For Quick Alerts
ALLOW NOTIFICATIONS  
For Daily Alerts

  ರಾಶಿ ಭವಿಷ್ಯ: ಯಾವ್ಯಾವ ರಾಶಿಯವರು ಹೇಗೆಲ್ಲಾ ಸಿಟ್ಟು ಮಾಡಿಕೊಳ್ಳುತ್ತಾರೆ ನೋಡಿ...

  By Divya Pandith
  |

  ಮನುಷ್ಯನಿಗೆ ಸಿಟ್ಟು ಬಂದಾಗ ಕೂಗಾಡುವುದು ಹಾಗೂ ಎದುರಿಗಿದ್ದವರ ಮೇಲೆ ರೇಗುವುದು ಸಹಜ. ಹಾಗಂತ ಸಿಟ್ಟು ಎನ್ನುವುದು ಎಲ್ಲರಿಗೂ ಒಂದೇ ರೀತಿಯಲ್ಲಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಿಟ್ಟಿನ ಪ್ರಮಾಣವು ಕಾರಣದ ಮಟ್ಟ ಎಷ್ಟಿದೆ ಎನ್ನುವುದರನ್ನು ಅವಲಂಭಿಸಿರುತ್ತದೆ. ಕೆಲವರು ಚಿಕ್ಕ ಪುಟ್ಟ ಸಮಸ್ಯೆಗಳಿಗೂ ದೊಟ್ಟ ದೊಡ್ಡ ಸಿಟ್ಟು ತೋರುತ್ತಾರೆ. ಕೆಲವರು ಎಂತಹದ್ದೇ ದೊಡ್ಡ ಕಾರಣವಾಗಿರಲಿ ಬಹಳ ಶಾಂತ ರೀತಿಯಲ್ಲಿ ಮೌನವನ್ನು ಆಚರಿಸಿಕೊಂಡು ಸಿಟ್ಟು ಮಾಡುತ್ತಾರೆ.

  ಇನ್ನೂ ಕೆಲವರು ಸಿಟ್ಟಿಗೊಳಗಾದಾಗ ಎದುರಿಗಿದ್ದ ವಸ್ತುಗಳನ್ನು ಬಡಿಯುವುದು, ತೂರುವುದು ಅಥವಾ ನಾಶ ಮಾಡುವ ಹಂತಕ್ಕೆ ತಲುಪುತ್ತಾರೆ. ವ್ಯಕ್ತಿಯ ಸ್ವಭಾವ, ಸಿಟ್ಟಿನ ಪರಿ, ಸಂತೋಷದ ಸಂವೇದನೆ ಇವೆಲ್ಲವೂ ಅವನ ಕುಂಡಲಿಯಲ್ಲಿರುವ ಗ್ರಹಗತಿಗಳ ಅನುಗುಣವಾಗಿ ನಡೆಯುತ್ತವೆ. ಕೆಲವು ಸ್ವಭಾವಗಳು ರಾಶಿ ಚಕ್ರದ ಅನುಗುಣವಾಗಿಯೇ ಇರುತ್ತದೆ. ಸಿಟ್ಟು ಬಂದಾಗ ಮಾನಸಿಕ ಕಿರಿಕಿರಿಗೆ ಒಳಗಾಗಿ ಏನು ಮಾಡುತ್ತೇವೆ ಎನ್ನುವುದು ನಮಗೆ ಅರಿವಿರುವುದಿಲ್ಲ. ಸಿಟ್ಟು ಶಾಂತವಾದ ಮೇಲೆ ಅದರ ಪರಿಣಾಮವನ್ನು ನೋಡಿದಾಗ ಯಾವ ಪರಿಯ ಸಿಟ್ಟನ್ನು ಬಂದಿತ್ತು ಎನ್ನುವುದು ಅರಿವಾಗುತ್ತದೆ. ನಿಮಗೆ ನಿಮ್ಮ ಸಿಟ್ಟು ಬೇರೆಯವರ ಮುಂದೆ ಹೇಗೆ ವ್ಯಕ್ತವಾಗುತ್ತದೆ ಎನ್ನುವ ಅರಿವೇ ಇರುವುದಿಲ್ಲ. ಅದನ್ನು ತಿಳಿದುಕೊಳ್ಳಬೇಕು ಎನ್ನುವುದಾದರೆ ನಿಮ್ಮ ರಾಶಿಗೆ ಅನುಗುಣವಾಗಿ ಹೇಗೆ ಸಿಟ್ಟು ಮಾಡುತ್ತೀರಿ ಎನ್ನುವುದನ್ನು ವಿವರಿಸಲಾಗಿದೆ...

