ಕಳ್ಳತನವೇ ನಡೆಯದ ಗ್ರಾಮವಿದು!-ಇದು ಕಾರ್ಣಿಕ 'ಶನಿ ದೇವನ' ಮಹಿಮೆ

By: Arshad
Subscribe to Boldsky

ಪ್ರತಿದಿನದ ಪತ್ರಿಕೆಯಲ್ಲಿ ಅಲ್ಲಲ್ಲಿ ಬಾಗಿಲು ಒಡೆದು ಆದ ಕಳ್ಳತನದ ಬಗ್ಗೆ ವರದಿಯಾಗುತ್ತಲೇ ಇರುತ್ತವೆ. ಅದರಲ್ಲೂ ಮನೆಯಿಂದ ಕೆಲ ದಿನ ಹೊರಹೋಗಬೇಕಾದರೆ ಮನೆಯನ್ನು ಎರಡೆರಡು ಬೀಗ ಹಾಕಿ ಎಲ್ಲಾ ಕಡೆ ಬಂದೋಬಸ್ತ್ ಆಗಿದೆ ಎಂದು ಖಚಿತಪಡಿಸಿಕೊಂಡು ಹೋದರೂ ಆತಂಕ ತಪ್ಪಿದ್ದಲ್ಲ.

ಅಂತಹದ್ದರಲ್ಲಿ ಒಂದು ಇಡಿಯ ಊರಿನ ಮನೆಗಳಲ್ಲಿ ಮನೆಗೆ ಬೀಗವೇ ಹಾಕುವುದಿಲ್ಲ ಎಂದರೆ? ಬೀಗ ಬಿಡಿ, ಮಹಾರಾಷ್ಟ್ರದಲ್ಲಿರುವ ಈ ಶನಿ ಶಿಂಗ್ನಾಪುರ ಗ್ರಾಮದ ಮನೆಗಳಿಗೆ ಮುಂಬಾಗಿಲೇ ಇಲ್ಲ! ಬರೆ ಮನೆಗಳಿಗೆ ಮಾತ್ರವಲ್ಲ, ಅಂಗಡಿ ಮುಂಗಟ್ಟು, ಬ್ಯಾಂಕುಗಳಿಗೂ ಮುಂಬಾಗಿಲಿಲ್ಲ. ಏಕೆಂದರೆ ಮುಂಬಾಗಿಲು ಹಾಗೂ ಬೀಗಗಳು ನೀಡುವುದಕ್ಕಿಂತಲೂ ಹೆಚ್ಚಿನ ಸುರಕ್ಷತೆಯನ್ನು 'ಶನಿದೇವ' ನೀಡುತ್ತಾನೆ ಎಂದು ಗ್ರಾಮಸ್ಥರು ಗಾಢವಾಗಿ ನಂಬಿದ್ದಾರೆ..... ಮುಂದೆ ಓದಿ

ಮುನ್ನೂರು ವರ್ಷಗಳ ಇತಿಹಾಸವಿದೆ

ಮುನ್ನೂರು ವರ್ಷಗಳ ಇತಿಹಾಸವಿದೆ

ಈ ನಂಬಿಕೆ ಇಂದು ನಿನ್ನೆಯದ್ದಲ್ಲ, ಸುಮಾರು ಮುನ್ನೂರು ವರ್ಷಗಳ ಹಿಂದೆ ಈ ಪ್ರದೇಶಲ್ಲಿ ಹಾದು ಹೋಗುವ ಪಾನಸ್ ನಾಲಾ ನದಿಯಲ್ಲಿ ಗಾಢ ಕಲ್ಲಿನ ಚಪ್ಪಡಿಯೊಂದು ಭಾರಿ ಮಳೆಯ ಬಳಿಕ ಉಂಟಾದ ನೀರಿನ ರಭಸದಿಂದ ಎಲ್ಲಿಂದಲೋ ಸಾಗಿಸಲ್ಪಟ್ಟು ಬಂದಿತ್ತು. ಇವನ್ನು ಗಮನಿಸಿದ ಗೋಪಾಲಕರು ಕುತೂಹಲದಿಂದ ಕಡ್ಡಿಯಿಂದ ಚುಚ್ಚಿದಾಗ ರಕ್ತ ಒಸರಿತ್ತು. ಅಂದಿನ ರಾತ್ರಿ ಊರಿನ ಹಿರಿಯರ ಕನಸಿನಲ್ಲಿ ಶನಿದೇವ ಪ್ರಕಟಗೊಂಡು ಈ ಕಲ್ಲು ತನ್ನದೇ ಪ್ರತಿರೂಪ

ಎಂದು ತಿಳಿಸಿದ.

