ರಾಶಿ ಭವಿಷ್ಯ: ನಿಮ್ಮ ಅದೃಷ್ಟ ಬದಲಿಸಲಿದ್ದಾರೆ ಗುರು-ಚಂದ್ರರು...

By: Divya pandith
Subscribe to Boldsky

ನಮ್ಮ ಭವಿಷ್ಯದ ಆಗು ಹೋಗುಗಳು ನಿರ್ಧರಿಸುವುದು ನಮ್ಮ ಗ್ರಹಗತಿಗಳಿಂದ ಎನ್ನುವುದನ್ನು ನಾವು ನಂಬಲೇ ಬೇಕು. ಪ್ರತಿಯೊಂದು ಗ್ರಹಗಳು ಒಂದೊಂದು ವಿಭಿನ್ನ ಅನುಭವವನ್ನು ತಂದುಕೊಡುತ್ತವೆ. ಅಂತೆಯೇ ಚಂದ್ರನೂ ಸಹ ಹಲವು ಬಗೆಯಲ್ಲಿ ಪರಿವರ್ತನೆಯನ್ನು ಹೊಂದುತ್ತಾನೆ. ಅದರ ಪರಿಣಾಮದಿಂದ ನಮ್ಮ ನಿತ್ಯದ ಜೀವನ ಕ್ರಮದ ಮೇಲೆ ಪ್ರಭಾವ ಬೀರುತ್ತದೆ. ಎಲ್ಲಾ ಗ್ರಹಗಳ ಪರಿವರ್ತನೆಗೂ ವಿಶೇಷ ಕಾರಣಗಳು ಹಾಗೂ ಸಂದರ್ಭಗಳಿರುತ್ತವೆ.

ರಾಶಿ ಭವಿಷ್ಯ: ರಾಶಿ ಚಕ್ರದಲ್ಲಿ ಅಡಗಿದೆ ನಿಮ್ಮ ಕೆಟ್ಟ ಚಟಗಳ ಗುಟ್ಟು!

ನಮಗೆ ಒಳ್ಳೆಯ ಸ್ಥಿತಿ-ಗತಿ, ಸಂತೋಷ, ಲಾಭ ಹಾಗೂ ಅದೃಷ್ಟವನ್ನು ತಂದುಕೊಡುವ ಗ್ರಹಗಳ ಪೈಕಿ ಗುರು ಗ್ರಹವೂ ಒಂದು ಎಂದು ಪರಿಗಣಿಸಲಾಗಿದೆ. ಹೀಗೆ ಚಂದ್ರ ಹಾಗೂ ಗುರು ಗ್ರಹದ ಪ್ರಭಾವದಿಂದ ನಿಮ್ಮ ಭವಿಷ್ಯದಲ್ಲಿ ಯಾವ ಬದಲಾವಣೆ ಉಂಟಾಗುವುದು ಎನ್ನುವುದನ್ನು ನಾವಿಲ್ಲಿ ಹೇಳುತ್ತಿದ್ದೇವೆ. ಈ ಬದಲಾವಣೆಗಳನ್ನು ಮುಂದಿನ ಒಂದು ವರ್ಷದಲ್ಲಿ ನೀವು ಅನುಭವಿಸಲಿದ್ದೀರಿ ಎನ್ನುವುದನ್ನು ಮರೆಯಬಾರದು.... 

ಮೇಷ

ಮೇಷ

ಜ್ಯೋತಿಷ್ಯದ ಪ್ರಕಾರ, ಗುರು ಗ್ರಹವು ನಿಮ್ಮ 7ನೇ ಮನೆಯನ್ನು ಪ್ರವೇಶಿಸಲಿದ್ದಾನೆ. ಆಗ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಹೊಂದುವುದನ್ನು ನೀವು ಕಾಣುತ್ತೀರಿ. ಹೊಸ ಹೊಸ ಯೋಜನೆಗಳು ನಿಮ್ಮ ಮನಸ್ಸಿಗೆ ಬರುವುದು. ಅದನ್ನು ಸಕಾರಗೊಳಿಸಿಕೊಳ್ಳಲು ಇದು ಸೂಕ್ತ ಸಮಯ ಎನ್ನುವುದನ್ನು ಅರಿಯಬೇಕು. ನಿಮ್ಮ ಆದಾಯದಲ್ಲಿ ಹೆಚ್ಚಳವಾಗಬಹುದು. ಅದು ನಿಮ್ಮ ಸಂಬಳ ಹೆಚ್ಚುವುದಾಗಿರಬಹುದು ಅಥವಾ ಇತರ ವ್ಯಾಪಾರದ ಮೂಲಕ ಆಗಿರಬಹುದು.

