ಇವುಗಳಲ್ಲಿ ಯಾವುದಾದರೂ ನೋಡಲಿಕ್ಕೆ ಸಿಕ್ಕರೆ ಅದೃಷ್ಟವೋ ಅದೃಷ್ಟ!

By: Arshad
Subscribe to Boldsky

ಪುರಾಣಗಳಲ್ಲಿ ಅದೃಷ್ಟದ ಬಗ್ಗೆ ಸ್ಪಷ್ಟ ವಿವರಣೆಯಿದ್ದು ಇದು ನಮ್ಮ ನಂಬಿಕೆಯನ್ನು ಅನುಸರಿಸಿದೆ ಎಂದು ಹೇಳಲಾಗಿದೆ. ಆದರೆ ನಿಮಗೆ ಅದೃಷ್ಟ ಒಲಿಯುವ ಸಾಧ್ಯತೆಯನ್ನು ಕೆಲವು ಸಂಗತಿಗಳು ಹೆಚ್ಚಿಸುತ್ತವೆ ಎಂಬುದು ನಿಮಗೆ ಗೊತ್ತಿತ್ತೇ? ಕೆಲವೊಮ್ಮೆ ಕೆಲವು ವಸ್ತುಗಳ ದರ್ಶನವಾದರೂ ನಿಮಗೆ ಅದೃಷ್ಟ ಒಲಿಯುವ ಸಾಧ್ಯತೆ ಹೆಚ್ಚುತ್ತದೆ. ತೂಕವೇ ಇವರ ಪಾಲಿಗೆ ಅದೃಷ್ಟ/ದುರದೃಷ್ಟಕರವಾಗಿತ್ತು..!

ಹಿಂದೂ ಪುರಾಣಗಳಲ್ಲಿ ಹೇಳಿರುವ ಪ್ರಕಾರ ಕೆಲವು ವಸ್ತುಗಳ ದರ್ಶನದಿಂದ ನೀವು ಹೋಗಬೇಕಾದ ಅಥವಾ ನಿರ್ವಹಿಸಬೇಕಾದ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವುದು ಎಂದು ತಿಳಿಸಲಾಗಿದೆ. ಈ ಬಗ್ಗೆ ಕೆಲವು ಮಾಹಿತಿಗಳನ್ನು ಇಂದು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ಇವುಗಳ ದರ್ಶನವಾದರೆ ಮುಂದಿನ ಕೆಲಸಗಳಲ್ಲಿ ಅದೃಷ್ಟ ನಿಮ್ಮ ಪರವಾಗಿ ಇರುತ್ತದೆ ಎಂದು ತಿಳಿಯಬಹುದು....

ಗುಬ್ಬಚ್ಚಿಗೂಡು

ಗುಬ್ಬಚ್ಚಿಗೂಡು

ಒಂದು ವೇಳೆ ಗುಬ್ಬಚ್ಚಿಯೊಂದು ನಿಮ್ಮ ಮನೆಯ ಮಾಳಿಗೆಯಲ್ಲಿ ಗೂಡು ಕಟ್ಟಿದರೆ ಇದು ಅದೃಷ್ಟಕರ ಎಂದು ತಿಳಿಯಬೇಕು. ಅದರಲ್ಲಿಯೂ ಗುಬ್ಬಚ್ಚಿ ಗೂಡು ಮಾಡಿ ಮರಿಗಳು ದೊಡ್ಡವಾಗಿ ಹಾರಿಹೋದ ಬಳಿಕ ಗೂಡು ಅನಾಥವಾರದೂ ಆ ಗೂಡನ್ನು ಹಾಗೇ ಇರಿಸಿಕೊಳ್ಳುವವರೆಗೂ ಅ ಮನೆಯ ಒಡೆಯನಿಗೆ ಅದೃಷ್ಟ ಒಲಿಯುತ್ತಲೇ ಇರುತ್ತದೆ.

ಮೊಲದ ಹೆಜ್ಜೆ ಗುರುತು

ಮೊಲದ ಹೆಜ್ಜೆ ಗುರುತು

ಒಂದು ವೇಳೆ ನಿಮ್ಮ ಮನೆಯಂಗಳದಲ್ಲಿ ಅಥವಾ ಹೊರಗೆಲ್ಲಾದರೂ ಮೊಲದ ಹೆಜ್ಜೆ ಗುರುತುಗಳು ಕಂಡು ಬಂದರೆ ಇದು ಸಹಾ ಅದೃಷ್ಟ ತರುವ ಸೂಚನೆಯಾಗಿದೆ. ಮನೆಯಲ್ಲಿ ಸಮೃದ್ಧಿ ಹಾಗೂ ಉನ್ನತಿಗಳು ತುಳುಕಾಡುತ್ತವೆ ಹಾಗೂ ಈ ಹೆಜ್ಜೆ ಗುರುತುಗಳನ್ನು ನೋಡಿದ ವ್ಯಕ್ತಿಗೆ ಅದೃಷ್ಟ ಕಾದಿರುತ್ತದೆ.

