For Quick Alerts
ALLOW NOTIFICATIONS  
For Daily Alerts

ಎರಡು ರಾಶಿಗಳ ಅಂಚಿನ ದಿನಾಂಕಗಳಲ್ಲಿ ಹುಟ್ಟಿದವರ ವ್ಯಕ್ತಿತ್ವ ಅರಿಯಿರಿ!

By Arshad
|

ನಮ್ಮ ಜನ್ಮದಿನಕ್ಕನುಸಾರವಾಗಿ ನಮ್ಮ ಜನ್ಮರಾಶಿ ಯಾವುದೆಂದು ನಮಗೆಲ್ಲಾ ಗೊತ್ತೇ ಇದೆ. ರಾಶಿಗಳನ್ನು ಒಂದು ದಿನಾಂಕದಿಂದ ಮುಂದಿನ ತಿಂಗಳ ದಿನಾಂಕದವರೆಗೆ ಎಂದು ಗುರುತಿಸಲಾಗುತ್ತದೆ. ಒಂದು ವೇಳೆ ಈ ಮಿತಿಯ ದಿನಾಂಕಗಳಂದೇ ಹುಟ್ಟಿದ್ದರೆ? ಆಗ ಆ ವ್ಯಕ್ತಿ ಯಾವ ರಾಶಿಗೆ ಸೇರಬೇಕು? ಈ ದಿನಗಳನ್ನು ಜನ್ಮದಿನಗಳನ್ನಾಗಿ ಪಡೆದಿರುವವರನ್ನು "on the cusp" ದಿನದಲ್ಲಿ ಹುಟ್ಟಿದವರು ಅಥವಾ ರಾಶಿಯಂಚಿನ ದಿನ ಹುಟ್ಟಿದವರು ಎಂದು ಕರೆಯಬಹುದು.

ಪ್ರೀತಿಯ ಭಾವನೆಗಳ ಮೇಲೂ ರಾಶಿ ಚಕ್ರದ ಪ್ರಭಾವ ಬೀರಬಹುದು!

ಒಂದು ಕಡೆಯಿಂದ ನೋಡಿದಾಗ ಈ ವ್ಯಕ್ತಿಗಳು ಆ ಎರಡೂ ರಾಶಿಗಳ ಮಿಶ್ರಫಲವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಉದಾಹರಣೆಗೆ ವ್ಯಕ್ತಿಯೊಬ್ಬರ ಜನ್ಮದಿನ ಆಗಸ್ಟ್ 22-23 ದಿನಗಳಂದು ಹುಟ್ಟಿದವರು ಸಿಂಹರಾಶಿಯ ಹೆಚ್ಚಿನ ಹಾಗೂ ಕಡಿಮೆ ಮಟ್ಟಿಗೆ ಕನ್ಯಾ ರಾಶಿಗಳ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಈ ವ್ಯಕ್ತಿಗಳ ವ್ಯಕ್ತಿತ್ವ ಸಿಂಹ ರಾಶಿಯಲ್ಲಿ ಜನಿಸಿದವರ ಅಥವಾ ಕನ್ಯಾ ರಾಶಿಯಲ್ಲಿ ಜನಿಸಿದವರ ವ್ಯಕ್ತಿತ್ವಕ್ಕೂ ಕೊಂಚ ಭಿನ್ನವಾಗಿರುತ್ತದೆ. ಅಂತೆಯೇ ಉಳಿದ ರಾಶಿಗಳ ಅಂಚಿನ ದಿನಗಳಲ್ಲಿ ಜನಿಸಿದವರ ವ್ಯಕ್ತಿತ್ವಗಳೂ ಕೊಂಚ ಭಿನ್ನವಾಗಿರುತ್ತವೆ. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ......