ವೃಷಭ

ವೃಷಭ

ಜ್ಯೋತಿಷ್ಯದ ಪ್ರಕಾರ, ಗುರು ಗ್ರಹದ ಪರಿವರ್ತನೆಯಿಂದ ಹೊಸ ಕೆಲಸದ ಅವಕಾಶ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಅದನ್ನು ಸ್ವೀಕರಿಸಲು ಇದು ಉತ್ತಮ ಸಮಯ ಎನ್ನುವುದನ್ನು ನೀವು ತಿಳಿಯಬೇಕು. ವೃತ್ತಿಯ ಆರಂಭದಲ್ಲಿ ನಿಮಗೆ ಲವಲವಿಕೆಯಿರುತ್ತದೆ. ಈ ರಾಶಿಯವರು ಬೇರೆಯವರಿಂದ ಸಾಲ ಅಥವಾ ಎರವಲು ಹಣವನ್ನು ಪಡೆದುಕೊಳ್ಳಬಾರದು.

ಮಿಥುನ

ಮಿಥುನ

ಗುರು ಗ್ರಹವು 5ನೇ ಮನೆಯ ಪ್ರವೇಶ ಹೊಂದುವುದು ಎಂದು ಜ್ಯೋತಿಷ್ಯ ಹೇಳುವುದು. ಈ ರಾಶಿಯ ಪೋಷಕರು ಚಂದ್ರನ ಪ್ರಭಾವಕ್ಕೆ ಒಳಗಾಗಿದ್ದರೆ ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯುವರು. ಈ ರಾಶಿಯವರು ತಮ್ಮ ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗುವುದು. ಅಲ್ಲದೆ ಸಂಪೂರ್ಣ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು.

ಕರ್ಕ

ಕರ್ಕ

ಗುರುವು ನಾಲ್ಕನೇ ಮನೆಗೆ ಕಾಲಿಡುತ್ತಾನೆ. ಈ ಸಮಯದಲ್ಲಿ ಕೌಟುಂಬಿಕ ಜೀವನವೂ ಉತ್ತಮ ಸ್ಥಿತಿಯಲ್ಲಿರುವುದು ಎಂದು ಜ್ಯೋತಿಷ್ಯ ಹೇಳುತ್ತದೆ. ಸಂಗಾತಿಯೊಂದಿಗಿನ ಇವರ ಸಂಬಂಧವೂ ಉತ್ತಮವಾಗಿರುತ್ತದೆ. ಅಲ್ಲದೆ ಸಂಬಂಧಗಳಲ್ಲಿ ಹೆಚ್ಚು ಖುಷಿಯನ್ನು ಅನುಭವಿಸುತ್ತಾರೆ. ವೃತ್ತಿ ಜೀವನದಲ್ಲಿ ಉದ್ಯೋಗ ಬದಲಾವಣೆ ಅಥವಾ ಹೊಸ ಪ್ರದೇಶಗಳಿಗೆ ವರ್ಗಾವಣೆ ಹೊಂದುವ ಬದಲಾವಣೆಯನ್ನು ಎದುರಿಸಬೇಕಾಗುವುದು.

