For Quick Alerts
ALLOW NOTIFICATIONS  
For Daily Alerts

  ಇವರು ಶವದ ಬಳಿ ಕೂತು ತಪಸ್ಸು ಮಾಡುತ್ತಾರೆ, ಆತ್ಮಗಳೊಂದಿಗೆ ಮಾತನಾಡುತ್ತಾರೆ!

  By Arshad
  |

  ತರ್ಕಕ್ಕೇ ನಿಲುಕದ ಆದರೆ ಇವುಗಳ ಅಸ್ತಿತ್ವವನ್ನು ಅಲ್ಲಗಳೆಯಲಾದ ಕಾಲಾ ಜಾದೂ ಅಥವಾ ಮಂತ್ರವಿದ್ಯೆ ಇಂದಿಗೂ ಕೆಲವು ದೇಶಗಳಲ್ಲಿ ಆಚರಣೆಯಲ್ಲಿದೆ. ಭಾರತ, ಚೀನಾ, ಬಾಂಗ್ಲಾದೇಶಗಳಲ್ಲಿ ಮಂತ್ರವಿದ್ಯೆಯನ್ನೇ ಜೀವನೋಪಾಯಕ್ಕಾಗಿ ಬಳಸುತ್ತಿರುವ ಮಾಂತ್ರಿಕರಿದ್ದಾರೆ. ಇವರು ಅನುಸರಿಸುವ ವಿದ್ಯೆ ಹಾಗೂ ಪ್ರಯೋಗಗಳಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ.

  ಅಘೋರಿಗಳ ಅಸಂಪ್ರದಾಯಿಕವಾದ ಮತ್ತು ಭಯ ಭೀತಗೊಳಿಸುವ ಆಚರಣೆಗಳು

  ಆದರೂ ಶತಮಾನಗಳಿಂದ ಇವು ಮುಂದುವರೆದುಕೊಂಡು ಬಂದಿವೆ ಹಾಗೂ ಮುಂದುವರೆಯುತ್ತವೆ ಸಹಾ. ಈ ಮಂತ್ರವಿದ್ಯೆಯಲ್ಲಿ ಪಾರಾಂಗತರಾದವರಲ್ಲಿ ಕೆಲವರು ತಮ್ಮನ್ನು ತಾವೇ ಭಗವಂತನ ಅವತಾರವೆಂದೂ ಕರೆದುಕೊಳ್ಳುತ್ತಾರೆ. ತಮಗೆ ತಾವೇ ಬಾಬಾಗಳು ಎಂಬ ಹೆಸರನ್ನೂ ಕೊಟ್ಟುಕೊಂಡು ತಮ್ಮ ಪವಾಡಗಳ ಮೂಲಕ ಲಕ್ಷಾಂತರ ಭಕ್ತರನ್ನು ಸಂಪಾದಿಸುತ್ತಾರೆ. 

  ಹೌದು ಸ್ವಾಮಿ, ಇನ್ನೊಮ್ಮೆ ಬರಲಿದ್ದಾರೆ ನಾಗಾ ಸಾಧುಗಳು!

  ವಾಸ್ತವವಾಗಿ ಇವರಲ್ಲಿ ಹೆಚ್ಚಿನವರು ಕಪಟಿಗಳಾಗಿದ್ದು ಮುಗ್ಧ ಜನರಿಂದ ಹಣವನ್ನು ದೋಚುವುದೇ ಆಗಿದೆ. ಆದರೆ ಕೆಲವು ಮಾಂತ್ರಿಕರು ನಿಜವಾಗಿಯೂ ಈ ವಿದ್ಯೆಯನ್ನು ಪಡೆದು ಕೇವಲ ಲೋಕಕಲ್ಯಾಣಕ್ಕಾಗಿ ವಿನಿಯೋಗಿಸುತ್ತಾರೆ. ಇವರಿಗೆ ಲೋಕದ ಐಶ್ವರ್ಯಗಳಲ್ಲಿ ನಂಬಿಕೆಯಿಲ್ಲ. ಇವರು ಆರಾಧಿಸುವ ದೇವರ ಸಾಕ್ಷಾತ್ಕಾರವೇ ಇವರ ಬದುಕಿನ ಉದ್ದೇಶವಾಗಿರುತ್ತದೆ.