ಉರಿನ ರಕ್ಷಣೆಗೆ ನಿಲ್ಲುವ ಶನಿದೇವ...

ಉರಿನ ರಕ್ಷಣೆಗೆ ನಿಲ್ಲುವ ಶನಿದೇವ...

ಈ ಕಲ್ಲನ್ನು ಊರಿನ ನಡುವೆ ಪ್ರತಿಷ್ಠಾಪಿಸಬೇಕೆಂದೂ, ತಾನು ಈ ಊರಿನ ರಕ್ಷಣೆ ಮಾಡುತ್ತೇನೆಂದೂ ತಿಳಿಸಿದ. ಆದರೆ ಶನಿದೇವನ ಇದರೊಂದಿಗೆ ಒಂದು ಶರತ್ತನ್ನೂ ವಿಧಿಸಿದ್ದ. ಅದೇನೆಂದರೆ ಈ ಗ್ರಾಮದ ಪ್ರತಿ ಮನೆಯನ್ನೂ ತಾನು ನೋಡಬೇಕೆಂದೂ ಇದಕ್ಕಾಗಿ ಯಾವುದೇ ಅಡ್ಡಿಗಳನ್ನು ಒಡ್ಡಬಾರದೆಂದೂ ತಿಳಿಸಿದ. ಆಗ ಮಾತ್ರವೇ ತಾನು ಊರಿನ ರಕ್ಷಣೆ ಮಾಡಲು ಸಾಧ್ಯ ಎಂದು ತಿಳಿಸಿದ.

'ಸಾಡೇ ಸಾತಿ' ಇದು ಶನಿ ದೇವನ ಇನ್ನೊಂದು ಅಗ್ನಿ ಪರೀಕ್ಷೆ!

 ಶನಿ ದೇವನ ಅಣತಿಯಂತೆ ದೇವಸ್ಥಾನಕ್ಕೆ ಬಾಗಿಲು-ಬೀಗಗಳೇ ಇಲ್ಲ!

ಶನಿ ದೇವನ ಅಣತಿಯಂತೆ ದೇವಸ್ಥಾನಕ್ಕೆ ಬಾಗಿಲು-ಬೀಗಗಳೇ ಇಲ್ಲ!

ಊರಿನ ಹಿರಿಯರ ಕನಸಿನಲ್ಲಿ ಬಂದು ಶನಿದೇವ ನೀಡಿದ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ ಗ್ರಾಮಸ್ಥರು ಈ ಕಲ್ಲನ್ನು ಊರಿನ ನಡುವೆ ಸೂರಿಲ್ಲದ ಮಂದಿರವೊಂದರ ನಡುವೆ ಇರಿಸಿದರು. ಅಂತೆಯೇ ಶಿಂಗ್ನಾಪುರ ಶನಿ ಶಿಂಗ್ನಾಪುರವಾಗಿ ಬದಲಾಯಿತು. ಶನಿದೇವನ ಅಣತಿಯಂತೆ ಎಲ್ಲಾ ಮನೆಗಳ ಬಾಗಿಲು ಮತ್ತು ಬೀಗಗಳನ್ನು ತೆರವು ಮಾಡಲಾಯಿತು.

ಮನೆ, ಅಂಗಡಿ, ಬ್ಯಾಂಕು ಯಾವುದಕ್ಕೂ ಬಾಗಿಲುಗಳಿಲ್ಲ

ಮನೆ, ಅಂಗಡಿ, ಬ್ಯಾಂಕು ಯಾವುದಕ್ಕೂ ಬಾಗಿಲುಗಳಿಲ್ಲ

ಶನಿದೇವನೇ ಈ ಊರಿನ ರಕ್ಷಣೆ ಮಾಡುವವನಿದ್ದಾಗ ಈ ಬಾಗಿಲು ಬೀಗಗಳಿಗೆ ಅವಶ್ಯಕತೆ ಇಲ್ಲದೆಯೇ ಹೋಯಿತು. ಹಾಗಾಗಿ ಅಂದಿನಿಂದ ಈ ಊರಿನ ಯಾವುದೇ ಮನೆ, ಅಂಗಡಿ, ಬ್ಯಾಂಕು ಯಾವುದಕ್ಕೂ ಬೀಗವಾಗಲೀ, ಮುಂಬಾಗಿಲು ಸಹಾ ಇಲ್ಲ. ಆದರೆ ತೆರೆದ ಮನೆಗಳಿಗೆ ನಾಯಿಗಳು ನುಗ್ಗುವ ಅವಕಾಶವಿರುವ ಕಾರಣ ನಾಯಿಗಳು ನುಗ್ಗದಂತೆ ಕೆಲವು ಹಲಗೆಗಳನ್ನು ಅಡ್ಡ ಇರಿಸುತ್ತಾರೆ ಅಷ್ಟೇ.

