For Quick Alerts
ALLOW NOTIFICATIONS  
For Daily Alerts

  ಯೋಚಿಸಿ ನೋಡಿ... ಈ ಬದಲಾವಣೆ ಮಾಡಿಕೊಂಡರೆ ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಲಭಿಸುವುದು

  By Divya Pandith
  |

  ವೃತ್ತಿ ಜೀವನ ಎಂದರೆ ಅಷ್ಟು ಸುಲಭದ ಮಾತಲ್ಲ. ಕೆಲಸ ಮಾಡುವ ಕ್ಷೇತ್ರದಲ್ಲಿ ಕೆಲವು ಜಾಣ್ಮೆಯನ್ನು ಉಪಯೋಗಿಸಬೇಕಾಗುತ್ತದೆ. ಅಲ್ಲಿ ನಾವು ಮಾಡುವ ಪ್ರತಿಯೊಂದು ತಪ್ಪು ಒಪ್ಪುಗಳು ನಮ್ಮ ಕೆಲಸದ ಗುಣಮಟ್ಟವನ್ನು ನಿರ್ಧರಿಸುತ್ತದೆ. ಉತ್ತಮ ಕೆಲಸವನ್ನು ನಿರ್ವಹಿಸುತ್ತಾ ಹೋದಾಗ ಮಾತ್ರ ಯಶಸ್ಸು ಎನ್ನುವ ಬಾಗಿಲು ತೆರೆಯುತ್ತದೆ. ನಾವು ಎಷ್ಟೇ ಸತ್ಯವಂತರಾಗಿ ಕೆಲಸ ಮಾಡಿದರೂ ಕೆಲವೊಮ್ಮೆ ನಮ್ಮ ಕಾಲನ್ನು ಎಳೆಯುವ ವ್ಯಕ್ತಿಗಳು ಅಲ್ಲಿ ಇರುತ್ತಾರೆ.

  ವೃತ್ತಿ ಕ್ಷೇತ್ರದಲ್ಲಿ ನಮ್ಮ ಬೆಳವಣಿಗೆ, ನಾವು ಮಾಡುವ ಕೆಲಸದ ಗುಣಮಟ್ಟ, ಮೇಲಾಧಿಕಾರಿಗಳು ಹಾಗೂ ನಮಗೆ ಸಿಗುವ ಸಹೋದ್ಯೋಗಿಗಳೆಲ್ಲ ನಮ್ಮ ಕರ್ಮ ಹಾಗೂ ಕುಂಡಲಿಗೆ ಅನುಗುಣವಾಗಿ ಸಿಗುತ್ತಾರೆ. ನಮ್ಮ ಸಮಯ ಅಷ್ಟು ಚೆನ್ನಾಗಿ ಇಲ್ಲವೆಂದಾದರೆ ಅನೇಕ ಸಮಸ್ಯೆಗಳು ಹಾಗೂ ಕೆಲಸದಲ್ಲಿ ತೊಡಕು ಉಂಟಾಗುತ್ತಲೇ ಇರುತ್ತದೆ. ಹಾಗಾದರೆ ಈ ಸಮಸ್ಯೆಗೆ ಪರಿಹಾರವೇನು ಎನ್ನುವುದು ನಿಮ್ಮ ಪ್ರಶ್ನೆಯೇ? ಹಾಗಾದರೆ ನೋಡಿ... ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿತ್ಯವೂ ನಮ್ಮ ಜೀವನದಲ್ಲಿ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಅದು ನಮ್ಮ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ ಎನ್ನುವುದನ್ನು ತೋರಿಸಿಕೊಡುವುದು.

  ನಿಮ್ಮ ಅಂಗೈಯನ್ನು ನೋಡಿ

  ನಿಮ್ಮ ಅಂಗೈಯನ್ನು ನೋಡಿ

  ನಿತ್ಯವೂ ಮುಂಜಾನೆ ಎದ್ದ ತಕ್ಷಣ ಹಾಸಿಗೆಯಲ್ಲಿ ಕುಳಿತು ಮೊದಲು ನಿಮ್ಮ ಎರಡು ಅಂಗೈಯನ್ನು ನೋಡಿ. ಅಂಗೈನಲ್ಲಿ ಲಕ್ಷ್ಮಿ, ಗೋವಿಂದ ಸೇರಿದಂತೆ ಅನೇಕ ದೇವತೆಗಳಿರುತ್ತವೆ. ಎಲ್ಲಾ ದೇವರನ್ನು ಸ್ಮರಿಸಿಕೊಂಡು ನಮಸ್ಕರಿಸಿ. ಆಗ ನಿಮೆ ಒಳ್ಳೆಯ ಆರೋಗ್ಯ ಹಾಗೂ ಅದೃಷ್ಟವು ಒಲಿದು ಬರುವುದು.

