For Quick Alerts
ALLOW NOTIFICATIONS  
For Daily Alerts

ಮನ ಕಲಕುವ ನಿಜ ಘಟನೆ ಇದು-ಈ ಸ್ಥಿತಿಗೆ ಯಾರು ಹೊಣೆ?

By Manu
|

ನಮ್ಮ ದೇಶ ಮುಂದುವರಿಯುತ್ತಿರುವ ರಾಷ್ಟ್ರ ಎನಿಸಿಕೊಂಡಿದ್ದರೂ, ಅದೆಷ್ಟೋ ಬಡವರು ನಮ್ಮಲ್ಲಿದ್ದಾರೆ. ಒಂದು ಹೊತ್ತಿನ ಊಟ, ತೊಡಲು ಬಟ್ಟೆ, ಇರಲು ಮನೆಯಿಲ್ಲದೆ ಅಸಹಾಯಕ ಸ್ಥಿತಿಯಲ್ಲಿರುವವರ ಸಂಖ್ಯೆಗೇನು ಕಡಿಮೆಯಿಲ್ಲ. ಮಾನವೀಯತೆ ಇಲ್ಲದ ಸಮಾಜ ಇಂತಹ ಬಡವರನ್ನು ಕುಕ್ಕಿ ತಿನ್ನುತ್ತಿದೆ.

ಇದಕ್ಕೆ ಸಾಕ್ಷಿ ಎನ್ನುವಂತೆ ಆಗೊಂದು ಈಗೊಂದು ಸುದ್ದಿ ಹೊರಬೀಳುತ್ತಿರುತ್ತದೆ. ಅಂತಹ ಸುದ್ದಿಗಳಲ್ಲಿ ಇದೂ ಒಂದು. ರಾಜಸ್ಥಾನದಲ್ಲಿ ರಿಕ್ಷಾ ಚಾಲಕನೊಬ್ಬ ತನ್ನ ನವಜಾತ ಶಿಶುವನ್ನು ಬಗಲಿಗೆ ಕಟ್ಟಿಕೊಂಡು, ಪ್ರಯಾಣಿಕರನ್ನು ಒಂದು ಕಡೆಯಿಂದ ಇನ್ನೊಂದೆಡೆಗೆ ಸಾಗಿಸುತ್ತಿರುವುದು.

ಭಾರವಾದ ಮನಸ್ಸಿನಿಂದ ಕೆಲಸ ನಿರ್ವಹಿಸುತ್ತಿರುವ ಈ ದೃಶ್ಯ ದೇಶ ವಿದೇಶದೆಲ್ಲೆಡೆ ಚರ್ಚೆಯ ಮಾತಾಗಿತ್ತು. ಇದನ್ನು ಕಂಡ ಜನತೆ ಕೈಲಾದ ಸಹಾಯ ಮಾಡಲು ಮುಂದಾಗಿ ಧನ ಸಹಾಯ ಮಾಡಿದ್ದಾರೆ. ಮನ ಕಲಕುವಂತಹ ಈ ವಿಚಾರದ ಹೆಚ್ಚಿನ ಮಾಹಿತಿ ಮುಂದಿದೆ ಓದಿ...

ಭಾರವಾದ ಮನಸ್ಸು

ಭಾರವಾದ ಮನಸ್ಸು

ರಾಜಸ್ಥಾನ ಮೂಲದ ಬಾಬ್ಲು ಜತವ್ ಎನ್ನುವವನು ತನ್ನ ಮಗುವನ್ನು ಬಗಲಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದ ವ್ಯಕ್ತಿ.

Image Courtesy

ಭಾರವಾದ ಮನಸ್ಸು

ಭಾರವಾದ ಮನಸ್ಸು

ಕಡು ಬಡತನದಲ್ಲಿದ್ದ ಈತನ ಹೆಂಡತಿ ಹೆಣ್ಣು ಮಗುವೊಂದಕ್ಕೆ ಜೀವ ನೀಡಿ ಐದು ದಿನದೊಳಗೆ ಮರಣ ಹೊಂದಿದ್ದಳು. ಹಾಗಾಗಿ ಮಗುವಿನ ಆರೈಕೆ ಮತ್ತು ಜೀವನ ನಿರ್ವಹಣೆಗೆ ಜತನ್ ಮಗುವನ್ನು ಬಗಲಿಗೆ ಕಟ್ಟಿಕೊಂಡೇ ದುಡಿಯ ಬೇಕಾಯಿತು.

