Latest Updates
-
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ!
ಸ್ವಪ್ನ ಶಾಸ್ತ್ರ: ಸತ್ತವರು ಕನಸಲ್ಲಿ ಬಂದರೆ ಅದರ ಅರ್ಥ ಹೀಗೂ ಇರಬಹುದು!
ಜೀವನದಲ್ಲಿ ನಾವು ಅಂದುಕೊಂಡಿದ್ದು ಸಿಗದಿದ್ದಾಗ ಹಗಲು ಕನಸು ಕಾಣುವ ಮೂಲಕವಾದರೂ ಆಸೆಯನ್ನು ಪೂರ್ಣಗೊಳಿಕೊಳ್ಳುತ್ತೇವೆ. ಅದೇ ನಾವು ನಿದ್ರೆ ಮಾಡುವಾಗ ಅಂದುಕೊಳ್ಳದ ಕನಸುಗಳು ಬಂದು ನಮಗೆ ಅನೇಕ ಗೊಂದಲಗಳನ್ನು ಸೃಷ್ಟಿಸುತ್ತವೆ. ನಿದ್ರೆ ಮಾಡುವಾಗ ಕಾಣುವ ಕನಸುಗಳು ತನ್ನದೇ ವಿಶೇಷತೆಯನ್ನು ಹೊಂದಿರುತ್ತವೆ. ಕೆಲವು ಕನಸುಗಳು ನಮ್ಮ ಭವಿಷ್ಯವನ್ನು ಹೇಳಿದರೆ ಇನ್ನು ಕೆಲವು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತವೆ ಎಂದು ಸ್ವಪ್ನ ಶಾಸ್ತ್ರ ವಿವರಿಸುತ್ತದೆ.
ನಾವು ಕಂಡ ಕನಸುಗಳು ಕೆಲವೊಮ್ಮೆ ನಮಗೆ ನೆನಪಿರುವುದಿಲ್ಲ. ಕನಸಿನ ಸ್ಮರಣೆಯೊಂದಿಗೆ ಬೆಳಿಗ್ಗೆ ಎದ್ದರೆ, ಅದನ್ನು ವಿಶ್ಲೇಷಿಸಬಹುದು. ಮೊದಲು ಈ ಕನಸು ಬಿದ್ದಿತ್ತೇ? ಅಥವಾ ಇದೇ ಮೊದಲ ಬಾರಿ ಈ ರೀತಿಯ ಕನಸೇ? ಎಂದು ತಿಳಿಯಬಹುದು. ಕೆಲವೊಮ್ಮೆ ಆಶ್ಚರ್ಯ ಎನ್ನುವ ರೀತಿಯಲ್ಲಿ ಸತ್ತ ವ್ಯಕ್ತಿಗಳು ನಮ್ಮ ಕನಸಲ್ಲಿ ಬರುತ್ತಾರೆ. ಹೀಗೆ ಭೂಮಿಯಲ್ಲಿ ಇರದ ವ್ಯಕ್ತಿಗಳು ನಮ್ಮ ಕನಸಿನಲ್ಲಿ ಬಂದರೆ ಅದು ನಮ್ಮ ಭವಿಷ್ಯದ ಕೆಲವು ಮಾಹಿತಿಯನ್ನು ನೀಡುತ್ತವೆ ಎನ್ನಲಾಗುತ್ತದೆ. ಈ ವಿಚಾರದ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ....

ಪ್ರೇತದೊಂದಿಗೆ ಮಾತನಾಡಿದಂತೆ ಕನಸು ಕಂಡರೆ!
ನೀವು ಪ್ರೇತದೊಂದಿಗೆ ಮಾತನಾಡಿದಂತೆ ಕನಸು ಕಂಡರೆ, ಮನಸ್ಸಿನ ಇಂಗಿತಗಳು ಬಹು ಬೇಗ ಈಡೇರುತ್ತವೆ ಎನ್ನುವ ಸೂಚನೆಯನ್ನು ನೀಡುತ್ತದೆ...

ಕನಸಿನಲ್ಲಿ ಸತ್ತವ್ಯಕ್ತಿ ಶವ ಪೆಟ್ಟಿಗೆ
ಕನಸಿನಲ್ಲಿ ಸತ್ತವ್ಯಕ್ತಿ ಶವ ಪೆಟ್ಟಿಗೆಯಲ್ಲಿರುವಂತೆ ಕಂಡರೆ, ಸದ್ಯದಲ್ಲೇ ನಿಮಗೆ ಅಪಘಾತ ಆಗುವ ಸಂಭವ ಇದೆ ಎನ್ನುವ ಸಂದೇಹವನ್ನು ನೀಡುತ್ತದೆ.

