ಜಗತ್ತಿನ ವಿಚಿತ್ರ ಸಂಪ್ರದಾಯಗಳು-ಇಂದಿಗೂ ಹೀಗೂ ಉಂಟೇ!

Posted By: Arshad
Subscribe to Boldsky

ಈ ಜಗತ್ತಿನಲ್ಲಿ ಸಾವಿರಾರು ಸಮುದಾಯಗಳಿದ್ದು ಪ್ರತಿ ಸಮುದಾಯವೂ ತನ್ನದೇ ಆದ ಸಂಪ್ರದಾಯ, ಸಂಸ್ಕೃತಿಗಳನ್ನು ಹೊಂದಿವೆ. ಇವುಗಳಲ್ಲಿ ಕೆಲವು ಸಂಪ್ರದಾಯಗಳು ಇತರರಿಗೆ ವಿಚಿತ್ರ ಹಾಗೂ ಅಸಹ್ಯವಾಗಿ ಕಾಣಿಸಬಹುದು. ಕೆಲವು ಅತ್ಯಂತ ನೋವು ನೀಡುವಂತಿದ್ದರೆ ಕೆಲವು ನೋಡಲೂ, ಕೇಳಲೂ ಸಾಧ್ಯವಾಗದಷ್ಟು ಅಸಹ್ಯವಾಗಿವೆ. ಉದಾಹರಣೆಗೆ ಸಿಡಿ ಕಟ್ಟುವುದು. ಈ ಸಂಪ್ರದಾಯದಲ್ಲಿ ಬೆನ್ನಿನ ಚರ್ಮಕ್ಕೆ ಕೊಕ್ಕೆ ಹಾಕಿ ಇಡಿಯ ದೇಹವನ್ನು ಎತ್ತಲಾಗುತ್ತದೆ.

ಕೆಲವೆಡೆ ಸಾರ್ವಜನಿಕ ಮೂತ್ರವಿಸರ್ಜನೆ ಒಂದು ಸಂಸ್ಕೃತಿಯ ಭಾಗವಾದರೆ ಇನ್ನೊಂದೆಡೆ ಅತ್ಯಾಚಾರಿಗಳನ್ನು ಮುಕ್ತವಾಗಿ ಬಿಡುವುದೂ ಇನ್ನೊಂದು ಸಂಸ್ಕೃತಿಯಾಗಿದೆ. ಇಂದಿನ ಲೇಖನದಲ್ಲಿ ಇಂತಹ ಕೆಲವು ಭಯಾನಕವಾದ ಸಂಪ್ರದಾಯಗಳನ್ನು ವಿವರಿಸಲಾಗಿದೆ. ಬನ್ನಿ, ನಾವು ಎಂತಹ ವಿಚಿತ್ರ ಜಗತ್ತಿನಲ್ಲಿದ್ದೇವೆ ಎಂದು ನೋಡೋಣ...

ಇಲ್ಲಿ ಗೋಮೂತ್ರವೇ ಪವಿತ್ರ

ಇಲ್ಲಿ ಗೋಮೂತ್ರವೇ ಪವಿತ್ರ

ಭಾರತದ ಬಹಳಷ್ಟು ಸ್ಥಳಗಳಲ್ಲಿ ಗೋಮೂತ್ರವನ್ನು ಪವಿತ್ರವೆಂದು ಭಾವಿಸಲಾಗುತ್ತದೆ. ವಿಶೇಷವಾಗಿ ಹಿಂದೂ ಧರ್ಮವನ್ನು ಪಾಲಿಸುವವರು ಗೋಮೂತ್ರದಲ್ಲಿರುವ ವಿಶೇಷ ರಸದೂತಗಳು ಹಾಗೂ ಖನಿಜಗಳು ಆರೋಗ್ಯಕ್ಕೆ ಪೂರಕವೆಂದು ಭಾವಿಸುತ್ತಾರೆ. ಕೆಲವರು ಇದನ್ನು ಸೇವಿಸುತ್ತಾರೆ ಸಹಾ. ಭಾರತೀಯ ಆಯುರ್ವೇದ ಔಷಧ ಪದ್ಧತಿಯಲ್ಲಿಯೂ ಗೋಮೂತ್ರಕ್ಕೆ ವಿಶೇಷ ಸ್ಥಾನ ನೀಡಲಾಗಿದೆ.