ಧನ ಸಹಾಯ

ಧನ ಸಹಾಯ

ಮಗಳಾದ ದಾಮಿನಿ ಶಿಶುವಾಗಿರುವುದರಿಂದ ಅವಳನ್ನು ಬಗಲಿನಲ್ಲೇ ಇಟ್ಟುಕೊಂಡು ಬಾಬ್ಲು ಜತವ್ ತನ್ನ ಕೆಲಸ ನಿರ್ವಹಿಸುತ್ತಿದ್ದ. ಈ ಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದನ್ನು ಕಂಡ ದಾನಿಗಳು ಹಣ ಸಹಾಯ ಮಾಡಿದ್ದಾರೆ.

Image Courtesy

ಮಗುವಿಗೋಸ್ಕರ ಎರಡನೇ ಮದುವೆ ನಿರಾಕರಿಸಿದ್ದೇನೆ..

ಮಗುವಿಗೋಸ್ಕರ ಎರಡನೇ ಮದುವೆ ನಿರಾಕರಿಸಿದ್ದೇನೆ..

ಊರಿನಲ್ಲಿ ಎಲ್ಲರೂ ಇನ್ನೊಂದು ಮದುವೆ ಆಗಲು ಒತ್ತಾಯ ಪಡಿಸಿದರೂ, ಎಲ್ಲಿ ತನ್ನ ಎರಡನೇ ಪತ್ನಿ ಮಗುವನ್ನು ಸರಿಯಾಗಿ ನೋಡದಿದ್ದರೆ, ಎಂಬ ಒಂದೇ ಭಯದಲ್ಲಿ ಮದುವೆಯನ್ನು ನಿರಾಕರಿಸಿದ್ದೇನೆ, ನನಗೆ ನನ್ನ ಮಗಳ ಭವಿಷ್ಯವೇ ಮುಖ್ಯ ಎಂದು ದುಃಖಭರಿತ ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ಹೇಳುತ್ತಾನೆ ಬಾಬ್ಲು

Image Courtesy

ಮಗುವಿನ ಬೆಳವಣಿಗೆ

ಮಗುವಿನ ಬೆಳವಣಿಗೆ

ಬಾಬ್ಲು ಜಾತವ್ ಅವರ ಮಗಳಿಗೆ 23 ಲಕ್ಷ ರೂ. ಸಹಾಯ ಧನ ದೊರೆಯಿತು. ಇದನ್ನು ಜಾತವ್ ಸ್ಟೇಟ್ ಬ್ಯಾಂಕ್ ಆಫ್ ಬಿಕಾನರ್ ಎಂಬ ಬ್ಯಾಂಕ್‍ನಲ್ಲಿ ಠೇವಣಿ ಕೂಡ ಇರಿಸಿದ್ದಾರೆ, ಇದೆಲ್ಲಾ ಆರ್ಥಿಕ ಸಹಾಯ ಮಗುವಿನ ಮುಂದಿನ ಭವಿಷ್ಯಕ್ಕೆ ವಿನಿಯೋಗವಾಗಲಿದೆಯಂತೆ, ಭರತ್ಪುರ ಸರ್ಕಾರದ ಆರೋಗ್ಯ ತಪಾಸಣೆಯ ಅಡಿಯಲ್ಲಿ ಬೆಳವಣಿಗೆ ಕಂಡ ಮಗುವಿಗೆ ಈಗ ನಾಲ್ಕು ವರ್ಷ.

Image Courtesy

English summary

Indian rickshaw-puller forced to take baby to work!

The image of a man peddling a rickshaw with a baby hanging in a sling from his neck was carried around the world, leading many to donate for the poor family. Bablu Jatav’s wife had died five days after giving birth to his baby girl, Damini, forcing him to take his infant daughter to work.
X
Desktop Bottom Promotion