ಮೇಷ-ವೃಷಭ ಅಂಚಿನ ದಿನಗಳು

ಮೇಷ-ವೃಷಭ ಅಂಚಿನ ದಿನಗಳು

ಈ ದಿನಗಳಲ್ಲಿ ಜನಿಸಿದವರು ಜನ್ಮತಃ ನಾಯಕತ್ವದ ಗುಣಗಳನ್ನು ಪಡೆದಿರುತ್ತಾರೆ. ಇವರು ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ ಪ್ರಕಟಿಸುವವರೂ ತಮಗೆ ಬೇಕಾದುದನ್ನು ಪಡೆಯಲು ಹಿಂದೆ ಬೀಳುವವರೂ ಆಗಿರುತ್ತಾರೆ. ಇವರನ್ನು ಅವರ ಗುರಿಯಿಂದ ವಿಮುಖರನ್ನಾಗಿಸುವುದು ಕಷ್ಟ ಹಾಗೂ ಇವರಿಗೆ ತಾವು ಏನಾಗಬೇಕು ಎಂಬುದನ್ನು ಬೇರೆಯವರು ಹೇಳುವುದು ಇಷ್ಟವಾಗುವುದಿಲ್ಲ. ಮನೆ ಅಥವಾ ಕೆಲಸದ ಸ್ಥಳಗಳಲ್ಲಿ ಇವರು ಸದಾ ಯಶಸ್ವಿಗಳೇ ಆಗಿದ್ದು ಎರಡೂ ರಾಶಿಯ ಪ್ರಾಬಲ್ಯವನ್ನು ಪಡೆದಿರುತ್ತಾರೆ.

ವೃಷಭ-ಮಿಥುನ ಅಂಚಿನ ದಿನಗಳು

ವೃಷಭ-ಮಿಥುನ ಅಂಚಿನ ದಿನಗಳು

ಈ ದಿನಗಳಲ್ಲಿ ಜನಿಸಿದವರು ಶಾರೀರಿಕವಾಗಿಯೂ ಮಾನಸಿಕರಾಗಿಯೂ ಸುದೃಢರಾಗಿರುತ್ತಾರೆ. ಇವರು ತಮ್ಮ ಗುರಿಯತ್ತ ವಿಮುಖರಾಗದೇ ಮುಂದುವರೆಯುವವರಾಗಿರುತ್ತಾರೆ ಹಾಗೂ ಬುದ್ದಿವಂತರೂ ಉತ್ತಮ ವಾಗ್ಮಿಗಳೂ ಆಗಿರುತ್ತಾರೆ. ಇವರು ಇಷ್ಟಪಡುವ ವಿಷಯಗಳು ಅಪಾರವಾಗಿರುತ್ತವೆ.

 ಮಿಥುನ-ಕಟಕ ಅಂಚಿನ ದಿನಗಳು

ಮಿಥುನ-ಕಟಕ ಅಂಚಿನ ದಿನಗಳು

ಈ ದಿನಗಳಲ್ಲಿ ಜನಸಿದವರು ಅತಿ ಹೆಚ್ಚು ಪ್ರತಿಭಾವಂತರಾಗಿರುತ್ತಾರೆ. ಮಿಥುನ ಹಾಗೂ ಕಟಕ ರಾಶಿಯ ಪ್ರಾಬಲ್ಯಗಳೆರಡೂ ಇವರಲ್ಲಿ ಮೇಳೈಸಿರುತ್ತದೆ ಹಾಗೂ ಇವರು ತಮ್ಮ ಸುತ್ತಮುತ್ತಲಿನವರಲ್ಲಿ ಪ್ರಭಾವ ಬೀರಬಲ್ಲವರಾಗಿರುತ್ತಾರೆ. ಇವರು ವಿನೋದವನ್ನು ಬಯಸುವವರೂ ತಮ್ಮ ಸುತ್ತಮುತ್ತಲಿನವರಲ್ಲಿ ಹಾಸ್ಯವನ್ನು ಉಕ್ಕಿಸುವವರೂ ಕ್ರಿಯಾತ್ಮಕವೂ ಹಾಗೂ ತಮ್ಮ ಕೆಲಸದ ಕುರಿತು ಬದ್ದತೆಯುಳ್ಳವರೂ ಆಗಿರುತ್ತಾರೆ. ಇವರು ಯಾರ ಜೊತೆಗೂ ಸ್ನೇಹವನ್ನು ಸುಲಭವಾಗಿ ಸಂಪಾದಿಸಬಲ್ಲರು.

