For Quick Alerts
ALLOW NOTIFICATIONS  
For Daily Alerts

  ಒಂಟಿ ಕಾಲಲ್ಲೇ ಮೌಂಟ್ ಎವರೆಸ್ಟ್ ಏರಿದ ಅರುಣಿಮಾಳ ಯಶಸ್ಸಿನ ಹಾದಿ...

  By Divya Pandith
  |

  ಆಕೆ ಹೆಣ್ಣಾದರೂ ಅವಳ ಕನಸು ಮಾತ್ರ ಮತ್ತರವಾದದ್ದಾಗಿತ್ತು. ತನ್ನ ಅಸಾಹಯಕತೆಯನ್ನು ನೆನೆದುಕೊಂಡು ಆಗಾಗ ದುಃಖಕ್ಕೆ ಒಳಗಾಗುತ್ತಿದ್ದಳು. ಆದರೂ ತನ್ನ ಗುರಿಯನ್ನು ಮರೆತಿರಲಿಲ್ಲ. ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡಬೇಕು ಎನ್ನುವುದೊಂದೇ ಅವಳ ಛಲ. ಆ ಛಲದೊಂದಿದೆ ಒಂದು ನಿರ್ದಿಷ್ಟ ಗುರಿಯ ಕನಸು ಅವಳದ್ದು. ಲಕ್ನೋ ಸಮೀಪದ ಅಂಬೇಡ್ಕರ್ ನಗರ ಎನ್ನುವ ಸಣ್ಣ ಪಟ್ಟಣದಲ್ಲಿ ಜನಿಸಿದವಳು "ಅರುಣಿಮಾ ಸಿನ್ಹಾ" ಈಕೆ 3ನೇ ವಯಸ್ಸಿನಲ್ಲಿರುವಾಗಲೇ ತನ್ನ ತಂದೆಯನ್ನು ಕಳೆದುಕೊಂಡಳು. ಭಾರತೀಯ ನೈನ್ಯದಲ್ಲಿ ಇಂಜಿನಿಯರ್ ಆಗಿದ್ದರು. ತಾಯಿ ಆರೋಗ್ಯ ಇಲಾಖೆಯ ಮೇಲ್ವಿಚಾರಕಿ.

  ಚಿಕ್ಕ ವಯಸ್ಸಿನಿಂದಲೂ ಆಟದಲ್ಲಿ ಆಸಕ್ತಿ ಹೊಂದಿದ್ದ ಅರುಣಿಮಾ ವಾಲಿಬಾಲ್‍ನಲ್ಲಿ ತನ್ನದೇ ಆದ ಪ್ರತಿಭೆಯನ್ನು ಹೊಂದಿದ್ದಳು. ಅವಳ ಆಟದ ಚತುರತೆಯಿಂದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿ ಮಿಂಚಿದಳು. ತನ್ನ ಕ್ರೀಡಾ ಆಸಕ್ತಿಯನ್ನು ಸಿಎಸ್‍ಐಎಫ್‍ನಲ್ಲಿ ಅನ್ವಯಿಸಲು ನಿರ್ಧರಿಸಿದಳು. ನಂತರದ ದಿನದಲ್ಲಿ ದೆಹಲಿಯಿಂದ ಒಂದು ಕರೆ ಪತ್ರ ಬಂದಿತ್ತು. ಆ ಕರೆ ಪತ್ರ ಮೇಲ್ನೋಟಕ್ಕೆ ಆಕೆಗೊಂದು ಅದೃಷ್ಟವಾಗಿದ್ದುದಾಗಿದ್ದರೂ ಆಕೆಯ ಬದುಕಿನ ತಿರುವು ಮಾತ್ರ ದುಃಖಕರವಾಗಿತ್ತು.

  ದೆಹಲಿಗೆ ಹೋಗುವ ಸಂದರ್ಭದಲ್ಲಿ ರೈಲ್ವೆ ಆಘಾತದಲ್ಲಿ ತನ್ನ ಕಾಲನ್ನು ಕಳೆದುಕೊಂಡಳು. ಅದೃಷ್ಟವಶಾತ್ ಆಕೆಯ ಜೀವ ಉಳಿದಿತ್ತು ಎನ್ನುವುದೊಂದೇ ಸ್ವಲ್ಪ ಸಮಾಧಾನದ ಸಂಗತಿ. ಆಕೆ ತನ್ನ ಗುರಿಯನ್ನು ತಲುಪವ ವಿಚಾರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಈ ಘಟನೆ ನಡೆದ ಬಳಿಕ ಸುಮಾರು 2 ವರ್ಷದ ನಂತರ ಅರುಣಿಮಾ ಮೌಂಟ್ ಎವರೆಸ್ಟ್ ಏರಿದ ಮೊದಲ ಭಾರತೀಯ ಮಹಿಳೆ ಎನ್ನುವ ಕೀರ್ತಿ ಪತಾಕೆಯನ್ನು ಹಾರಿಸಿದಳು.

