವ್ಯಕ್ತಿಗಳೂ ಹತ್ಯೆಗೀಡಾಗಿದ್ದಾರೆ. ಮೂಢನಂಬಿಕೆಯ ವಿರುದ್ಧ ಹೋರಾಡಿದ ವ್ಯಕ್ತಿಗಳನ್ನೂ ಈ ಹಂತಕರು ಬಿಟ್ಟಿಲ್ಲ. ಈ ಹತ್ಯೆಯನ್ನು ಖಂಡಿಸುವ ನಾವೆಲ್ಲರೂ ನ್ಯಾಯವನ್ನು ಬಯಸುತ್ತೇವೆ.

  ಎಂ ಎಂ. ಕಲ್ಬುರ್ಗಿ

  ಎಂ ಎಂ. ಕಲ್ಬುರ್ಗಿ

  ಕರ್ನಾಟಕದ ಬಹು ಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರು. ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಹಂಪೆಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. ವರದಿಗಳ ಪ್ರಕಾರ ಇವರು ವಿಗ್ರಹಾರಾಧನೆಯನ್ನು ವಿರೋಧಿಸುವವರಾಗಿದ್ದು ಇದೇ ಕಾರಣಕ್ಕೆ ಹಿಂದೂ ಧರ್ಮೀಯರ ವತಿಯಿಂದ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನೂ ಹೂಡಲಾಗಿತ್ತು. ಇವರ ಅಂತ್ಯ ಹೇಗಾಯಿತು?ಆಗಸ್ಟ್ 2015ರಲ್ಲಿ ಧಾರವಾಡದಲ್ಲಿರುವ ಇವರ ಮನೆಗೇ ನುಗ್ಗಿದ ಅಪರಿಚಿತ ಹಂತಕರು ಗುಂಡು ಹೊಡೆದು ಪರಾರಿಯಾದರು.

  ನರೇಂದ್ರ ದಾಭೋಲ್ಕರ್

  ನರೇಂದ್ರ ದಾಭೋಲ್ಕರ್

  ಅಂಧಶ್ರದ್ಧೆ ಹಾಗೂ ಮೂಢನಂಬಿಕೆಯ ವಿರುದ್ದ ದನಿ ಎತ್ತಿದ ಧಾಬೋಲ್ಕರ್ ಈ ಬಗ್ಗೆ ಕಾನೂನನ್ನು ಹೊರಡಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮನವಿ ಮಾಡಿಕೊಂಡು ಸತತವಾಗಿ ಇದರ ಅನುಷ್ಠಾನಕ್ಕಾಗಿ ಬೆನ್ನತ್ತಿದ್ದರು. ಇವರ ಅಂತ್ಯ ಹೇಗಾಯಿತು? August 2013 ರಲ್ಲಿ ಅಪರಿಚಿತ ಹಂತಕನ ಗುಂಡಿಗೆ ಬಲಿಯಾದರು.

  English summary

  Journalists Who Raised Their Voice And Got Killed

  Every time we hear the story of innocent people being killed, our blood certainly boils and all we seek is justice. People who are raising up and voicing out their opinions against certain wrong doings are also being killed mercilessly these days.However, over a period of time, the dead is forgotten and people move on with their daily lives, until reality strikes them again!
  Story first published: Thursday, September 7, 2017, 23:38 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more