For Quick Alerts
ALLOW NOTIFICATIONS  
For Daily Alerts

  2017ರ ಅದೃಷ್ಟದ ಭವಿಷ್ಯ ತಿಳಿಯಲು ಇದೊಂದು ಹೊಸ ದಾರಿ!

  By Divya
  |

  ಪ್ರತಿಯೊಬ್ಬರ ಅದೃಷ್ಟವು ಹುಟ್ಟಿದ ಗಳಿಗೆ, ನಕ್ಷತ್ರ ಹಾಗೂ ರಾಶಿಯನ್ನು ಅವಲಂಭಿಸಿರುತ್ತದೆ. ಜನ್ಮ ಕುಂಡಲಿಯಲ್ಲಿ ಇರುವ ದೆಸೆಗಳ ಬದಲಾವಣೆಯಿಂದಲೂ ನಮ್ಮ ಅನುಕೂಲ ಹಾಗೂ ಅನಾನುಕೂಲತೆಯು ಬದಲಾಗುತ್ತಲೇ ಇರುತ್ತವೆ. ಈ ಬದಲಾವಣೆಗಳನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅದರಿಂದ ಉಂಟಾಗುವ ಪರಿಣಾಮಗಳನ್ನು ನಾವು ಅನುಭವಿಸಬೇಕಷ್ಟೆ.  

  ರಾಶಿ ಭವಿಷ್ಯ: ನಿಮ್ಮ ವ್ಯಕ್ತಿತ್ವವನ್ನು ಬಿಚ್ಚಿಡುವ 'ಸಂಖ್ಯೆಗಳು'

  ಈಗಾಗಲೇ ರಾಶಿ ಚಕ್ರದ ಬದಲಾವಣೆಯಿಂದ ಉಂಟಾಗುವ ಅದೃಷ್ಟ ಹಾಗೂ ದುರಾದೃಷ್ಟ ವಿಚಾರದ ಬಗ್ಗೆ ಅನೇಕ ಲೇಖನಗಳಲ್ಲಿ ತಿಳಿದಿದ್ದೇವೆ. ಜ್ಯೋತಿಷಿಗಳ ಪ್ರಕಾರ ರಾಶಿ ಚಕ್ರದ ಚಿಹ್ನೆಗಳಿಂದಲೂ ಅದೃಷ್ಟಗಳು ಬದಲಾಗುತ್ತವೆ. ಈ ವಿಚಾರದ ಕುರಿತು 2017ರಲ್ಲಿ ನಿಮ್ಮ ರಾಶಿಚಕ್ರದ ಚಿಹ್ನೆಗೆ ಅನುಗುಣವಾಗಿ ಯಾವೆಲ್ಲಾ ಅದೃಷ್ಟ ಹಾಗೂ ದುರಾದೃಷ್ಟಗಳನ್ನು ಅನುಭವಿಸುವಿರಿ, ಉದ್ಯೋಗ ಅವಕಾಶವಿದೆಯೇ ಎನ್ನುವುದನ್ನು ಇಲ್ಲಿ ಓದಿ ತಿಳಿದುಕೊಳ್ಳಿ....

  2017ರ ಅದೃಷ್ಟವಂತ ರಾಶಿ ಚಿಹ್ನೆಗಳು

  2017ರ ಅದೃಷ್ಟವಂತ ರಾಶಿ ಚಿಹ್ನೆಗಳು

  ಜ್ಯೋತಿಷಿಗಳ ಪ್ರಕಾರ 2017ರ ವರ್ಷವು ತುಲಾ, ಕುಂಬ, ಸಿಂಹ, ಮಿಥುನ, ಧನು ಮತ್ತು ಕನ್ಯಾರಾಶಿಯವರಿಗೆ ಒಂದು ಲವಲವಿಕೆಯ ಅವಧಿ ಎಂದು ಹೇಳಬಹುದು. ಈ ರಾಶಿಯವರಿಗೆ ಉದ್ಯೋಗ, ಆರೋಗ್ಯ ಮತ್ತು ಮದುವೆಯ ವಿಚಾರದಲ್ಲಿ ಅದೃಷ್ಟವನ್ನು ತಂದುಕೊಡುತ್ತದೆ. ಹಾಗಾಗಿ ಈ ವರ್ಷ ಇವರಿಗೆ ಅದ್ಭುತವಾದ ಅದೃಷ್ಟವನ್ನು ನೀಡಲಿದೆ.

  ರಾಶಿ ಭವಿಷ್ಯ: ನಿಮ್ಮ ಅದೃಷ್ಟವನ್ನೇ ಖುಲಾಯಿಸುವ 'ಭವಿಷ್ಯವಾಣಿ'

  2017ರ ಅದೃಷ್ಟವಂತ ರಾಶಿ ಚಿಹ್ನೆಗಳ ಇನ್ನಷ್ಟು ವಿಚಾರ

  2017ರ ಅದೃಷ್ಟವಂತ ರಾಶಿ ಚಿಹ್ನೆಗಳ ಇನ್ನಷ್ಟು ವಿಚಾರ

  ಈ ರಾಶಿಯವರಿಗೆ ಈ ವರ್ಷ ಎಷ್ಟು ಅದೃಷ್ಟವೆಂದರೆ ಮುಂದಾಲೋಚನೆ ಇಲ್ಲದೆ ತೆಗೆದುಕೊಂಡ ನಿರ್ಧಾರ ಅಥವಾ ಕೆಲಸಗಳು ಸಹ ಸುಗಮವಾಗಿ ಆಗುವುದು. ಉತ್ತಮ ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡಲೂ ಸಹ ಇದೊಂದು ಸೂಕ್ತ ಕಾಲ. ಉತ್ತಮ ಆದಾಯ ಹಾಗೂ ನೀರಿಕ್ಷೆಯಂತೆ ಎಲ್ಲವೂ ಈಡೇರುವುದು.