  ಭಾರತದ ಅಘೋರಿ ಮಾಂತ್ರಿಕರು ಈ ವರ್ಗಕ್ಕೆ ಸೇರಿದವರಾಗಿದ್ದು ಭಗವಂತ ಶಿವನನ್ನು ಆರಾಧಿಸುತ್ತಾರೆ. ಇವರು ಕಾಲಾಜಾದೂ ಅಥವಾ ಮಂತ್ರವಿದ್ಯೆಯನ್ನು ಸಾಧಿಸುವ ಮೂಲಕ ಶಿವನ ಕೃಪೆಗೆ ಪಾತ್ರರಾಗಿದ್ದೇವೆ ಎಂದು ಭಾವಿಸುತ್ತಾರೆ ಹಾಗೂ ಇವರಿಗೆ ಈ ವಿದ್ಯೆಯ ಮೂಲಕವೇ ನೂರಾರು ಹಿಂಬಾಲಕರೂ ಭಕ್ತರೂ ಇರುತ್ತಾರೆ. ಅಂದ ಹಾಗೆ ಈ ಯಶಸ್ಸು ಪಡೆಯಲು ಇವರು ಯಾವ ವಿದ್ಯೆಯನ್ನು ಅನುಸರಿಸುತ್ತಾರೆ? ವಿಚಿತ್ರವೂ ಗಾಬರಿಪಡಿಸುವಂತಹದ್ದೂ ಆದ ಈ ಕೆಲವು ವಿದ್ಯೆಗಳ ಬಗ್ಗೆ ಈಗ ನೋಡೋಣ... 

  ಕಾಮಶಕ್ತಿ

  ಕಾಮಶಕ್ತಿ

  ಅಘೋರಿಗಳು ನಂಬಿರುವ ಪ್ರಕಾರ ಶವದೊಂದಿಗೆ ಕೂಡಿದರೆ ಅತಿಯಾದ ಶಕ್ತಿ ಲಭಿಸುತ್ತದೆ. ಸ್ಮಶಾನಕ್ಕೆ ಆಗಮಿಸಿದ ಹೆಣ್ಣುಶವದೊಂದಿಗೆ ಇವರು ಕೂಡುವ ಹೊತ್ತಿನಲ್ಲಿ ಇತರ ಅಘೋರಿಗಳು ಭಾರೀ ಸದ್ದಿನ ತಮಟೆಗಳನ್ನು ಬಾರಿಸುತ್ತಾ ಮಂತ್ರಗಳನ್ನು ಉಚ್ಛರಿಸುತ್ತಾ ಇನ್ನಷ್ಟು ಉತ್ತೇಜನ ನೀಡುತ್ತಾರೆ. ಅಷ್ಟೇ ಅಲ್ಲ, ಇವರು ಯಾವುದೇ ಮಹಿಳೆಯನ್ನು ತಮ್ಮೊಂದಿಗೆ ಕೂಡಲು ಬಲವಂತಪಡಿಸುವುದಿಲ್ಲ ಹಾಗೂ ಒಂದು ವೇಳೆ ಕೂಡಬಯಸಿದರೆ ಈ ಮಹಿಳೆಯರು ತಮ್ಮ ತಿಂಗಳ ರಜಾದಿನದಲ್ಲಿರಬೇಕು ಎಂಬ ಸವಾಲನ್ನೂ ಒಡ್ಡುತ್ತಾರೆ.

   ಶವಭಕ್ಷಣೆ

  ಶವಭಕ್ಷಣೆ

  ಇವರ ಆಹಾರ ಕ್ರಮ ಅತ್ಯಂತ ವಿಚಿತ್ರವೂ ಕೇಳಲು ಅಸಹ್ಯವೂ ಆಗಿದೆ. ಇವರು ಸ್ಮಶಾನದಲ್ಲಿ ಶವದ ಮಾಂಸವನ್ನು ಸೇವಿಸುವವರಾಗಿದ್ದಾರೆ. ಕೆಲವರು ಹಸಿಯಾಗಿಯೇ ಸೇವಿಸಿದರೆ ಉಳಿದವರು ಚಿತೆಯ ಬೆಂಕಿಯಲ್ಲಿ ಶವ ಬೇಯುತ್ತಿರುವಾಗ ತಿನ್ನುತ್ತಾರೆ. ಇವರ ನಂಬಿಕೆಯ ಪ್ರಕಾರ ಶವದ ಮಾಂಸವನ್ನು ತಿನ್ನುವ ಮೂಲಕ ಇವರಿಗೆ ಅತೀಂದ್ರಿಯ ಶಕ್ತಿ ಲಭಿಸುತ್ತದೆ ಹಾಗೂ ಶಿವನ ಬಳಿ ಸಾಗಲು ಇನ್ನೂ ಮುಂದೆ ಬರಲು ನೆರವಾಗುತ್ತದೆ.

