For Quick Alerts
ALLOW NOTIFICATIONS  
For Daily Alerts

ಅಯ್ಯೋ ಹೆದರಬೇಡಿ! ಇದೆಲ್ಲಾ ಕಂಪ್ಯೂಟರ್ ಗ್ರಾಫಿಕ್ಸ್‌ನ ಮಹಿಮೆ!

By Arshad
|

ಬಾಹ್ಯ ಸೌಂದರ್ಯವೇನಿದ್ದರೂ ಚರ್ಮದ ಹೊರಪದರವೇ ಹೊರತು ಹೊರಪದರ ಕಳಚಿದರೆ ಎಲ್ಲರ ಬಣ್ಣವೂ ಒಂದೇ. ಈ ಚರ್ಮದ ಹೊರಪದರವೇ ನಮ್ಮನ್ನು ಇತರರು ಗುರುತಿಸಲು ಸಾಧ್ಯವಾಗುವ ಅಂಗವಾಗಿದ್ದು ಕೇವಲ ಒಂದು ಮಿಲಿಮೀಟರ್ ನಷ್ಟು ತೆಳ್ಳಗಿನ ಪದರ ಗಮನಿಸಲೂ, ಪ್ರೀತಿಸಲೂ, ದ್ವೇಷಿಸಲೂ ಕಾರಣವಾಗುತ್ತದೆ.

ಈ ಒಂದು ಮಿಲಿಮೀಟರ್ ನ ಆಳಕ್ಕಿಳಿದರೆ ನಾವೆಲ್ಲರೂ ಒಂದೇ ಎಂಬ ತತ್ವವನ್ನು "ಒನ್ ಮಿಲಿಮೀಟರ್" ಎಂಬ ಯೋಜನೆಯ ಮೂಲಕ ಅಲೆಕ್ಸ್ ವಾಡೆಲ್ಟನ್ ಹಾಗೂ ಮಾರ್ಕಸ್ ಬೈರ್ನೇ ಎಂಬಿಬ್ಬರು ಮಹಾಶಯರು ಪ್ರಾರಂಭಿಸಿದ್ದಾರೆ. ಈ ಒಂದು ಮಿಲಿಮೀಟರ್ ತೆಳ್ಳಗಿನ ಚರ್ಮವನ್ನು ನಿವಾರಿಸಿದರೆ ನಾವೆಲ್ಲರೂ ಒಂದೇ ರೀತಿಯಾಗಿ ಕಾಣುತ್ತೇವೆ, ನಾವೆಲ್ಲರೂ ಸಮಾನ ಮನುಜರಾಗಿದ್ದೇವೆ ಎಂಬುದನ್ನು ತಿಳಿಸರು ಇವರು ಕಂಪ್ಯೂಟರ್ ಗ್ರಾಫಿಕ್ಸ್ ಮೂಲಕ ಖ್ಯಾತ ವ್ಯಕ್ತಿಗಳ ಮುಖದ ಚರ್ಮವನ್ನು ಒಂದು ಮಿಲಿಮೀಟರಿನಷ್ಟು ಸುಲಿದರೆ ಹೇಗೆ ಕಾಣಬಹುದೆಂಬ, ಕೊಂಚ ಭೀತಿ ಹುಟ್ಟಿಸುವ, ಚಿತ್ರಗಳನ್ನು ಬಿಡುಗಡೆಗೊಳಿಸಿದ್ದಾರೆ.