  2017ರ ದುರದೃಷ್ಟವಂತ ರಾಶಿ ಚಿಹ್ನೆಗಳು

  2017ರ ದುರದೃಷ್ಟವಂತ ರಾಶಿ ಚಿಹ್ನೆಗಳು

  ವೃಶ್ಚಿಕ, ವೃಷಭ, ಮೀನ, ಕರ್ಕಾಟಕ, ಮಕರ ಮತ್ತು ಮೇಷ ರಾಶಿಯ ಚಿಹ್ನೆಗಳು ದುರದೃಷ್ಟದ ಬದಿಯಲ್ಲಿದೆ. ಇವರಿಗೆ 2017ರ ವರ್ಷ ಅಷ್ಟು ಅದೃಷ್ಟವನ್ನು ತಂದುಕೊಡದು. ಹಾಗಂತ ಇವರು ಖಿನ್ನತೆಗೆ ಒಳಗಾಗುವ ಅಗತ್ಯವಿಲ್ಲ. ಬದಲಿಗೆ ಹೆಚ್ಚು ಪ್ರಯತ್ನ ಹಾಗೂ ಪೂರ್ವತಯಾರಿ ಕೆಲಸಗಳಿಗೆ ಅನುಕೂಲಕರ ಕಾಲ ಎಂದು ಪರಿಗಣಿಸಬೇಕು.

  2017ರ ದುರದೃಷ್ಟವಂತ ರಾಶಿ ಚಿಹ್ನೆಗಳ ಇನ್ನಷ್ಟು ವಿಚಾರ

  2017ರ ದುರದೃಷ್ಟವಂತ ರಾಶಿ ಚಿಹ್ನೆಗಳ ಇನ್ನಷ್ಟು ವಿಚಾರ

  ಈ ರಾಶಿ ಚಕ್ರದ ಚಿಹ್ನೆಗಳು ಹೃದಯಾಘಾತ ಉಂಟಾಗುವ ಸಾಧ್ಯತೆಗಳಿವೆ. ಅವಕಾಶಗಳು ಸಿಗದು, ದೀರ್ಘಕಾಲದ ಅನಾರೋಗ್ಯಗಳಿಂದಲೂ ಬಳಲುವ ಸಾಧ್ಯತೆಗಳಿವೆ.

  ನಿಮ್ಮ ರಾಶಿಗೆ ಯಾವ ಹರಳು ಅದೃಷ್ಟ?

  2017ರ ದುರದೃಷ್ಟವಂತ ರಾಶಿ ಚಿಹ್ನೆಗಳ ಇನ್ನಷ್ಟು ವಿಚಾರ

  2017ರ ದುರದೃಷ್ಟವಂತ ರಾಶಿ ಚಿಹ್ನೆಗಳ ಇನ್ನಷ್ಟು ವಿಚಾರ

  ಈ ಚಿಹ್ನೆಯವರಿಗೆ 2017 ಬಹಳ ಕಠಿಣವಾಗಿದ್ದರೂ ಎಲ್ಲವೂ ಕೆಟ್ಟದ್ದಾಗುವುದಿಲ್ಲ. ಸಾಮಾನ್ಯವಾಗಿ ಮಾಡಬೇಕಾದ್ದಕ್ಕಿಂತ ಹೆಚ್ಚು ಪರಿಶ್ರಮ ಹಾಕಬೇಕಾಗುವುದು. ಬೇಡದ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬಾರದು. ದುಷ್ಟ ದಾರಿಯನ್ನು ಬಿಟ್ಟು ಸರಿಯಾದ ಮಾರ್ಗದಲ್ಲಿ ಹೋಗಬೇಕು. ಸೋಂಕು ರೋಗಗಳು ತಗಲುವ ಸಾಧ್ಯತೆಗಳಿವೆ. ಇತರ ವ್ಯಕ್ತಿಗಳೊಂದಿಗೆ ದೈಹಿಕ ಸಂಪರ್ಕ ಹೊಂದುವುದರ ಕುರಿತು ಹೆಚ್ಚು ಕಾಳಜಿ ವಹಿಸಬೇಕಾಗುವುದು.

  ಅಪ್ರಾಮಾಣಿಕ ಜನರ, ರಾಶಿ ಭವಿಷ್ಯದಲ್ಲೂ ಮೋಸದ ಗುಣವಿದೆ!

  English summary

  How Lucky Is Your Zodiac Sign This Year

  Here, in this article, we've shared the list of zodiac signs that are lucky and also the ones that are unlucky for the year 2017.These are the revelations done by astrologers on how lucky and unlucky a person can be based on his zodiac sign.Check out on how the luck would favour for you and your zodiac sign this year! Read on.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more