  ಅಂಗೈ ತುರಿಸುತ್ತಿದ್ದರೆ ಶಕ್ತಿಯ ಹರಿವು

  ಅಂಗೈ ತುರಿಸುತ್ತಿದ್ದರೆ ಶಕ್ತಿಯ ಹರಿವು

  ಅಂಗೈ ತುರಿಸುತ್ತಾ ಇದ್ದರೆ ಒಳಗಿನ ಶಕ್ತಿಯು ಅಂಗೈಗೆ ಹರಿದುಬರುತ್ತಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಎಡ ಅಂಗೈಯು ತುರಿಸುತ್ತಾ ಇದೆ ಎಂದರೆ ಹೊಸ ಶಕ್ತಿ ಅಥವಾ ಸಂಪನ್ಮೂಲ ನಿಮ್ಮ ಕಡೆ ಬರುತ್ತಾ ಇದೆ. ಇದರಿಂದ ಹಣ ಖರ್ಚು ಆಗಬಹುದು. ಆದರೆ ಇದರ ಇನ್ನೊಂದು ಒಳ್ಳೆಯ ಮುಖವು ಇದೆ. ಬಲ ಅಂಗೈ ತುರಿಸುತ್ತಾ ಇದೆ ಎಂದಾದರೆ ಶಕ್ತಿ ಅಥವಾ ಸೇವೆಯು ನಿಮ್ಮ ಕಡೆಗೆ ಬರುತ್ತಿದೆ ಎಂದರ್ಥ. ಇದಕ್ಕೆ ನೀವು ಈಗಾಗಲೇ ಹಣ ವ್ಯಯ ಮಾಡಿರುತ್ತೀರಿ.

  ಕಾಗೆಗಳಿಗೆ ಆಹಾರ ನೀಡಿ

  ಕಾಗೆಗಳಿಗೆ ಆಹಾರ ನೀಡಿ

  ಶನಿವಾರ ನಿಮ್ಮದಿನವನ್ನು ಆರಂಭಿಸುವ ಮುನ್ನ ಕಾಗೆಗಳಿಗೆ ಬೇಯಿಸಿದ ಅನ್ನವನ್ನು ನೀಡಿ. ಕಾಗೆಯು ಶನಿಯನ್ನು ಪ್ರತಿಬಿಂಬಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ವೃತ್ತಿಜೀವನವನ್ನು ಆಳುತ್ತದೆ. ಹಾಗಾಗಿ ಬೇಯಿಸಿದ ಅನ್ನದ ಜೊತೆಗೆ ಮೊಸರನ್ನು ಸೇರಿಸಿ ನೀಡಿದರೆ ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಮತ್ತು ಉತ್ತಮ ಫಲಿತಾಂಶ ಸಿಗುವುದು ಎನ್ನುವ ನಂಬಿಕೆಯಿದೆ.

   ಸೂರ್ಯನಿಗೆ ಅಘ್ರ್ಯ ನೀಡಿ

  ಸೂರ್ಯನಿಗೆ ಅಘ್ರ್ಯ ನೀಡಿ

  ತಾಮ್ರದ ತಂಬಿಗೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಬೆಲ್ಲವನ್ನು ಸೇರಿಸಿ. ಅದನ್ನು ಮುಂಜಾನೆ ಸೂರ್ಯನಿಗೆ ಅಘ್ರ್ಯವನ್ನು ನೀಡಿ. ಈ ಪ್ರಕ್ರಿಯೆಯನ್ನು ಸೂರ್ಯೋದಯದೊಳಗೆ ಮಾಡಬೇಕು. ಉತ್ತಮ ಫಲಿತಾಂಶಕ್ಕಾಗಿ "ಓಂ ಹ್ರೇಮ್ ಸೂರ್ಯಾಯೇ ನಮಃ " ಎಂದು 11 ಬಾರಿ ಹೇಳಬೇಕು.

