For Quick Alerts
ALLOW NOTIFICATIONS  
For Daily Alerts

  ನಿಮ್ಮ ರಾಶಿ, ನಕ್ಷತ್ರ ಗೊತ್ತಿಲ್ಲವೇ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್

  By Divya Pandith
  |

  ಕೆಲವರು ತಾವು ಹುಟ್ಟಿದ ಸಮಯ ಹಾಗೂ ಜಾತಕವನ್ನು ಹೊಂದಿರುವುದಿಲ್ಲ. ಅಂತಹವರು ತಮ್ಮ ರಾಶಿ, ನಕ್ಷತ್ರ ಯಾವುದೆಂದು ತಿಳಿಯಲು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ನಮ್ಮ ಜನ್ಮದಿನಾಂಕದ ಅನುಸಾರ ಸುಲಭವಾಗಿ ತಿಳಿಯಬಹುದು. ಜ್ಯೋತಿಷ್ಯದ ಪ್ರಕಾರ ಕೆಲವು ಚಿಹ್ನೆಗಳ ಅಡಿಯಲ್ಲಿ ನಿರ್ದಿಷ್ಟ ರಾಶಿಚಕ್ರಗಳು ಬರುತ್ತವೆ. ಅವು ನಮ್ಮ ಭವಿಷ್ಯ ಹಾಗೂ ವ್ಯಕ್ತಿತ್ವವನ್ನು ನಿರ್ಣಯಿಸುತ್ತದೆ.

  ಭವಿಷ್ಯದಲ್ಲಿ ಆಗುವ ಬದಲಾವಣೆ ಹಾಗೂ ಪ್ರಸ್ತುತ ಸ್ಥಿತಿಗೆ ಕಾರಣ ತಿಳಿದುಕೊಳ್ಳಲು ರಾಶಿಚಕ್ರ ಪ್ರಮುಖವಾಗಿರುತ್ತದೆ. ಅಲ್ಲದೆ ಮುಂದಾಗುವ ಕೆಲವು ಅವಘಡಗಳನ್ನು ತಡೆಯಲು ಮತ್ತು ಪರಿಹಾರ ಕ್ರಮವನ್ನು ತಿಳಿದುಕೊಳ್ಳಲು ರಾಶಿಚಕ್ರ ಹಾಗೂ ಕುಂಡಲಿಗಳು ಅತ್ಯಗತ್ಯವಾಗಿರುತ್ತದೆ. ರಾಶಿಚಕ್ರವನ್ನು ಗುರುತಿಸಿಕೊಳ್ಳುವ ವಿಧಾನವನ್ನು ಬೋಲ್ಡ್ ಸ್ಕೈ ನಿಮ್ಮ ಮುಂದೆ ಇಡುತ್ತಿದೆ....

  ಮಕರ

  ಮಕರ

  ಡಿಸೆಂಬರ್ 22 ರಿಂದ ಜನವರಿ 20ರ ಒಳಗೆ ಜನಿಸಿದವರ ರಾಶಿಯು ಮಕರ ರಾಶಿಯಾಗಿರುತ್ತದೆ. ಇವರು ಸ್ಥಿರ, ವಿಶ್ವಾಸ, ಶಾಂತ ಸ್ವಭಾವ, ಮಹತ್ವಾ ಕಾಂಕ್ಷೆಗಳನ್ನು ಒಳಗೊಂಡ ಸ್ವಭಾವದವರಾಗಿರುತ್ತಾರೆ. ಅತ್ಯಂತ ಜವಾಬ್ದಾರಿಯುತರಾಗಿ ಕಠಿಣ ಕೆಲಸಗಳನ್ನು ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಈ ರಾಶಿಯ ಜನರು ವ್ಯವಹಾರ ಕುಶಲರಾಗಿದ್ದು ಕೆಲಸವನ್ನು ಹೇಗೆ ಮಾಡಿಸಿಕೊಳ್ಳಬೇಕು ಎಂದು ಗೊತ್ತಿರುವ ಜನರಾಗಿದ್ದಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ಸಿನೇಮಾ ವೀಕ್ಷಣೆ. ಸಿನೇಮಾ ಅಥವಾ ನೆಚ್ಚಿನ ಧಾರಾವಾಹಿಯಲ್ಲಿ ಸಂಪೂರ್ಣವಾಗಿ ಮುಳುಗುವ ನೀವು ಆ ಲೋಕದಲ್ಲಿಯೇ ಮುಳುಗಿಬಿಡುತ್ತೀರಿ. ಜೀವನದಲ್ಲಿ ಯಾವಾಗ ತೊಂದರೆ ಕಾಡಿತೋ ಆಗೆಲ್ಲಾ ಈ ಸಿನೆಮಾದಲ್ಲಿ ಎದುರಾದ ಸನ್ನಿವೇಶದಲ್ಲಿ ನಾಯಕ ಅನುಸರಿಸಿದ ನೀತಿಯನ್ನೇ ಅನುಸರಿಸಿ ಈ ತೊಂದರೆಯಿಂದ ಬಿಡುಗಡೆ ಪಡೆಯಲು ಯತ್ನಿಸುತ್ತೀರಿ. ಇವರಿಗೆ ಹೊಂದಿಕೆಯಾಗುವ ವೃತ್ತಿಯೆಂದರೆ ಕಲೆ, ವಿನ್ಯಾಸ, ವಾಸ್ತುಶಿಲ್ಪ, ನರ್ಸಿಂಗ್, ಕೃಷಿ ಮತ್ತು ಅಡುಗೆ.

