Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ರಾಶಿ ಭವಿಷ್ಯ: ಶನಿಯ ದಯೆಗೆ ಒಳಗಾಗುವಿರಾ? ಅಥವಾ ಕೋಪಕ್ಕೆ ಬಲಿಯಾಗುವಿರಾ?
ಸುಮಾರು ಎರಡು ವರ್ಷ ಆರು ತಿಂಗಳ ಕಾಲದಿಂದಲೂ ಶನಿಯು ಚಂದ್ರನ ಮನೆಯಲ್ಲಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಯ ಕುಂಡಲಿಗನುಗುಣವಾಗಿ ಶನಿಯ ಪ್ರಭಾವವನ್ನು ಅನುಭವಿಸುತ್ತಿದ್ದಾರೆ. ದೃಷ್ಟದ ಬದಲಾವಣೆ ಅಥವಾ ಅದರ ಪ್ರಭಾವವನ್ನು ಹೆಚ್ಚಿಸುವ-ಇಳಿಸುವ ಶಕ್ತಿಯನ್ನು ಹೊಂದಿರುವ ಪ್ರಬಲವಾದ ದೇವತೆಗಳಲ್ಲಿ ಶನಿ ದೇವನೂ ಒಬ್ಬನು. ಶನಿಯ ಪ್ರಭಾವಕ್ಕೆ ಒಳಗಾದ ವ್ಯಕ್ತಿಯೂ ಪ್ರಭಾವದಿಂದ ಹೊರ ಬರುವ ವೇಳೆಯಲ್ಲಿ ಉತ್ತಮವಾದ ಜೀವನ ಶೈಲಿಯ ಬಗೆಯನ್ನು ಅರಿತಿರುತ್ತಾರೆ ಎನ್ನಲಾಗುತ್ತದೆ.
2018ರಲ್ಲಿ ಶನಿಯು ಪ್ರತಿಯೊಂದು ರಾಶಿ ಚಕ್ರದ ಮೇಲೆ ಪ್ರಭಾವ ಬೀರುತ್ತಾನೆ. ಆದರೆ ಅದರ ಪ್ರತಿಫಲವು ಕೆಲವರಿಗೆ ಅನುಕೂಲವನ್ನು ತಂದೊಡ್ಡಬಹುದು. ಕೆಲವರಿಗೆ ಸಂಕಷ್ಟಗಳ ಸಂದರ್ಭ ಆಗಿರಬಹುದು. ನಿಮ್ಮ ಹೊಸ ವರ್ಷದ ಭವಿಷ್ಯದ ಮೇಲೆ ಶನಿಯು ಕೆಂಗಣ್ಣಿಗೆ ಗುರಿಯಾಗಿರುತ್ತೀರಾ? ಇಲ್ಲವೇ ಆತನ ದಯೆಗೆ ಪಾತ್ರರಾಗಿ, ಸಂತೋಷವನ್ನು ಪಡೆದುಕೊಳ್ಳುವಿರಾ? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಈ ಮುಂದೆ ಇರುವ ಶನಿ ಪ್ರಭಾವದ ವಿವರಣೆಯನ್ನು ನೋಡಿ...

ಮೇಷ
ಈ ರಾಶಿ ಚಕ್ರದವರಿಗೆ ಮುಂಬರುವ ಹೊಸ ವರ್ಷದಲ್ಲಿ ಶನಿಯು ಪ್ರಭಾವದಿಂದ ಅತೀವ ಅನಿರೀಕ್ಷಿತ ಘಟನೆಗಳಿಗೆ ಒಳಗಾಗುವ ಸಾಧ್ಯತೆಗಳಿವೆ. ಆರೋಗ್ಯ ಮತ್ತು ಬುದ್ಧಿವಂತಿಕೆಯ ವಿಚಾರದಲ್ಲಿ ಉತ್ತಮ ಫಲಿತಾಂಶ ಪಡೆಯುವರು. ಉದ್ಯೋಗ ಮತ್ತು ವ್ಯವಹಾರದ ವಿಚಾರದಲ್ಲಿ ಆದಷ್ಟು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಸುಳ್ಳು ಆರೋಪಗಳಿಗೆ ಬಲಿಯಾಗುವ ಸಾಧ್ಯತೆಗಳಿವೆ.

