For Quick Alerts
ALLOW NOTIFICATIONS  
For Daily Alerts

ಹುಲಿ ಘರ್ಜನೆಗೆ ಹೆದರಿ, ಮಂಗಗಳಿಗೆ ಹೃದಯಾಘಾತ!

By Manu
|

ಹೃದಯಾಘಾತವೆನ್ನುವ ಸಮಸ್ಯೆಯು ಕೇವಲ ಮನುಷ್ಯರಲ್ಲಿ ಮಾತ್ರ ಕಾಣಿಸಿಕೊಳ್ಳುವುದು ಎಂದು ತಿಳಿದುಕೊಂಡಿದ್ದೇವೆ. ಆದರೆ ಇದು ಪ್ರಾಣಿಗಳನ್ನು ಭಾದಿಸುತ್ತಾ ಇರುವುದು. ಇದರ ಬಗ್ಗೆ ಹೊರಜಗತ್ತಿಗೆ ಮಾಹಿತಿ ಸಿಗದೇ ಇರುವುದೇ ಪ್ರಾಣಿಗಳಲ್ಲಿನ ಹೃದಯಾಘಾತದ ಬಗ್ಗೆ ಜನಸಾಮಾನ್ಯರಿಗೆ ತಿಳಿದಿಲ್ಲ. ಮನುಷ್ಯರಿಗೆ ಏನಾದರೂ ಆಘಾತವಾದಾಗ ಹೃದಯಾಘಾತವಾಗುವುದು ಸಾಮಾನ್ಯ ಸಂಗತಿ. ಇದು ಪ್ರಾಣಿಗಳಲ್ಲೂ ಕಾಣಿಸಿಕೊಂಡಿದೆ.

ಮಂಗಗಳ ಕುಟುಂಬವೊಂದು ಆಘಾತಕ್ಕೆ ಒಳಗಾಗಿ ಹೃದಯಾಘಾತಕ್ಕೆ ಸಿಲುಕಿದೆ ಎಂದು ತಿಳಿದುಬಂದಿದೆ. ಇದು ಯಾವುದೇ ದೇಶದಲ್ಲಿ ನಡೆದಿರುವುದಲ್ಲ. ನಮ್ಮದೇ ದೇಶದ ಕಥೆಯಿದು. ಮಂಗಗಳೇ ವಾಸವಾಗಿದ್ದ ಪ್ರದೇಶಕ್ಕೆ ಹಠಾತ್ ಆಗಿ ಹುಲಿ ಬಂದು ಘರ್ಜಿಸಿದಾಗ ಮಂಗಗಳಿಗೆ ಹೆದರಿ ಹೃದಯಾಘಾತವಾಗಿದೆ. ಈ ಸುದ್ದಿಯ ಬಗ್ಗೆ ಮತ್ತಷ್ಟು ತಿಳಿಯಲು ಮುಂದಕ್ಕೆ ಓದುತ್ತಾ ಸಾಗಿ...

Monkey's

12 ಮಂಗಗಳು ಸಾವನ್ನಪ್ಪಿದವು
ಅರಣ್ಯ ಪ್ರದೇಶದಲ್ಲಿ ಸುಮಾರು 12 ಮಂಗಗಳ ಶವಗಳು ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ. ಇತ್ತೀಚೆಗೆ ಇದೇ ಅರಣ್ಯ ಪ್ರದೇಶದಲ್ಲಿ ಹುಲಿಯು ಮನುಷ್ಯನ ಕೊಂದಿತ್ತು. ಇದರಿಂದ ಮಂಗಗಳು ಹೆದರಿರಬಹುದು ಎಂದು ಸ್ಥಳೀಯರು ಹಾಗೂ ಪಶುವೈದ್ಯರು ತಿಳಿಸಿದ್ದಾರೆ.

ಪ್ರಾಣಿ ಪ್ರಿಯರಿಗೆ ವಿವರಣೆ ಬೇಕಂತೆ
ಮಂಗಗಳು ಒಂದೇ ಸಲ ಈ ರೀತಿಯಾಗಿ ಸತ್ತಿರುವುದನ್ನು ನೋಡಿರುವಂತಹ ಸ್ಥಳೀಯರು ಹಾಗೂ ಪ್ರಾಣಿಪ್ರಿಯರು ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕೆಂದು ಕೇಳಿಕೊಂಡಿದ್ದಾರೆ. ಮಂಗಗಳಿಗೆ ವಿಷವುಣಿಸಿರಬಹುದು ಎಂದು ಹೆಚ್ಚಿನವರು ಅನುಮಾನ ಪಡುತ್ತಿದ್ದಾರೆ. ಮಂಗಗಳು ಸತ್ತಿರುವಂತಹ ಪ್ರದೇಶದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿರುವ ಕಾರಣ ವಿಷವುಣಿಸಿರುವ ಸಾಧ್ಯತೆಯು ತುಂಬಾ ಕಡಿಮೆ ಎನ್ನಲಾಗಿದೆ.

ವೈದ್ಯರ ನಿಲುವು
ಎಲ್ಲಾ ಮಂಗಗಳು ಸತ್ತಿರುವುದು ಹೃದಯದಲ್ಲಿ ರಕ್ತ ಹೆಪ್ಪುಗಟ್ಟಿರುವುದರಿಂದ ಎಂದು ತಿಳಿದುಬಂದಿದೆ. ಮಂಗಗಳ ದೇಹದಲ್ಲಿ ಯಾವುದೇ ರೀತಿಯ ವಿಷ ಕಂಡುಬಂದಿಲ್ಲ. ಮಂಗಗಳ ದೇಹದ ಮೇಲೆ ಯಾವುದೇ ಗಾಯದ ಗುರುತು ಕೂಡ ಇರಲಿಲ್ಲ. ಮಂಗಗಳು ಸತ್ತಿರುವ ಪ್ರದೇಶದಲ್ಲಿ ನಮಗೆ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದೆ ಎಂದು ಪಶುವೈದ್ಯರು ತಿಳಿಸಿದ್ದಾರೆ.

English summary

How A Tiger's Roar Killed A Monkey's Family!

We hear about so many bizarre things that happen around us. However, this incident could really surprise and shock you on knowing about what happened to a family of monkeys on a fateful night. This is a true incident that happened in India and the vets claim that the monkeys had died due to a cardiac arrest, which they assume was after they spotted a tiger in the area. Check out this bizarre incident, as it makes us aware that it's not only the humans who are prone to heart attacks, but also these poor animals who are around us.
Story first published: Wednesday, September 13, 2017, 20:34 [IST]
X
Desktop Bottom Promotion