  ಕುಂಬ

  ಕುಂಬ

  ಜನವರಿ 21 ರಿಂದ ಫೆಬ್ರುವರಿ 19ರ ನಡುವೆ ಜನಿಸಿದವರು ಕುಂಬ ರಾಶಿಯವರಾಗಿರುತ್ತಾರೆ. ಸೂಕ್ಷ್ಮ ಮತ್ತು ನಾಚಿಕೆ ಸ್ವಭಾವದವರಾದ ಇವರು ವಿಶ್ವಾಸ ಮತ್ತು ಉತ್ಸಾಹ ಭರಿತರಾಗಿ ಇರುತ್ತಾರೆ. ವಿನಮ್ರರಾಗಿರುವ ಇವರು ತಮ್ಮ ಜೀವನವನ್ನು ಪೂರ್ಣವಾಗಿ ಆನಂದಿಸಲು ಸಹಾಯ ಮಾಡುವ ಮಹಾನ್ ಕಲ್ಪನೆಯನ್ನು ಹೊಂದಿರುತ್ತಾರೆ. ಈ ರಾಶಿಯ ವ್ಯಕ್ತಿಗಳು ಮಾನವತಾವಾದಿಗಳಾಗಿದ್ದು ಸುತ್ತಮುತ್ತಲ ಜನರಲ್ಲಿ ನೋವು ಕಾಣಲು ಇಷ್ಟಪಡುವುದಿಲ್ಲ. ಇವರ ಕಷ್ಟಗಳಿಗೆ ಸ್ಪಂದಿಸುವ ನೀವು ಸದಾ ನಿಮ್ಮ ಕೈಲಾದ ಸಹಾಯವನ್ನು ಮಾಡಲು ಯತ್ನಿಸುತ್ತಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನೀರು. ನಿಮ್ಮ ಸುತ್ತ ಮುತ್ತ ನೀರು ಇದ್ದಾಗ ನೀವು ಸದಾ ಶಾಂತರಾಗಿ ಉದ್ವೇಗರಹಿತರಾಗಿರುತ್ತೀರಿ. ಇವರಿಗೆ ಹೊಂದಿಕೆಯಾಗುವ ವೃತ್ತಿಗಳೆಂದರೆ ಖಗೋಲಶಾಸ್ತ್ರ, ಫೋಟೋಗ್ರಾಫಿ, ವಾಯುಯಾನ ಮತ್ತು ಕಂಪ್ಯೂಟರ್ ತಂತ್ರಜ್ಞಾನ.