ಇಲ್ಲಿ ಪ್ರಯಾಣಿಸುವುದು ಪ್ರಯಾಣಿಕರಿಗೆ ಪ್ರಾಣಸಂಕಟ

ಇಲ್ಲಿ ಪ್ರಯಾಣಿಸುವುದು ಪ್ರಯಾಣಿಕರಿಗೆ ಪ್ರಾಣಸಂಕಟ

ಫಿಲಿಪ್ಪೀನ್ಸ್ ನಲ್ಲಿ ಬಸ್ ಪ್ರಯಾಣವೆಂದರೆ ಜೀವ ಕೈಯಲ್ಲಿ ಹಿಡಿದು ನಡೆಸಬೇಕಾದ ಪ್ರಯಾಣವಾಗಿದೆ. ಏಕೆಂದರೆ ಇಲ್ಲಿನ ಬಸ್ಸುಗಳಲ್ಲಿ ನಮ್ಮ ಮುಂಬೈ ಲೋಕಲ್ ರೈಲಿಗಿಂತಲೂ ಹೆಚ್ಚು ಜನದಟ್ಟಣೆ ಇರುತ್ತದೆ. ಕುಳಿತುಕೊಳ್ಳಲು ಸ್ಥಳಾವಕಾಶ ಸಿಗದ ಪ್ರಯಾಣಿಕರು ತಮ್ಮದೇ ಆದ ಪ್ಲಾಸ್ಟಿಕ್ ಕುರ್ಚಿಗಳನ್ನು ತಂದು ಎರಡು ಸೀಟುಗಳ ನಡುವೆ ಸ್ಥಾಪಿಸಿ ಕುಳಿತುಬಿಡುತ್ತಾರೆ. ಅಷ್ಟೇ ಅಲ್ಲ, ಇವೆಲ್ಲವೂ ಭರ್ತಿಯಾದ ಬಳಿಕ ಜನರು ನೇರವಾಗಿ ಬಸ್ಸಿನ ಮೇಲೇ ಏರಿ ಕುಳಿತುಬಿಡುತ್ತಾರೆ.

ಸಾರ್ವಜನಿಕವಾಗಿ ಮಲಮೂತ್ರ ವಿಸರ್ಜನೆ ಇಲ್ಲಿ ಸಾಮಾನ್ಯ

ಸಾರ್ವಜನಿಕವಾಗಿ ಮಲಮೂತ್ರ ವಿಸರ್ಜನೆ ಇಲ್ಲಿ ಸಾಮಾನ್ಯ

ರೈಲ್ವೇ ಹಳಿಯ ಮೇಲೆ ಜನರು ದೇಹಬಾಧೆಯನ್ನು ತೀರಿಸಲು ಕುಳಿತುಕೊಳ್ಳುವುದು ಭಾರತದ ಹಲವು ಕಡೆಗಳಲ್ಲಿ ಸಾಮಾನ್ಯ ದೃಶ್ಯವಾಗಿದೆ. ಈ ವಿಷಯದಲ್ಲಿ ಮಾತ್ರ ಹಿಂದೀ, ಚೀನೀ ಭಾಯಿ ಭಾಯಿ ಎನ್ನಬಹುದು. ಏಕೆಂದರೆ ಚೀನಾದಲ್ಲಿಯೂ ಸಾರ್ವಜನಿಕವಾಗಿ ಮಲಮೂತ್ರ ವಿಸರ್ಜನೆ ಸಾಮಾನ್ಯವಾಗಿದೆ. ಇಲ್ಲಿ ಮಹಿಳೆಯರು ತಮ್ಮ ಮಕ್ಕಳನ್ನು ರಸ್ತೆಬದಿಯಲ್ಲಿ ಮಲಮೂತ್ರ ವಿಸರ್ಜನೆಗೆ ಕುಳ್ಳಿರಿಸಿ ರಸ್ತೆಬದಿಯ ತಿಪ್ಪೆ ಹೆಚ್ಚಿಸಲು ಕಾರಣರಾಗುತ್ತಾರೆ.