  ತನ್ನ 26ನೇ ವಯಸ್ಸಿನಲ್ಲಿಯೇ ತನ್ನ ಗುರಿಯನ್ನು ಸಾಧಿಸಿದಳು. ತನ್ನ ನಿಜವಾದ ಕಾಲು ಇಲ್ಲವಾದರೂ ಕೃತಕ ಕಾಳಿನ ಜೋಡಣೆಯ ಮೂಲಕ ತನ್ನ ಕನಸನ್ನು ನನಸಾಗಿಸಿಕೊಂಡ ವೀರ ಮಹಿಳೆ ಇವಳಾದಳು. ಈಕೆಯ ಸುತ್ತಲಿನ ಜನರು ಕಾಲನ್ನು ಕಳೆದುಕೊಂಡ ಈಕೆಯನ್ನು ಯಾರು ವಿವಾಹವಾಗುತ್ತಾರೆ? ಎನ್ನುವ ಪ್ರಶ್ನೆ ಕೇಳುವ ಮೂಲಕ ಒಂದಿಷ್ಟು ಬೇಸರವನ್ನುಂಟುಮಾಡುತ್ತಿದ್ದರು. ನಿಜ, ಕಾಲುಗಳಿದ್ದು ಎಲ್ಲಾ ಬಗೆಯಲ್ಲಿ ಆರೋಗ್ಯವಾಗಿದ್ದವರು ಅಸಹಾಯಕರನ್ನು ಕಂಡು ಮಾತನಾಡುವುದು ಅವರ ಸಣ್ಣ ತನವನ್ನು ತೋರಿಸಿಕೊಡುತ್ತದೆ.

  ತನ್ನಲ್ಲಿ ಅಸಹಾಯಕತೆ ಇದ್ದರೂ ಸಮಾಜದ ತುಳಿತದ ಮಾತಿಗೆ ತಲೆ ಕೊಡದೆ ಶ್ರದ್ಧೆ ಹಾಗೂ ನಿಷ್ಟೆಯಿಂದ ತನ್ನ ಗುರಿಯನ್ನು ತಲುಪಿದವಳು ಅರುಣಿಮಾ. ಈಕೆಯ ಜೀವನದಲ್ಲಿ ಉಂಟಾದ ದುಃಖದ ಸಂಗತಿ ಹಾಗೂ ಅವಳ ಯಶಸ್ಸಿನ ಹಾದಿಯ ಬಗ್ಗೆ ಪ್ರತಿಯೊಬ್ಬರು ಓದಬೇಕು. ಆಗ ನಾವು ಸಹ ನಮ್ಮ ಜೀವನದಲ್ಲಿ ಸ್ಫೂರ್ತಿಪಡೆದು ಮುನ್ನಡೆಯಲು ಸಹಾಯವಾಗುತ್ತದೆ. ಆಕೆಯ ಜೀವನದ ಕೆಲವು ಘಟನೆಗಳನ್ನು ನಿಮಗಾಗಿ ಈ ಮುಂದೆ ವಿವರಿಸಿದ್ದೇವೆ...

