Latest Updates
-
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ
ವ್ಯಕ್ತಿಯ ಮುಖಚಹರೆ ನೋಡಿ ಆತನ ವ್ಯಕ್ತಿತ್ವವನ್ನು ಅಳೆಯಬಹುದು!
ಯಾವುದೇ ವ್ಯಕ್ತಿಯ ಮುಖದಲ್ಲಿ ಆತ ಒಳ್ಳೆಯವನೋ ಕೆಟ್ಟವನೋ ಎಂದು ಬರೆದಿರುವುದಿಲ್ಲ. ಆದರೆ ಕೆಲವು ವ್ಯಕ್ತಿಗಳ ಮುಖಚಹರೆಯನ್ನು ಕಂಡಾಗ ಇವರ ವ್ಯಕ್ತಿತ್ವದ ಬಗ್ಗೆ ಸ್ಥೂಲವಾಗಿ ತಿಳಿದುಕೊಳ್ಳುವುದು ಮಾತ್ರ ಒಂದು ಕಲೆಯೇ ಸರಿ. ಈ ಕಲೆಯನ್ನು ಸಿದ್ಧಿಸಿಕೊಂಡಿರುವವರಿಗೆ ವ್ಯಕ್ತಿಯ ಬಗ್ಗೆ ಅರಿಯಲು ಕೇವಲ ಎರಡು ನಿಮಿಷ ಸಾಕು. ಇವರು ಏನನ್ನು ಗಮನಿಸುತ್ತಾರೆ ಹಾಗೂ ಯಾವ ಮಾಹಿತಿ ದೊರಕುತ್ತದೆ ಎಂಬುದನ್ನು ಇಂದು ಚರ್ಚಿಸಲಾಗಿದ್ದು ಇದು ನಿಮಗೂ ಅನುಕೂಲಕರವಾಗಿ ಪರಿಣಮಿಸಬಹುದು.

ಅಗಲವಾದ ಮುಖ
ಸಾಮಾನ್ಯವಾಗಿ ನಮ್ಮ ಮುಖಗಳು ಅಂಡಾಕಾರದಲ್ಲಿದ್ದು ನಿಲ್ಲಿಸಿದ ಆಕೃತಿ ಪಡೆದಿರುತ್ತವೆ. ಒಂದು ವೇಳೆ ಇದರ ಉದ್ದ ಕೊಂಚ ಕಡಿಮೆಯಾಗಿದ್ದರೆ ಈ ಮುಖ ಅಗಲವಾದಂತೆ ತೋರುತ್ತದೆ ಹಾಗೂ ಹೆಚ್ಚೂ ಕಡಿಮೆ ವೃತ್ತಾಕಾರದಲ್ಲಿರುತ್ತದೆ. ಈ ವ್ಯಕ್ತಿಗಳು ಉದಾರ ಮನಸ್ಸಿನವರೂ, ಪ್ರಾಮಾಣಿಕರೂ, ತೆರೆದ ಹೃದಯ ಹಾಗೂ ದಾನ ನೀಡುವ ಪ್ರವೃತ್ತಿಯವರೂ ಆಗಿರುತ್ತಾರೆ. ಇವರನ್ನು ಮಾತನಾಡಿಸುವುದು ಹಾಗೂ ವಿಚಾರವಿನಿಮಯ ಮಾಡಿಕೊಳ್ಳುವುದು ಸುಲಭವಾಗಿದ್ದು ಸುಲಭವಾಗಿ ಎಲ್ಲರೊಂದಿಗೆ ಬೆರೆಯುವವರಾಗಿರುತ್ತಾರೆ. ಇವರು ಗುಟ್ಟುಗಳನ್ನು ಕಾಪಾಡಿಕೊಳ್ಳುವಲ್ಲಿ ಹಾಗೂ ಸತ್ಯವಂತರೂ ಆಗಿರುತ್ತಾರೆ.

