ಮಿಥುನ, ವೃಶ್ಚಿಕ, ಕುಂಭ- ಈ ಮೂರು 'ಜನ್ಮರಾಶಿ'ಯವರು ಬಹಳ ಬುದ್ಧಿವಂತರಂತೆ!

By: manu
Subscribe to Boldsky

ವಿಜ್ಞಾನದ ಪ್ರಕಾರ ಜಾಣ್ಮೆಯಲ್ಲಿ ಎರಡು ವಿಧಗಳಿವೆ. ವಿಶ್ಲೇಷಣಾತ್ಮಕ ಹಾಗೂ ಭಾವಾತ್ಮಕ. ವಿಶ್ಲೇಷಣೆಯ ಜಾಣ್ಮೆಯನ್ನು ಐಕ್ಯೂ ಪರೀಕ್ಷೆಯ ಮೂಲಕ ನಿರ್ಧರಿಸಿದರೆ ಎರಡನೆಯ ಜಾಣ್ಮೆಯನ್ನು ಒಳಜ್ಞಾನ ಹಾಗೂ ಭಾವನೆಯಗಳ ಮೂಲಕ ಕೈಗೊಳ್ಳುವ ತರ್ಕವನ್ನು ಆಧರಿಸಿ ನಿರ್ಧರಿಸಲಾಗುತ್ತದೆ.

ಜ್ಯೋತಿಷ್ಯಾಸ್ತ್ರದಲ್ಲಿ ಹನ್ನೆರಡು ರಾಶಿಗಳಿವೆ. ಇವುಗಳಲ್ಲಿ ಮೂರು ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಈ ಎರಡೂ ಬಗೆಯ ಜಾಣ್ಮೆಯನ್ನು ಅತಿ ಹೆಚ್ಚಾಗಿ ಪಡೆದಿರುತ್ತಾರೆ. ಈ ಮಾಹಿತಿಯನ್ನು ಆಧರಿಸಿ ಈ ರಾಶಿಯ ಜನರು ಅತಿ ಹೆಚ್ಚು ಬುದ್ಧಿವಂತರು ಎಂದು ಕಂಡುಕೊಳ್ಳಲಾಗಿದೆ. 

ಅಪ್ರಾಮಾಣಿಕ ಜನರ, ರಾಶಿ ಭವಿಷ್ಯದಲ್ಲೂ ಮೋಸದ ಗುಣವಿದೆ!

ಇಂತಹ ವ್ಯಕ್ತಿಗಳು ತಮ್ಮ ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ಹೆಚ್ಚಿನ ಅರಿವು ಪಡೆದುಕೊಂಡಿದ್ದು ಇತರರ ಮೇಲೆ ಪ್ರಭಾವ ಬೀರಬಲ್ಲ ವ್ಯಕ್ತಿಗಳಾಗಿದ್ದಾರೆ.ಇದರರ್ಥ ಬೇರೆ ರಾಶಿಯಲ್ಲಿ ಹುಟ್ಟಿದ ಜನರು ದಡ್ಡರೆಂದು ಅರ್ಥವಲ್ಲ. ಬದಲಿಗೆ ಈ ರಾಶಿಯಲ್ಲಿ ಹುಟ್ಟಿದ ಜನರಿಗೆ ಕೆಲವು ಗ್ರಹಗಳು ಇತರರಿಗಿಂತ ಹೆಚ್ಚು ಪ್ರಭಾವ ಬೀರುತ್ತವೆ. ಬನ್ನಿ, ಈ ರಾಶಿಗಳು ಯಾವುವು ಎಂಬುದನ್ನು ನೋಡೋಣ.....

ಮಿಥುನ

ಮಿಥುನ

ಈ ರಾಶಿಯಲ್ಲಿ ಜನಸಿದ ವ್ಯಕ್ತಿಗಳಿಗೆ ಬುಧಗ್ರಹ ಅಧಿಪತಿಯಾಗಿದ್ದಾನೆ. ಬುಧ ಸಂವಹನದ ಗ್ರಹವಾಗಿದ್ದು ಅವಳಿಗಳ ಒಡೆಯನೂ ಆಗಿರುವ ಕಾರಣ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಉತ್ತಮ ವಾಗ್ಮಿಗಳೂ, ಸುಲಭವಾಗಿ ನಗೆಚಟಾಕಿ ಹಾರಿಸುವವರೂ ಹಾಗೂ ಜಾಣರೂ ಆಗಿರುತ್ತಾರೆ. ಇವರು ಗಣಿತದಲ್ಲಿ ಉತ್ತಮರಾಗಿದ್ದು ವಾಣಿಜ್ಯ ವಹಿವಾಟುದಾರದು, ಲೆಕ್ಕಪರಿಶೀಲಿಕರು, ಭೌತವಿಜ್ಞಾನಿ ಹಾಗೂ ಬ್ಯಾಂಕ್ ಮ್ಯಾನೇಜರ್ ಹುದ್ದೆಗಳನ್ನು ಸಫಲವಾಗಿ ನಿರ್ವಹಿಸುವವರಾಗಿರುತ್ತಾರೆ.