  ಮೀನ

  ಮೀನ

  ಫೆಬ್ರುವರಿ 20 ರಿಂದ ಮಾರ್ಚ್ 20ರಲ್ಲಿ ಜನಿಸಿದವರು ಹೆಚ್ಚು ಮೀನ ರಾಶಿಯವರಾಗಿರುತ್ತಾರೆ. ಶಾಂತ ಮತ್ತು ಉತ್ತಮ ಸ್ವಭಾವದವರಾದ ಇವರು ಉತ್ತಮ ಸಂವಹನಕಾರರಾಗಿರುತ್ತಾರೆ. ಸದಾ ಹೆಚ್ಚಿನ ಸಹಾನುಭೂತಿಯನ್ನು ತೋರುತ್ತಾರೆ. ಉತ್ತಮ ಸ್ನೇಹಿತರಾಗಬಲ್ಲ ಇವರು ನಂಬಿಕೆಗೆ ಅರ್ಹ ವ್ಯಕ್ತಿಗಳಾಗಿರುತ್ತಾರೆ. ಈ ರಾಶಿಯ ಜನರು ಸಹಾನುಭೂತಿ ತೋರುವ ವ್ಯಕ್ತಿಗಳಾಗಿದ್ದು ಜನರ ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಸಮಯ ವಿನಿಯೋಗಿಸುವುದರಲ್ಲಿಯೇ ಪರಿಪೂರ್ಣತೆಯನ್ನು ಅನುಭವಿಸುತ್ತಾರೆ. ಜನರನ್ನು ಅವರಿದ್ದ ಹಾಗೇ ಸ್ವೀಕರಿಸುವ ನಿಮ್ಮ ಪರಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ಸಂಗೀತ. ನಿಮ್ಮ ಮನೋಭಾವವನ್ನು ಉತ್ತಮಗೊಳಿಸಲು ಸಂಗೀತ ನಡೆಯುತ್ತಿದ್ದರೆ ಸಾಕಾಗುತ್ತದೆ. ಸಂಗೀತದ ಅಲೆ ಸುತ್ತ ತೇಲುತ್ತಿರುವಾಗ ನಿಮಗೆ ಹೊಸ ವಿಷಯಗಳು ಹೊಳೆಯುತ್ತವೆ ಹಾಗೂ ಹೆಚ್ಚು ಕ್ರಿಯಾತ್ಮಕರಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.ಇವರಿಗೆ ಹೊಂದಿಕೆಯಾಗುವ ವೃತ್ತಿಯೆಂದರೆ ಆರೋಗ್ಯ, ಆರೈಕೆ, ಸಾಮಾಜಿಕ ಕೆಲಸ ಮತ್ತು ಲೋಕೋಪಕಾರ.

  ಮೇಷ

  ಮೇಷ

  ಮಾರ್ಚ್ 21 ರಿಂದ ಏಪ್ರಿಲ್ 20ರ ನಡುವೆ ಜನಿಸಿದವರು ಮೇಷ ರಾಶಿಯವರಾಗಿರುತ್ತಾರೆ. ಇವರು ನಾಯಕತ್ವದ ಸ್ವಭಾವವನ್ನು ಪಡೆದುಕೊಂಡಿರುತ್ತಾರೆ. ಅಗ್ನಿಯ ಚಿಹ್ನೆಯನ್ನು ಪಡೆದುಕೊಂಡ ರಾಶಿಯಾದ್ದರಿಂದ ತಮ್ಮ ಗುರಿಯನ್ನು ಸಾಧಿಸದೆ ಬಿಡುವುದಿಲ್ಲ. ಸಾಕಷ್ಟು ಸಮಯದಲ್ಲಿ ಹಠಾತ್ ವರ್ತನೆ ತೋರಿಸುವುದರ ಜೊತೆಗೆ ಚರ್ಚೆಯ ಸಂದರ್ಭದಲ್ಲಿ ಹಠಮಾರಿ ಸ್ವಭಾವವನ್ನು ತೋರುತ್ತಾರೆ.ಈ ರಾಶಿಯವರು ಜೀವನವನ್ನು ಸದಾ ಧನಾತ್ಮಕರೂಪದಲ್ಲಿ ಕಾಣುತ್ತಾರೆ ಹಾಗೂ ಸದಾ ಜೀವನದಲ್ಲಿ ಆಶಾವಾದಿಗಳಾಗಿರುತ್ತಾರೆ. ಇವರು ಹೆಚ್ಚಾಗಿ ಸ್ವಂತ ವ್ಯಕ್ತಿತ್ವವುಳ್ಳವರಾಗಿದ್ದು ಯಾವುದೇ ಹಂಗಿನಲ್ಲಿ ಇರಲು ಇಚ್ಛಿಸುವುದಿಲ್ಲ. ಈ ರಾಶಿಯವರು ಉತ್ತಮ ಮಾತುಗಾರಿಕೆಯನ್ನು ಹೊಂದಿರುತ್ತಾರೆ. ಇವರಲ್ಲಿ ಮಾತಿನ ಕಲೆ, ಆತ್ಮವಿಶ್ವಾಸ ಮತ್ತು ಹಠಾತ್ ಆಗಿ ನಿರ್ಧಾರಕ್ಕೆ ಬರುವ ಇವರಿಗೆ ಸರಿಯಾಗಿ ಹೊಂದಿಕೊಳ್ಳುವ ಕೆಲಸವೆಂದರೆ ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗ, ಕಾಮಗಾರಿ ವೃತ್ತಿ, ಹೊಟೇಲ್ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಉದ್ಯೋಗವು ಸೂಕ್ತವಾಗಿರುವುದು

