ಅಚ್ಚರಿ ಜಗತ್ತು: ಈ ಬೆಕ್ಕಿನ ವಿದ್ಯಾಭ್ಯಾಸಕ್ಕೆ ಶುಭ ಕೋರಿ!

By: Divya
Subscribe to Boldsky

ಕೆಲವೊಮ್ಮೆ ಈ ಪ್ರಪಂಚದಲ್ಲಿ ಹುಬ್ಬೇರಿಸುವಂತಹ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಅವುಗಳಲ್ಲಿ ಕೆಲವು ಹಾಸ್ಯ, ಆಶ್ಚರ್ಯ, ಅಸಹ್ಯ, ಅದ್ಭುತ ಹಾಗೂ ಶ್ರೇಷ್ಠ ಎನಿಸಬಹುದು. ಅಂತಹ ವಿಚಾರಗಳ ಸಾಲಲ್ಲಿ ನಿಲ್ಲುವ ವಿಷಯವೆಂದರೆ ಬೆಕ್ಕು ಶಾಲೆಗೆ ಹೋಗುವುದು... ಅರೇ! ಹೌದಾ? ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ ಮುಂದೆ ಓದಿ...   

ಇದು ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಥೆ...

ಇದು ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಥೆ...

ಕ್ಯಾಲಿಫೋರ್ನಿಯಾದ ನ್ಯಾಸ್ ಜೋಸ್‌ನಲ್ಲಿ ನಡೆಯುತ್ತಿರುವ ವಿಶೇಷ ಸುದ್ದಿ ಇದು. ಅಂಬರ್ ಮೆರೆಂಟ್ಹಾಲ್ ಎನ್ನುವವರು ಇದನ್ನು ಸಾಕಿರುವ ಮಾಲೀಕರು. 2009ರಲ್ಲಿ ಇದನ್ನು ಮನೆಗೆ ತಂದು ಮುದ್ದಿನಿಂದ ಈ ಬೆಕ್ಕನ್ನು ಸಾಕತೊಡಗಿದರು.

'ಬುಬ್ಬಾ' ಎಂದು ಬೆಕ್ಕಿಗೆ ಅಡ್ಡಹೆಸರಿಟ್ಟರು...

'ಬುಬ್ಬಾ' ಎಂದು ಬೆಕ್ಕಿಗೆ ಅಡ್ಡಹೆಸರಿಟ್ಟರು...

ಬುಬ್ಬಾ ಎಂಬ ಹೆಸರನ್ನು ಹೊಂದಿರುವ ಈ ಬೆಕ್ಕಿನ ಕ್ರಿಯಾಶೀಲತೆಯನ್ನು ಗಮನಿಸಿ ಹತ್ತಿರದ ಶಾಲೆಯಾದ ಲೆಲ್ಯಾಂಡ್ ಹೈಸ್ಕೂಲ್ ಮತ್ತು ಬ್ರೆಟ್ ಹಾರ್ಟೆ ಮಿಡಲ್ ಸ್ಕೂಲ್‍ಗೆ ಸೇರಿಸಿದ್ದಾರೆ. ಇಲ್ಲಿ ಬೆಕ್ಕಿಗೆ ತರಗತಿಯ ಪ್ರವೇಶವನ್ನು ನೀಡಿ, ಉಳಿದ ವಿದ್ಯಾರ್ಥಿಗಳಂತೆ ಐಡಿ ಕಾರ್ಡ್‍ಅನ್ನು ನೀಡಲಾಗಿದೆ.

ಶಾಲೆಗೆ ಹೋಗುವುದೆಂದರೆ ಈ ಬೆಕ್ಕಿಗೆ ತುಂಬಾ ಖುಷಿ

ಶಾಲೆಗೆ ಹೋಗುವುದೆಂದರೆ ಈ ಬೆಕ್ಕಿಗೆ ತುಂಬಾ ಖುಷಿ

ಬುಬ್ಬಾ ಮನಸ್ಸಿಗೆ ಬಂದಾಗ ತರಗತಿಯ ಹೊರಗೆ ಹೋಗುವ ಅವಕಾಶವಿದೆ. ಅಭ್ಯಾಸ ಸಮಯದಲ್ಲಿ ಸರಿಯಾಗಿ ತರಗತಿಯ ಪಾಠವನ್ನು ಕೇಳುತ್ತದೆ. ಆಟದ ಸಮಯದಲ್ಲಿ ಮೈದಾನದಲ್ಲಿ ಇರುತ್ತದೆ. ಇದಕ್ಕೆ ಯಾರ ಭಯವೂ ಇಲ್ಲ. ಎಲ್ಲರೊಂದಿಗೂ ಬೆರೆತು ತರಗತಿಯಲ್ಲಿ ಕುಳಿತುಕೊಳ್ಳುತ್ತದೆ. ತರಗತಿ ಮುಗಿದ ನಂತರ ಯಾವುದೇ ಭಯವಿಲ್ಲದೆ ಮನೆಗೆ ಹಿಂದಿರುಗುತ್ತದೆ.