ನಾಲ್ಕು ಅಲಗುಗಳ ಎಲೆಗಳನ್ನು ಕಂಡಾಗ

ನಾಲ್ಕು ಅಲಗುಗಳ ಎಲೆಗಳನ್ನು ಕಂಡಾಗ

ಒಂದೇ ತೊಟ್ಟಿನಿಂದ ನಾಲ್ಕು ತದ್ರೂಪಿ ಎಲೆಗಳು ಅಥವಾ ಅಲಗುಗಳಿರುವ ಎಲೆ ದೇವರ ತ್ರಿರೂಪಗಳನ್ನು ಪ್ರತಿಬಿಂಬಿಸುತ್ತದೆ. ಈ ಎಲೆಗಳನ್ನು ಮನೆಯಲ್ಲಿ ಇರಿಸುವ ಮೂಲಕ ಮನೆಗೆ ಮನುಷ್ಯರ ಕೆಟ್ಟ ದೃಷ್ಟಿಯ ಸಹಿತ ಎಲ್ಲಾ ರೀತಿಯ ಕೆಟ್ಟ ದೃಷ್ಟಿಯಿಂದ ರಕ್ಷಣೆ ಒದಗುತ್ತದೆ.

ನಲ್ಲೆ ಜೀರುಂಡೆ (Ladybird)

ನಲ್ಲೆ ಜೀರುಂಡೆ (Ladybird)

ಕೆಂಪು ಬೆನ್ನಿನ ಮೇಲೆ ಕಪ್ಪು ಚುಕ್ಕೆ ಇರುವ ಈ ಪುಟ್ಟ ಜೀರುಂಡೆಗಳನ್ನು ಕಂಡ ಪ್ರಥಮ ವ್ಯಕ್ತಿಗೆ ಅದೃಷ್ಟ ಒಲಿಯುತ್ತದೆ. ಅಲ್ಲದೇ ಜೀರುಂಡೆಯನ್ನು ಕೊಲ್ಲದೇ ಹಾಗೇ ಬಿಟ್ಟು ಅದರ ಪಾಡಿಗೆ ಅದರ ಕೆಲಸ ಮುಗಿಸಿದರೆ ಅದೃಷ್ಟ ಆ ದಿನವಿಡೀ ಇರುತ್ತದೆ. ಬದಲಿಕೆ ಇದನ್ನು ಕೊಂದವರಿಗೆ ದುರಾದೃಷ್ಟ ಕಾಡುತ್ತದೆ.

ಡಾಲ್ಫಿನ್

ಡಾಲ್ಫಿನ್

ನೂರಾರು ವರ್ಷಗಳಿಂದ ಮೀನುಗಾರರ ಸ್ನೇಹಿತನಾಗಿರುವ ಡಾಲ್ಫಿನ್ ಮೀನುಗಳನ್ನು ಯಾರೂ ಬೇಟೆಯಾಡುವುದಿಲ್ಲ. ಡಾಲ್ಫಿನ್ ಮೀನುಗಳ ದರ್ಶನದಿಂದ ರಕ್ಷಣೆ ಹಾಗೂ ಅದೃಷ್ಟ ಲಭಿಸುತ್ತದೆ ಎಂದು ಮೀನುಗಾರರು ನಂಬುತ್ತಾರೆ. ಒಂದು ವೇಳೆ ಸಮುದ್ರದಲ್ಲಿ ದಿಕ್ಕು ತಪ್ಪಿದ್ದ ಸಮಯದಲ್ಲಿ ಡಾಲ್ಫಿನ್ ದರ್ಶನವಾದರೆ ತೀರ ಅನತಿ ದೂರದಲ್ಲಿಯೇ ಇದೆ ಎಂಬ ಸಂಕೇತವಾಗಿದೆ.

ಆನೆ

ಆನೆ

ಒಂದು ವೇಳೆ ಪ್ರಯಾಣದ ವೇಳೆಯಲ್ಲಿ ಆನೆಯ ದರ್ಶನವಾದರೆ ನಿಮ್ಮ ಪ್ರಯಾಣದ ಉದ್ದೇಶ ಯಾವುದೇ ವಿಘ್ನವಿಲ್ಲದೇ ನೆರವೇರುವುದು ಎಂದು ತಿಳಿಸಲಾಗಿದೆ. ಪುರಾಣಗಳ ಪ್ರಕಾರ ಆನೆ ಅದೃಷ್ಟದೇವತೆಯಾದ ವಿಘ್ನೇಶ್ವರನ ಪ್ರತಿರೂಪವಾಗಿದ್ದು ಆನೆಯನ್ನು ನೋಡುವುದೆಂದರೆ ವಿನಾಯಕನನ್ನೇ ನೋಡಿದಂತಾಗುತ್ತದೆ.