ಕಟಕ-ಸಿಂಹ ಅಂಚಿನ ದಿನಗಳು

ಕಟಕ-ಸಿಂಹ ಅಂಚಿನ ದಿನಗಳು

ಈ ದಿನಗಳಂದು ಜನಿಸಿದವರು ಸೂಕ್ಷ್ಮಮತಿಗಳಾಗಿದ್ದು ಸಾಮಾನ್ಯವಾಗಿ ನಾಚಿಕೆ ಸ್ವಭಾವ ಪಡೆದಿರುತ್ತಾರೆ. ಆದರೆ ಮರುಕ್ಷಣದಲ್ಲಿಯೇ ಇಡಿಯ ವೇದಿಕೆಯ ಜನರು ಚಪ್ಪಾಳೆ ತಟ್ಟುವಂತೆ ತಮ್ಮ ಮೇಲೆ ಎಲ್ಲರ ಗಮನ ಕೇಂದ್ರೀಕರಿಸುವಷ್ಟು ಅಪಾರವಾದ ಪ್ರತಿಭೆಯನ್ನೂ ಪ್ರಕಟಿಸುವವರಾಗಿರುತ್ತಾರೆ. ಇದಕ್ಕೆ ಕಾರಣ ಈ ದಿನದಲ್ಲಿ ಸಿಂಹರಾಶಿಯ ಜಲ ಹಾಗೂ ಕಟಕರಾಶಿಯ ಅಗ್ನಿ ಎರಡೂ ಪ್ರಾಬಲ್ಯ ಹೊಂದಿರುತ್ತವೆ. ಇವರು ಎಂದಿಗೂ ತಮ್ಮ ಭಾವನೆಗಳಿಗೆ ಕುಗ್ಗದೇ ಎದೆಗುಂದದವರಾಗಿರುತ್ತಾರೆ.

ಸಿಂಹ-ಕನ್ಯಾ ಅಂಚಿನ ದಿನಗಳು

ಸಿಂಹ-ಕನ್ಯಾ ಅಂಚಿನ ದಿನಗಳು

ಈ ದಿನಗಳಲ್ಲಿ ಜನಿಸಿದ ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮ ಕೆಲಸಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುವವರಾಗಿರುತ್ತಾರೆ. ಇವರು ಒಂದೇ ಕಡೆ ನಿಲ್ಲದೇ ಸದಾ ಓಡಾಡುತ್ತಿರುವುದನ್ನು ಇಷ್ಟಪಡುವವರಾಗಿರುತ್ತಾರೆ ಹಾಗೂ ಸದಾ ಸ್ವವಿಮರ್ಶಿಸುತ್ತಾ ಇರುತ್ತಾರೆ. ಇವರು ತಮ್ಮ ಆತ್ಮೀಯರಿಗೆ ಸದಾ ಅಚ್ಚರಿಗಳನ್ನೇ ನೀಡುತ್ತಾ ಸಂತೋಷ ಪಡುತ್ತಾರೆ. ಇವರು ತಮ್ಮ ಕೆಲಸಕ್ಕೆ ಅತಿ ಹೆಚ್ಚಿನ ಮಹತ್ವ ನೀಡುತ್ತಿದ್ದರೂ ಕುಟುಂಬಕ್ಕೂ ಸಮಾನವಾದ ಮಹತ್ವವನ್ನು ನೀಡುತ್ತಾರೆ.

