ಹೆಸರಿನಲ್ಲಿರುವ ವಿವಿಧ ಅಕ್ಷರಗಳು-ನಿಮ್ಮ ಅದೃಷ್ಟವನ್ನೇ ಬದಲಾಯಿಸಬಹುದು!

Posted By: Lekhaka
Subscribe to Boldsky

ಓರ್ವ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಅವರ ಹೆಸರು ಅಪಾರ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ. ಇದು ಇಂದಿನ ನಂಬಿಕೆಯಲ್ಲ, ಪುರಾಣ ಹಾಗೂ ಇತರ ಪುಣ್ಯಗ್ರಂಥಗಳಲ್ಲಿಯೂ ಈ ಬಗ್ಗೆ ವಿವರಣೆಯನ್ನು ನೀಡಲಾಗಿದೆ. ವಿಶೇಷವಾಗಿ ನಾಮಕರಣ ಸಂದರ್ಭಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿತ್ತು ಹಾಗೂ ಸೂಕ್ತ ಹೆಸರನ್ನು ಆಯ್ದುಕೊಳ್ಳಲು ಬಹಳಷ್ಟು ಶ್ರಮವಹಿಸಲಾಗುತ್ತಿತ್ತು.

ನಿಮ್ಮ ಹೆಸರು "S" ಅಕ್ಷರದಿಂದ ಪ್ರಾರಂಭವಾಗುತ್ತದೆಯೇ?

ಮೊದಲ ಅಕ್ಷರ, ಯಾವ ಅಕ್ಷರಗಳು ಪುನರಾವರ್ತನೆಗೊಳ್ಳಬೇಕು, ಯಾವ ಅಕ್ಷರ ಕಡ್ಡಾಯವಾಗಿರಲೇಬೇಕು ಮೊದಲಾದ ಅಂಶಗಳನ್ನೂ ಪರಿಗಣಿಸಲಾಗುತ್ತಿತ್ತು. ಇಂದಿನ ದಿನದಲ್ಲಿ ಇಷ್ಟೊಂದು ಹೆಚ್ಚಿನ ಅಂಶಗಳನ್ನು ಪರಿಗಣಿಸಿಯಲ್ಲವಾದರೂ ಕೆಲವಾರು ಅಂಶಗಳನ್ನಾದರೂ ಪರಿಗಣಿಸಲಾಗುತ್ತದೆ. ನಿಮ್ಮ ಹೆಸರಿನಲ್ಲಿರುವ ವಿವಿಧ ಅಕ್ಷರಗಳು ನಿಮ್ಮ ವ್ಯಕ್ತಿತ್ವದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬ ಕುತೂಹಲಕಾರಿ ಮಾಹಿತಿಯನ್ನು ವಿವರಿಸಲಾಗಿದೆ.... 

ಅಕ್ಷರಗಳು: D, M ಅಥವಾ T

ಅಕ್ಷರಗಳು: D, M ಅಥವಾ T

ಯಾವ ವ್ಯಕ್ತಿಯ ಹೆಸರಿನಲ್ಲಿ D, M ಅಥವಾ T ಅಕ್ಷರಗಳನ್ನು ಒಳಗೊಂಡಿರುತ್ತವೆಯೋ, ಈ ವ್ಯಕ್ತಿಗಳು ಶ್ರಮಜೀವಿಗಳಾಗಿರುತ್ತಾರೆ ಹಾಗೂ ಇವರು ತಮ್ಮದೇ ಆದ ಯಾವುದನ್ನಾದರೂ ಮಾಡಲು ಇಚ್ಛಿಸುತ್ತಾರೆ. ಈ ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮ ಸ್ವಂತ ಉದ್ಯೋಗದಲ್ಲಿ ಹೆಚ್ಚು ಯಶಸ್ಸು ಗಳಿಸುತ್ತಾರೆ.

ನಿಮ್ಮ ಹೆಸರಿನ ಒಳಗುಟ್ಟೇನು ಎಂಬುದನ್ನು ಬಲ್ಲಿರಾ?

ಅಕ್ಷರಗಳು: P ಅಥವಾ F

ಅಕ್ಷರಗಳು: P ಅಥವಾ F

ಒಂದು ವೇಳೆ ಹೆಸರಿನಲ್ಲಿ ಈ ಅಕ್ಷರಗಳು ಬಂದಿದ್ದರೆ ಹಾಗೂ ಇವೆರಡರಲ್ಲೊಂದು ಅಕ್ಷರ ಎರಡು ಅಥವಾ ಹೆಚ್ಚು ಬಾರಿ ಪುನರಾವರ್ತನೆಯಾಗಿದ್ದರೆ ಈ ವ್ಯಕ್ತಿಗಳು ಜೀವನದಲ್ಲಿ ಹೆಚ್ಚಿನ ಯಶಸ್ಸು ಪಡೆಯುತ್ತಾರೆ ಎಂದು ನಂಬಲಾಗಿದೆ. ಇವರು ಚತುರರಾಗಿದ್ದು ತಮ್ಮ ಚಾತುರ್ಯವನ್ನು ಎಲ್ಲಿ ಹೇಗೆ ಉಪಯೋಗಿಸಬೇಕೆಂಬುದನ್ನು ಸರಿಯಾಗಿ ಅರಿತವರಾಗಿರುತ್ತಾರೆ. ಹಾಗೂ ಇವರಿಗೆ ತಮ್ಮ ವ್ಯಕ್ತಿತ್ವ ಸುತ್ತಲಿನ ವ್ಯಕ್ತಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬ ಅರಿವೂ ಇರುತ್ತದೆ.