ಸಮಾಧಿಯನ್ನು ಕನಸಿನಲ್ಲಿ ಕಂಡರೆ
ಶುದ್ಧವಾದ ಸಮಾಧಿಯನ್ನು ಕನಸಿನಲ್ಲಿ ಕಂಡರೆ, ಅದೃಷ್ಟದ ಬಾಗಿಲು ತೆರೆಯುತ್ತದೆ ಎನ್ನುವ ಸೂಚನೆ. ಅಲ್ಲದೆ ಆರ್ಥಿಕ ಸ್ಥಿತಿಯೂ ಉತ್ತಮಗೊಳ್ಳುವುದು ಎನ್ನುವ ಮಾಹಿತಿಯನ್ನು ನೀಡುತ್ತದೆ.

ಪ್ರೇತ/ಭೂತದ ಜೊತೆ ನೀವು ಸ್ನೇಹಿತರಾದರೆ!
ಪ್ರೇತ/ಭೂತದ ಜೊತೆ ನೀವು ಸ್ನೇಹಿತರಾಗಿರುವಂತಹ ಕನಸು ಕಂಡರೆ, ವ್ಯಾಪಾರ ಮತ್ತು ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಹೊಂದುತ್ತೀರಿ ಎನ್ನುವ ಮಾಹಿತಿಯನ್ನು ನೀಡುತ್ತದೆ.

ಸತ್ತ ವ್ಯಕ್ತಿಗಳ ಕನಸ್ಸು ಪದೇ ಪದೇ ಕಾಣುತ್ತಿದ್ದರೆ...
ಕನಸಿನಲ್ಲಿ ಹಲವು ಬಾರಿ ಸತ್ತ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಿದ್ದರೆ, ಅದು ನಿಮ್ಮ ಮಾನಸಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.

ಸತ್ತ ಸಂಬಂಧಿಕರು ಅಥವಾ ಪಾಲಕರು ಕನಸಿನಲ್ಲಿ ಕಾಣಿಸಿಕೊಂಡರೆ
ಸತ್ತ ಸಂಬಂಧಿಕರು ಅಥವಾ ಪಾಲಕರು ನಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ, ತೊಂದರೆಗಳು ಮುಂದಿನ ದಿನಗಳಲ್ಲಿ ಎದುರಾಗುತ್ತವೆ. ಅದಕ್ಕಾಗಿ ಸಮಸ್ಯೆಯಿಂದ ಪಾರಾಗುವ ಮಾರ್ಗವನ್ನು ಕಂಡುಕೊಳ್ಳಬೇಕು ಎನ್ನುವ ಮಾಹಿತಿ ನೀಡುತ್ತದೆ.

ಮೃತರಾದ ತಂದೆ ತಾಯಿಯೊಂದಿಗೆ ಮಾತನಾಡಿದಂತೆ ಕನಸು ಕಂಡರೆ
ಮೃತರಾದ ತಂದೆ ತಾಯಿಯೊಂದಿಗೆ ಮಾತನಾಡಿದಂತೆ ಕನಸು ಕಂಡರೆ ಅದು ನಿಮ್ಮ ಆಂತರಿಕ ನೆಮ್ಮದಿ/ಶಾಂತಿಯನ್ನು ನೀಡುತ್ತದೆ. ಅಲ್ಲದೆ ಇದು ಕುಟುಂಬದ ವ್ಯವಹಾರದ ಏಳಿಗೆಯನ್ನು ಸೂಚಿಸುತ್ತದೆ.

ತೀರಿಹೋದ ಯಾರಾದರೊಬ್ಬ ಸದಸ್ಯರು ಕನಸಿನಲ್ಲಿ ಕಾಣಿಸಿಕೊಂಡರೆ
ಕುಟುಂಬದಲ್ಲಿ ತೀರಿಹೋದ ಯಾರಾದರೊಬ್ಬ ಸದಸ್ಯರು ಕನಸಿನಲ್ಲಿ ಕಾಣಿಸಿಕೊಂಡರೆ, ಅದು ಒಳ್ಳೆಯದಲ್ಲ ಎಂದು ಹಿಂದೂ ಶಾಸ್ತ್ರ ಹೇಳುತ್ತದೆ. ಅಲ್ಲದೆ ಅವರ ಆತ್ಮಕ್ಕೆ ಮೋಕ್ಷ ದೊರೆತಿಲ್ಲ ಎನ್ನುವ ಅರ್ಥವನ್ನು ಹೇಳುತ್ತದೆ.

ತೀರಿಹೋದ ಯಾರಾದರೊಬ್ಬ ಸದಸ್ಯರು ಕನಸಿನಲ್ಲಿ ಕಾಣಿಸಿಕೊಂಡರೆ
ಕನಸಿನಲ್ಲಿ ಸತ್ತ ಕುಟುಂಬದ ಸದಸ್ಯರು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ, ಅವರ ಹೆಸರಿನಲ್ಲಿ ಪೂಜೆ ಅಥವಾ ಶ್ರಾದ್ಧ ಮಾಡಿಸಬೇಕು ಎನ್ನವ ಅರ್ಥ ನೀಡುತ್ತದೆ.



Click it and Unblock the Notifications