  ವೃಷಭ

  ವೃಷಭ

  ಏಪ್ರಿಲ್ 21 ರಿಂದ ಮೇ 21ರ ನಡುವೆ ಜನಿಸಿದವರು ವೃಷಭ ರಾಶಿಯವರಾಗಿರುತ್ತಾರೆ. ಸಂಪ್ರದಾಯವಾದಿಗಳು ಮತ್ತು ಶಾಂತ ಸ್ವಭಾವವನ್ನು ಆನಂದಿಸುವವರಾಗಿರುತ್ತಾರೆ. ಇವರು ಸಂಘಟಿತ, ಪ್ರಾಯೋಗಿಕ, ದೃಢವಾದ ಮತ್ತು ಬಲವಾದ ಇಚ್ಛಾ ಶಕ್ತಿ ಹೊಂದಿದವರಾಗಿರುತ್ತಾರೆ. ಈ ರಾಶಿಯ ಜನರಿಗೆ ವಿಶಾಲವಾದ ಹೃದಯವಿದ್ದು ಎಲ್ಲಾ ಪ್ರಸಂಗಗಳಲ್ಲಿ ತಾಳ್ಮೆಯಿಂದ ವ್ಯವಹರಿಸುವ ಶಕ್ತಿಯಿದೆ. ಹತ್ತಿರದಿಂದ ಬಲ್ಲವರು ನಿಮ್ಮ ನಿಷ್ಠೆ ಮತ್ತು ನಂಬುಗೆಯನ್ನು ಇಷ್ಟಪಡುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಪುಸ್ತಕ. ಪ್ರತಿಬಾರಿ ನೀವು ಒಂದು ಪುಸ್ತಕವನ್ನು ಓದಿದಾಗ ಅದರಿಂದ ನಿಮಗೆ ಶಾಂತಿ ಮತ್ತು ನೆಮ್ಮದಿ ದೊರಕುತ್ತದೆ. ಅಲ್ಲದೆ ಇವರಿಗೆ ಹೊಂದಿಕೆಯಾಗುವಂತಹ ವೃತ್ತಿಗಳೆಂದರೆ ಹಣಕಾಸು, ಲೆಕ್ಕಪತ್ರ ನಿರ್ವಹಣಿ, ಇಂಟೀರಿಯರ್ ಡಿಸೈನ್, ನರ್ಸಿಂಗ್, ಇಂಜಿನಿಯರಿಂಗ್, ಕಾನೂನು, ಮಾರ್ಕೆಟಿಂಗ್ ಮತ್ತು ಪಿಆರ್ ವೃತ್ತಿ ಮಾಡಬಹುದಾಗಿದೆ.