Image Courtesy

ಇಲ್ಲಿ ಕಳ್ಳತನದ ಭಯವೇ ಇಲ್ಲ...

ಇಲ್ಲಿ ಕಳ್ಳತನದ ಭಯವೇ ಇಲ್ಲ...

ಮನೆಯಲ್ಲಿ ನಗ, ಚಿನ್ನಾಭರಣ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಹಾಗೇ ಇರಿಸುತ್ತಾರೆ ಹಾಗೂ ನಿರಾಳವಾಗಿದ್ದಾರೆ. ಅಷ್ಟೇ ಅಲ್ಲ, ಶೌಚಾಲಯಕ್ಕೂ ಬಾಗಿಲುಗಳಿಲ್ಲ. ಬದಲಿಗೆ ಗೌಪ್ಯತೆ ಕಾಪಾಡಲು ತೆಳ್ಳಗಿನ ಪರದೆಯೊಂದನ್ನು ಬಳಸಲಾಗುತ್ತದೆ.

Image Courtesy

ಈ ಊರು ಭಾರತದ ಪ್ರಥಮ ಬೀಗರಹಿತ ಬ್ಯಾಂಕ್ ಎಂಬ ಖ್ಯಾತಿ ಪಡೆದಿದೆ

ಈ ಊರು ಭಾರತದ ಪ್ರಥಮ ಬೀಗರಹಿತ ಬ್ಯಾಂಕ್ ಎಂಬ ಖ್ಯಾತಿ ಪಡೆದಿದೆ

ಈ ಊರಿಗೆ 2015 ರ ಸೆಪ್ಟೆಂಬರ್ ವರೆಗೂ ಪೋಲೀಸ್ ಠಾಣೆಯೇ ಇರಲಿಲ್ಲ. ಆದರೆ ಸಂವಿಧಾನದ ಅವಶ್ಯಕತೆಗಾಗಿ ಈ ಸ್ಟೇಶನ್ ಸಹಾ ತೆರೆಯಲಾಗಿದ್ದರೂ ಇದುವರೆಗೂ ಒಂದೂ ಕಳ್ಳತನದ ಪ್ರಕರಣ ದಾಖಲಾಗಿಲ್ಲ. 2011ರಲ್ಲಿ ಈ ಊರಿಗೆ ಯುನೈಟೆಡ್ ಕಮರ್ಶಿಯಲು ಬ್ಯಾಂಕ್ ಒಂದು ತೆರೆಯಲಾಯಿತು ಹಾಗೂ ಈ ಬ್ಯಾಂಕಿಗೂ ಬೀಗವಿಲ್ಲದ ಕಾರಣ ಭಾರತದ ಪ್ರಥಮ ಬೀಗರಹಿತ ಬ್ಯಾಂಕ್ ಎಂಬ ದಾಖಲೆಯನ್ನೂ ಪಡೆಯಿತು. ಆದರೂ ಬ್ಯಾಂಕಿನ ಅವಶ್ಯಕತೆಗೆ ಅನುಗುಣವಾಗಿ ಗಾಜಿನ ಬಾಗಿಲು ಹಾಗೂ ಹೆಚ್ಚೂ ಕಡಿಮೆ ಅದೃಶ್ಯವಾಗಿರುವಂತೆ ರಿಮೋಟ್ ಕಂಟ್ರೋಲ್ ನಿಂದ ನಿಯಂತ್ರಿಸಬಹುದಾದ ಬೀಗವೊಂದನ್ನು ಅಳವಡಿಸಿ ಹಿರಿಯರ

ನಂಬಿಕೆಯನ್ನು ಗೌರವಿಸಲಾಗಿದೆ.

