Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬ್ರೂಸ್ ಲೀ ನಿಜವಾಗಿಯೂ ಸತ್ತಿದ್ದಾರಾ? ಅವರ ನೆನಪೂ ಇಂದಿಗೂ ಅಜರಾಮರ..
ಬ್ರೂಸ್ ಲೀ ಎಂದರೆ ಮೊದಲು ನೆನಪಾಗುವುದು ಅವರ ಕುಂಗ್ ಫೂ. ಹೆಚ್ಚಿನವರಿಗೆ ಕುಂಗ್ ಫೂ ಮತ್ತು ಕರಾಟೆಯ ವ್ಯತ್ಯಾಸ ಗೊತ್ತಿಲ್ಲ. ಬ್ರೂಸ್ ಲೀ ಅವರು ಕುಂಗ್ ಫೂ ಶೈಲಿಯಲ್ಲಿ ಕೊಡುವ ಒದೆಯನ್ನು ನೆನಪಿಸಿಕೊಳ್ಳುತ್ತಾರೆ. ಒಂದು ಕಾಲದಲ್ಲಿ ಇವರ ಕುಂಗ್ ಫೂ ಶೈಲಿಯ ಹೋರಾಟವನ್ನು ನೋಡಲು ಎಲ್ಲರೂ ಖುಷಿ ಪಡುತ್ತಿದ್ದರು. ಅದಕ್ಕಾಗಿಯೇ ಅದೆಷ್ಟೋ ಜನರು ಯೂ ಟ್ಯೂಬ್‍ನಲ್ಲಿ ಇದನ್ನೇ ಹೆಚ್ಚು ವೀಕ್ಷಿಸುತ್ತಿದ್ದರು.
ಇವರು ಚಿತ್ರೀಕರಣದಲ್ಲಿ ತೋರಿಸುತ್ತಿದ್ದ ಆ ಕಲೆ ಎಲ್ಲರನ್ನೂ ಮಂತ್ರ ಮುಗ್ಧಗೊಳಿಸುತ್ತಿತ್ತು. ಕೆಲವು ಆಯ್ದ ಚಿತ್ರಗಳಲ್ಲಿ ಅವರ ಸಾಧನೆ ಹಾಗೂ ಕುಂಗ್ ಫೂ ತೋರಿಸಿಕೊಟ್ಟ ಶೈಲಿ ಶ್ಲಾಘನೀಯ. ಹೆಚ್ಚಿನವರಿಗೆ ಬ್ರೂಸ್ ಲೀ ಅವರ ನಿಜವಾದ ಹೆಸರು ಲೀ ಜುನ್-ಫಾನ್ ಎನ್ನುವುದು ಗೊತ್ತಿಲ್ಲ. ಇವರು ಕುಂಗ್ ಫೂ ಪರಿಣಿತಿಯೊಂದಿಗೆ ಪ್ರತಿಭಾವಂತ ಕವಿಯೂ ಆಗಿದ್ದರು.

ಎಲ್ಲವೂ ಸುಂದರವಾಗಿ ನಡೆದುಕೊಂಡು ಹೋಗುತ್ತಿದೆ ಎನ್ನುವಾಗಲೇ ವಿಶ್ವದ ಅತ್ಯುತ್ತಮ ಹೋರಾಟಗಾರ ಅಥವಾ ಕುಸ್ತಿಪಟು ಎನಿಸಿಕೊಂಡ ಬ್ರೂಸ್ ಲೀ ತನ್ನ 32ನೇ ವಯಸ್ಸಿನಲ್ಲಿ ನಿಧನರಾದರು. ಕೆಲವ ವದಂತಿಯಯ ಪ್ರಕಾರ ಬ್ರೂಸ್ ಲೀ ಚೈನಾದ ಸೀಕ್ರೇಟ್ ಸಂಸ್ಥೆ ಎನಿಸಿಕೊಂಡ ಟ್ರೈಡ್ ಅವರಿಂದ ಕೊಲೆಗೈಯಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಅವರ ಸಾವಿಗೆ ನಿಜವಾದ ಕಾರಣ "ಸೆರೆಬ್ರಲ್ ಎಡಿಮಾ" ಎನ್ನುವ ಆರೋಗ್ಯ ಸಮಸ್ಯೆ. ಈ ಆರೋಗ್ಯ ಸಮಸ್ಯೆಗೆ ಒಳಗಾದವರಿಗೆ ಮಿದುಳಿನಲ್ಲಿ ಊತ ಮತ್ತು ಉಸಿರಾಟದಲ್ಲಿ ತೊಂದರೆ ಹಾಗೂ ಹಠಾತ್ ಅಸಮಾನ್ಯ ನಡವಳಿಕೆಗಳು ಕಾಣಿಸಿಕೊಳ್ಳುತ್ತವೆ. ಇದು ಅವರ ಚಿತ್ರೀಕರಣದ ಸಂದರ್ಭದಲೂ ನಡೆದಿತ್ತು ಎಂದು ಹೇಳಲಾಗುತ್ತದೆ.
