For Quick Alerts
ALLOW NOTIFICATIONS  
For Daily Alerts

  ಇದು ದೈತ್ಯ ವಿಮಾನ ಚಲಾಯಿಸುತ್ತಿರುವ 'ಧೀರ ಮಹಿಳೆಯ' ಕಂಪ್ಲೀಟ್ ಸ್ಟೋರಿ....

  By Manu
  |

  ಸಾಮಾನ್ಯವಾಗಿ ಮಕ್ಕಳಿಗೆ ಏನಾಗುತ್ತೀರಿ ಎಂಬ ಪ್ರಶ್ನೆ ಕೇಳಿದರೆ, ಮೊದಲು ಹೇಳುವುದು ಡಾಕ್ಟರ್, ಎಂಜಿನಿಯರ್, ಟೀಚರ್ ಆಗುವ ಉತ್ತರವನ್ನು ನೀಡುತ್ತಾರೆ. ಆದರೆ ಇವರೆಲ್ಲರಿಗಿಂತಲೂ ವಿಭಿನ್ನವಾದ ಆಸೆ ಮತ್ತು ಗುರಿಯನ್ನು ಹೊಂದಿದವಳು ಆನಿ ದಿವ್ಯಾ. ಪೈಲೆಟ್ ಆಗುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾಳೆ, ಅಲ್ಲದೆ ಭಾರತದ ಪತಾಕೆಯನ್ನು ಬಾನೆತ್ತರಕ್ಕೆ ರಾರಾಜಿಸುವಂತೆ ಮಾಡಿದ್ದಾಳೆ.

  ಈಕೆ ಭಾರತೀಯ ಮಹಿಳೆ ಪೈಲೆಟ್ ಬೋಯಿಂಗ್ 777ರ ಅತ್ಯಂತ ಕಿರಿಯ ಮಹಿಳಾ ಕಮಾಂಡರ್ ಆಗಿ ಕೆಲಸ ನಿರ್ವಹಿಸುತ್ತಿರುವ ಜಾಣೆ. ಬೋಯಿಂಗ್ 777 ಇದು ಅತಿ ಉದ್ದದ ವಿಮಾನ, ಅಷ್ಟೇ ಅಲ್ಲದೆ ವಿಶ್ವದಲ್ಲೇ ಅತಿ ದೊಡ್ಡ ಅವಳಿ ಜೆಟ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಹಾಗಾದರೆ ಈ ಆನಿ ದಿವ್ಯಾ ಯಾರು? ಅವಳ ಬಾಲ್ಯ ಹೇಗಿತ್ತು?, ತಾನು ಜೀವನದಲ್ಲಿ ಮುಂದೆ ಬರಲು ಏನೆಲ್ಲಾ ಕಷ್ಟ ಎದುರಿಸಬೇಕಾಯಿತು, ಎನ್ನುವ ಎಲ್ಲಾ ಮಾಹಿತಿಯನ್ನು ತಿಳಿಯಲು ಮುಂದೆ ಓದಿ....

  ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನನ

  ಆನಿ ದಿವ್ಯಾ ಪಠಾನ್ಕೋಟ್‌ನಲ್ಲಿ ಜನಿಸಿದ್ದಾದರೂ ಆಂಧ್ರಪ್ರದೇಶದ ವಿಜಯವಾಡದಲ್ಲಿ ಬೆಳೆದಳು. ಚಿಕ್ಕವಳಿರುವಾಗಲಿಂದಲೇ ಈಕೆಗೆ ಪೈಲಟ್ ಆಗುವ ಆಸೆ ಕಾಡುತ್ತಿತ್ತಂತೆ. ಆಗ ಹುಟ್ಟಿದ ಕನಸಿಗೆ ನೀರೆಯುತ್ತಾ ಬಂದ ದಿವ್ಯಾ ಇದೀಗ ತನ್ನ ಕನಸನ್ನು ನನಸಾಗಿಸಿ ಕೊಂಡಿದ್ದಾಳೆ. 