  ಅರ್ಧತಿಂದ ಶವದ ಬಳಿ ತಪಸ್ಸು!

  ಅರ್ಧತಿಂದ ಶವದ ಬಳಿ ತಪಸ್ಸು!

  ಶವದ ಪೂರ್ಣಪ್ರಮಾಣವನ್ನು ಇವರು ಸೇವಿಸದೇ ಕೊಂಚ ಭಾಗ ಮಾತ್ರ ಸೇವಿಸಿ ಉಳಿದಭಾಗ ಹಾಗೇ ಇದ್ದಾಗ ಅಲ್ಲಿಯೇ ತಪಸ್ಸು ಮಾಡತೊಡಗುತ್ತಾರೆ. ಈ ಅರ್ಧತಿಂದ ಶವದ ಬಳಿ ತಪಸ್ಸು ಮಾಡುವ ಮೂಲಕ ಇವರಿಗೆ ಅತೀಂದ್ರಿಯ ಶಕ್ತಿಗಳು ಲಭಿಸುತ್ತದೆ ಹಾಗೂ ಮರಣಾನಂತರದ ಜೀವನದ ಬಗ್ಗೆ ಇರುವ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ ಎಂದು ಇವರು ನಂಬುತ್ತಾರೆ.

  ಸತ್ತವರನ್ನು ಇವರು ಕರೆಯುತ್ತಾರೆ!

  ಸತ್ತವರನ್ನು ಇವರು ಕರೆಯುತ್ತಾರೆ!

  ಇವರಿಗೆ ಒಲಿದ ವಿದ್ಯೆಗಳಲ್ಲಿ ಆತ್ಮಗಳೊಂದಿಗೆ ಸಮಾಲೋಚನೆಯೂ ಒಂದು. ಅಂದರೆ ಗತಿಸಿಹೋದ ಜನರ ಆತ್ಮವನ್ನು ಕರೆದು ಅವರೊಂದಿಗೆ ಸಮಾಲೋಚಿಸಲು ಅಪಾರವಾದ ಸಾಧನೆ ಬೇಕು ಎಂದು ಇವರು ನಂಬಿದ್ದಾರೆ. ಅಂತೆಯೇ ಈ ಸಾಧನೆ ಸಾಧಿಸಿದ ಮಾಂತ್ರಿಕರಿಗೆ ಗಾಯಗಳು ಅತಿಶೀಘ್ರವಾಗಿ ಮಾಗುತ್ತವೆ ಎಂದು ಇವರು ನಂಬುತ್ತಾರೆ. ಸ್ಮಶಾನದಲ್ಲಿ ಈ ಕೆಲಸಕ್ಕಾಗಿ ಇವರು ಹೋಮ ಹವನಗಳನ್ನು ಮಾಡುತ್ತಾ ಆತ್ಮಗಳನ್ನು ಕರೆದು ಅವರೊಂದಿಗೆ ಮಾತನಾಡುತ್ತಾರೆ. ಈ ಕೆಲಸ ಮಾಡುವಾಗ ಇಡಿಯ ಶರೀರಕ್ಕೆ ಭಸ್ಮವನ್ನು ಬಳಿದುಕೊಂಡಿರುತ್ತಾರೆ.

  ಅಘೋರಿಗಳ ಶಕ್ತಿ

  ಅಘೋರಿಗಳ ಶಕ್ತಿ

  ಇವರು ತಮ್ಮ ಸುತ್ತಮುತ್ತ ನಡೆಯುತ್ತಿರುವ ಎಲ್ಲಾ ಆಗುಹೋಗುಗಳಿಗೆ ಭಗವಂತ ಶಿವನೇ ಕಾರಣ ಎಂದು ಬಲವಾಗಿ ನಂಬಿದ್ದಾರೆ. ಇವರ ಪ್ರಕಾರ ಜಗತ್ತಿನ ಎಲ್ಲಾ ಚಟುವಟಿಕೆಯನ್ನು ಶಿವನೇ ನಿಯಂತ್ರಿಸುತ್ತಾನೆ. ಇದೇ ಕಾರಣಕ್ಕೆ ಇವರು ಶಿವನ ಮೇಲೆ ತಮ್ಮೆಲ್ಲಾ ಭಾರವನ್ನು ವಹಿಸಿ ನಿರ್ವಣ್ಣರಾಗಿರುತ್ತಾರೆ ಹಾಗೂ ಶಿವನಿಗಾಗಿ ಸಾಯಲೂ ಹಿಂದೆ ನೋಡುವುದಿಲ್ಲ. ತಮ್ಮ ಶವವನ್ನೇ ಶಿವನಿಗೆ ಕಾಣಿಕೆಯಾಗಿ ಅರ್ಪಿಸಲೂ ಇವರು ಸಿದ್ಧರಿರುತ್ತಾರೆ.