ಕೋಸ್ಟಾರಿಕಾ ದೇಶದಲ್ಲಿ ವಿಳಾಸವೇ ಇಲ್ಲ

ಕೋಸ್ಟಾರಿಕಾ ದೇಶದಲ್ಲಿ ವಿಳಾಸವೇ ಇಲ್ಲ

ಈ ದೇಶದಲ್ಲಿ ಸರಿಯಾದ ವಿಳಾಸದ ವ್ಯವಸ್ಥೆಯೇ ಇಲ್ಲ! ಜನರು ಒಂದೆಡೆಯಿಂದ ಇನ್ನೊಂದೆಡೆ ಸಂಚರಿಸಲು ಆ ಸ್ಥಳದ ಪ್ರಮುಖ ಮರ ಅಥವಾ ಕಟ್ಟಡವನ್ನೇ ಹೆಸರಿಸಿ ಆ ಪ್ರಕಾರ ಓಡಾಡುತ್ತಾರೆ. ಇಡಿಯ ಸ್ಥಳದಲ್ಲಿ ಯಾವುದೇ ಮನೆಗೂ ಕಛೇರಿಗೂ ನಿಗದಿತ ವಿಳಾಸವೇ ಇಲ್ಲ! ಹೀಗಿದ್ದಾಗ ಕುಡಿದ ವ್ಯಕ್ತಿ ತನ್ನ ಮನೆಗೆ ಹೇಗೆ ಹಿಂದಿರುತ್ತಾನೆ ಎಂಬುದು ಅಚ್ಚರಿ ಮೂಡಿಸುತ್ತದೆ. ಆದರೆ ಜನರು ಇಲ್ಲಿನ ಸ್ಥಳ ವಿಶೇಷಣಗಳ ಮೂಲಕವೇ ತಮ್ಮ ಗುರಿಯನ್ನು ಸುಲಭವಾಗಿ ತಲುಪುತ್ತಾರೆ.

ಇಲ್ಲಿ, ಎಲ್ಲೆಲ್ಲೂ ಅರ್ಧ ಮುಗಿದ ಮನೆಗಳೇ ಎಲ್ಲೆಲ್ಲೂ!

ಇಲ್ಲಿ, ಎಲ್ಲೆಲ್ಲೂ ಅರ್ಧ ಮುಗಿದ ಮನೆಗಳೇ ಎಲ್ಲೆಲ್ಲೂ!

ಬೆಲೀಜ್ ದೇಶದಲ್ಲಿ ಕಾಣಬರುವ ಒಂದು ವಿಚಿತ್ರವೆಂದರೆ ಇಲ್ಲಿನ ಕೆಲವು ಪ್ರದೇಶಗಳಲ್ಲಿ ಮನೆಗಳನ್ನು ಪೂರ್ಣಗೊಳಿಸಿರುವುದೇ ಇಲ್ಲ. ಅರ್ಧಂಬರ್ಧ ಕಟ್ಟಿ ಮುಗಿಸಿರುತ್ತಾರೆ. ಇದನ್ನು ಉದ್ದೇಶಪೂರ್ವಕವಾಗಿಯೇ ಅರ್ಧ ಕಟ್ಟಲಾಗಿದೆ ಏಕೆಂದರೆ ಒಂದು ವೇಳೆ ಈ ಮನೆ ಪೂರ್ಣಗೊಂಡರೆ ಆ ದಿನದಿಂದ ಸರ್ಕಾರಕ್ಕೆ ಭಾರೀ ತೆರಿಗೆ ಪಾವತಿಸಬೇಕು. ಪೂರ್ಣಗೊಳಿಸದಿದ್ದರೆ ತೆರಿಗೆ ಪಾವತಿಸುವುದು ಬೇಡ, ಇದು ಈ ದೇಶದ ಕಾನೂನು. ಕಾನೂನನ್ನು ಮುರಿಯಲು ಭಾರತೀಯರೇ ಬೇಕೇ? ಈ ದೇಶದ ಜನರೂ ಮನೆಯನ್ನು ಪೂರ್ಣಗೊಳಿಸದೇ ಜಾಣರಾಗಿದ್ದಾರೆ.