ಉದ್ದನೆಯ ಮುಖ
ಒಂದು ವೇಳೆ ಅಂಡಾಕೃತಿಯ ಆಕಾರದ ಉದ್ದ ಕೊಂಚ ಹೆಚ್ಚೇ ಉದ್ದವಾಗಿದ್ದರೆ ಈ ಲಕ್ಷಣವನ್ನು ಸ್ವರಕ್ಷಕಣೆಗೆ ಹೋಲಿಸಬಹುದು. ಇದು ಉತ್ತಮ ನಾಯಕನ ಗುಣಲಕ್ಷಣವಾಗಿದ್ದು ನಿರ್ಧಾರಗಳನ್ನು ಕೈಗೊಳ್ಳುವ ಸಮಯದಲ್ಲಿ ಯಾವುದೇ ಸಲಹೆಗಳನ್ನು ಪಡೆಯದೇ ತಮ್ಮದೇ ಸ್ವಂತ ನಿರ್ಧಾರಗಳನ್ನು ಕೈಗೊಳ್ಳುವವರಾಗಿರುತ್ತಾರೆ. ಇವರು ಆಳವಾಗಿ ಯೋಚಿಸುವವರೂ ಒಂದು ವಿಷಯವನ್ನು ಭಿನ್ನವಾದ ಕೋನಗಳಿಂದ ನೋಡುವವರೂ ಆಗಿರುತ್ತಾರೆ.

ದೊಡ್ಡದಾದ ಮೂಗು
ಈ ಮುಖಕ್ಕೆ ಈ ಮೂಗು ದೊಡ್ಡದಾಯಿತು ಎಂದೆನ್ನಿಸುವ ಮುಖವಿರುವ ವ್ಯಕ್ತಿಗಳು ಅತಿ ಕುತೂಹಲಿಗಳಾಗಿದ್ದು ಕ್ರಿಯಾತ್ಮಕ ಜೀವನಶೈಲಿಯನ್ನು ಹೊಂದಿರುತ್ತಾರೆ. ಇವರು ಉತ್ತಮ ದೇಹದಾರ್ಢ್ಯ ಹೊಂದಿರುವವರಾಗಿದ್ದು ವ್ಯಾಯಾಮವನ್ನು ಹೆಚ್ಚು ಇಷ್ಟಪಡುತ್ತಾರೆ. ಇವರು ಹೊಸ ಹೊಸ ವಸ್ತು ಹಾಗೂ ವಿಷಯಗಳನ್ನು ಅರಿಯಲು ಇಷ್ಟಪಡುವವರಾಗಿದ್ದು ವಿಶೇಷವಾಗಿ ವಿಭಿನ್ನ ಸಂಸ್ಕೃತಿಗಳನ್ನು ಅರಿಯಲು ಪ್ರಯಾಣ ಕೈಗೊಳ್ಳುವವರಾಗಿರುತ್ತಾರೆ. ಇವರು ಸಾಮಾನ್ಯವಾಗಿ ಬದಲಾವಣೆಯನ್ನು ಇಷ್ಟಪಡುವುದಿಲ್ಲ ಹಾಗೂ ಯಾವುದೇ ಕ್ರಿಯೆಗೆ ಪ್ರತಿಕ್ರಿಯೆ ನೀಡಲು ತೀರಾ ನಿಧಾನಿಸುವವರಾಗಿರುತ್ತಾರೆ.