ವೃಷಭ
ಮುಂಬರುವ ವರ್ಷದಲ್ಲಿ ಹಲವು ಅಡಚಣೆಗಳನ್ನು ಮತ್ತು ತೊಂದರೆಗಳನ್ನು ಎದುರಿಸಲಿದ್ದಾರೆ, ಆದರೆ ಚಿಂತಿಸುವ ಅವಶ್ಯಕತೆ ಇಲ್ಲ, ಜೀವನದಲ್ಲಿ ಕಷ್ಟವನ್ನು ಮೆಟ್ಟಿ ನಿಲ್ಲುವ ಧರ್ಯ ನಿಮ್ಮಲ್ಲಿ ಮೂಡಲಿದೆ... ಪ್ರತಿ ಶನಿವಾರ ಶನಿದೇವನಿಗೆ ಅರ್ಚನೆ ಮಾಡಿಸಿ...

ಮಿಥುನ
ಕುಟುಂಬ ಮತ್ತು ಸಹಚರರು ನಿಮ್ಮೊಂದಿಗೆ ಸಂಪೂರ್ಣವಾಗಿ ನಂಬಿಕೆ ಹಾಗೂ ಹೊಂದಾಣಿಕೆಯಿಂದ ವರ್ತಿಸುವರು. ಇವರು ವಿವಾಹವಾದರೆ ಸಂಗಾತಿಯೊಂದಿಗೆ ಒಳಜಗಳ ಮತ್ತು ಮುನಿಸುಗಳಿಂದ ಸಂಕಷ್ಟಗಳನ್ನು ಎದುರಿಸಬೇಕಾಗುವುದು. ಆದರೆ ಅದು ವಿಚ್ಛೇದನದ ತನಕ ಹೋಗದು.

ಕರ್ಕ
ವ್ಯವಹಾರಗಳಲ್ಲಿ ಲಾಭ ಮತ್ತು ದೀರ್ಘಾವಧಿಯ ನಿರೀಕ್ಷಿತ ಸಂಪತ್ತು ನಿಮ್ಮ ಮಾರ್ಗದಲ್ಲಿ ಬರುತ್ತವೆ. ವ್ಯಕ್ತಿ ಮತ್ತು ಅವರ ಪಾಲುದಾರರು ಗಂಭೀರ ಸಂಘರ್ಷದಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಬಹುದು. ಇದಲ್ಲದೆ ವರ್ಷವು ಲಾಭ ದಾಯಕವಾಗಿದ್ದು, ತಮ್ಮ ಬಾಕಿ ಬರುವ ಹಣವನ್ನು ಪಡೆದುಕೊಳ್ಳುತ್ತಾರೆ. ಈ ರಾಶಿಚಕ್ರದ ಮಹಿಳೆ ಬಂಜೆತನವನ್ನು ಅನುಭವಿಸುತ್ತಿದ್ದರೆ ಈ ವರ್ಷ ಪರಿಹಾರ ಕಂಡುಕೊಳ್ಳುತ್ತಾಳೆ.

ಸಿಂಹ
ಈ ರಾಶಿಯವರು ಇಷ್ಟು ದಿನ ಕುಟುಂಬದಲ್ಲಿ ಅನುಭವಿಸುತ್ತಿದ್ದ ತೊಂದರೆ, ಒತ್ತಡ ಹಾಗೂ ಸಮಸ್ಯೆಗಳೆಲ್ಲವೂ ಈ ವರ್ಷದಲ್ಲಿ ಕೊನೆ ಗೊಳ್ಳುವವು. ಇವರು ಈ ವರ್ಷ ಉತ್ತಮ ವಿಚಾರಗಳ ಕುರಿತು ಹೂಡಿಕೆಯನ್ನು ಕೈಗೊಳ್ಳಬಹುದು. ಸಹೋದ್ಯೋಗಿಗಳು ಹೆಚ್ಚಿನ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಇವರು ತಮ್ಮ ಆಕ್ರೋಶವನ್ನು ಆದಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ಜೀವನದಲ್ಲಿ ಅನೇಕ ಉತ್ತಮ ವಿಷಯಗಳನ್ನು ಅನುಭವಿಸುವುದಕ್ಕಿಂತ ಕಳೆದುಕೊಳ್ಳುವ ಪರಿಸ್ಥಿತಿ ಒದಗಿ ಬರುತ್ತದೆ.

