For Quick Alerts
ALLOW NOTIFICATIONS  
For Daily Alerts

ಆಟಗಾರರನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ಖತರ್ನಾಕ್ 'ಗೇಮ್'!!

By Hemanth
|

ವಿಡಿಯೋ ಗೇಮ್ ಹಾಗೂ ಮೊಬೈಲ್‌ನಲ್ಲಿರುವ ಗೇಮ್ ಆಗಲಿ ಇದರಲ್ಲಿ ಕೆಲವೊಂದು ಗೇಮ್‌ಗಳು ಆಡುವವರಿಗೆ ಚಟ ಹಿಡಿಸಿ ಬಿಡಿಸುತ್ತದೆ. ಯಾವಾಗ ನೋಡಿದರೂ ಇದೇ ಗೇಮ್‌ನಲ್ಲಿ ಮಗ್ನರಾಗಿ ಹೊರ ಪ್ರಪಂಚದಿಂದ ದೂರವಿರುವಂತಹ ಸಂದರ್ಭ ಕೂಡ ಇದೆ. ಆರಂಭದಲ್ಲಿ ಒತ್ತಡ ನಿವಾರಣೆಗೆ ಎಂದು ಮಾಡಿದ್ದಂತಹ ಗೇಮ್‌ಗಳು ಇಂದಿನ ದಿನಗಳಲ್ಲಿ ಒತ್ತಡವನ್ನು ಹೆಚ್ಚಿಸುತ್ತಾ ಹಲವಾರು ದುರಂತಗಳನ್ನು ಸೃಷ್ಟಿಸುತ್ತಿದೆ.

ಕೆಲವರು ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸುವರು. ಬ್ಲೂ ವೇಲ್ ಎನ್ನುವ ಗೇಮ್ ಹೆಚ್ಚಿನವರು ಕೇಳಿರಬಹುದು. ಇದರಲ್ಲಿ ಸಿಲುಕಿಕೊಳ್ಳುವಂತಹ ಮಕ್ಕಳು ಅಂತಿಮವಾಗಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಮುಂದುವರಿಯುತ್ತಾರೆ. ನಿಷೇಧಿಸಲ್ಪಟ್ಟಿರುವಂತಹ ಇಂತಹ ಆಟದ ಬಗ್ಗೆ ಬೋಲ್ಡ್ ಸ್ಕೈ ವಿವರವಾಗಿ ನಿಮಗೆ ತಿಳಿಸಲಿದೆ...

 2013ರಲ್ಲಿ ಇದನ್ನು ನಿರ್ಮಿಸಲಾಯಿತು.....

2013ರಲ್ಲಿ ಇದನ್ನು ನಿರ್ಮಿಸಲಾಯಿತು.....

ಈ ಅಪಾಯಕಾರಿ ಗೇಮ್‌ನ್ನು 2013ರಲ್ಲಿ ನಿರ್ಮಿಸಲಾಯಿತು. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸವಾಲಾಗಿ ಮಾಡಲಾಯಿತು. ಇದನ್ನು ಆಡಲು ಆರಂಭಿಸುವಂತಹ ಮಕ್ಕಳು ಅಂತಿಮವಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಇದನ್ನು ರೂಪಿಸಲಾಗಿತ್ತು.

ಗೇಮ್‌ನ ಬಗ್ಗೆ....

ಗೇಮ್‌ನ ಬಗ್ಗೆ....

ಗೇಮ್‌ನ ನಿಯಮದಂತೆ ಇದನ್ನು ನಿರ್ಮಿಸಿದಾತ ಕೆಲವೊಂದು ಟಾಸ್ಕ್‌ಗಳನ್ನು ನೀಡುತ್ತಾನೆ. ಈ ಟಾಸ್ಕ್‌ಗಳು ಅಂತಿಮವಾಗಿ ಆತ್ಮಹತ್ಯೆ ಮಾಡುವಂತೆ ಪ್ರೇರೇಪಿಸುತ್ತದೆ. ಆಟದ ಆರಂಭದ ಕೆಲವು ಟಾಸ್ಕ್‌ಗಳು ತುಂಬಾ ಸಾಮಾನ್ಯ ಮತ್ತು ನೈಜ ಟಾಸ್ಕ್‌ಗಳು ಆಗಿದ್ದವು. ಆದರೆ ಟಾಸ್ಕ್ ಮುಂದುವರಿದಂತೆ ಇದರ ಆಕರ್ಷಣೆ ಹೆಚ್ಚಾಗುವುದು. ಇದರಲ್ಲಿ ರಕ್ತನಾಳ ಕತ್ತರಿಸಲು, ಪ್ರಾಣಿಗಳನ್ನು ಕೊಲ್ಲಲು ಹೀಗೆ ಹಲವಾರು ರೀತಿಯ ಕ್ರೂರ ಟಾಸ್ಕ್‌ಗಳಿದ್ದವು

ಈ ಟಾಸ್ಕ್‌ಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿತ್ತು...