ಕನ್ಯಾ-ತುಲಾ ಅಂಚಿನ ದಿನಗಳು

ಕನ್ಯಾ-ತುಲಾ ಅಂಚಿನ ದಿನಗಳು

ಇವರು ಸಾಮಾನ್ಯವಾಗಿ ಸಂತುಲಿತವಾದ ಜೀವನವನ್ನು ನಡೆಸುತ್ತಾ ತಮ್ಮ ಸುತ್ತಮುತ್ತಲ ಜನರನ್ನು ಹುರಿದುಂಬಿಸುತ್ತಾ ಮುನ್ನಡೆಯುವವರಾಗಿರುತ್ತಾರೆ. ಇವರು ತಮ್ಮ ಸುತ್ತಮುತ್ತಲಿನವರೊಂದಿಗೆ ವಿನೋದಮಯ ವಾತಾವರಣ ಉಂಟುಮಾಡುತ್ತಾರೆ ಹಾಗೂ ಯಾವುದೇ ವ್ಯಕ್ತಿಗಳೊಂದಿಗೆ ಸುಲಲಿತವಾಗಿ ಮಾತನಾಡುವ ಹಾಗೂ ಸೂಕ್ಷ್ಮ ವಿಷಯಗಳಿಗೂ ಸ್ಪಂದಿಸುವವರಾಗಿರುತ್ತಾರೆ. ಇವರು ಆಳವಾಗಿ ಯೋಚಿಸುವ ವ್ಯಕ್ತಿಗಳಾಗಿದ್ದು ಪ್ರತಿ ವಿಷಯವನ್ನೂ ತರ್ಕಬದ್ದವಾಗಿ ಯೋಚಿಸಿ ಸಮಸ್ಯೆಗಳನ್ನು ಪರಿಹರಿಸುವವರಾಗಿರುತ್ತಾರೆ.

ತುಲಾ-ವೃಶ್ಚಿಕ ಅಂಚಿನ ದಿನಗಳು

ತುಲಾ-ವೃಶ್ಚಿಕ ಅಂಚಿನ ದಿನಗಳು

ಈ ವ್ಯಕ್ತಿಗಳು ತುಲಾ ರಾಶಿಯ ಜನರ ನಿರ್ಣಾಯಕ ಗುಣಗಳನ್ನು ಹಾಗೂ ವೃಶ್ಚಿಕ ರಾಶಿಯ ಕರಾರುವಾಕ್ಕುತನವನ್ನು ಜನ್ಮತಃ ಪಡೆದಿರುತ್ತಾರೆ. ಇವೆರಡೂ ಗುಣಗಳು ಈ ವ್ಯಕ್ತಿಗಳನ್ನು ಪ್ರಬಲ ವ್ಯಕ್ತಿಯಾಗಿಸಲು ನೆರವಾಗುತ್ತವೆ. ಇವರು ಯಾವುದೇ ಸಂದರ್ಭವನ್ನು ಸಮರ್ಥವಾಗಿ ಎದುರಿಸುತ್ತಾರೆ. ಇವರ ಗುರಿಗೆ ವಿರೋಧಿಗಳು ಒಡ್ಡುವ ಅಡ್ಡಿಗಳನ್ನು ಸಮರ್ಥವಾಗಿ ಎದುರಿಸುವವರಾಗಿರುತ್ತಾರೆ ಹಾಗೂ ಈ ಅಡ್ಡಿಗಳನ್ನು ಸದಾ ನೆನಪಿನಲ್ಲಿಟ್ಟುಕೊಂಡು ಸಂದರ್ಭಾನುಸಾರ ಬಳಸುವವರೂ ಆಗಿರುತ್ತಾರೆ.

ವೃಶ್ಚಿಕ-ಧನು ಅಂಚಿನ ದಿನಗಳು

ವೃಶ್ಚಿಕ-ಧನು ಅಂಚಿನ ದಿನಗಳು

ಈ ದಿನಗಳಲ್ಲಿ ಜನಿಸಿದ ವ್ಯಕ್ತಿಗಳು ಸೂಕ್ಷ್ಮಮತಿಗಳೂ ತಮ್ಮ ವಿಚಾರಗಳನ್ನು ಸ್ಪಷ್ಟವಾಗಿ ಮಂಡಿಸಬಲ್ಲವರೂ ಆಗಿರುತ್ತಾರೆ. ಪರಿಣಾಮವಾಗಿ ಈ ವ್ಯಕ್ತಿಗಳು ನಾಯಕತ್ವದ ಗುಣಗಳನ್ನು ಜನ್ಮತಃ ಪಡೆದಿದ್ದು ತಮ್ಮ ಸುತ್ತಮುತ್ತಲಿನವರ ಮೇಲೆ ಪ್ರಭಾವ ಬೀರಬಲ್ಲವರಾಗಿರುತ್ತಾರೆ. ಇವರು ತಮಗೆ ಎದುರಾದ ಸಂದರ್ಭವನ್ನು ನಿರ್ಭಯವಾಗಿ ಎದುರಿಸುವವರೂ ಇದಕ್ಕಾಗಿ ತಮ್ಮ ಮನಸ್ಸಿನ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವವರೂ ತಮ್ಮ ಗುರಿಯನ್ನು ಸಾಧಿಸಲು ಸತತವಾಗಿ ಶ್ರಮಿಸುವವರೂ ಆಗಿರುತ್ತಾರೆ.