  ಚಿತಾಭಸ್ಮವನ್ನು ಇವರು ಹಚ್ಚಿಕೊಳ್ಳುತ್ತಾರೆ

  ಚಿತಾಭಸ್ಮವನ್ನು ಇವರು ಹಚ್ಚಿಕೊಳ್ಳುತ್ತಾರೆ

  ಚಿತಾಭಸ್ಮವನ್ನು ಹಚ್ಚಿಕೊಳ್ಳುವ ಮೂಲಕ ತಮಗೆ ಎದುರಾಗುವ ಯಾವುದೇ ಘೋರಕೃತ್ಯದ ವಿರುದ್ಧ ರಕ್ಷಣೆ ದೊರಕುತ್ತದೆ ಎಂದು ಅಘೋರಿಗಳು ಭಾವಿಸುತ್ತಾರೆ. ಅಲ್ಲದೇ ಯಾವ ವ್ಯಕ್ತಿಯ ಚಿತೆಯ ಭಸ್ಮವನ್ನು ಹಚ್ಚಿಕೊಳ್ಳುತ್ತಾರೆಯೋ ಆ ವ್ಯಕ್ತಿಯೊಂದಿಗೆ ಸಂವಾದ ನಡೆಸಲು ಈ ಚಿತಾಭಸ್ಮ ನೆರವಾಗುತ್ತದೆ ಎಂದು ಇವರು ನಂಬುತ್ತಾರೆ. ಇವರ ಪ್ರಕಾರ ಮರಣಾನಂತರ ಏನಾಗುತ್ತದೆ ಎಂಬುದನ್ನು ಇವರು ಸುಲಭವಾಗಿ ನೋಡಬಲ್ಲರು.

  ಶವದಿಂದ ಹಿಂಡಿ ತೆಗೆದ ತೈಲ

  ಶವದಿಂದ ಹಿಂಡಿ ತೆಗೆದ ತೈಲ

  ಇವರು ಹೇಳುವ ಪ್ರಕಾರ ಇವರಲ್ಲಿ ಕೆಲವು ಔಷಧಿಗಳಿದ್ದು ಈ ಔಷಧಿಗಳು ಕ್ಯಾನ್ಸರ್ ಹಾಗೂ ಏಡ್ಸ್ ಗಳಂತಹ ಔಷಧಿಯೇ ಇಲ್ಲದ ಕಾಯಿಲೆಗಳನ್ನೂ ಗುಣಪಡಿಸುತ್ತದೆ. ವಾಸ್ತವದಲ್ಲಿ ಇವರ ಬಳಿ ಇರುವ ಔಷಧಿಗಳೆಲ್ಲಾ ಶವದಿಂದ ತೆಗೆಯಲ್ಪಟ್ಟದ್ದಾಗಿವೆ. ಚಿತೆಯಿಂದ ಶವದ ಭಾಗವನ್ನು ಹಿಂಡಿ ತೆಗೆದಾಗ ಲಭ್ಯವಾಗುವ ಎಣ್ಣೆಯನ್ನು ಇವರು ಸಂಗ್ರಹಿಸಿ ಔಷಧಿಯ ರೂಪದಲ್ಲಿ ಬಳಸುತ್ತಾರೆ.

  ಇವರು ತಲೆಬುರುಡೆಯನ್ನು ಕುಡಿಯಲು ಬಳಸುತ್ತಾರೆ

  ಇವರು ತಲೆಬುರುಡೆಯನ್ನು ಕುಡಿಯಲು ಬಳಸುತ್ತಾರೆ

  ಸ್ಮಶಾನದಲ್ಲಿ ಶವ ಸುಟ್ಟು ಬೂದಿಯಾದ ಬಳಿಕ ಉಳಿದ ತಲೆಬುರುಡೆಯನ್ನು ಇವರು ಸದಾ ಶೋಧಿಸುತ್ತಾ ಇರುತ್ತಾರೆ. ಏಕೆಂದರೆ ಈ ಬುರುಡೆಯನ್ನು ಇವರು ಕುಡಿಯುವ ಪಾತ್ರೆಯನ್ನಾಗಿ ಬಳಸುತ್ತಾರೆ. ಪ್ರಾಣ ಹೊರಟುಹೋದ ಬಳಿಕ ಶರೀರದ ಕೆಲವು ಶಕ್ತಿಗಳು ತಲೆಬುರುಡೆಯ ಒಳತುದಿಯಲ್ಲಿ ಸಂಗ್ರಹಗೊಳ್ಳುತ್ತವೆ.