ಈ ಟಾಸ್ಕ್‌ಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿತ್ತು...

ಆಟವು ಸುಮಾರು 50 ದಿನಗಳ ಕಾಲ ನಡೆಯುತ್ತದೆ. ಪ್ರತಿಯೊಂದು ಟಾಸ್ಕ್‌ನ ಫೋಟೋ ಮತ್ತು ವಿಡಿಯೋ ತೆಗೆಯಲಾಗುತ್ತಾ ಇತ್ತು. ಇದರಿಂದ ಆಟದ ಆಡಳಿತಾಧಿಕಾರಿಗೆ ಟಾಸ್ಕ್ ಪೂರ್ಣಗೊಳಿಸಿದ ಸಾಕ್ಷ್ಯ ಮತ್ತು ಆತ್ಮಹತ್ಯೆಯಂತಹ ಅಂತಿಮ ಟಾಸ್ಕ್ ಗೆ ಅಧಿಕಾರ ಸಿಕ್ಕಂತೆ ಆಗುತ್ತಿತ್ತು.

ಗೇಮ್ ಆರಂಭಿಸಿದ ಹುಡುಗನ ಮಾಹಿತಿ

ಗೇಮ್ ಆರಂಭಿಸಿದ ಹುಡುಗನ ಮಾಹಿತಿ

ಗೇಮ್‌ನ್ನು ಆರಂಭಿಸಿದವ ಮಾನಶಾಸ್ತ್ರದ ವಿದ್ಯಾರ್ಥಿ ಫಿಲಿಪ್ ಬುಡೆಕಿನ್ ಎನ್ನುವಾತ. ಆತ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸವಾಲನ್ನು ಆರಂಭಿಸಿದ್ದ. ಹಲವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ ಕಾರಣದಿಂದಾಗಿ ಕೋರ್ಟ್ ಆತನಿಗೆ ಮೂರು ವರ್ಷ ಜೈಲು ಶಿಕ್ಷೆಯ ತೀರ್ಪು ನೀಡಿದೆ.

ಗೇಮ್ ಆರಂಭಿಸಲು ಕಾರಣವೇನು?

ಗೇಮ್ ಆರಂಭಿಸಲು ಕಾರಣವೇನು?

ಗೇಮ್ ಅನ್ನು ಆರಂಭಿಸಲು ಕಾರಣವೇನೆಂದು ಆತನಲ್ಲಿ ಕೇಳಿದಾಗ, ಕೆಲವು ಜನರಿದ್ದಾರೆ ಮತ್ತು ಕೆಲವು ಜೈವಿಕ ತ್ಯಾಜ್ಯಗಳು ಇವೆ. ಕೆಲವು ಮಂದಿ ಸಮಾಜಕ್ಕಾಗಿ ಯಾವುದೇ ಮೌಲ್ಯ ಹೊಂದಿರುವುದಿಲ್ಲ. ಅವರು ಸಮಾಜಕ್ಕೆ ಹಾನಿ ಉಂಟು ಮಾಡುತ್ತಾರೆ. ಇಂತಹ ಜನರಿಂದ ಸಮಾಜವನ್ನು ಸ್ವಚ್ಛಗೊಳಿಸುತ್ತಿದ್ದೇನೆ ಎಂದು ತಿಳಿಸಿದ್ದಾನೆ.

ಹಲವಾರು ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು

ಹಲವಾರು ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು

ಇದು ತುಂಬಾ ಅಪಾಯಕಾರಿ ಮತ್ತು ಜೀವ ತೆಗೆಯುವ ಆಟವೆಂದು ತಿಳಿದಿದ್ದರೂ ಹಲವಾರು ಮಂದಿ ಹದಿಹರೆಯದವರು ಗೇಮ್‌ನ್ನು ಡೌನ್ ಲೋಡ್ ಮಾಡಿ ತಮ್ಮನ್ನು ತಾವೇ ಕೊಲ್ಲುತ್ತಾ ಇದ್ದರು. ಅಂತಿಮವಾಗಿ ಈ ಗೇಮ್ ನಿಷೇಧಿಸಲ್ಪಟ್ಟಿರುವುದು ತುಂಬಾ ಸಂತಸದ ವಿಚಾರವಾಗಿದೆ. ಇದರ ಬಗ್ಗೆ ಅಭಿಪ್ರಾಯವೇನು? ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್‌ನಲ್ಲಿ ಹಾಕಿ.

English summary

How A Game Encourages People To Commit Suicide

Gaming is considered to be a great stress buster, as most of us play these games to feel relaxed. While on the other side, there are those people too who take up gaming quite seriously. We bet, most of us have heard about the deadly fame "Blue Whale", where teens are getting hooked on to and eventually feel the need to commit suicide! Check out to know everything about this deadly game that is currently being banned and we are glad it is being banned finally!!
X
Desktop Bottom Promotion