ಬಿದಿಗೆ ಚಂದ್ರನನ್ನು ನೋಡಿದರೆ

ಬಿದಿಗೆ ಚಂದ್ರನನ್ನು ನೋಡಿದರೆ

ಬಿದಿಗೆ ಚಂದ್ರ ಅಥವಾ ಪುಟ್ಟ ಕಮಾನಿನಾಕಾರದ ಚಂದ್ರನನ್ನು ನೋಡುವುದು ವಿಶೇಷವಾಗಿ ಮಗು ಮತ್ತು ಮಗುವಿನ ತಾಯಿಗೆ ಅದೃಷ್ಟ ತರುತ್ತದೆ. ಇದು ಮಗುವಿನ ಜೀವನದಲ್ಲಿ ಎಲ್ಲಾ ರೀತಿಯ ಕೇಡುಗಳಿಂದ ರಕ್ಷಿಸುತ್ತದೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.

ಕಪ್ಪೆ

ಕಪ್ಪೆ

ಕಪ್ಪೆ ಎಂದರೆ ಫಲವತ್ತತೆ ಮತ್ತು ಪ್ರೀತಿಯ ಸಂಕೇತವಾಗಿದೆ. ಪುರಾಣಗಳ ಪ್ರಕಾರ ಕಪ್ಪೆಗಳು ನೆಲದ ಮೇಲೆ ಇರುವುದನ್ನು ಕಂಡರೆ ಅದೃಷ್ಟಕಾರಕವಾಗಿದೆ. ಅದರಲ್ಲೂ ಮಕ್ಕಳಿಗೆ ಈ ನೋಟ ಹೆಚ್ಚಿನ ಅದೃಷ್ಟ ತರುತ್ತದೆ.

ಉಲ್ಕೆ

ಉಲ್ಕೆ

ಆಕಾಶ ನೋಡುತ್ತಿದ್ದಾಗ ಥಟ್ಟನೇ ಉಲ್ಕೆಯೊಂದು ಉರಿದು ಪ್ರಖರ ಗೆರೆಯಂತೆ ಮಿಂಚಿ ಮಾಯವಾದುದನ್ನು ಪೂರ್ಣವಾಗಿ ನೋಡಿದ ಹೊತ್ತಿನಲ್ಲಿಯೇ ಏನಾದರೂ ಕೇಳಿಕೊಂಡರೆ ದೇವರು ಆ ಕೋರಿಕೆಯನ್ನು ನೆರವೇರಿಸುತ್ತಾನೆ ಎಂದು ತಿಳಿಸಲಾಗಿದೆ.

ಕುದುರೆ ಲಾಳ

ಕುದುರೆ ಲಾಳ

ಕುದುರೆ ಲಾಳ ಓರ್ವ ವ್ಯಕ್ತಿಯ ಜೀವನದಲ್ಲಿ ಎದುರಾಗುವ ಎಲ್ಲಾ ಋಣಾತ್ಮಕ ಪ್ರಭಾವಗಳನ್ನು ನಿವಾರಿಸುತ್ತದೆ ಎಂದು ತಿಳಿಸಲಾಗಿದೆ. ವಿಶೇಷವಾಗಿ ಮನೆಯ ಹೊಸ್ತಿಲ ಮೇಲ್ಭಾಗದಲ್ಲಿ ತಲೆಕೆಳಗಾಗಿ ಕುದುರೆ ಲಾಳವನ್ನು ನೇತುಹಾಕಿದರೆ ಇದು ಮನೆಯಲ್ಲಿ ಋಣಾತ್ಮಕ ಶಕ್ತಿಗಳು ಪ್ರವೇಶಿಸುವುದನ್ನು ತಡೆಯುತ್ತದೆ ಎಂದು ವರ್ಣಿಸಲಾಗಿದೆ. ಮೇಲೆ ವಿವರಿಸಿದ ಪಟ್ಟಿಗೆ ಹೊರತಾದ ಇಂತಹ ಕುತೂಹಲಭರಿತ ವಿಷಯಗಳು ನಿಮ್ಮಲ್ಲಿದ್ದರೆ ಕಳೆಗಿನ ಕಮೆಂಟ್ಸ್ ಭಾಗದಲ್ಲಿ ನಮಗೆ ಬರೆದು ತಿಳಿಸಿ.

 
English summary

If You See These Things Luck Will Be On Your Side!

As per Hindu scriptures, it is believed that there are things that increase your chances of getting lucky and seeing these things will definitely help towards benefiting you. Find out more about the things that can increase your luck instantly and ensure that you have a good look at these things, as they are known to bring huge luck on your side.
Please Wait while comments are loading...
Subscribe Newsletter