ಅವರ ಮರಣದ ದಿನ "ಗೇಮ್ ಆಫ್ ಡೆತ್" ಹೊಸ ಚಿತ್ರದ ಚಿತ್ರೀಕರಣದ ಕುರಿತು ಹಾಂಗ್ ಕಾಂಗ್ ಚಲನಚಿತ್ರದ ನಿರ್ಮಾಪಕರಾದ ರೇಮಂಡ್ ಚೂ ಎನ್ನುವವರನ್ನು ಭೇಟಿಯಾಗಿದ್ದರು. ಸಂಜೆ ಸುಮಾರು 4 ಗಂಟೆಗೆ ಸಭೆ ಸೇರಿದ್ದರು. ನಂತರ ಸಂಜಾಗುತ್ತಿದ್ದಂತೆ ಬ್ರೂಸ್ ಲೀ ಅವರಿಗೆ ತೀವ್ರವಾದ ತಲೆನೋವು ಉಂಟಾಯಿತು. ಆಗ ಅವರ ಸ್ನೇಹಿತ ಮತ್ತು ನಟಿ ಬೆಟ್ಟಿ ಟಿಂಗ್ ಪೀ ಅವರು "ಆಸ್ಪ್ರಿನ್, ಮೆಪ್ರೋಬಾಮೆಟ್ "ಮಾತ್ರೆ ತೆಗೆದುಕೊಳ್ಳಲು ಸಲಹೆ ನೀಡಿದರು ಎನ್ನಲಾಗುತ್ತದೆ.
ಅದೇ ದಿನ ಸಾಯಂಕಾಲ ಚಲನ ಚಿತ್ರ ತಯಾರಿಸುವ ಉದ್ದೇಶಕ್ಕೆ ನಟ ಜಾರ್ಜ್ ಲೆಜೆನ್ಬಿ (ಜೇಮ್ಸ್ ಬಾಂಡ್ ಖ್ಯಾತಿಯ) ಅವರೊಂದಿಗೆ ಬ್ರೂಸ್ ಲೀ ಊಟ ಮಾಡಬೇಕಿತ್ತು. ಅವರ ಅನಾರೋಗ್ಯದ ಕಾರಣ ಊಟ ಮಾಡಲು ಸಾಧ್ಯವಾಗಲಿಲ್ಲ. ನಂತರ ರಾಣಿ ಎಲಿಜಬೆತ್ ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಅಲ್ಲಿಯೇ ಕೊನೆ ಉಸಿರೆಳೆದರು ಎಂದು ಘೋಷಿಸಲಾಯಿತು. ಅವರ ಪೋಸ್ಟ್ ಮಾಟರ್ಮ್ ವರದಿಯ ಪ್ರಕಾರ ಆಸ್ಪ್ರಿನ್ ಮತ್ತು ಮೆಪ್ರೊಬಾಮೆಟ್ ಮಾತ್ರೆಯ ಅಲರ್ಜಿ ಹೊಂದಿದ್ದರು.
ಅವರ ಮೆದುಳು ಸುಮಾರು ಶೇ.13 ರಷ್ಟು ದೊಡ್ಡ ಗಾತ್ರವನ್ನು ಪಡೆದುಕೊಂಡಿತ್ತು ಎನ್ನಲಾಯಿತು. ನಂತರ ಲೀ ಅವರ ಶವವನ್ನು ಸೀಟಲ್ ಗೆ ತರಲಾಯಿತು. ಅಲ್ಲಿಯೇ ಅವರ ಅಂತಿಮ ಸಮಾಧಿ ಮಾಡಲಾಯಿತು. ಅವರನ್ನು ಬಹು ಬೇಗ ಕಳೆದುಕೊಂಡಿರುವುದು ಬೇಸರದ ಸಂಗತಿ.



Click it and Unblock the Notifications