ಕೆಳಗಿನ ಚಿತ್ರಗಳನ್ನು ಒಮ್ಮೆ ಸ್ಥೂಲವಾಗಿ ಗಮನಿಸಿದ ಬಳಿಕ ಮತ್ತೊಮ್ಮೆ ಒಂದಾದರೊಂದರಂತೆ ಕೇವಲ ಚರ್ಮ ಸುಲಿದ ಚಿತ್ರಗಳನ್ನು ಮಾತ್ರವೇ, ಆ ವ್ಯಕ್ತಿಗಳ ಮೂಲ ಚಿತ್ರಕ್ಕೆ ಹೋಲಿಸದೇ, ಗಮನಿಸಿ. ಆಶ್ಚರ್ಯವೆಂಬಂತೆ ಈ ಎಲ್ಲಾ ಚಿತ್ರಗಳು ಬಹುತೇಕ ಒಂದೇ ವ್ಯಕ್ತಿಯದು ಎಂಬಂತೆ ತೋರುತ್ತದೆ. ಈ ಮೂಲಕ ಚರ್ಮದ ಹೊರಪದರದ ಹೊರತಾಗಿ ನಾವೆಲ್ಲರೂ ಕೇವಲ ಕ್ಷುದ್ರ ಮನುಜರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಬನ್ನಿ, ಯಾವ ಖ್ಯಾತ ರಾಜಕಾರಣಿಗಳ ಮುಖದ ಚರ್ಮ ಸುಲಿದರೆ ಹೇಗೆ ಕಾಣುತ್ತಾರೆ ಎಂಬುದನ್ನು ನೋಡೋಣ...

#1

#1

ಅಮೇರಿಕಾದ ಅಧ್ಯಕ್ಷರಾದ ಡೋನಾಲ್ಡ್ ಟ್ರಂಪ್ ಈ ರೀತಿಯಾಗಿ ಕಾಣುತ್ತಾರೆ.

Image Courtesy-:Marcusb Byrne

#2

#2

'ವ್ಲಾಡಿಮೀರ್ ಪುಟಿನ್' ರವರು ಈ ರೀತಿಯಾಗಿ ಕಾಣುವರು.

#3

#3

'ಆಂಜೆಲಾ ಮರ್ಕರ್' ರವರು ಈ ರೀತಿಯಾಗಿ ಕಾಣುವರು.

#4

#4

ಉತ್ತರ ಕೊರಿಯಾದ ಸರ್ವಾಧಿಕಾಅರಿ 'ಕಿಂ ಜಾಂಗ್ ಉನ್' ರವರು ಈ ರೀತಿಯಾಗಿ ಕಾಣುವರು.

#5

#5

ಬ್ರಿಟನ್ನಿನ 'ಥೆರೆಸಾ' ರವರು ಈ ರೀತಿಯಾಗಿ ಕಾಣುವರು.

#6

#6

ಚೀನಾದ ಪ್ರಧಾನ ಕಾರ್ಯದರ್ಶಿ 'ಕ್ಸಿ ಜಿಂಪಿಂಗ್' ರವರು ಈ ರೂಪ ಪಡೆಯುತ್ತಾರೆ.

#7

#7

ಆಸ್ಟ್ರೇಲಿಯಾದ ಪ್ರಧಾನಿ 'ಮಾಲ್ಕಂ ಟರ್ನ್ಬುಲ್' ರವರು ಈ ರೀತಿಯಾಗಿ ಕಾಣುವರು

#8 'Jacob Zuba' would look like the rest of us!

#8 'Jacob Zuba' would look like the rest of us!

ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದ 'ಜಾಕೋಬ್ ಝುಮಾ'ರವರು ಈ ರೀತಿಯಾಗಿ ಕಾಣುವರು.

#9

#9

ಭಾರತದ ಪ್ರಧಾನಿ 'ನರೇಂದ್ರ ಮೋದಿ'ಯವರ ಒಂದು ಮಿಲಿಮೀಟರ್ ಚರ್ಮ ನಿವಾರಣೆಯಾದರೆ ಗುರುತೇ ಸಿಗುತ್ತಿಲ್ಲ, ಯಾವುದೇ ಸಾಮಾನ್ಯ ವ್ಯಕ್ತಿಯಂತೆಯೇ ತೋರುತ್ತಾರೆ.

English summary

How Would Politicians Look If Their Skin Is Peeled? This Is How!

Did you know that just one millimeter of skin is what makes us all look different. This is the one millimeter that creates divides and even leads people to hate each other! A project imagined by Alex Wadelton and Marcus Byrne, aimed at defining how we all humans are the same at the end of the day. They named the project as "One Millimeter".
X
Desktop Bottom Promotion