  Woman Pilot

  ಸಂಬಂಧಿಕರ ವಿರೋಧ

  ಈಕೆಯ ಈ ಕನಸಿಗೆ ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ದರಾದರೂ ಪೋಷಕರಿಂದ ಬೆಂಬಲ ಸಿಕ್ಕಿತ್ತು. ಆದರೆ ಮಗಳ ವಿದ್ಯಾಭ್ಯಾಸಕ್ಕೆ ಹೆಚ್ಚು ಹಣ ಬೇಕಾದ್ದರಿಂದ ದಿವ್ಯಾಳ ಪೋಷಕರಿಗೆ ಸ್ವಲ್ಪ ಕಷ್ಟವಾಗಿತ್ತು. ಮೊದಲು ಸಾಲ ಮಾಡಿ ಹಣವನ್ನು ನೀಡಿದ್ದರು. ನಂತರ ದಿವ್ಯಾಳ ಪರಿಶ್ರಮದಿಂದ ವಿದ್ಯಾರ್ಥಿವೇತನವನ್ನು ಪಡೆದುಕೊಂಡಳು.

  ಉನ್ನತ ವಿದ್ಯಾಭ್ಯಾಸಕ್ಕೆ ಉತ್ತರ ಪ್ರದೇಶಕ್ಕೆ ಪಯಣ

  ಆಂಧ್ರಪ್ರದೇಶದ ವಿಜಯವಾಡದಲ್ಲಿ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದಳು. ತನ್ನ 17ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದಲ್ಲಿರುವ ಫ್ಲೈಯಿಂಗ್ ಸ್ಕೂಲ್ ಆದ ಇಂದಿರಾಗಾಂಧಿ ರಾಷ್ಟ್ರೀಯ ಯರನ್ ಅಕಾಡೆಮಿಗೆ (IGRUA) ಸೇರಿದಳು.

  ಅಲ್ಲಿನ ಪರಿಸರ ಸರಿಹೊಂದುತ್ತಿರಲಿಲ್ಲ!

  ಇಂಗ್ಲಿಷ್ ಭಾಷೆಯ ಉಚ್ಛಾರಣೆ, ಕಠಿಣವಾದ ವಿದ್ಯಾಭ್ಯಾಸ, ಸ್ನೇಹಿತರ ಕೊರತೆ, ವಿದ್ಯಾರ್ಥಿಗಳ ವಿನೋದಗಳು ಆನ್ನಿ ದಿವ್ಯಾಳಿಗೆ ಸಹಿಸಲಾಗುತ್ತಿರಲಿಲ್ಲ. ಕೆಲವು ದಿನಗಳ ಕಾಲ ಸಮಯ ಕಳೆಯುವುದೇ ಕಷ್ಟ ಎಂದು ಅನಿಸತೊಡಗಿತ್ತು

  ಇಂಗ್ಲಿಷ್ ಭಾಷೆಯಲ್ಲಿ ತುಂಬಾನೇ ವೀಕ್!

  ಇಂಗ್ಲಿಷ್ ಭಾಷೆಯ ಬಗ್ಗೆ ಇದ್ದ ಕಡಿಮೆ ಜ್ಞಾನಕ್ಕೆ ತರಗತಿಯಲ್ಲಿ ಇವಳು ಅವಮಾನಕ್ಕೆ ಒಳಗಾಗುತ್ತಿದ್ದಳು. ಇದು ನಿತ್ಯವೂ ನಡೆಯುತ್ತಿತ್ತು. ಈ ಕುರಿತು ಒಮ್ಮೆ ಬೇಸರವಾಗುತ್ತಿದ್ದರೂ ದಿವ್ಯಾ ಸುಮ್ಮನಾಗುತ್ತಿದ್ದಳು. ಆದರೆ ಇದನ್ನೇ ಚಾಲೆಂಜ್ ಆಗಿ ತಗೊಂಡ ದಿವ್ಯಾ ಇದೆಲ್ಲಾ ಸಮಸ್ಯೆಯನ್ನು ಎದುರಿಸಿ ಆಂಗ್ಲ ಭಾಷೆಯನ್ನು ಕಲಿತು 19 ವರ್ಷದಲ್ಲಿರುವಾಗ ಏರ್ ಇಂಡಿಯಾ ತರಬೇತಿಗೆ ಸೇರಿಕೊಂಡಳು. ತದನಂತರ ತರಬೇತಿಗಾಗಿ ಸ್ಪೇನ್‍ಗೆ ಹೋಗಿದ್ದಳು. ನಂತರ ಬೋಯಿಂಗ್ 737ಕ್ಕೆ ಹಾರುಡುವ ಅವಕಾಶ ಪಡೆದಳು.