  ಮಿಥುನ

  ಮಿಥುನ

  ಮೇ 22 ರಿಂದ ಜೂನ್ 21ರ ನಡುವೆ ಜನಿಸಿದವರು ಮಿಥುನ ರಾಶಿಯವರಾಗಿರುತ್ತಾರೆ. ಇವರು ವಿಭಜಿತ ವ್ಯಕ್ತಿತ್ವ ಹೊಂದಿದವರಾಗಿರುತ್ತಾರೆ. ಅನೇಕ ವಿಚಾರದಲ್ಲಿ ಉತ್ಸಾಹದಿಂದ ಸವಾಲುಗಳನ್ನು ಎದುರಿಸುತ್ತಾರೆ. ಇವರಿಗೆ ತಾಳ್ಮೆಯ ಕೊರತೆಯಿಂದ ಅನೇಕ ಬಾರಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ.ಈ ರಾಶಿಯ ಜನರು ಸದಾ ಚಟುವಟಿಕೆಯುಳ್ಳವರಾಗಿದ್ದು ಸ್ನೇಹಪರ ಮತ್ತು ತಮಾಷೆಯ ವ್ಯಕ್ತಿತ್ವದವರಾಗಿದ್ದಾರೆ. ಇವರ ಕಲ್ಪನೆ ವಿಪರೀತ ತೂಪ ಪಡೆದು ಇದಕ್ಕೆ ವಿಚಿತ್ರವಾದ ಉತ್ತರವನ್ನೂ ಪಡೆಯುವಲ್ಲಿ ಸಫಲಾರಾಗುತ್ತಾರೆ. ಈ ರಾಶಿಯ ಜನರಿಗೆ ಅದೃಷ್ಟ ತರುವ ಗುಣವೆಂದರೆ ಅವರ ಕುಟುಂಬ. ಪ್ರತಿ ಬಾರಿ ವಿಚಿತ್ರ ಕಲ್ಪನೆಯ ಕಾರಣ ಅಸಂಭವವನ್ನು ಸಾಧಿಸಲು ಹೋಗಿ ತೊಂದರೆಗೆ ಒಳಗಾದಾಗ ನಿಮ್ಮ ಕುಟುಂಬವೇ ನಿಮ್ಮನ್ನು ರಕ್ಷಿಸುತ್ತದೆ. ಅಲ್ಲದೆ ಈ ರಾಶಿಯವರಿಗೆ ಹೊಂದಿಕೊಳ್ಳುವ ವೃತ್ತಿಗಳೆಂದರೆ ಕಲೆ, ವಿನ್ಯಾಸ, ವಾಸ್ತುಶಿಲ್ಪ, ನರ್ಸಿಂಗ್, ಮಾರಾಟ, ಕಾನೂನು ಜಾರಿ ಮತ್ತು ಅಗ್ನಿಶಾಮಕದಲ್ಲಿ ಕೆಲಸಗಳು.

  ಕರ್ಕ

  ಕರ್ಕ

  ಜೂನ್ 22 ರಿಂದ ಜುಲೈ 23 ಒಳಗೆ ಜನಿಸಿದವರು ಕರ್ಕ ರಾಶಿಯವರು ಆಗಿರುತ್ತಾರೆ. ಇದು ಅತ್ಯಂತ ಸಂಕೀರ್ಣ ರಾಶಿಚಕ್ರವಾಗಿದೆ. ಸೃಜನಶೀಲತೆಯಿಂದ ಅಭದ್ರತೆಯನ್ನು ಮಿಶ್ರಗೊಳಿಸುತ್ತದೆ. ಸಂಪ್ರದಾಯವನ್ನು ಇಷ್ಟ ಪಡುವವರು ಮನೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಈ ರಾಶಿಯ ಜನರು ನಿಷ್ಠಾವಂತರು ಹಾಗೂ ನಂಬಿಕೆಗೆ ಅರ್ಹರಾದ ಜನರಾಗಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮನ್ನು ನಂಬಿದವರನ್ನು ಕೈಬಿಡದ ಗುಣ ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ತಳೆಯಲು ಸಾಧ್ಯವಾಗುತ್ತದೆ. ಅದೃಷ್ಟ ತರುವ ಗುಣವೆಂದರೆ ನಿಮ್ಮ ಸಾಕುಪ್ರಾಣಿ. ಇದು ಅವರಿಗೆ ನಿಷ್ಠೆಯಿಂದಿದ್ದು ಸದಾ ನಿಮ್ಮ ಬೆಂಗಾವಲಿಗಿರುತ್ತದೆ.ಇವರಿಗೆ ಹೊಂದಿಕೆಯಾಗುವ ವೃತ್ತಿಗಳೆಂದರೆ ಸರ್ಕಾರಿ ಕೆಲಸ, ಕಾನೂನು ಸೇವೆ, ಜಾಹೀರಾತು, ಉನ್ನತ ಶಿಕ್ಷಣ, ಯಂತ್ರಗಳ ನಿರ್ವಹಣೆ, ಸಾರಿಗೆ ಮತ್ತು ಸೇನೆ.