  ಮೇಷ

  ಮೇಷ

  ಇವರು ಬೆಂಕಿಯ ಚಿಹ್ನೆಯನ್ನು ಹೊಂದಿದವರು. ಇವರಿಗೆ ಚಿಕ್ಕ ವಿಚಾರಗಳಿಗೂ ಕೆಂಡದಂತಹ ಕೋಪ ಬರುತ್ತದೆ. ಇವರು ಜೀವನದಲ್ಲಿ ಸದಾ ಉತ್ಸಾಹದಲ್ಲಿ ಇರುತ್ತಾರೆ. ಇವರ ಸಿಟ್ಟು ಸನ್ನಿವೇಶವನ್ನು ಅವಲಂಭಿಸಿರುತ್ತದೆ. ಇವರಿಗೆ ಕೋಪ ಬಹುಬೇಗ ಬರಬಹುದು. ಅಷ್ಟೇ ಬೇಗ ತಣ್ಣಗಾಗುತ್ತದೆ. ಜೊತೆಗೆ ಕೋಪ ಮಾಡಿಕೊಂಡಿರುವುದನ್ನು ಮರೆತು ಬಿಡುತ್ತಾರೆ.

  ವೃಷಭ

  ವೃಷಭ

  ಇವರಿಗೆ ಅಷ್ಟಾಗಿ ಬೇಗ ಕೋಪ ಬರದು. ಇವರನ್ನು ನಿಷ್ಕ್ರಿಯ ಆಕ್ರಮಣಕಾರಿ ಸ್ವಭಾವದವರು ಎನ್ನಬಹುದು. ಇವರಿಗೆ ನೋವುಂಟು ಮಾಡಿದ ವ್ಯಕ್ತಿಯನ್ನು ಕ್ಷಮಿಸುವುದು ಅಥವಾ ಅಷ್ಟು ಸುಲಭವಾಗಿ ಮರೆಯುವುದಿಲ್ಲ. ಕೋಪಗೊಂಡಾಗ ಇವರ ಮನಸ್ಸಿನಲ್ಲಿರುವುದೆಲ್ಲವನ್ನೂ ಹೇಳಿ ಬಿಡುತ್ತಾರೆ. ಪರಿಣಾಮ ಏನು ಎನ್ನುವುದನ್ನು ಆನಂತರ ಯೋಚಿಸುತ್ತಾರೆ.

   ಮಿಥುನ

  ಮಿಥುನ

  ಸಮಸ್ಯೆಗಳನ್ನು ವ್ಯವಹರಿಸಲು ಸಾಧ್ಯವಾಗದಿದ್ದಾಗ ಇವರು ಇನ್ನೊಬ್ಬರ ಸಲಹೆ ಪಡೆದು ಕೊಳ್ಳುತ್ತಾರೆ. ಇವರ ಮನಸ್ಸಿನ ನೋವನ್ನು ಇತರರೊಂದಿಗೆ ಹೇಳಿಕೊಳ್ಳಲು ಇಷ್ಟ ಪಡುವುದಿಲ್ಲ. ನಿಮ್ಮ ಸಿಟ್ಟನ್ನು ನೀವೇ ನುಂಗಿಕೊಳ್ಳುತ್ತೀರಿ. ಸಹನೆ ಮೀರಿದಾಗ ಎಲ್ಲವೂ ಆಚೆ ಬರುವುದು. ಅದೊಂದು ದೊಡ್ಡ ಸನ್ನಿವೇಶವನ್ನೇ ಸೃಷ್ಟಿಸಬಹುದು.

  ಕರ್ಕ

  ಕರ್ಕ

  ಇವರು ಸಹಾನುಭೂತಿ ಹೊಂದಿರುವ ವ್ಯಕ್ತಿಗಳು. ಇವರಿಗೆ ಸಿಟ್ಟು ಬಂದಾಗ ಆಕ್ರಮಣ ಶೀಲ ಪ್ರವೃತ್ತಿಯನ್ನು ತಳೆಯುತ್ತಾರೆ. ಜೊತೆಗೆ ಹತ್ತಿರ ಇರುವ ವಸ್ತುಗಳನ್ನು ಹಾನಿ ಗೊಳಿಸಬಹುದು. ಚಿಕ್ಕ ಪುಟ್ಟ ತಪ್ಪು ಅಥವಾ ವಿಷಯಗಳನ್ನು ಇವರು ಗಂಭೀರವಾಗಿ ಪರಿಗಣಿಸುತ್ತಾರೆ. ತಮ್ಮ ಪ್ರೀತಿ ಪಾತ್ರರಿಗಾದರೆ ಕ್ಷಮೆಯನ್ನು ನೀಡುತ್ತಾರೆ. ಜೊತೆಗೆ ತಪ್ಪನ್ನು ಒಪ್ಪಿಕೊಳ್ಳುತ್ತಾರೆ.