  21ನೇ ವರ್ಷದಲ್ಲಿ ಲಂಡನ್‍ಗೆ ಹಾರಿದಳು

  21ನೇ ವರ್ಷದಲ್ಲಿ ತರಬೇತಿಗಾಗಿ ಲಂಡನ್‍ಗೆ ಹಾರಿದಳು. ನಂತರ ಆಕೆ ಬೋಯಿಂಗ್ 777ಅನ್ನು ಮೊದಲ ಬಾರಿಗೆ ಹಾರಿಸಿದಳು.

  ಅತ್ಯಂತ ಕಿರಿಯ ಮಹಿಳಾ ಕಮಾಂಡರ್ ಎನ್ನುವ ಖ್ಯಾತಿಗೆ ಪಾತ್ರಳಾದಳು!

  ತನ್ನ 30ನೇ ವರ್ಷದಲ್ಲಿ ಅತಿ ಉದ್ದವಾದ ಹಾಗೂ ವಿಶ್ವದಲ್ಲೇ ಅತಿ ದೊಡ್ಡ ಅವಳಿ ಜೆಟ್ ಆದ ಬೋಯಿಂಗ್ 777ರ ಅತ್ಯಂತ ಕಿರಿಯ ಮಹಿಳಾ ಕಮಾಂಡರ್ ಎನ್ನುವ ಖ್ಯಾತಿಗೆ ಪಾತ್ರಳಾದಳು.

  ಅತ್ಯಂತ ಪರಿಶ್ರಮದ ಪೈಲಟ್ ಎಂಬ ಬಿರುದು

  ಹಿರಿಯ ಏರ್ ಇಂಡಿಯಾ ಕಮಾಂಡರ್ ಹಾಗೂ ಬೋಧಕರು ಹೇಳುವ ಪ್ರಕಾರ ಆನ್ನಿ ದಿವ್ಯಾ ಅತ್ಯಂತ ಶ್ರದ್ಧೆಯಿಂದ ಕೆಲಸ ನಿರ್ವಹಿಸುವ ಅಭ್ಯರ್ಥಿ. ಇವಳು ಎಲ್ಲಾ ವಿಚಾರದಲ್ಲೂ ನುರಿತ ಮತ್ತು ಅತ್ಯಂತ ಪರಿಶ್ರಮದ ಪೈಲಟ್.

  ಕ್ಲಾಸಿಕಲ್ ಕೀಬೋರ್ಡ್, ವಿವಿಧ ನೃತ್ಯ ಕಲೆಯಲ್ಲೂ ಎತ್ತಿದ ಕೈ

  ಏರ್ ಇಂಡಿಯಾ ಕೆಲಸ ಮಾಡುವಾಗ ಅನ್ನಿ ದಿವ್ಯ, ಬಿಎಸ್ಸಿ ಅನಿಮೇಶನ್‌ನಲ್ಲಿ ಪದವಿ ಪಡೆದುಕೊಂಡಿದ್ದಳು. ಅಲ್ಲದೆ ಕ್ಲಾಸಿಕಲ್ ಕೀಬೋರ್ಡ್, ವಿವಿಧ ನೃತ್ಯ ಕಲೆಯನ್ನು ಕಲಿತಿದ್ದಾಳೆ.

  English summary

  Indian Woman Pilot Becomes The Youngest Ever Woman Commander Of Boeing 777

  Children from India’s aspiring middle-class usually take the medicine-engineering route. But few of the courage to take ‘The Road Not Taken’ and fewer still who take it knowing that the road ahead is going to very bumpy. Such is the story of Anny Divya, or to be precise - Captain Anny Divya. She chose to become a pilot when it was not considered a profession for women. Her colleague, Bitanko Biswas, shared her inspiring story.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more