  ಸಿಂಹ

  ಸಿಂಹ

  ಆಗಸ್ಟ್ 23 ರಿಂದ ಜುಲೈ 23ರಲ್ಲಿ ಜನಿಸಿದವರು ಸಿಂಹರಾಶಿಯವರು. ಇವರು ನಿಶ್ಚಿತತೆ, ಸೃಜನಶೀಲತೆ ಮತ್ತು ನಾಯಕತ್ವ ಸ್ವಭಾವವನ್ನು ಪಡೆದುಕೊಂಡಿರುತ್ತಾರೆ. ಇವರು ಸಮಸ್ಯೆಗಳನ್ನು ಬಲು ಸುಲಭವಾಗಿ ಬಗೆ ಹರಿಸುತ್ತಾರೆ. ಈ ರಾಶಿಯ ಜನರು ಸಿಂಹದಂತೆಯೇ ದೃಢನಿಶ್ಚಯವುಳವರು ಮತ್ತು ದಿಟ್ಟ ಸ್ವಭಾವದವರಾಗಿರುತ್ತಾರೆ. ನಿಮಗೆ ಬಹಳಷ್ಟು ಕನಸುಗಳಿದ್ದು ಮಹತ್ವಾಕಾಂಕ್ಷಿಗಳೂ ಆಗಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಸ್ನೇಹ. ಜೀವನಸಂಗಾತಿ ಅಥವಾ ಪ್ರಾಣಸ್ನೇಹಿತ/ಸ್ನೇಹಿತೆಯ ಸ್ನೇಹಕ್ಕೆ ನೀವು ಅತಿಹೆಚ್ಚಿನ ಪ್ರಾಮುಖ್ಯತೆ ನೀಡುತ್ತೀರಿ. ಇವರಿಗೆ ಸರ್ಕಾರಿ ಕೆಲಸ, ಕಾನೂನು ಸೇವೆ, ಕಲೆ, ವಿನ್ಯಾಸ, ವಾಸ್ತುಶಿಲ್ಲ, ಇಂಜಿನಿಯರಿಂಗ್, ಮನೋರಂಜನೆ, ರಿಯಲ್ ಎಸ್ಟೇಟ್ ಅಥವಾ ಶಿಕ್ಷಣ ಕ್ಷೇತ್ರವು ಹೊಂದಿಕೆಯಾಗುತ್ತದೆ.

  ಕನ್ಯಾ

  ಕನ್ಯಾ

  ಆಗಸ್ಟ್ 24 ರಿಂದ ಸೆಪ್ಟೆಂಬರ್ 23ರ ಒಳಗೆ ಜನಿಸಿದವರು ಕನ್ಯಾರಾಶಿಯವರು. ಇವರು ಬಹಳ ಸಂಪ್ರದಾಯವಾದಿಗಳು ಎಂದು ಹೇಳಬಹುದು. ಭೂಮಿಯ ಚಿಹ್ನೆಯನ್ನು ಹೊಂದಿರುವ ಇವರು ನಾಚಿಕೆ ಸ್ವಭಾವದರು. ಸ್ವಚ್ಛತೆ ಹಾಗೂ ಪ್ರೀತಿಯನ್ನು ಕಾಯ್ದುಕೊಳ್ಳುವ ಗುಣವಿರುತ್ತದೆ. ಈ ರಾಶಿಯ ಜನರು ಇತರರಿಗಿಂತ ಎರಡು ಹೆಜ್ಜೆ ಮುಂದಿರುತ್ತಾರೆ. ಇದಕ್ಕೆ ನೀವು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವ ಗುಣವೇ ಕಾರಣ. ನೀವು ಸಾಮಾನ್ಯವಾಗಿ ಎಲ್ಲರಿಗೂ ಸಹಾಯ ಮಾಡುವ ಮನಸ್ಸುಳ್ಳವರಾಗಿದ್ದು ವ್ಯವಹಾರಿಕ ಅಥವಾ ಕಾರ್ಯರೂಪದ ಕೆಲಸಗಳನ್ನೇ ಹಮ್ಮಿಕೊಳ್ಳುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಒಂಟಿತನ. ಇನ್ನು ಇವರು ಜ್ಞಾನ ಮತ್ತು ಅರ್ಥದ ಕಡೆ ಆಕರ್ಷಿತರಾಗುವಂತಹ ವ್ಯಕ್ತಿಗಳಾಗಿರುತ್ತಾರೆ. ನಿಖರತೆ, ವಿವರ ಮತ್ತು ಸಂಶೋಧನೆ ಎನ್ನುವುದು ಇವರ ವ್ಯಕ್ತಿತ್ವದಲ್ಲೇ ಇರುತ್ತದೆ. ಇವರಿಗೆ ಹೊಂದಿಕೆಯಾಗುವಂತಹ ಕೆಲಸಗಳೆಂದರೆ ಸಮಾಜ ಸೇವೆ, ಮಾರಾಟ, ಸಂಕಲನ, ಬರಹ ಮತ್ತು ಅಡುಗೆಯಲ್ಲಿ ತೊಡಗಿಕೊಳ್ಳಬಹುದು.