  ಮಂತ್ರವನ್ನು ಪಠಿಸಿ

  ಮಂತ್ರವನ್ನು ಪಠಿಸಿ

  ಗಾಯತ್ರಿ ಮಂತ್ರ ಮತ್ತು ಮಹಾಮೃತ್ಯುಂಜಯ ಮಂತ್ರವನ್ನು ಪ್ರತಿದಿನ 31 ಬಾರಿ ಪಠಿಸಬೇಕು. ಇದು ದೇವರ ಪ್ರೀತಿಗೆ ಕಾರಣವಾಗುವುದು. ಯಶಸ್ಸು ಖಂಡಿತವಾಗಿಯೂ ನಿಮಗೆ ಲಭಿಸುವುದು.

  ಗಾಯತ್ರಿ ಮಹಾಮ೦ತ್ರದ ಭಾವಾರ್ಥ

  ಗಾಯತ್ರಿ ಮಹಾಮ೦ತ್ರದ ಭಾವಾರ್ಥ

  ಓಂ ಭೂರ್ಭುವಃಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ಜಪ ಮಾಡುವ ವಿಧಾನ: "ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ" ಎಂದು ಹೇಳುತ್ತಾ ನಿಧಾನವಾಗಿ ಪ್ರಾಣವಾಯುವನ್ನು ಒಳಗೆಳೆದುಕೊಳ್ಳಬೇಕು. ಆಮೇಲೆ ಪ್ರಾಣವಾಯುವನ್ನು ನಿಧಾನವಾಗಿ ಹೊರಬಿಡುತ್ತಾ "ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್" ಮಂತ್ರ ಜಪಿಸಬೇಕು.

  ಗಣೇಶನ ಸ್ತುತಿಯನ್ನು ಹೇಳಿ

  ಗಣೇಶನ ಸ್ತುತಿಯನ್ನು ಹೇಳಿ

  ಗಣೇಶನನ್ನು ವಿಘ್ನ ವಿನಾಶಕ ಎಂದು ಕರೆಯುತ್ತಾರೆ. ಅಡೆತಡೆಗಳನ್ನು ನಿವಾರಿಸುವವನು ಎನ್ನುವ ಅರ್ಥವನ್ನು ನೀಡುತ್ತದೆ. ಬೀಜ ಮಂತ್ರವನ್ನು ಪಠಿಸುವುದರಿಂದ ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸು ದೊರೆಯುವುದು. ವ್ಯಕ್ತಿ ಸಮಸ್ಯೆಯನ್ನು ಎದುರಿಸುವುದನ್ನು ಇದು ತಡೆಯುವುದು. ಗಣೇಶನ ಉತ್ತಮ ಮಂತ್ರಗಳಲ್ಲಿ ಒಂದಾದ "ಓಂ ಗಮ್ ಗಣಪತಯೇ ನಮಃ" ಎನ್ನುವ ಮಂತ್ರವನ್ನು ಹೇಳಬೇಕು. ಇದನ್ನು ಒಬ್ಬ ವ್ಯಕ್ತಿಯೇ ಹೇಳಬಹುದು.

  ನಿಂಬೆ ಹಣ್ಣನ್ನು ಇಟ್ಟುಕೊಳ್ಳಿ

  ನಿಂಬೆ ಹಣ್ಣನ್ನು ಇಟ್ಟುಕೊಳ್ಳಿ

  ನೀವು ಒಂದು ನಿಂಬೆ ಹಣ್ಣು, ನಾಲ್ಕು ಲವಂಗ ತೆಗೆದುಕೊಂಡು ಅಂಗೈಯಲ್ಲಿ ಹಿಡಿದುಕೊಳ್ಳಿ. ನಂತರ ಹನುಮಂತನ ಮಂತ್ರವನ್ನು 21 ಬಾರಿ "ಓಂ ಶ್ರೀ ಹನುಮಂತೇ ನಮಃ" ಎಂದು ಪಠಿಸಿ. ಪಠಣ ಪೂರ್ಣಗೊಂಡ ನಂತರ, ನಿಂಬೆ ಹಣ್ಣನ್ನು ನಿಮ್ಮ ಪರ್ಸ್‍ನಲ್ಲಿ ಅಥವಾ ಪಾಕೆಟ್‍ನಲ್ಲಿ ಇಟ್ಟುಕೊಂಡು ನಿಮ್ಮೊಂದಿಗೆ ಕೊಂಡೊಯ್ಯಿರಿ.

  English summary

  how to improve your career with astrology

  It is believed that if your left palm is itchy then money will go out. Maybe for some services rendered perhaps its not such a bad idea. But in some parts of the world, people actually quickly start scratching the left palm to prevent money from going out. If your right hand feels itchy then you might get some unexpected money. Although it might also mean you'll have to work for it with a job of some kind.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more