  ಸಿಂಹ

  ಸಿಂಹ

  ಇವರು ಅತ್ಯಂತ ಉದ್ವೇಗದ ಸ್ವಭಾವವನ್ನು ಹೊಂದಿರುತ್ತಾರೆ. ಇವರ ಸಿಟ್ಟು ಬೆಂಕಿಯ ರೂಪ ತಾಳಿರುತ್ತದೆ. ತಮಗೆ ಅಹಿತಕರವಾದುದು ನಡೆಯುತ್ತಿದೆ ಅಥವಾ ಸೃಷ್ಟಿಯಾಗಿದೆ ಎನ್ನುವುದನ್ನು ಅರಿತರೆ ಅವರು ಸಿಟ್ಟಿನಲ್ಲಿ ಏನು ಬೇಕಾದರೂ ಮಾಡಬಹುದು. ಹಾಗಂತ ಇವರ ಸಿಟ್ಟು ಬಹಳ ಕಾಲ ಮುಂದುವರಿಯದು.

  ಕನ್ಯಾ

  ಕನ್ಯಾ

  ಇವರಿಗೆ ಸಹನೆಯನ್ನು ಹೊಂದಿರುತ್ತಾರೆ. ಆದರೂ ಕೆಲವು ಸಂದರ್ಭದಲ್ಲಿ ಸಿಟ್ಟಿಗೆ ಒಳಗಾಗುವರು. ತಮ್ಮ ಸಿಟ್ಟನ್ನು ನಿಭಾಯಿಸುವ ಸಾಮರ್ಥ್ಯ ಇರುತ್ತದೆ. ಇವರನ್ನು ನಿರ್ಲಕ್ಷಿಸುವುದನ್ನು ಇಷ್ಟಪಡುವುದಿಲ್ಲ. ಇವರ ನಿರೀಕ್ಷಿಸಿದಂತೆ ನಡೆಯಬೇಕು ಎಂದು ಬಯಸುತ್ತಾರೆ. ಇವರ ಸಿಟ್ಟು ದೀರ್ಘಕಾಲ ಇರುವುದು.

  ತುಲಾ

  ತುಲಾ

  ಇವರಿಗೆ ಸಿಟ್ಟು ಅಧಿಕವಾಗಿರುತ್ತದೆ. ಜೊತೆಗೆ ಸಿಟ್ಟು ಬಂದಾಗ ಏನು ಮಾಡುತ್ತಾರೆ ಎನ್ನುವುದನ್ನು ಅವರಿಗೇ ಅರಿವಿರುವುದಿಲ್ಲ. ಸ್ವಾಭಿಮಾನವನ್ನು ಹೊಂದಿರುವ ಇವರಿಗೆ ತಾವು ಮಾಡಿದ ತಪ್ಪಿನ ಅರಿವಿರುತ್ತದೆ. ಸಿಟ್ಟಿನಲ್ಲಿ ಮಾಡಿದ ಕೃತ್ಯದ ಬಗ್ಗೆ ಕ್ಷಮೆಯಾಚಿಸುತ್ತಾರೆ.

  ವೃಶ್ಚಿಕ

  ವೃಶ್ಚಿಕ

  ಇವರು ಸಿಟ್ಟಿಗೆ ಒಳಗಾಗಿರುವಾಗ ದೈಹಿಕ ಚಲನವಲನಗಳು ಅಧಿಕಗೊಳ್ಳುತ್ತದೆ. ಕಣ್ಣುಗಳು ಅರಳುವುದು, ಮುಖದ ಭಾವನೆ ಬದಲಾಗುವುದು,ಏರು ಧ್ವನಿ ಸೇರಿದಂತೆ ಪರಿಣಾಮಕಾರಿಯ ರೀತಿಯಲ್ಲಿಯೇ ಸಿಟ್ಟನ್ನು ಪ್ರದರ್ಶಿಸುತ್ತಾರೆ. ಇಂತಹ ಸಮಯದಲ್ಲಿ ಅವರನ್ನು ಸಮಾಧಾನಗೊಳ್ಳಲು ಅವರನ್ನು ಅವರ ಪಾಡಿಗೆ ಬಿಟ್ಟುಬಿಡಬೇಕು. ಆಗ ಬಹುಬೇಗ ಶಾಂತವಾಗುತ್ತಾರೆ.