  ತುಲಾ

  ತುಲಾ

  ಸಪ್ಟೆಂಬರ್24 ರಿಂದ ಅಕ್ಟೋಬರ್ 23ರ ಒಳಗೆ ಜನಿಸಿದವರು ತುಲಾರಾಶಿವರಾಗಿರುತ್ತಾರೆ. ಇವರು ಸೌಮ್ಯ, ಸೂಕ್ಷ್ಮ ಮತ್ತು ಸೌಂದರ್ಯ ಸಾಮರಸ್ಯವನ್ನು ಇಷ್ಟಪಡುವ ವ್ಯಕ್ತಿಗಳಾಗಿರುತ್ತಾರೆ. ಸಂಘರ್ಷಗಳಿಗೆ ನಿಷ್ಪಕ್ಷಪಾತರಾಗಿರುತ್ತಾರೆ. ಈ ರಾಶಿಯ ಜನರು ಶಾಂತಿಪ್ರಿಯರಾಗಿದ್ದು ಆದರ್ಶವಾದಿಗಳಾಗಿರುತ್ತಾರೆ. ನಿಮ್ಮ ಸುತ್ತಮುತ್ತ ಶಾಂತಿ ಮತ್ತು ಸೌಹಾರ್ದತೆ ಪಡೆಯಲು ಸದಾ ಯತ್ನಿಸುತ್ತಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ಹೂವುಗಳು. ನಿಮ್ಮ ಸುತಮುತ್ತ ಹೂವುಗಳಿರುವಂತೆ ಮತ್ತ ಸದಾ ನಗುನಗುತಾ ಇರುವಂತೆ ನೋಡಿಕೊಳ್ಳುತ್ತೀರಿ. ಅಂತೆಯೇ ಸದಾ ಹಸನ್ಮುಖಿಯಾಗಿರಲು ಹೂವುಗಳ ನಡುವೆಯೇ ಇರಲು ಇಚ್ಛಿಸುತ್ತೀರಿ. ಇನ್ನು ವೃತ್ತಿಯಲ್ಲಿ ಇವರಿಗೆ ಸಂತೋಷ ಸಿಗಬೇಕಾದರೆ ಮನುಷ್ಯರೊಂದಿಗೆ ಸಂವಾದ ಮಾಡುತ್ತಾ ಇರಬೇಕು. ಇವರು ತುಂಬಾ ಸಹಕಾರಿಗಳು ಮತ್ತು ಹೊಂದಾಣಿಕೆಯ ಸ್ವಭಾವದವರು. ಇವರಲ್ಲಿ ನ್ಯಾಯ ಹಾಗೂ ನಿಷ್ಠೆಯಿರುತ್ತದೆ. ಇವರಿಗೆ ಸರ್ಕಾರಿ, ಸಾಮಾಜಿಕ ಕೆಲಸ ಮತ್ತು ಕಾನೂನು ಜಾರಿ ವೃತ್ತಿ ಸೂಕ್ತವಾಗಿರುತ್ತದೆ.