  ಕಟುಕರ ಅಮಾನವೀಯತೆ

  ಕಟುಕರ ಅಮಾನವೀಯತೆ

  ಅರುಣಿಮಾ ರೈಲಲ್ಲಿ ದೆಹಲಿಗೆ ಪ್ರಯಾಣಿಸುವಾಗ ಕಟುಕರು ಹಾಗೂ ಕಳ್ಳರಾದ ಒಂದಿಷ್ಟು ಪುರುಷರು ಆಕೆಯ ಚಿನ್ನದ ಸರವನ್ನು ನೀಡೆಂದು ಹೆದರಿಸಿದರು. ಅದಕ್ಕೆ ನಕಾರಾತ್ಮಕ ಉತ್ತರ ನೀಡಿದ ಅರುಣಿಮಾಳನ್ನು ರೈಲಿನಿಂದ ಹೊರಗಡೆ ಎಸೆದರು. ಆಕೆ ಅಲ್ಲಿಂದ ಎದ್ದು ಪಾರಾಗುವಷ್ಟರಲ್ಲಿ ಇನ್ನೊಂದು ರೈಲು ಆಕೆಯ ಕಾಲಿನ ಮೇಲೆ ಹರಿದು ಹೋಯಿತು. ಆಕ್ಷಣದಲ್ಲಿ ಆಕೆಯ ಪ್ರಾಣ ಉಳಿಯಿತೇ ಹೊರತು ಕಾಲು ಉಳಿದಿರಲಿಲ್ಲ.

  ಯಾವುದಕ್ಕೂ ಕಿವಿಕೊಡಲಿಲ್ಲ

  ಯಾವುದಕ್ಕೂ ಕಿವಿಕೊಡಲಿಲ್ಲ

  ಸಮಾಜ ಹಾಗೂ ಮಾಧ್ಯಮಗಳು ಅವಳ ಆ ಘಟನೆಗೆ ಅವರದ್ದೇ ಆದ ಕಥೆಯನ್ನು ಕಟ್ಟಿತ್ತು. ಆಕೆ ಆತ್ಮ ಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು ಎಂದೆಲ್ಲಾ ಹೇಳಿದರು. ಆದರೆ ಅರುಣಿಮಾ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಬದಲಿಗೆ ಎವರೆಸ್ಟ್ ಏರುವ ಕನಸಿನ ಬಗ್ಗೆ ಆಲೋಚಿಸಲು ಪ್ರಾರಂಭಿಸಿದಳು. ಅದಕ್ಕಾಗಿ ಏನು ಮಾಡಬೇಖು ಎನ್ನುವುದರ ಬಗ್ಗೆ ಚಿಂತನೆ ನಡೆಸಿದಳು.

  ಕನಸು ನನಸಾಯಿತು

  ಕನಸು ನನಸಾಯಿತು

  ದೃಢವಾದ ಮನಸ್ಸು ಹಾಗೂ ಗುರಿಯಿಂದಾಗಿ ಮೇ 21ರಂದು ಆಕೆ ಎವರೆಸ್ಟ್ ಶೃಂಗಸಭೆಯನ್ನು ತಲುಪಿದರು. ಹಾಗೂ ವಿಶ್ವದ ಅತ್ಯುನ್ನತ ಶಿಖರವನ್ನು ತಲುಪಿದ ಮೊದಲ ಅಂಗವಿಕಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.

  ಆಕೆಯ ಮನಸ್ಸು

  ಆಕೆಯ ಮನಸ್ಸು

  ಸಾಮಾನ್ಯವಾಗಿ ಕೃತಕ ಕಾಲಿನ ಜೋಡಣೆಯಾದ ಬಳಿಕ ರೋಗಿಗಳು ಆ ಕಾಲಿನ ಅನ್ವಯದಂತೆ ಸೂಕ್ತ ರೀತಿಯಲ್ಲಿ ನಡೆಯಲು ಹಲವಾರು ತಿಳಂಗಳು ಅಥವಾ ವರ್ಷಗಳೇ ಬೇಕಾಗುವುದು. ಆದರೆ ಅರುಣಿಮಾ ಆಶ್ಚರ್ಯ ಎನ್ನುವಂತೆ ಕೇವಲ ಎರಡೇ ದಿನದಲ್ಲಿ ನಡೆಯಲು ಕಲಿತಿದ್ದಳು. ಮಾನಸಿಕವಾಗಿ ದೃಢ ಆಲೋಚನೆ ಹಾಗೂ ಸಂಕಲ್ಪಗಳಿದ್ದರೆ ದೈಹಿಕವಾಗಿ ಭಾರೀ ಪ್ರಭಾವವನ್ನು ಹೊಂದಬಹುದು ಎಂದು ಹೇಳಲಾಗುತ್ತದೆ. ಅದನ್ನು ಈಕೆ ತೋರಿಸಿಕೊಟ್ಟಳು.