ಧನು-ಮಕರ ಅಂಚಿನ ದಿನಗಳು

ಧನು-ಮಕರ ಅಂಚಿನ ದಿನಗಳು

ಇವರು ಆಶಾವಾದಿಗಳೂ ಹಾಗೂ ವಾಸ್ತವಿಕರೂ ಏಕಕಾಲದಲ್ಲಿ ಆಗಿರುತ್ತಾರೆ. ಇದೇ ಕಾರಣಕ್ಕೆ ಇವರು ಅತಿ ನಂಬಲರ್ಹ ವ್ಯಕ್ತಿಗಳಾಗಿರುತ್ತಾರೆ. ಇವರ ಜೊತೆಗೆ ಸಮಯ ಕಳೆಯುವುದು ಇತರರಿಗೆ ಸಂತೋಷದ ವಿಷಯವಾಗಿದ್ದು ಇವರು ವಾಸ್ತವವಾಗಿ ಸಾಧಿಸುವಂತಹ ಗುರಿಗಳನ್ನು ಹೊಂದಿದ್ದು ಈ ಗುರಿಗಳನ್ನು ಸಾಧಿಸಲು ಸತತ ಶ್ರಮ ವಹಿಸುವವರಾಗಿರುತ್ತಾರೆ.

ಮಕರ-ಕುಂಭ ಅಂಚಿನ ದಿನಗಳು

ಮಕರ-ಕುಂಭ ಅಂಚಿನ ದಿನಗಳು

ಈ ದಿನಗಳಲ್ಲಿ ಜನಿಸಿದ ವ್ಯಕ್ತಿಗಳ ಮನದಲ್ಲಿ ಸದಾ ಒಂದಲ್ಲಾ ಒಂದು ಭಾವೋದ್ವೇಗದ ವಿಷಯ ಮೆಲುಕು ಹಾಕುತ್ತಲೇ ಇರುತ್ತದೆ. ಈ ವ್ಯಕ್ತಿಗಳು ತರ್ಕಬದ್ದವಾಗಿ ಯೋಚಿಸುವ ಹಾಗೂ ಈ ತರ್ಕವನ್ನು ಬಳಸಿಯೇ ಮಾತನಾಡುವ ಕಲೆಯ ಮೂಲಕ ಸುತ್ತಮುತ್ತಲಿನವರ ಗಮನವನ್ನು ಸೆಳೆಯುತ್ತಾರೆ. ಇವರು ವಿವಿಧ ವಿಷಯಗಳ ಕನಸನ್ನು ಕಾಣುವವರಾಗಿದ್ದು ಹೆಚ್ಚಿನವು ಅತಿರೇಕದ ಕಲ್ಪನೆಗಳೇ ಆಗಿರುತ್ತವೆ. ಇವರು ತಮ್ಮ ಅತಿರೇಕದ ಕಲ್ಪನೆಗಳನ್ನು ಇತರರು ಟೀಕಿಸುವುದರಲ್ಲಿಯೇ ಸಂತೋಷ ಪಡುವ ವಿಲಕ್ಷಣ ವ್ಯಕ್ತಿತ್ವ ಹೊಂದಿರುತ್ತಾರೆ.