ಅಕ್ಷರಗಳು: C, G, S ಅಥವಾ L

ಅಕ್ಷರಗಳು: C, G, S ಅಥವಾ L

ಒಂದು ವೇಳೆ ವ್ಯಕ್ತಿಯ ಹೆಸರಿನಲ್ಲಿ C, G, S ಅಥವಾ L ಅಕ್ಷರಗಳಿದ್ದರೆ ಇವರು ಉತ್ತಮ ಬಾಂಧವ್ಯ ಬಯಸುವವರು ಹಾಗೂ ಬುದ್ದಿವಂತರೂ ಆಗಿರುತ್ತಾರೆ. ಇವರು ತಮ್ಮ ಸುತ್ತಮುತ್ತಲಿನವರಲ್ಲಿ ಉತ್ತಮ ನಡವಳಿಕೆ, ದಯಾಪರತೆ ಹಾಗೂ ಕಾಳಜಿ ವಹಿಸುವ ಗುಣ ಹೊಂದಿರುತ್ತಾರೆ. ಇವರನ್ನು ಜನರು ಹೆಚ್ಚು ಇಷ್ಟಪಡುತ್ತಾರೆ ಹಾಗೂ ಇವರಿಗೆ ಸಂಗೀತ ನಿಸರ್ಗದತ್ತರೂಪದಲ್ಲಿ ಒಲಿದಿರುತ್ತದೆ.

ಅಕ್ಷರಗಳು: V, U ಅಥವಾ W

ಅಕ್ಷರಗಳು: V, U ಅಥವಾ W

ಈ ಅಕ್ಷರಗಳ ಹೆಸರನ್ನು ಹೊಂದಿರುವ ವ್ಯಕ್ತಿಗಳು ಅತಿ ಸರಳ ವ್ಯಕ್ತಿತ್ವದವರಾಗಿದ್ದು ಸುತ್ತಮುತ್ತಲಿನವರೊಂದಿಗೆ ಕರುಣೆ ಹಾಗೂ ಕಕ್ಕುಲತೆಯಿಂದ ವ್ಯವಹರಿಸುತ್ತಾರೆ. ಇವರು ಎಂದಿಗೂ ತಮ್ಮ ಜವಾಬ್ದಾರಿಗಳಿಂದ ದೂರ ಹೋಗದವರಾಗಿದ್ದು ಅಗತ್ಯವುಳ್ಳವರಿಗೆ ನೆರವು ನೀಡಲು ಸದಾ ಸಿದ್ಧರಾಗಿರುತ್ತಾರೆ. ಇವರು ತಮ್ಮ ಕುಟುಂಬ ಸದಸ್ಯರೊಂದಿಗೆ ಆಳವಾಗಿ ಹಾಗೂ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಸಾಮಾನ್ಯವಾಗಿ ಅದೃಷ್ಟ ಇವರ ಪರವಾಗಿರುತ್ತದೆ.

ಅಕ್ಷರಗಳು: E, N, H ಅಥವಾ X

ಅಕ್ಷರಗಳು: E, N, H ಅಥವಾ X

ಈ ವ್ಯಕ್ತಿಗಳ ಹೆಸರಿನಲ್ಲಿ E, N, H ಅಥವಾ X ಅಕ್ಷರಗಳಿದ್ದರೆ ಇವರು ಜೀವನದಲ್ಲಿ ಹೆಚ್ಚಿನ ಧನಲಾಭವನ್ನು ಪಡೆಯುತ್ತಾರೆ. ಈ ವ್ಯಕ್ತಿಗಳಿಗೆ ಜೀವನದಲ್ಲಿ ಹಣದ ಕೊರತೆ ಇರುವುದಿಲ್ಲ ಹಾಗೂ ಸದಾ ಹಣ ಇವರ ಜೀವನದಲ್ಲಿ ಹರಿದು ಬರುತ್ತಲೇ ಇರುತ್ತದೆ.

ಅಕ್ಷರಗಳು: A, I, J, Y, ಅಥವಾ Q

ಅಕ್ಷರಗಳು: A, I, J, Y, ಅಥವಾ Q

ಈ ಅಕ್ಷರಗಳನ್ನು ಹೊಂದಿರುವ ಹೆಸರಿನ ವ್ಯಕ್ತಿಗಳು (ಅಥವಾ ಇದರಲ್ಲಿ ಯಾವುದಾದರೊಂದು ಅಕ್ಷರ ಪುನರಾವರ್ತನೆಗೊಂಡಿದ್ದರೆ) ಇವರು ಮಹತ್ವಾಕಾಂಕ್ಷಿಗಳಾಗಿದ್ದು ಇದನ್ನು ಬಹಿರಂಗವಾಗಿಯೇ ಪ್ರಕಟಿಸುತ್ತಾರೆ. ಇವರು ಸ್ವಾತಂತ್ರ್ಯವನ್ನು ಇಷ್ಟಪಡುವವರಾಗಿದ್ದು ಇದಕ್ಕಾಗಿ ತಮ್ಮ ಹತ್ತಿರದವರನ್ನು ಬಿಟ್ಟು ದೂರ ಹೋಗಲು ಇವರು ಹಿಂಜರಿಯುವುದಿಲ್ಲ.

ಅಕ್ಷರದಲ್ಲಿದೆ ಸ್ವಭಾವದ ಮಹಿಮೆ...ನೀವೂ ತಿಳಿಯಿರಿ ಇವುಗಳನ್ನೊಮ್ಮೆ

English summary

How Alphabets In Your Name Can Influence Your Life

The name of a person is said to be quite influential when it comes to defining his/her personality. Even in the Puranas and other mythological books, naming ceremonies have been given a lot of importance. From the first letter to the letters that are repetitive or even present in the name, these alphabets have their own importance and significance.
Subscribe Newsletter