ಅಚಾನಕ್ ಆಗಿ ತರಗತಿಯಲ್ಲಿಯೇ ಉಳಿದು ಬಿಟ್ಟಿತ್ತು!

ಅಚಾನಕ್ ಆಗಿ ತರಗತಿಯಲ್ಲಿಯೇ ಉಳಿದು ಬಿಟ್ಟಿತ್ತು!

ಒಮ್ಮೆ ಅಚಾನಕ್ ಆಗಿ ತರಗತಿಯಲ್ಲಿಯೇ ಉಳಿದು ಬಿಟ್ಟಿತ್ತು. 36 ಗಂಟೆಯ ನಂತರ ಅದನ್ನು ಹೊರಗೆ ತರಲಾಯಿತು. ಆಗಲೂ ಯಾವುದೇ ಭಯವಿಲ್ಲದೆ ಸಿಂಹದಂತೆ ಹೊರಬಂದಿದೆ ಎನ್ನುತ್ತಾರೆ ಅಲ್ಲಿಯ ಒಬ್ಬ ಸೆಕ್ಯೂರಿಟಿ.

ಒಮ್ಮೆ ಶಿಕ್ಷಕರಿಂದ ಶಿಕ್ಷೆಗೆ ಒಳಪಟ್ಟಿತ್ತು!

ಒಮ್ಮೆ ಶಿಕ್ಷಕರಿಂದ ಶಿಕ್ಷೆಗೆ ಒಳಪಟ್ಟಿತ್ತು!

ತರಗತಿಯಲ್ಲಿ ಬೆಕ್ಕು ತೋರುವ ಕೆಲವು ಅನುಚಿತ ವರ್ತನೆಯಿಂದ ಶಿಕ್ಷಕರಿಂದ ಶಿಕ್ಷೆಗೆ ಒಳ ಪಡುತ್ತದೆ. ಆಗ ತರಗತಿಯ ಹೊರಗೆ ಕುಳಿತು ಶಿಕ್ಷೆಯನ್ನು ಪಡೆದುಕೊಂಡು ಮಿಯಾಂವ್ ಎಂದು ಕೂಗುತ್ತದೆ. ಬುಬ್ಬಾ ಬಹಳ ಜನಪ್ರಿಯತೆ ಪಡೆದುಕೊಂಡ ಬೆಕ್ಕಾಗಿದೆ.

ಒಮ್ಮೆ ಶಿಕ್ಷಕರಿಂದ ಶಿಕ್ಷೆಗೆ ಒಳಪಟ್ಟಿತ್ತು!

ಒಮ್ಮೆ ಶಿಕ್ಷಕರಿಂದ ಶಿಕ್ಷೆಗೆ ಒಳಪಟ್ಟಿತ್ತು!

ಈಗಾಗಲೇ ಫೇಸ್‍ಬುಕ್ ಎನ್ನುವ ಸಾಮಾಜಿಕ ತಾಣದಲ್ಲಿ 3000 ಅಭಿಮಾನಿಗಳನ್ನು ಒಳಗೊಂಡಿದೆ. ಶಾಲೆಯ ಆವರಣದಲ್ಲಿ ಇದರ ಪ್ರತಿಮೆಯನ್ನು ನಿರ್ಮಿಸಬೇಕು ಎನ್ನುವ ಮನವಿ ಮಾಡಲಾಗಿತ್ತು. ಅದೃಷ್ಟವಶಾತ್ ಮನವಿಯನ್ನು ನಿರಾಕರಿಸಲಾಗಿದೆ ಎನ್ನುತ್ತಾರೆ. ಏನೇ ಆಗಲಿ ಈ ಆಧುನಿಕ ಯುಗದಲ್ಲಿ ಹುಬ್ಬೇರಿಸುವಂತೆ ಮಾಡಿದ ಈ ಮೂಕ ಪ್ರಾಣಿಯ ವಿದ್ಯಾಭ್ಯಾಸ ಮುಂದುವರಿಯಲಿ ಎಂದು ಆಶಿಸೋಣ...

Image Courtesy

English summary

high-school-bubba-cat-student

Bubba, a chill feline in San Jose, California, lives with his owner Amber Marienthal and her family in a house near Leland High School and Bret Harte Middle School. Though Marienthal says that her family initially tried keeping Bubba as an indoor cat when they first adopted him in 2009, Bubba made it clear from his meowing and wailing that he was definitely an outdoor cat.
Subscribe Newsletter