ಕುಂಭ-ಮೀನ ಅಂಚಿನ ದಿನಗಳು:

ಕುಂಭ-ಮೀನ ಅಂಚಿನ ದಿನಗಳು:

ಈ ವ್ಯಕ್ತಿಗಳು ಸಾಮಾನ್ಯವಾಗಿ ಧಾರ್ಮಿಕ, ಶಾಂತಿ ಬಯಸುವ, ಸ್ನೇಹಪರ ಹಾಗೂ ಕಲಾತ್ಮಕ ಗುಣಗಳನ್ನು ಹೊಂದಿರುತ್ತಾರೆ. ಇವರು ಅತಿ ಬುದ್ಧಿವಂತರಾಗಿದ್ದರೂ ಇವರ ಬುದ್ದಿವಂತಿಕೆ ಸಾಮಾನ್ಯವಾಗಿ ವಾಸ್ತವಿಕೆಯ ವಿವರಗಳನ್ನು ಹೊಂದಿರುವುದಿಲ್ಲ ಹಾಗೂ ಈ ವಿಚಾರಗಳನ್ನು ಒಮ್ಮೆ ಮಂಡಿಸಿದ ಬಳಿಕ ಇದನ್ನು ಮರುವಿಮರ್ಶೆ ಮಾಡುವಲ್ಲಿ ಸೋಲುವವರಾಗಿರುತ್ತಾರೆ. ಆದರೆ ಇವರು ಅತಿ ಸೂಕ್ಷ್ಮಮತಿಗಳಾಗಿರುವ ಕಾರಣ ಕೆಲವು ವಿಷಯದಲ್ಲಿ ಮುಂದೆ ಬರಲು ಹಿಂದೇಟು ಹಾಕುತ್ತಾರೆ ಹಾಗೂ ಒಂಟಿಯಾಗಿ ತಮ್ಮ ಭಾವನಾ ಹಾಗೂ ಕಲ್ಪನಾ ಪ್ರಪಂಚದಲ್ಲಿಯೇ ಇರಲು ಬಯಸುವವರಾಗಿರುತ್ತಾರೆ.

ಮೀನ-ಮೇಷ ಅಂಚಿನ ದಿನಗಳು

ಮೀನ-ಮೇಷ ಅಂಚಿನ ದಿನಗಳು

ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ತಕ್ಷಣವೇ ಕೆರಳುವ ಹಾಗೂ ಅತಿ ದೂರಕ್ಕೆ ಯೋಚಿಸುವ ಹಾಗೂ ಹಗಲುಗನಸು ಕಾಣುವ ಗುಣಗಳನ್ನು ಹೊಂದಿರುತ್ತಾರೆ. ಇವರು ದೊಡ್ಡದನ್ನು ಸಾಧಿಸುವ ಕನಸು ಕಾಣುವವರೂ ಇದಕ್ಕಾಗಿ ಶ್ರಮಿಸಿ ಈ ಕನಸನ್ನು ನನಸಾಗಿಸುವವರೂ ಆಗಿರುತ್ತಾರೆ. ಇವರು ತಮ್ಮ ಗುರಿಗಳ ಬಗ್ಗೆ ಹೆಚ್ಚು ಕೇಂದ್ರೀಕೃತರಾಗಿದ್ದು ಇವರ ಯೋಚನೆಗಳು ಧನಾತ್ಮಕವಾಗಿರುತ್ತವೆ ಹಾಗೂ ಇವರು ತಮ್ಮ ಸುತ್ತಮುತ್ತಲಿನವರ ಬಗ್ಗೆ ಸದಾ ಉತ್ತಮ ಭಾವನೆಗಳನ್ನೇ ಹೊಂದಿರುತ್ತಾರೆ. ಇವರು ತಮ್ಮ ಕನಸುಗಳಿಗೆ ಹೆಚ್ಚಿನ ಮಹತ್ಮ ನೀಡುವವರಾಗಿದ್ದು ಈ ಕನಸುಗಳನ್ನು ಸಾಕಾರಗೊಳಿಸಲು ಎದುರಾಗುವ ಅಡ್ಡಿಗಳಿಗೆ ಹೆದರದವರಾಗಿರುತ್ತಾರೆ.

English summary

How Personality Traits Are Defined Based On Being A “Cusp”

If you were born within a few days of the Sun's move from one zodiac sign to the other, it means that you were born "on the cusp". People whose birthdays fall in this category are said to have the influence from both the zodiac signs they belong to. For example, If people are born on the date Aug 22-23, then these people are said to belong to the Leo-Virgo cusp group and can have the zodiac Leo with some added Virgo energy or traits.
Story first published: Monday, July 24, 2017, 18:17 [IST]
X
Desktop Bottom Promotion