ಮಿಥುನ

ಮಿಥುನ

ಈ ರಾಶಿಯಲ್ಲಿ ಜನಿಸಿದ ಖ್ಯಾತ ವ್ಯಕ್ತಿಗಳು: ಡೇನಿಯಲ್ ಫ್ಯಾರೆನ್ ಹೀಟ್ (ಡಿಗ್ರಿ ಎಫ್ ತಾಪಮಾನದ ಸೂಚಿ ನೀಡಿದವರು) ಫ್ರಾನ್ಸಿಸ್ ಕ್ರಿಕ್ (ಡಿ ಎನ್ ಎ ರಚನೆಯನ್ನು ಕಂಡುಹಿಡಿದವರು), ಮೇರಿ ಆನಿಂಗ್ (ಖ್ಯಾತ ಪ್ರಾಕ್ತನಶಾಸ್ತ್ರಜ್ಞೆ), ಜೇಮ್ಸ್ ಕ್ಲರ್ಕ್ ಮ್ಯಾಕ್ಸ್ವೆಲ್ (ಆಧುನಿಕ ಭೌತವಿಜ್ಞಾನದ ಪಿತಾಮಹ, ವಿದ್ಯುದಾಯಸ್ಕಾಂತ ಶಕ್ತಿಯನ್ನು ಕಂಡುಹಿಡಿದವರು)

ವೃಶ್ಚಿಕ

ವೃಶ್ಚಿಕ

ಈ ರಾಶಿಯ ಜನರು ಕೊಂಚ ಭಿನ್ನ ವ್ಯಕ್ತಿತ್ವ ಹೊಂದಿದ್ದು ತರ್ಕಬದ್ದವಲ್ಲದ ನಿರ್ಧಾರಗಳನ್ನು ಪ್ರಕಟಿಸುವವರಾಗಿದ್ದರೂ ಜಾಣರು ಹೇಗಾಗುತ್ತಾರೆ ಎಂದು ಅಚ್ಚರಿ ಪಡಬೇಡಿ. ಆದರೆ ಇವರು ಇಷ್ಟಪಟ್ಟ ವಿಷಯದ ಕುರಿತು ನಡೆಸುವ ಆಳವಾದ ಅಧ್ಯಯನ ಇವರ ಏಕಾಗ್ರತೆಯನ್ನು ಹೆಚ್ಚಿಸಿ ಹೆಚ್ಚು ಹೆಚ್ಚಾಗಿ ಪ್ರೇರಣೆ ನೀಡುವವರೂ ಆಗಿರುತ್ತಾರೆ. ಇವರು ವಿಷಯದ ಸೂಕ್ಷ್ಮತೆಗಳನ್ನು ಕೆದಕಿ ಅರಿಯುವ ಹಾಗೂ ಸುಲಭದ ದಾರಿಯನ್ನು ಕಂಡುಕೊಳ್ಳುವವರೂ ಆಗಿರುತ್ತಾರೆ.

ನಿಮ್ಮ ರಾಶಿಯ ಮೇಲೆ ಶನಿಯ ಪ್ರಭಾವ ಹೀಗಿದೆ ನೋಡಿ....

ವೃಶ್ಚಿಕ

ವೃಶ್ಚಿಕ

ಖ್ಯಾತ ವ್ಯಕ್ತಿಗಳು:ಹೋಮಿ ಜಹಾಂಗೀರ್ ಭಾಭಾ, ಸರ್ ಸಿ.ವಿ. ರಾಮನ್, ಮ್ಯಾಡಮ್ ಕ್ಯೂರಿ, ಬಿಲ್ ಗೇಟ್ಸ್

ಕುಂಭ

ಕುಂಭ

ಈ ರಾಶಿಯ ಅಧಿಪತಿ ಶನಿಯಾಗಿದ್ದು ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಸ್ವತಂತ್ರ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಹಾಗೂ ತಮ್ಮದೇ ವಿಚಾರಗಳನ್ನು ಮಂಡಿಸುತ್ತಾರೆ.ಇವರು ಹೆಚ್ಚು ಪ್ರತ್ಯಕ್ಷಜನಿತರೂ ಹಾಗೂ ಪ್ರತಿಫಲಾಪೇಕ್ಷಿಗಳೂ ಆಗಿರುತ್ತಾರೆ. ಇವರು ಜನ್ಮತಃ ಸಮಾಜದ ಕುಂದು ಕೊರತೆಗಳನ್ನು ಪ್ರಶ್ನಿಸುವ ಎದೆಗಾರಿಕೆ ಹೊಂದಿರುತ್ತಾರೆ ಹಾಗೂ ದೂರದೃಷ್ಟಿಯುಳ್ಳವರಾಗಿರುತ್ತಾರೆ. ಈ ಕಾರಣಗಳಿಂದ ಇವರಿಗೆ ಜಾಣರು ಎಂಬ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ.

ಕುಂಭ

ಕುಂಭ

ಖ್ಯಾತ ವ್ಯಕ್ತಿಗಳು:ಚಾರ್ಲ್ಸ್ ಡಾರ್ವಿನ್(ಜೀವಶಾಸ್ತ್ರಜ್ಞ), ಗೆಲಿಲಿಯೋ ಗೆಲಿಲೈ(ವಿಜ್ಞಾನಿ), ಥೋಮಸ್ ಆಲ್ವಾ ಎಡಿಸನ್ (ಎಲೆಕ್ಟ್ರಿಕ್ ಬಲ್ಬ್ ಕಂಡುಹಿಡಿದವರು)

ರಾಶಿಫಲದ ಪ್ರಕಾರ ದೇವರನ್ನು ಪೂಜಿಸಿ, ಸಂತೃಪ್ತಿ ಪಡೆಯಿರಿ

English summary

If You Are Born Under These Zodiac Signs, You Are The Smartest Ones!

Based on that, they have been refered to as the most intelligent or smart. If people born under these signs tap into their potential, they would understand and grasp any phenomena occuring around them easily. Now this does not mean that people born under other zodiac signs are dumb! It only states that certain planets influence a particular trait more in a zodiac sign.Check out if your sun sign is one of these three!
Subscribe Newsletter