ಮಧ್ಯಪ್ರಾಚ್ಯ ದೇಶದಲ್ಲಿ ಪುರುಷರು ಕೈ ಹಿಡಿದುಕೊಂಡರೆ ತಪ್ಪಿಲ್ಲ

ಮಧ್ಯಪ್ರಾಚ್ಯ ದೇಶದಲ್ಲಿ ಪುರುಷರು ಕೈ ಹಿಡಿದುಕೊಂಡರೆ ತಪ್ಪಿಲ್ಲ

ಮಧ್ಯಪ್ರಾಚ್ಯ ದೇಶಗಳಲ್ಲಿ ಪುರುಷರು ಸಾರ್ವಜನಿಕವಾಗಿ ಮಹಿಳೆಯರ ಕೈ ಹಿಡಿಯುವುದು, ಆತ್ಮೀಯತೆಯನ್ನು ಪ್ರಕಟಿಸುವುದು ಮೊದಲಾದವು ನಿಷಿದ್ದ. ಆದರೆ ಪುರುಷರು ಒಬ್ಬರ ಕೈ ಹಿಡಿದು ಸಾಗಬಹುದು. ಏಕೆಂದರೆ ಹೀಗೆ ಕೈ ಹಿಡಿಯುವುದರಿಂದ ಸ್ನೇಹ ವೃದ್ದಿಸುತ್ತದೆ ಎಂದು ಇಲ್ಲಿನವರು ನಂಬುತ್ತಾರೆ.

ಪಾದಾಚಾರಿ ರಸ್ತೆ ಎನ್ನುವುದಕ್ಕಿ೦ತಲೂ ಕದನದ ಹೆದ್ದಾರಿ ಎ೦ಬುದೇ ಹೆಚ್ಚು ಅರ್ಥಪೂರ್ಣ

ಪಾದಾಚಾರಿ ರಸ್ತೆ ಎನ್ನುವುದಕ್ಕಿ೦ತಲೂ ಕದನದ ಹೆದ್ದಾರಿ ಎ೦ಬುದೇ ಹೆಚ್ಚು ಅರ್ಥಪೂರ್ಣ

ಪಾದಾಚಾರಿ ಮಾರ್ಗಗಳು ಅಥವಾ ಫುಟ್ ಪಾತ್ ಎ೦ಬುದು ಭಾರತದೇಶದಲ್ಲಿ ಕೇವಲ ಹೆಸರಿಗಷ್ಟೇ ಇರುವ೦ತಹವುಗಳಾಗಿವೆ. ನಿಜಕ್ಕೂ ಕಾಲ್ನಡಿಗೆಯಲ್ಲಿ ಸಾಗುವವರಿಗೆ ಪಾದಾಚಾರಿ ಮಾರ್ಗವನ್ನು ಬಳಸಿಕೊಳ್ಳುವ ಸಾಧ್ಯತೆಯು ದುಸ್ತರವಾಗಿರುತ್ತದೆ. ಏಕೆ೦ದರೆ, ದ್ವಿಚಕ್ರ ವಾಹನಗಳು ಅದೆಷ್ಟು ದೂರದವರೆಗೆ ಸಾಧ್ಯವೂ ಅಷ್ಟು ದೂರದವರೆಗೆ ವಾಹನಗಳ ಅಡಚಣೆಯಿ೦ದ ಮುಕ್ತವಾಗಿರುವ ಫುಟ್ ಪಾತ್ ಮೇಲೆ ಸಾಗಿಹೋಗಲು ಒ೦ದರೊಡನೊ೦ದು ಜಿದ್ದಿಗೆ ಬೀಳುತ್ತವೆ. ಭಾರತದೇಶದಲ್ಲಿ ಸ೦ಚಾರಿ ನಿಯಮಗಳನ್ನು ರಾಜಾರೋಷವಾಗಿ ಉಲ್ಲ೦ಘಿಸಲಾಗುತ್ತದೆ. ಅವುಗಳ ಪೈಕಿ ಫುಟ್‌ಪಾತ್‌ಗಳ ಮೇಲೆ ವಾಹನ ಸವಾರಿ ಕೈಗೊಳ್ಳುವುದೂ ಕೂಡ ಒ೦ದಾಗಿದೆ ಅಷ್ಟೇ.

English summary

Horrible and Bizarre Traditions in The World That Will Leave You

There are different cultures around the world and some of the cultures are considered to be so bizarre that these can make the reader feel weird once you get of know of the practices they follow, wherein these would be a regular practice for the locals. From peeing in public places to having no rules for the rapists, there are many such bizarre things that you would come across. Here, in this article, we are about to share the list of the most bizarre things that people around the world have been following. Check them out, as these indeed will make us realise that this world is a very strange place!
Story first published: Friday, December 15, 2017, 23:40 [IST]