Image Courtesy

ಇವರು 'ಶನಿದೇವ'ನನ್ನು ನಂಬಿ ಎಲ್ಲವನ್ನೂ ಬಿಟ್ಟುಹೋಗುತ್ತಾರೆ

ಇವರು 'ಶನಿದೇವ'ನನ್ನು ನಂಬಿ ಎಲ್ಲವನ್ನೂ ಬಿಟ್ಟುಹೋಗುತ್ತಾರೆ

ಈ ಊರಿನ ಜನರು ಪರವೂರಿಗೆ ಹೋಗುವಾಗ ತಮ್ಮ ಮನೆಗಳನ್ನು ನೋಡಿಕೊಳ್ಳಲು ಪಕ್ಕದವರಿಗೆ ಹೇಳುವುದಿಲ್ಲ. ಹಾಗೆ ಮಾಡಿದರೆ ಶನಿದೇವ ಇವರಿಗೆ ಶಿಕ್ಷೆ ವಿಧಿಸುತ್ತಾನೆ ಎಂದು ನಂಬುತ್ತಾರೆ. ಅಲ್ಲದೇ ಇವರಿಗೆ ಶನಿದೇವನ ಸಾಡೆಸಾತಿ ಎಂಬ ದುರಾದೃಷ್ಟವೂ ಕಾಡಬಹುದು. ಒಮ್ಮೆ ಮನೆಗೆ ಹಲಗೆಯೊಂದನ್ನು ಅಡ್ಡವಿಟ್ಟ ಗ್ರಾಮಸ್ಥನ ಕಾರು ಮರುದಿನವೇ ಅಪಘಾತಕ್ಕೀಡಾಗಿತ್ತು ಎಂದು ಸ್ಥಳೀಯರು ತಿಳಿಸುತ್ತಾರೆ.

ಪ್ರತಿದಿನ ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ

ಪ್ರತಿದಿನ ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ

ಈ ನಂಬಿಕೆಯಿಂದ ಈ ಗ್ರಾಮಕ್ಕೆ ಪ್ರತಿದಿನ ನಲವತ್ತು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಕೇವಲ ನಂಬಿಕೆಯೊಂದು ಹೇಗೆ ಇಲ್ಲಿ ರಕ್ಷಣಾತ್ಮಕವಾಗಿದೆ ಎಂಬುದನ್ನು ನೋಡಿ ಮೂಕವಿಸ್ಮಿತರಾಗುತ್ತಾರೆ.

Image Courtesy

ಒಂದೂ ಕಳ್ಳತನ ನಡೆಯದ ಗ್ರಾಮವೆಂದೇ ದಾಖಲೆ ಉಳಿಸಿಕೊಂಡಿದೆ

ಒಂದೂ ಕಳ್ಳತನ ನಡೆಯದ ಗ್ರಾಮವೆಂದೇ ದಾಖಲೆ ಉಳಿಸಿಕೊಂಡಿದೆ

ಇಷ್ಟಿದ್ದರೂ 2010ರಲ್ಲಿ ಈ ಗ್ರಾಮಕ್ಕೆ ಭೇಟಿ ನೀಡಿದ ಪ್ರವಾಸಿಗರೊಬ್ಬರು ತನ್ನ ಮೂವತ್ತೈದು ಸಾವಿರ ರೂ ಕಳುವಾಗಿದೆ ಎಂದೂ,2011 ರಲ್ಲಿ ಎಪ್ಪತ್ತು ಸಾವಿರ ರೂಪಾಯಿಯ ಚಿನ್ನ ಕಳುವಾಗಿದೆ ಎಂದೂ ದೂರು ದಾಖಲಾಗಿತ್ತು.

Image Courtesy

ಒಂದೂ ಕಳ್ಳತನ ನಡೆಯದ ಗ್ರಾಮವೆಂದೇ ದಾಖಲೆ ಉಳಿಸಿಕೊಂಡಿದೆ

ಒಂದೂ ಕಳ್ಳತನ ನಡೆಯದ ಗ್ರಾಮವೆಂದೇ ದಾಖಲೆ ಉಳಿಸಿಕೊಂಡಿದೆ

ಆದರೆ ಈ ಪ್ರಕರಣಗಳು ಈ ಊರಿನ ಹೊರವಲಯದಲ್ಲಿ ನಡೆದವು ಎಂದು ಗ್ರಾಮಸ್ಥರು ಪ್ರತಿಪಾದಿಸಿದ ಕಾರಣ ಇಂದಿಗೂ ಒಂದೂ ಕಳ್ಳತನ ನಡೆಯದ ಗ್ರಾಮವೆಂದೇ ದಾಖಲೆ ಉಳಿಸಿಕೊಂಡಿದೆ. ಇದೇ ನಂಬಿಕೆ ಈ ಊರನ್ನು ಕಾಪಾಡುತ್ತಿದ್ದು ಮುಂದಿನ ಶತಮಾನಗಳಲ್ಲಿಯೂ ಮುಂದುವರೆಯಲಿದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.

English summary

In This Village, with no locks or Doors

Imagine a village where homes have no front doors and shops are always left unlocked and locals never feel unsafe. This is the story of shani shingnapur in India’s Maharashtra state, where villagers feel secured because of their undying faith in lord shani, the god of Saturn, who is considered the guardian of the village.
Subscribe Newsletter