  ಪ್ರಶಸ್ತಿಯ ಗರಿ

  ಪ್ರಶಸ್ತಿಯ ಗರಿ

  ಮೌಂಟ್ ಎವರೆಸ್ಟ್ ಏರಿದ ಮಹಿಳೆ ಎನ್ನುವುದರ ಮೂಲಕ ವಿಶ್ವ ದಾಖಲೆಯನ್ನು ಮಾಡಿದಳು. 2015ರ ಜನವರಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಹಾಗೂ ಭಾರತದ ನಾಲ್ಕನೇ ಅತ್ಯುತ್ತಮ ನಾಗರಿಕ ಪ್ರಶಸ್ತಿಯನ್ನು ಪಡೆದುಕೊಂಡಳು.

  ಅವಳ ಸಾಧನೆಯ ಕ್ಷಣಗಳು

  ಅವಳ ಸಾಧನೆಯ ಕ್ಷಣಗಳು

  ಮೌಂಟ್ ಎವರೆಸ್ಟ್ ಶಿಖರದ ಮೇಲೆ ಏರಿರುವಾಗ ಭಾರತದ ಧ್ವಜವನ್ನು ಸ್ಥಾಪಿಸಿದಳು. ನಂತರ ಅದರ ಮುಂದೆ ಒಂದಿಷ್ಟು ವಿವೇಕಾನಂದ ವಿಗ್ರಹವನ್ನು ಇಟ್ಟಳು. ಆಕೆ ಆಮ್ಲಜನಕದ ಕೊರತೆಯಿಂದ ಕೊನೆಯುಸಿರು ಎಳೆಯುತ್ತೇನೆ ಎನ್ನುವ ಭಾವದಲ್ಲಿದ್ದಳು ಎನ್ನುವುದು ಆಕೆ ಮಾಡಿಕೊಂಡ ವೀಡಿಯೋ ಚಿತ್ರದಲ್ಲಿ ಕಂಡು ಬರುತ್ತದೆ.

  ಅದೃಷ್ಟ ಆಕೆಯ ಪರವಾಗಿತ್ತು

  ಅದೃಷ್ಟ ಆಕೆಯ ಪರವಾಗಿತ್ತು

  ಅದೃಷ್ಟ ಎನ್ನುವುದು ಕೆಚ್ಚೆದೆಯ ವೀರ ಮಹಿಳೆಯಕಡೆಗಿತ್ತು ಎನ್ನಬಹುದು. ಎವರೆಸ್ಟ್‍ಅನ್ನು ಇಳಿಯಲು ಪ್ರಯತ್ನಿಸುತ್ತಿರುವಾಗ ಬ್ರಿಟಿಷ್ ಆರೋಹಿಯೊಬ್ಬರು ಮೇಲಕ್ಕೆ ಹೋಗಿ ಆಮ್ಲಜನಕವನ್ನು ನೀಡಿದರುಅದರಿಂದ ಆಕೆ ಉಸಿರಾಟದ ಸಮಸ್ಯೆ ನಿವಾರಣೆಯಾಯಿತು.

  ಶಿಖರವನ್ನು ಏರುವುದು ಆಕೆಯ ಕನಸು

  ಶಿಖರವನ್ನು ಏರುವುದು ಆಕೆಯ ಕನಸು

  ಪ್ರಪಂಚದ ಎಲ್ಲೆಡೆಯ ಶಿಖರವನ್ನು ಏರುವುದು ಆಕೆಯ ಕನಸಾಗಿತ್ತು. ಈಗಾಗಲೇ ಏಷ್ಯಾದಲ್ಲಿ ಎವರೆಸ್ಟ್, ಆಫ್ರಿಕಾದಲ್ಲಿ ಕಿಲಿಮಾಂಜರೋ, ಯುರೋಪ್‍ನ ಎಲ್ಬ್ರಸ್ ಮತ್ತು ಆಸ್ಟ್ರೇಲಿಯಾದಲ್ಲಿ ಕೊಸ್ಸಿಯಸ್ಕೋವನ್ನು ಏರಿದ್ದರು. ಈ ವರ್ಷ ದಕ್ಷಿಣ ಅಮೇರಿಕಾಕ್ಕೆ ಹೋಗಲಿದ್ದಾರೆ.