  ವೃಶ್ಚಿಕ

  ವೃಶ್ಚಿಕ

  ಅಕ್ಟೋಬರ್ 24 ರಿಂದ ನವೆಂಬರ್ 22ರ ಒಳಗೆ ಜನಿಸಿದವರು ವೃಶ್ಚಿಕ ರಾಶಿಯವರಾಗಿರುತ್ತಾರೆ. ಇವರು ಕಾಂತೀಯುತ ನೋಟವನ್ನು ಹೊಂದಿರುತ್ತಾರೆ. ಇವರು ಮೊದಲ ನೋಟದಲ್ಲಿ ಸ್ತಬ್ಧವಾಗಿರುವಂತೆ ಕಾಣಬಹುದು. ಆದರೆ ಉತ್ತಮ ವ್ಯಕ್ತಿತ್ವ ಹೊಂದಿದವರಾಗಿರುತ್ತಾರೆ. ಈ ರಾಶಿಯ ಜನರು ಕ್ರಿಯಾತ್ಮಕರಾಗಿದ್ದು ತಾವಂದುಕೊಂಡಿದ್ದನ್ನೇ ಸಾಧಿಸುವ ಛಲವುಳ್ಳವರಾಗಿರುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಸ್ವಂತಿಕೆ. ನಿಮ್ಮ ಸ್ವಂತಿಕೆಯ ಮೇರೆಯಂತೆಯೇ ನಡೆಯುವ ನಿಮಗೆ ಬೇರೆಯವರಿಂದ ಎರವಲು ಪಡೆದ ಯಾವುದೇ ಕ್ರಮ ಇಷ್ಟವಾಗುವುದಿಲ್ಲ. ಇನ್ನು ಇವರು ಒಳ್ಳೆಯ ಪತ್ತೆದಾರರು ಮತ್ತು ಸತ್ಯವನ್ನು ಹೊರತೆಗೆಯುವ ಸಾಮರ್ಥ್ಯವನ್ನು ಹೊಂದಿರುವವರಾಗಿರುತ್ತಾರೆ. ಇವರಿಗೆ ಹೊಂದಿಕೆಯಾಗುವಂತಹ ಕೆಲಸವೆಂದರೆ ಕಾನೂನು ಸೇವೆ, ಇಂಜಿನಿಯರಿಂಗ್, ವಿಜ್ಞಾನ, ಶಿಕ್ಷಣ ಮತ್ತು ಕಾಮಗಾರಿ.

  ಧನು

  ಧನು

  ನವೆಂಬರ್ 23 ರಿಂದ ಡಿಸೆಂಬರ್ 21ರ ಒಳಗೆ ಜನಿಸಿದವರು ಧನು ರಾಶಿಯವರಾಗಿರುತ್ತಾರೆ. ಇವರು ಪ್ರೀತಿ, ಸಾಹಸ, ಆಶಾವಾದಿಗಳು ಹಾಗೂ ಪ್ರಾಮಾಣಿಕ ಗುಣಗಳನ್ನು ಒಳಗೊಂಡಿರುತ್ತಾರೆ. ಈ ರಾಶಿಯ ಜನರು ಸದಾ ಧನಾತ್ಮಕ ಚಿಂತನೆ ನಡೆಸುವವರಾಗಿದ್ದು ಜೀವನದ ಚಿಕ್ಕ ಪುಟ್ಟ ತೊಂದರೆಗಳಿಗೆ ಇವರು ಕಿಂಚಿತ್ತೂ ಚಿಂತಿಸುವುದಿಲ್ಲ. ಯಾವುದೇ ಪರಿಸ್ಥಿತಿಗೆ ಒಳಗಾದರೂ ಇದರಿಂದ ಹೊರಬರಲು ಸತತ ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಬಾಲ್ಯದ ಗೆಳೆಯರು. ನಿಮ್ಮ ಬಾಲ್ಯದ ಗೆಳೆತನವನ್ನು ಇಡಿಯ ಜೀವಮಾನ ಕಾಪಾಡುವ ನಿಮಗೆ ಬಾಲ್ಯದ ನೆನಪುಗಳು ಅತಿಹೆಚ್ಚಿನ ಸಂತೋಷ ನೀಡುತ್ತದೆ.ಇವರಿಗೆ ಹೊಂದಾಣಿಕೆಯಾಗುವ ಕೆಲಸವೆಂದರೆ ಸಂಕಲನ, ಬರಹ, ಮಾರ್ಕೆಟಿಂಗ್, ಮನೋರಂಜನೆ, ಸೇನೆ ಮತ್ತು ಸಾರ್ವಜನಿಕ ಸಂಪರ್ಕ.

  English summary

  How To Know Your Zodiac Sign

  To know someone's zodiac sign, you need to know his or her birth-date. According to astrology, the sun is positioned on a particular zodiac sign at all times, thus determining the personality traits of those born under it. At OneHowTo we'd like to show you how to know your zodiac sign
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more