  ಇವರು ತಲೆಬುರುಡೆಯನ್ನು ಕುಡಿಯಲು ಬಳಸುತ್ತಾರೆ

  ಇವರು ತಲೆಬುರುಡೆಯನ್ನು ಕುಡಿಯಲು ಬಳಸುತ್ತಾರೆ

  ಕೆಲವು ಮಂತ್ರಗಳ ಉಚ್ಚರಣೆ ಹಾಗೂ ಕೆಲವು ವಸ್ತುಗಳನ್ನು, ಮುಖ್ಯವಾಗಿ ಮದ್ಯವನ್ನು ದೇವರಿಗೆ ಅರ್ಪಿಸುವ ಮೂಲಕ ಈ ಬುರುಡೆಯಲ್ಲಿರುವ ಶಕ್ತಿಯನ್ನು ಅವಗಾಹನೆ ಮಾಡಿಕೊಳ್ಳಲು ಹಾಗೂ ತನ್ಮೂಲಕ ಈ ಶಕ್ತಿಯ ಒಡೆಯನಾಗಲು ಸಾಧ್ಯ ಎಂದು ನಂಬುತ್ತಾರೆ.

  ಇವರು ನಾಗರಿಕತೆಯಿಂದ ಹೊರಗೇಕೆ ಉಳಿದಿದ್ದಾರೆ?

  ಇವರು ನಾಗರಿಕತೆಯಿಂದ ಹೊರಗೇಕೆ ಉಳಿದಿದ್ದಾರೆ?

  ಇವರು ಸಾಮಾನ್ಯವಾಗಿ ಜನರಿಂದ ಹಾಗೂ ನಾಗರೀಕತೆಯಿಂದ ಹೊರಗೇ ಉಳಿದಿರುತ್ತಾರೆ. ಹೆಚ್ಚಿನವರು ಗಾಢಾರಣ್ಯಗಳಲ್ಲಿ ಹಾಗೂ ಹಿಮಾಲಯದಂತಹ ಅತೀವ ಚಳಿಯ ಪ್ರದೇಶದಲ್ಲಿ ವಾಸವಾಗಿರುತ್ತಾರೆ. ಜನರು ತಮ್ಮ ಬಗ್ಗೆ ಏನು ಹೇಳುತ್ತಾರೆ ಎಂದು ಇವರಿಗೆ ಚಿಂತೆಯಿಲ್ಲ. ಇವರು ಜನರ ಕಣ್ಣಿಗೆ ಬೀಳಲೂ, ಜನರಿಂದ ಯಾವುದೇ ಪ್ರಯೋಜನ ಪಡೆದುಕೊಳ್ಳಲೂ ಇಚ್ಛಿಸುವುದಿಲ್ಲ. ಮಾಂತ್ರಿಕವಿದ್ಯೆಯಲ್ಲಿ ಪಾರಾಂಗತರಾಗಬೇಕಾದರೆ ಜನರಿಂದ ದೂರವಿರಬೇಕು ಎಂಬುದು ಇವರ ನಂಬಿಕೆಯಾಗಿದೆ.

  ಇವರು ಅನುಸರಿಸಬೇಕಾದ ಐದು ಕಟ್ಟುಪಾಡುಗಳು

  ಇವರು ಅನುಸರಿಸಬೇಕಾದ ಐದು ಕಟ್ಟುಪಾಡುಗಳು

  ಪ್ರತಿ ಧರ್ಮದಲ್ಲಿರುವಂತೆಯೇ ಅಘೋರಿಗಳಿಗೂ ಕೆಲವು ಕಟ್ಟುಪಾಡುಗಳಿವೆ. ಈ ಕಟ್ಟುಪಾಡುಗಳನ್ನು ಅನುಸರಿಸುವ ಮೂಲಕ ಮಂತ್ರವಿದ್ಯೆಯಲ್ಲಿ ನೈಪುಣ್ಯ ಸಾಧಿಸಿ ನಿರ್ವಾಣಹಂತವನ್ನು ತಲುಪುವುದು ಪ್ರತಿ ಅಘೋರಿಯ ಜೀವನದ ಮುಖ್ಯ ಉದ್ದೇಶವಾಗಿದೆ.