  ಮೋದಿ ಬಿಡುಗಡೆ ಮಾಡಿದರು

  ಮೋದಿ ಬಿಡುಗಡೆ ಮಾಡಿದರು

  ಅರುಣಿಮಾ ತನ್ನ ಎವರೆಸ್ಟ್ ಏರುವ ಕನಸಿಗೆ ಸ್ಫೂರ್ತಿಯಾಗಿ "ಬಾರ್ನ್ ಆನ್ ಎ ಮೌಂಟೇನ್" ಎನ್ನುವ ಪುಸ್ತಕವನ್ನು ಬರೆದಿದ್ದಾಳೆ. ಇದನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆಮಾಡಿದರು.

  ಇತಿಹಾಸದಲ್ಲಿ ಸೇರ್ಪಡೆ

  ಇತಿಹಾಸದಲ್ಲಿ ಸೇರ್ಪಡೆ

  ಜೀವನದಲ್ಲಿ ಎಲ್ಲರಿಗೂ ಕಷ್ಟ ಸುಖಗಳು ಬರುತ್ತವೆ. ಎಲ್ಲಾ ಸಂದರ್ಭದಲ್ಲೂ ನಾವು ಸಮತೋಲನವನ್ನು ಕಾಯ್ದುಕೊಳ್ಳಬೇಕು. ಇದಕ್ಕೆ ಸಾಕ್ಷಿಯಾಗಿ ಅರುಣಿಮಾ ನಿಲ್ಲುತ್ತಾರೆ. ತಮ್ಮ ಜೀವದಲ್ಲಿ ಕಷ್ಟಗಳು ಬಂದರೂ ಹೆದರದೆ ಸಾಧನೆ ಮಾಡಿರುವುದು ಒಂದು ಇತಿಹಾಸ ಪಾಠವಾಗಿದೆ.

  ಕ್ರೀಡೆಯಿಂದ ಪಾಠ

  ಕ್ರೀಡೆಯಿಂದ ಪಾಠ

  ಯಾವುದೇ ಬಗೆಯ ಕ್ರೀಡೆಯಿಂದಾದರೂ ಪಾಠ ಕಲಿಯಬಹುದು. ಜೀವನದಲ್ಲಿ ನೀವು ಯಾವ ಸಾಧನೆ ಮಾಡುತ್ತೀರಿ ಎನ್ನುವುದು ಮುಖ್ಯವಲ್ಲ. ನೀವು ಮಾಡುವ ಸಾಧನೆಯಿಂದ ನಿಮ್ಮ ಬದುಕು ಹಾಗೂ ಯಶಸ್ಸು ಹೇಗೆ ನಿಲ್ಲುತ್ತದೆ ಎನ್ನನುವುದು ಸಹ ಮುಖ್ಯವಾಗುತ್ತದೆ. ಹಾಗಾಗಿ ಇತರರನ್ನು ದೂರುತ್ತಿರುವ ಬದಲು ನಮ್ಮ ತನದ ಬಗ್ಗೆ ಅರಿತು ಗುರಿ ಸಾಧಿಸುವುದು ಮುಖ್ಯ.

  ಸ್ಫೂರ್ತಿಯ ನುಡಿ

  ಸ್ಫೂರ್ತಿಯ ನುಡಿ

  ನಮ್ಮ ಸಾಧನೆ ಸೀಮಿತ ವಿಚಾರಕ್ಕೆ ಮುಗಿಯಬಾರದು. ಹಾರುವ ಹಕ್ಕಿ ಎಲ್ಲೆಡೆಯೂ ಹಾರಬೇಕು. ಹಕ್ಕಿಗೆ ಸಮುದ್ರವನ್ನು ದಾಟಿದರೆ ಹಾರುವುದು ಮುಗಿಯುವುದಿಲ್ಲ. ಹಾರಾಡಲು ವಿಶಾಲವಾದ ಆಕಾಶವಿರುತ್ತದೆ. ಹಾಗೆಯೇ ನಮ್ಮ ಅಗಾಧವಾದ ಗುರಿ ಸಾಧನೆಗೆ ವಿಶೇಷವಾದ ಮನಃಶಕ್ತಿ ಇರಬೇಕು.

  English summary

  INSPIRATIONAL FACTS ABOUT ARUNIMA SINHA’S

  Climbing the Mount Everest is the dream she set for her, lying on the hospital bed with one leg amputated. Yes that’s the determination and passion this girl holds on. That’s what Arunima’s story all about. Born in a small town called Ambedkarnagar near Lucknow, Arunima Sinha lost her father at the age of 3. His father was an engineer in the army and mother was a health department supervisor. She was a national level volleyball player and decided to keep an hold on her sports to pursue a job and applied at CSIF.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more