ಚಿಕ್ಕ ಮೂಗು
ಮುಖದ ವಿಸ್ತಾರಕ್ಕೆ ಒಪ್ಪದಷ್ಟು ಚಿಕ್ಕದಾದ ಮೂಗು ಇರುವ ವ್ಯಕ್ತಿಗಳು ಜೀವನದಲ್ಲಿ ವಿವೇಚನೆಯಿಂದ ನಡೆದುಕೊಳ್ಳುವವರಾಗಿರುತ್ತಾರೆ. ಇವರು ಯಾವುದೇ ವ್ಯಕ್ತಿಯನ್ನು ಟೀಕಿಸುವ ಅಥವಾ ಪರಿಗಣಿಸುವ ಮುನ್ನ ತಮ್ಮನ್ನು ಅವರ ಸ್ಥಾನದಲ್ಲಿ ನಿಲ್ಲಿಸಿ ನೋಡಿದ ಬಳಿಕವೇ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆ. ಇನ್ನೊಂದು ಕಡೆ ಇವರಲ್ಲಿ ಕಪಟತನ, ಮೋಸಗಾರಿಕೆಯೂ ಮನೆಮಾಡಿದ್ದು ಕುತಂತ್ರಿಗಳೂ ಆಗಿರಬಹುದು.

ಎದ್ದು ನಿಂತಿರುವ ಹಣೆ
ಕೆಲವರ ಹಣೆ ಕೊಂಚ ಹೊರ ಉಬ್ಬಿದಂತಿದ್ದು ಹುಬ್ಬುಗಳು ಕಣ್ಣುಗಳಿಂದ ಕೊಂಚ ಮುಂದೆ ಬಂದಂತಿರುತ್ತದೆ. ಇವರು ಅತೀವ ಬುದ್ದಿವಂತರೂ ಅತಿಹೆಚ್ಚಿನ ಆತ್ಮವಿಶ್ವಾಸವುಳ್ಳವರೂ ಹಾಗೂ ಯಾವುದೇ ವಿಷಯವನ್ನು ವಿಶ್ಲೇಷಿಸಿಯೇ ಎದುರಿಸುವವರಾಗಿರುತ್ತಾರೆ. ಇವರು ಸಾಮಾನ್ಯವಾಗಿ ಇತರರಿಗೆ ಪ್ರೇರಣೆ ನೀಡದವರಾಗಿದ್ದು ತಮ್ಮ ನಿರ್ಧಾರವನ್ನು ತಮ್ಮ ವಿಶ್ಲೇಷಣೆಗೆ ಅನುಸಾರವಾಗಿಯೇ ನೀಡುತ್ತಾರೆ. ಇವರಿಗೆ ಉದ್ವೇಗ, ಭಯ ಹಾಗೂ ಮತಿವಿಕಲ್ಪದ ತೊಂದರೆ ಹೆಚ್ಚಾಗಿ ಕಾಡುತ್ತದೆ.

ಚಿಕ್ಕದಾದ ಹಣೆ
ಈ ವ್ಯಕ್ತಿಗಳು ಸಾಮಾನ್ಯವಾಗಿ ಇತರರಿಗೆ ಪ್ರೇರಣೆ ನೀಡುವವರೂ, ಜೀವನವನ್ನು ಸಂತೋಷವಾಗಿ ಅನುಭವಿಸುವವರೂ ಆಗಿರುತ್ತಾರೆ. ಇವರು ಯಾವುದೇ ವಿಷಯದಲ್ಲಿ ಹೆಚ್ಚು ಯೋಚಿಸಲು ಮುಂದಾಗುವುದಿಲ್ಲ. ಇವರು ನಿಷ್ಕ್ರಿಯ ಆಕ್ರಮಣಶೀಲ ನಡವಳಿಕೆ ಹೊಂದಿದ್ದು ಇವರ ಬುದ್ದಿಮತ್ತೆಯೂ ಸಾಧಾರಣ ಮಟ್ಟದಲ್ಲಿರುತ್ತದೆ. ಇವರು ನಟನೆಯ ಮುನ್ನ ಯೋಚಿಸಲು ವಿಫಲರಾಗುತ್ತಾರೆ ಹಾಗೂ ಇದೇ ಕಾರಣಕ್ಕೆ ಜೀವನದಲ್ಲಿ ಬಹಳಷ್ಟು ವಿಷಯದಲ್ಲಿ ಏನನ್ನೂ ಸಾಧಿಸದೇ ಹೋಗುತ್ತಾರೆ.