ಕನ್ಯಾ
ಈ ಮುಂಬರುವ ವರ್ಷವು ಈ ರಾಶಿಚಕ್ರದವರಿಗೆ ಬಹಳ ಕಷ್ಟದ ಸಮಯ ಎನ್ನಬಹುದು. ಏಕೆಂದರೆ ಅವರು ಮಾಡುವ ಪ್ರತಿಯೊಂದು ಕೆಲಸದಲ್ಲೂ ಅತಿ ಹೆಚ್ಚು ಹೋರಾಟ ನಡೆಸಬೇಕಾಗುವುದು. ಉದ್ಯೋಗಗಳು ಕೂಡಾ 200% ರಷ್ಟು ಪ್ರಯತ್ನಗಳು ಬೇಕಾಗುತ್ತವೆ. ತಮ್ಮ ವ್ಯವಹಾರವನ್ನು ವಿಸ್ತರಿಸುವ ಪರಿಕಲ್ಪನೆಯು ಒಳ್ಳೆಯದು. ಆದರೆ ಇದು ಯಾವುದೇ ದೊಡ್ಡ ಅನುಕೂಲಕರ ಸ್ಥಾನವಿಲ್ಲ ಎಂದು ಅವರು ಅರ್ಥ ಮಾಡಿಕೊಳ್ಳಬೇಕು. ಮುಂಬರುವ ವರ್ಷದಲ್ಲಿ ಅವರು ಹೆಚ್ಚು ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ.

ತುಲಾ
ಈ ರಾಶಿಚಕ್ರ ಜನರು ಆರೋಗ್ಯಕರ ಜೀವನವನ್ನು ಹೊಂದಲಿದ್ದಾರೆ. ಆದರೆ ಇನ್ನೊಂದು ತುದಿಯಲ್ಲಿ ನಗದು ಹರಿವು ಗಮನಾರ್ಹ ಅಸ್ಥಿರತೆಯನ್ನು ತೋರಿಸುತ್ತದೆ. ಕೆಲಸದ ಮುಂಭಾಗದಲ್ಲಿ ಉತ್ತಮ ವರ್ಷವಾಗಲಿದೆ. ಈ ವರ್ಷ ಒಂದು ಕುಟುಂಬವನ್ನು ಯೋಜಿಸಲು ಉತ್ತಮ ವರ್ಷವಾಗಿದೆ ಮತ್ತು ಸುತ್ತಲಿನ ಜನರು ನಿಮ್ಮ ಈ ತೀರ್ಮಾನಕ್ಕೆ ಬೆಂಬಲ ನೀಡುತ್ತಾರೆ.

ವೃಶ್ಚಿಕ
ಈ ರಾಶಿ ಚಕ್ರದವರು ಅಷ್ಟು ಸುಲಭವಾಗಿ ಚೇತರಿಕೆಯನ್ನು ಕಾಣರು. ಏಕೆಂದರೆ ಅವರು ಈಗಿನ್ನು ಎರಡೂವರೆ ವರ್ಷಗಳಿಂದ ಶನಿಯ ಪ್ರಭಾವವನ್ನು ಅನುಭವಿಸಿದ್ದಾರೆ. ಈಗ ತಾನೆ ಚೇತರಿಕೆಯನ್ನು ಕಾಣುವ ಪ್ರಯತ್ನದಲ್ಲಿರುತ್ತಾರೆ. ಇವರು ದೂರದ ಪ್ರಯಾಣ ಅಥವಾ ತೀರ್ಥಯಾತ್ರೆಗಳನ್ನು ಕೈಗೊಳ್ಳಬಹುದು. ಆದರೆ ಇನ್ನೊಂದೆಡೆ ಇವರ ಅನಾರೋಗ್ಯದ ಸ್ಥಿತಿಯಿಂದಾಗಿ ಕೆಲಸದ ಮೇಲೆ ಹೆಚ್ಚು ಗಮನಕೊಡಲು ಇವರಿಗೆ ಸಾಧ್ಯವಾಗುವುದಿಲ್ಲ. ಕೆಲಸದ ಬಗ್ಗೆ ಅಜಾಗರೂಕತೆಯ ವರ್ತನೆ ತೋರುವುದರಿಂದ ಮೇಲಾಧಿಕಾರಿಗಳ ಕೋಪಕ್ಕೆ ಗುರಿಯಾಗುವ ಸಾಧ್ಯತೆಗಳಿವೆ.