  ಧನು

  ಧನು

  ಬೆಂಕಿಯ ಚಿಹ್ನೆಯನ್ನು ಹೊಂದಿರುವ ಇವರು. ಕೋಪವನ್ನು ಹೆಚ್ಚಾಗಿಯೇ ತೋರುತ್ತಾರೆ. ಪ್ರಾಮಾಣಿಕತೆಯನ್ನು ಹೊಂದಿರುವ ಇವರು ನಂಬಿಕೆ ದ್ರೋಹವನ್ನು ಸಹಿಸುವುದಿಲ್ಲ. ಇವರು ಸಿಟ್ಟಿಗೆ ಕಾರಣವಾದ ವಿಷಯವನ್ನು ವಿಶ್ಲೇಷಿಸಿ ಸಮಸ್ಯೆಗಳನ್ನು ಬಗೆ ಹರಿಸಲು ಪ್ರಯತ್ನಿಸುತ್ತಾರೆ.

  ಮಕರ

  ಮಕರ

  ಇವರು ಭೂಮಿಕಯ ಚಿಹ್ನೆಯನ್ನು ಹೊಂದಿದವರು. ಇವರು ಶಾಂತಿಯ ಸ್ವಭಾವದವರು ಎನ್ನಬಹುದು. ಇವರು ಸಿಟ್ಟಿನಲ್ಲಿ ಶಕ್ತಿಯನ್ನು ವ್ಯರ್ಥಮಾಡುವ ಬದಲು ಶಾಂತವಾಗಿರಲು ಇಷ್ಟಪಡುತ್ತಾರೆ. ಇವರಿಗೆ ತಮ್ಮ ಭಾವನೆಯನ್ನು ಹೇಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎನ್ನುವುದರ ಅರಿವಿರುತ್ತದೆ. ಎಂತಹ ಕಾರಣಕ್ಕೆ ಸಿಟ್ಟು ಬಂದಿದ್ದರೂ ಬಹು ಶಾಂತರೀತಿಯಲ್ಲಿ ಇರುತ್ತಾರೆ.

  ಕುಂಬ

  ಕುಂಬ

  ಇವರು ಒಳ್ಳೆಯ ಚರ್ಚೆ ಮತ್ತು ಚಿಂತನೆಗಳನ್ನು ಇಷ್ಟಪಡುತ್ತಾರೆ. ಇವರು ವಾದವನ್ನು ಇಷ್ಟ ಪಡುವುದಿಲ್ಲ. ಅದನ್ನು ಇವರಿಂದ ನಿರೀಕ್ಷಿಸುವಂತಿಲ್ಲ. ಇವರು ತಮ್ಮ ಭಾವನೆಯನ್ನು ಇತರರಿಗೆ ತೋರಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ಕೋಪ ಪದೇ ಪದೇ ಬರದಿದ್ದರೂ ಕೆಲವು ಸನ್ನಿವೇಶಗಳಿಗೆ ಅನುಗುಣವಾಗಿ ಅಧಿಕ ಕೋಪಕ್ಕೆ ಒಳಗಾಗುತ್ತಾರೆ.

  ಮೀನ

  ಮೀನ

  ನೀರಿನ ಚಿಹ್ನೆಯನ್ನು ಹೊಂದಿರುವ ಈ ರಾಶಿಯವರು ತಮ್ಮ ಮನಸ್ಸಿನಲ್ಲೇ ಅನೇಕ ವಿಚಾರವನ್ನು ಇಟ್ಟುಕೊಳ್ಳುತ್ತಾರೆ. ಆಗಾಗ ಸಿಟ್ಟಿಗೆ ಒಳಗಾಗುತ್ತಾರೆಯಾದರೂ ತಮ್ಮ ನಿಯಂತ್ರಣದಲ್ಲಿ ಇರಿಸಿಕೊಳ್ಳುತ್ತಾರೆ. ತಮ್ಮ ಭಾವನೆಯನ್ನು ಕಿರುಚುವುದು ಅಥವಾ ಅಳುವುದರ ಮೂಲಕ ಸಿಟ್ಟನ್ನು ವ್ಯಕ್ತಪಡಿಸುತ್ತಾರೆ.

  English summary

  How Do You Show Anger According To Your Zodiac Sign?

  Everyone gets angry from time to time; we as humans can’t help but lose our temper or patience every once in a while. Maybe certain things get under your skin, like when someone mentions a touchy subject or teases you about something that you feel embarrassed or hurt about. Anger can get the best of you if you don’t know how to reign it in, however, and each zodiac sign expresses their anger a bit differently.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more