ವೃತ್ತಾಕಾರದ ಹಣೆ
ಈ ಬಗೆಯ ಮುಖಚಹರೆ ಇರುವ ವ್ಯಕ್ತಿಗಳು ಕ್ರಿಯಾತ್ಮಕರೂ, ಕಲಾವಿದರೂ ಹಾಗೂ ಅತೀವ ಭಾವನಾತ್ಮಕ ವ್ಯಕ್ತಿಗಳೂ ಆಗಿರುತ್ತಾರೆ. ಸಾಮಾನ್ಯವಾಗಿ ಇವರು ಭಾವನೆಗಳ ಭರದಲ್ಲಿ ಕೊಚ್ಚಿ ಹೋಗುವವರಾಗಿರುತ್ತಾರೆ.

ಇಳಿಜಾರಾದ ಹಣೆ
ಈ ಬಗೆಯ ಹಣೆ ಇರುವ ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮ ಬಗ್ಗೆ ಹೆಚ್ಚು ಮಾತನಾಡಬಯಸದ ವ್ಯಕ್ತಿಗಳಾಗಿರುತ್ತಾರೆ. ಆದರೆ ಇವರು ನಾಯಕತ್ವ ವಹಿಸಿ ಅಂತಿಮ ಫಲಿತಾಂಶವನ್ನು ಉತ್ತಮವಾಗಿ ಬಯಸುವ ವಾಣಿಜ್ಯೋದ್ಯಮಿಗಳೂ ಆಗಿದ್ದು ದೊಡ್ಡದನ್ನೇ ನಿರೀಕ್ಷಿಸುತ್ತಾರೆ. ಇವರು ಸಂಬಂಧದಲ್ಲಿಯೂ ತಮ್ಮದೇ ಸ್ವಂತಿಕೆಯನ್ನು ಉಳಿಸಿಕೊಳ್ಳಲು ಯತ್ನಿಸುತ್ತಾರೆ.

ಚಪ್ಪಟೆಯಾದ ಹಣೆ
ಈ ವ್ಯಕ್ತಿಗಳು ಪ್ರತಿ ವಿಷಯವನ್ನೂ ತುಲನಾತ್ಮಕವಾಗಿಯೇ ಪರಿಗಣಿಸುತ್ತಾರೆ. ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಚೆನ್ನಾಗಿ ಯೋಚಿಸಿ ಮುಂದುವರೆಯುವವರಾಗಿರುತ್ತಾರೆ. ಆದ್ದರಿಂದ ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೆ ಇವರು ನಿಧಾನವಾಗಿ ತಮ್ಮ ನಿರ್ಧಾರಗಳನ್ನು ತಿಳಿಸುವವರಾಗಿದ್ದು ಇದಕ್ಕಾಗಿ ಇವರು ಎಲ್ಲಾ ನಿಟ್ಟಿನಿಂದಲೂ ಎಲ್ಲ ವಿಷಯಗಳ ಬಗ್ಗೆ ವಿಶ್ಲೇಷಣೆ ನಡೆಸುವವರಾಗಿರುತ್ತಾರೆ.

ದಟ್ಟನೆಯ ಹುಬ್ಬುಗಳು
ಈ ವ್ಯಕ್ತಿಗಳು ಮಹತ್ವಾಕಾಂಕ್ಷಿಗಳಾಗಿದ್ದು ತಮ್ಮ ಬಗ್ಗೆಯೇ ಹೆಚ್ಚು ಯೋಚಿಸುವವರಾಗಿರುತ್ತಾರೆ. ಇವರು ಯಾವುದೇ ವಿಷಯವನ್ನು ತರ್ಕಬದ್ದವಾಗಿ ಅಭ್ಯಸಿಸುವ ಹಾಗೂ ಭಿನ್ನ ಕೋನಗಳಿಂದ ನೋಡುವ ಅಭ್ಯಾಸದವರಾಗಿರುತ್ತಾರೆ ಹಾಗೂ ಇವರಿಗೆ ಲೈಂಗಿಕ ವಿಷಯದಲ್ಲಿ ಅತಿ ಹೆಚ್ಚಿನ ಬಯಕೆ ಇರುತ್ತದೆ. ಇದರ ಹೊರತಾಗಿ ಇವರು ಭಾವನೆಗಳನ್ನು ನಿರ್ವಿಕಾರ ಭಾವದಿಂದ ಎದುರಿಸುವವರಾಗಿದ್ದು ಜನರ ದುಃಖ ದುಮ್ಮಾನಗಳ ನಡುವೆಯೂ ಎದ್ದು ನಿಲ್ಲಲು ಸಾಧ್ಯವಾಗುತ್ತದೆ.