  ಐದು ಕಟ್ಟುಪಾಡುಗಳು

  ಐದು ಕಟ್ಟುಪಾಡುಗಳು

  1) ಮದ್ಯ - ಮದ್ಯವನ್ನು ಇವರು ಮೆದುಳಿನಲ್ಲಿರುವ ಗ್ರಂಥಿಯಿಂದ ಸ್ರವಿಸುವ ದೈವಿಕ ದ್ರವ ಎಂದು ನಂಬುತ್ತಾರೆ.

  2) ಮಾಂಸ (ನಾಲಿಗೆಯನ್ನು ನುಂಗುವುದು)

  3) ಮೀನು (ಎಂಟರ ಅಂಕೆಯ ಆಕಾರದಲ್ಲಿರುವ ಅವಳಿ ಮೀನುಗಳು-ಬೆನ್ನುಮೂಳೆಯ ಒಂದು ಭಾಗ)

  4) ಮುದ್ರೆ: ಒಣಗಿದ ಧಾನ್ಯ (ಕುಂಡಲಿನಿ ಯೋಗದ ಸ್ಥಿತಿಯಲ್ಲಿ ಅಘೋರಿ ವಿಧಿಗಳನ್ನು ಅನುಸರಿಸುವುದು) ಹಾಗೂ

  5) ಮೈಥುನ:ಸಂಭೋಗ (ಇದನ್ನು ಶ್ರೀಗುರುವಿನಿಂದಲೇ ಕಲಿಯಬೇಕು)

  ಇವರು ನಿರ್ವಾಣ ಹಂತ ತಲುಪಲು ಗಾಂಜಾ ಸೇವಿಸುತ್ತಾರೆ

  ಇವರು ನಿರ್ವಾಣ ಹಂತ ತಲುಪಲು ಗಾಂಜಾ ಸೇವಿಸುತ್ತಾರೆ

  ಅಘೋರಿಗಳು ಭಾರೀ ಪ್ರಮಾಣದ ಗಾಂಜಾ ಹೊಗೆಯನ್ನು ಸೇವಿಸುವ ಮೂಲಕ ನಿರ್ವಾಣ ಸ್ಥಿತಿಗೆ ತಲುಪಿ ದೇವರಿಗೆ ಹತ್ತಿರಾಗುತ್ತೇವೆ ಎಂದು ನಂಬಿದ್ದಾರೆ. ಈ ಗಾಂಜಾದ ನಶೆಯಲ್ಲಿ ಇವರು ಮಂತ್ರಘೋಷಣೆಯನ್ನು ಪಠಿಸುತ್ತಾ ದೇವರಿಗೆ ಅಡ್ಡಬೀಳುತ್ತಾರೆ.

  ಇವರು ನಿರ್ವಾಣ ಹಂತ ತಲುಪಲು ಗಾಂಜಾ ಸೇವಿಸುತ್ತಾರೆ

  ಇವರು ನಿರ್ವಾಣ ಹಂತ ತಲುಪಲು ಗಾಂಜಾ ಸೇವಿಸುತ್ತಾರೆ

  ಗಾಂಜಾದ ನಶೆಯಲ್ಲಿ ಮೆದುಳಿನಲ್ಲಿ ಮೂಡುವ ಮಿಥ್ಯಾದರ್ಶನ ಅಥವಾ ಭ್ರಾಂತಿ, ಮನೋವಿಕಲ್ಪಗಳನ್ನೇ ಇವರು ದೇವರ ಸಾಕ್ಷಾತ್ಕಾರ ಎಂದು ಭಾವಿಸಿಕೊಂಡು ದೇವರ ದರ್ಶನವಾದ ತೃಪ್ತಿ ಪಡೆಯುತ್ತಾರೆ.

  English summary

  How Aghori Sadhus And Their Black Magic Works!

  This article is all about one of the most famous tribe of babas who have been all over India and they are called the Aghori Sadhus/Babas! These are the people who are said to practice a lot of black magic and this increases the list of their followers and believers who assume that they are actually blessed! Find out of the different things that these Babas practice on, which is quite creepy! Read on to know more.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more