 ಸಿಂಹ

ಸಿಂಹ

ಗುರು ಗ್ರಹವು ಮೂರನೇ ಮನೆಯಲ್ಲಿ ಪರಿವರ್ತನೆ ಹೊಂದುತ್ತಿದೆ. ಇದರ ಪರಿಣಾಮವಾಗಿ ವಿಶೇಷ ವ್ಯಕ್ತಿಗಳನ್ನು ನೀವು ಭೇಟಿ ಮಾಡುವ ಸಾಧ್ಯತೆಗಳಿವೆ. ನೀವು ಯಾವುದಾದರೂ ಸಂಬಂಧಗಳಲ್ಲಿದ್ದರೆ ಈಗ ನಿಮಗೆ ಒಳ್ಳೆಯ ಸಮಯ ಎನ್ನಬಹುದು. ನಿಮ್ಮ ಉತ್ತಮ ಶ್ರಮಕ್ಕೆ ಮೆಚ್ಚುಗೆ ಪಡೆದುಕೊಳ್ಳುವುದರಿಂದ, ವೃತ್ತಿ ಕ್ಷೇತ್ರದಲ್ಲೂ ನಿಮಗೆ ಉತ್ತಮ ಸಮಯ ಇದು ಎಂದು ಹೇಳಬಹುದು.

ಕನ್ಯಾ

ಕನ್ಯಾ

ಗ್ರಹಗಳ ಪರಿವರ್ತನೆಯಿಂದ ನಿಮ್ಮ ಕುಟುಂಬ ಜೀವನವು ಪರಿಪೂರ್ಣತೆಯನ್ನು ಪಡೆದುಕೊಳ್ಳುತ್ತದೆ. ಕುಟುಂಬದವರೊಂದಿಗೆ ಸಮಯ ಕಳೆಯಲು ಸುಂದರ ರಜಾ ದಿನಗಳು ನಿಮಗಾಗಿ ಸಂಗ್ರಹವಾಗಿವೆ. ನೀವು ಆರ್ಥಿಕವಾಗಿ ಹೆಚ್ಚು ಸ್ವತಂತ್ರರೂ ಹಾಗೂ ಸಮರ್ಥರೂ ಎಂದು ತೋರಿಸಲು ಇದೊಂದು ಉತ್ತಮ ಸಮಯ. ಆದರೆ ಅಪಾಯಕಾರಿ ಹೂಡಿಕೆಯಲ್ಲಿ ಕೈಹಾಕದಿರುವಂತೆ ಕಾಳಜಿ ವಹಿಸಬೇಕು.

ತುಲಾ

ತುಲಾ

ಮೊದಲ ಮನೆಯಲ್ಲಿಯೇ ಗುರು ಗ್ರಹದ ಪರಿವರ್ತನೆ ಹಾಗೂ ಚಂದ್ರನ ಪ್ರಭಾವದಿಂದ ಕೂಡಿರುವ ನಿಮ್ಮ ಜೀವನ ಅತ್ಯಂತ ಸಂತೋಷಕರವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧವೂ ಹೆಚ್ಚು ಖುಷಿಯನ್ನು ನೀಡುತ್ತದೆ. ಪ್ರಪಂಚವನ್ನು ಸುತ್ತುವಂತಹ ಅವಕಾಶಗಳು ನಿಮಗೆ ದೊರೆಯುತ್ತದೆ. ಇದು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಇದೊಂದು ಒಳ್ಳೆಯ ಸಮಯ ಎಂದು ಹೇಳಬಹುದು.

ವೃಶ್ಚಿಕ

ವೃಶ್ಚಿಕ

12ನೇ ಮನೆಯಲ್ಲಿ ಗುರು ಗ್ರಹದ ಪ್ರವೇಶ ಆಗುವುದರಿಂದ ವ್ಯಕ್ತಿ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಹೆಚ್ಚು ಒಲವನ್ನು ತೋರುತ್ತಾನೆ ಎಂದು ಹೇಳಲಾಗುವುದು. ಪ್ರೀತಿ ಪಾತ್ರರು ಹಾಗೂ ಪೋಷಕರೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.