ಧನು
ಮುಂಬರುವ ವರ್ಷವು ಇವರಿಗೆ ಬಹಳ ಕಷ್ಟಕರವಾಗಲಿದೆ. ಶನಿಯು ಈ ರಾಶಿಚಕ್ರಕ್ಕೆ ಪ್ರವೇಶಿಸಲಿದ್ದಾನೆ. ಇವರ ಆರಂಭಿಕ ಕೆಲಸದಲ್ಲಿ ಗುರಿಯನ್ನು ಸಾಧಿಸಲು ಕಷ್ಟವಾಗುವುದು. ಆದಷ್ಟು ತಾಳ್ಮೆಯಿಂದ ಇರಬೇಕು. ಹೆಚ್ಚು ಶ್ರಮಪಟ್ಟು ಫಲಿತಾಂಶವನ್ನು ನಿರೀಕ್ಷಿಸಬೇಕಾಗುವುದು.

ಮಕರ
ಈ ರಾಶಿ ಚಕ್ರದವರು ಸ್ವಲ್ಪ ಸಮಯ ಪ್ರಯಾಣದಲ್ಲಿ ಅಥವಾ ಪ್ರವಾಸ ಕೈಗೊಳ್ಳುವುದರಲ್ಲಿ ಸಮಯವನ್ನು ಕಳೆಯುತ್ತಾರೆ. ಏಕೆಂದರೆ ಇವರ ಭವಿಷ್ಯದಲ್ಲಿ ಪ್ರಯಾಣ ಮತ್ತು ವ್ಯವಹಾರದಲ್ಲಿ ಕೆಲವು ಏರಿಳಿತವನ್ನು ಎದುರಿಸಬೇಕಾಗುವುದು. ಇದು ಅವರ ಮನಸ್ಸಿನ ಶಾಂತಿಯನ್ನು ಹಾಳು ಮಾಡುವುದು. ಅಲ್ಲದೆ ತಮ್ಮ ಸಂಬಂಧಗಳಲ್ಲಿ ಗಣನೀಯವಾದ ಅಸ್ಥಿರತೆಯನ್ನು ನೋಡಬೇಕಾಗುವುದು.

ಕುಂಭ
ಮುಂಬರುವ ವರ್ಷವು ಈ ರಾಶಿಚಕ್ರದವರಿಗೆ ಶಾಂತಿಯುತವಾಗಲಿದೆ. ಹಳೆಯ ಸಮಸ್ಯೆಗಳನ್ನು ಅಂತಿಮವಾಗಿ ಪರಿಹರಿಸಲಾಗುವುದು. ಇದಲ್ಲದೆ ವಿತ್ತೀಯ ಸನ್ನಿವೇಶಗಳು ನಿರೀಕ್ಷೆಗಿಂತ ಉತ್ತಮವಾಗಿರುತ್ತವೆ. ಕುಟುಂಬ ಮತ್ತು ಸ್ನೇಹಿತರು ಅವರಿಗೆ ಭಾವನಾತ್ಮಕವಾಗಿ ಬೆಂಬಲವನ್ನು ನೀಡುತ್ತಾರೆ. ಈ ರಾಶಿಚಕ್ರಕ್ಕಾಗಿ ಈ ವರ್ಷ ಶುಭಕರವಾದ ವರ್ಷವಾಗಲಿದೆ.

ಮೀನ
ಮುಂಬರುವ ವರ್ಷವು ಈ ರಾಶಿಚಕ್ರಕ್ಕೆ ವಿಶ್ರಾಂತಿ ಹಂತವೆಂದು ನಿರೀಕ್ಷಿಸಲಾಗಿದೆ. ಏಕೆಂದರೆ ಅವರ ಆದಾಯದ ಮೂಲವು ಈ ವರ್ಷ ಹೆಚ್ಚಾಗುತ್ತದೆ. ಅವರ ಹಣಕಾಸು ಹಿಂದೆಂದಿಗಿಂತಲೂ ಬಲವಾಗಿರುತ್ತದೆ. ಅಲ್ಲದೆ ವ್ಯಾಪಾರದ ಮುಂಭಾಗದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದು.



Click it and Unblock the Notifications