ತೆಳ್ಳಗಿನ ಹುಬ್ಬುಗಳು
ಈ ವ್ಯಕ್ತಿಗಳು ಆತ್ಮವಿಶ್ವಾಸದ ಕೊರತೆ ಹೊಂದಿರುತ್ತಾರೆ ಹಾಗೂ ಇದೇ ಕಾರಣದಿಂದ ಜೀವನದಲ್ಲಿ ಬಹಳಷ್ಟನ್ನು ಸಾಧಿಸದೇ ಹೋಗುತ್ತಾರೆ. ಒಂದು ವೇಳೆ ಈ ಹುಬ್ಬಿನ ಕೂದಲುಗಳನ್ನೂ ಕಿತ್ತುಕೊಂಡಿದ್ದರೆ ಇವರು ಸ್ವಯಂ ಭರವಸೆ ಅಥವಾ ಆತ್ಮವಿಶ್ವಾಸ ಕಳೆದುಕೊಂಡಿರುವುದನ್ನು ತಿಳಿಸುತ್ತದೆ.

ದೊಡ್ಡ ಬಾಯಿ ಅಥವಾ ದೊಡ್ಡದಾದ ತುಟಿಗಳು:
ಈ ಚಹರೆ ಮುಖ್ಯವಾಗಿದ್ದು ಸಂಬಂಧಗಳನ್ನು ಹೇಗೆ ನಿಭಾಯಿಸಬಲ್ಲರು ಎಂಬುದನ್ನು ವಿವರಿಸುತ್ತದೆ. ದೊಡ್ಡ ಬಾಯಿಯ ವ್ಯಕ್ತಿಗಳು ತಮ್ಮ ಆತ್ಮೀಯರ ಬಗ್ಗೆ ಕಾಳಜಿ ವಹಿಸುವವರೂ, ಪೋಷಿಸುವವರೂ, ಪ್ರೇರಣೆ ನೀಡುವವರೂ ಹಾಗೂ ಬೇಕಿದ್ದುದನ್ನು ಒದಗಿಸುವವರೂ ಆಗಿರುತ್ತಾರೆ. ಇವರಿಗೆ ಸ್ನೇಹಿತರು ಮತ್ತು ಕುಟುಂಬ ಸದಸ್ಯರೇ ಅತಿ ಮುಖ್ಯರಾಗಿರುತ್ತಾರೆ.

ಚಿಕ್ಕ ಬಾಯಿ ಅಥವಾ ತೆಳ್ಳಗಿನ ತುಟಿಗಳು
ಈ ಚಹರೆ ಇರುವ ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮ ಖಾಸಗಿತನವನ್ನು ಇಷ್ಟಪಡುವವರು ಹಾಗೂ ಸಾಕಷ್ಟು ಸಮಯ ಒಂಟಿಯಾಗಿರಬಯಸುತ್ತಾರೆ. ಇವರಿಗೆ ನೈತಿಕ ಬೆಂಬಲ ಬೆಂಬಲ ನೀಡಲು ಸದಾ ಯಾರಾದರೊಬ್ಬರು ಜೊತೆಗೇ ಇರಬೇಕಾಗುತ್ತದೆ. ಇದು ಜೀವನಸಂಗಾತಿ ಅಥವಾ ಸ್ನೇಹಿತರಲ್ಲಿ ಯಾರೊಬ್ಬರಾದರೂ ಆಗಬಹುದು. ಇವರು ಸಾಮಾನ್ಯವಾಗಿ ಹೆಚ್ಚು ಸ್ನೇಹಮಯಿಗಳಲ್ಲ ಹಾಗೂ ಸುಲಭವಾಗಿ ಎಟಕುವವರೂ ಅಲ್ಲದ ವ್ಯಕ್ತಿಗಳಾಗಿರುತ್ತಾರೆ.