ಧನು

ಧನು

11ನೇ ಮನೆಯಲ್ಲಿ ಗುರು ಗ್ರಹದ ಪರಿವರ್ತನೆ ಹಾಗೂ ಚಂದ್ರನ ಉತ್ತಮ ಸಂಚಾರದಿಂದ ಇದೊಂದು ಉತ್ತಮ ಸಮಯ ನಿಮಗೆ ಎಂದು ಹೇಳಬಹುದು. ಈ ರಾಶಿಯವರು ಪ್ರಪಂಚದಾದ್ಯಂತ ಸುತ್ತಿ ಹೆಚ್ಚಿನ ಜ್ಞಾನ ಪಡೆದುಕೊಳ್ಳುವರು. ವೈಯಕ್ತಿಕ ಜೀವನದಲ್ಲಿ ಮಕ್ಕಳು ಇವರಿಗೆ ಹೆಚ್ಚು ಖುಷಿಯನ್ನು ನೀಡುತ್ತಾರೆ. ಜೊತೆಗೆ ಈ ಅಪೂರ್ವ ಸಮಯವು ನಿಮಗೆ ಅಪಾರ ಸಂತೋಷವನ್ನು ತಂದುಕೊಡುವುದು.

ಮಕರ

ಮಕರ

ಹತ್ತನೇ ಮನೆಯಲ್ಲಿ ಗುರುವು ಪ್ರವೇಶಿಸುವುದರಿಂದ ವೃತ್ತಿ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುವಿರಿ. ಹೊಸ ಕೆಲಸದ ಭಾಗ್ಯ ನಿಮಗೆ ಒದಗಿಬರುವುದು. ಆದರೆ ಆರಂಭದಲ್ಲಿ ಸ್ವಲ್ಪ ತೊಂದರೆಯನ್ನು ಎದುರಿಸುವ ಸಾಧ್ಯತೆಗಳಿರುತ್ತವೆ. ಆದರೆ ಒಳ್ಳೆಯ ಸಮಯವು ನಿಮ್ಮ ಪರವಾಗಿ ಇರುವುದು.

ಕುಂಬ

ಕುಂಬ

ಗುರುವು 9ನೇ ಮನೆಯನ್ನು ಪ್ರವೇಶಿಸುತ್ತಿರುವುದರಿಂದ ನಿಮಗೆ ವಿದೇಶ ಪ್ರಯಾಣ ಮಾಡುವ ಅವಕಾಶವಿದೆ ಎಂದು ಜ್ಯೋತಿಷ್ಯ ಹೇಳುತ್ತದೆ. ತೀರ್ಮಾನಕ್ಕೆ ಬರಲು ಮುಂಚಿತವಾಗಿ ಸಾಧಕ ಬಾಧಕಗಳನ್ನು ಮನಸ್ಸಿನಲ್ಲಿಟ್ಟುಕೊಂಡಿರಬೇಕು. ವೈವಾಹಿಕ ಜೀವನ ಅಥವಾ ವಿವಾಹದ ವಿಚಾರದಲ್ಲಿ ನಿಧಾನಗತಿಯನ್ನು ತಡೆಯಲು ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಬೇಕು.

ಮೀನ

ಮೀನ

ಗುರುವು 8ನೇ ಮನೆಗೆ ಕಾಲಿಡುತ್ತಿದ್ದಾನೆ. ಈ ಸಮಯವು ಇವರಿಗೆ ಹೆಚ್ಚು ನಿರಾಸೆಯನ್ನು ತಂದೊಡ್ಡುವುದು ಎಂದು ಹೇಳಲಾಗುತ್ತದೆ. ಜೀವನದಲ್ಲಿ ಮುಂದೆ ಬರಲು ಸಾಕಷ್ಟು ಪ್ರಯತ್ನ ಪಡಬೇಕಾಗುವುದು. ವೃತ್ತಿ ಜೀವನದಲ್ಲಿ ಉತ್ತಮ ಕೆಲಸ ನಿರ್ವಹಿಸುವುದರಿಂದ ಉತ್ತಮ ಸಮಯವು ನಿಮ್ಮದಾಗಿರುತ್ತದೆ.

English summary

How Jupiter's Transition Can Affect Your Moon Sign

Our moon signs can get affected in a lot many ways, especially by the planet transitions. With Jupiter making a transition, there is a lot that is going to change according to our moon signs. Jupiter is considered to be one of the positive planets that affects all relationships in a positive and happy manner. Hence, we bring to you the list of how things would change in your life, based on the moon sign. Check out the changes, as this is something that would have an impact on your life for the next 1 year.
Subscribe Newsletter