ಮೇಲಿನ ಅಥವಾ ಕೆಳಗಿನ ಒಂದು ತುಟಿ ಇನ್ನೊಂದಕ್ಕಿಂತ ದೊಡ್ಡದಿರುವುದು
ಒಂದು ವೇಳೆ ಮೇಲಿನ ಅಥವಾ ಕೆಳಗಿನ ತುಟಿ ಇನ್ನೊಂದಕ್ಕಿಂತ ದೊಡ್ಡದಿದ್ದರೆ ಈ ವ್ಯಕ್ತಿಗಳು ಜೀವನದಲ್ಲಿ ಮೋಜನ್ನು ಹೆಚ್ಚು ಇಷ್ಟಪಡುವವರು ಹಾಗೂ ಜೀವನದ ಸಂತೋಷಗಳನ್ನು ಅನುಭವಿಸುತ್ತಾ ಕಾಲ ಕಳೆಯಬಯಸುವ ವ್ಯಕ್ತಿಗಳಾಗಿರುತ್ತಾರೆ. ಇನ್ನೊಂದು ಕಡೆಯಲ್ಲಿ ಈ ವ್ಯಕ್ತಿಗಳು ದಾಂಪತ್ಯದಲ್ಲಿ ಸಮತೋಲನವನ್ನು ಕಾಪಾಡುವುದಕ್ಕಿಂತ ಹೆಚ್ಚಾಗಿ ಜೀವನವನ್ನು ಕೊಂಚ ಹೆಚ್ಚೇ ಅನುಭವಿಸುವ ಇರಾದೆಯಿಂದ ಹೊಸ ಹೊಸ ವಿಷಯಗಳನ್ನು ಅನ್ವೇಶಿಸಲು ಬಯಸುತ್ತಾರೆ.

ದೃಢವಾದ ಗದ್ದ
ಗದ್ದ ಮುಖದಲ್ಲಿ ಪ್ರಮುಖವಾದ ಚಹರೆಯಾಗಿ ಕಂಡುಬಂದರೆ ಈ ವ್ಯಕ್ತಿಗಳು ಹೆಚ್ಚು ಹಠಮಾರಿಗಳೂ ಕಷ್ಟದ ಸಮಯದಲ್ಲಿ ಇತರರಿಗಿಂತ ಹೆಚ್ಚು ಸಹನೆ ಪ್ರಕಟಿಸುವವರೂ ಆಗಿರುತ್ತಾರೆ. ಇವರು ವೈಯಕ್ತಿಕವಾಗಿ ಯಾರ ಕೆಳಗೂ ಕೆಲಸ ಮಾಡಲು ಇಚ್ಛಿಸದೇ ತಮ್ಮದೇ ಸ್ವಂತ ಗಳಿಕೆಯನ್ನು ನೆಚ್ಚಿಕೊಳ್ಳುತ್ತಾರೆ. ವೈಯಕ್ತಿಕವಾಗಿಯೂ ಸ್ವಂತಿಕೆ ಬಯಸುವ ಕಾರಣ ಇವರು ಏಕಸಂಗಾತಿಯೊಂದಿಗೆ ಜೀವನ ನಡೆಸಲೂ ಕಷ್ಟಪಡಬೇಕಾಗುತ್ತದೆ.



Click it and Unblock the Notifications











