ವಯಾಗ್ರ ಮಾತ್ರೆ: ನೀವು ತಿಳಿದಿರದ ಇಂಟರೆಸ್ಟಿಂಗ್ ಸಂಗತಿಗಳು!

By: manu
Subscribe to Boldsky

ವಯಾಗ್ರ ಎಂಬ ಪದವನ್ನು ಕೇಳಿದ ಕೂಡಲೇ ಅದೊಂದು ಕಾಮಾಸಕ್ತಿಯನ್ನು ಕೆರಳಿಸುವ ಔಷಧಿ ಎಂದು ಎಲ್ಲರಿಗೂ ನೆನೆಪಿಗೆ ಬರುತ್ತದೆ. ಮತ್ತೊಂದು ಕುತೂಹಲಕಾರಿ ಅಂಶವೇನೆಂದರೆ ಈ ಪುಟ್ಟ ಮಾತ್ರೆಯು ಕಾಮಾಸಕ್ತಿಯನ್ನು ಕೆರಳಿಸುವುದರ ಜೊತೆಗೆ ಇನ್ನೂ ಹಲವಾರು ಉದ್ದೇಶಗಳಿಗೆ ಬಳಕೆಯಾಗುತ್ತದೆ. ವಯಾಗ್ರದಂತೆ ಕೆಲಸ ಮಾಡುವ 10 ಅದ್ಭುತ ಆಹಾರಗಳು 

ವಯಾಗ್ರ ಕುರಿತು ಎಲ್ಲರೂ ತಿಳಿದುಕೊಳ್ಳಬೇಕಾದ ಕೆಲವೊಂದು ಅಂಶಗಳಿವೆ. ಬನ್ನಿ ಅವುಗಳು ಯಾವುವು ಎಂದು ನಾವು ಸಹ ತಿಳಿದುಕೊಳ್ಳೋಣ.... 

ಇದು ಇದ್ದಕ್ಕಿದ್ದಂತೆ ಕೆಲಸ ಮಾಡುವುದಿಲ್ಲ...

ಇದು ಇದ್ದಕ್ಕಿದ್ದಂತೆ ಕೆಲಸ ಮಾಡುವುದಿಲ್ಲ...

ಜನರು ಸಾಮಾನ್ಯವಾಗಿ ಮಾತ್ರೆ ಕುಡಿದ ತಕ್ಷಣ ಅದು ಕೆಲಸ ಮಾಡುತ್ತದೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಯಾವುದೇ ಮಾತ್ರೆಗಳನ್ನು ಸೇವಿಸಿದಾಗ ಅದು ಕೆಲಸ ಮಾಡಲು ಆರಂಭಿಸಲು ಕನಿಷ್ಠ ಅರ್ಧ ಅಥವಾ ಒಂದು ಗಂಟೆಯಾದರೂ ಬೇಕಾಗುತ್ತದೆ.

ಇದು ಕಾಮೋತ್ತೇಜಕವಲ್ಲ...

ಇದು ಕಾಮೋತ್ತೇಜಕವಲ್ಲ...

ವಯಾಗ್ರ ಎಂಬುದು ಒಂದು ಕಾಮೋತ್ತೇಜಕ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ಕಾಮೋತ್ತೇಜಕವಲ್ಲ. ವಯಾಗ್ರದ ಪ್ರಮುಖ ಕಾರ್ಯವೆಂದರೆ ಪುರುಷರಲ್ಲಿನ ನಿಮಿರುವಿಕೆ ದೋಷವನ್ನು ಸರಿಪಡಿಸುವುದಾಗಿರುತ್ತದೆ. ಇದು ಪುರುಷರಿಗೆ ನಿಮಿರುವಿಕೆಯ ಸಾಮರ್ಥ್ಯವನ್ನು ನೀಡುತ್ತದೆ.

ವಿಶ್ವದಲ್ಲಿಯೇ ಅತ್ಯಂತ ನಕಲಿ ಮಾಡಿ ಬಿಕರಿಯಾಗುತ್ತಿರುವ ಔಷಧಿ...

ವಿಶ್ವದಲ್ಲಿಯೇ ಅತ್ಯಂತ ನಕಲಿ ಮಾಡಿ ಬಿಕರಿಯಾಗುತ್ತಿರುವ ಔಷಧಿ...

ವಯಾಗ್ರವು ವಿಶ್ವದಲ್ಲಿಯೇ ಅತ್ಯಂತ ನಕಲಿ ಮಾಡಿ ಬಿಕರಿಯಾಗುತ್ತಿರುವ ಔಷಧಿ ಎಂದು ಕುಖ್ಯಾತಿ ಪಡೆದಿದೆ. ಆದರೂ ಅಸಲಿ ವಯಾಗ್ರವನ್ನು ಪಡೆಯುವುದು ಸ್ವಲ್ಪ ಕಷ್ಟವೆಂದೆ ಹೇಳಬಹುದು.

ಹೆಂಗಸರು ಸಹ ಇದನ್ನು ಬಳಸುತ್ತಾರೆ...

ಹೆಂಗಸರು ಸಹ ಇದನ್ನು ಬಳಸುತ್ತಾರೆ...

ಮಹಿಳೆಯರು ಸಹ ವಯಾಗ್ರವನ್ನು ಬಳಸುತ್ತಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ನಿಜ, ಮುಟ್ಟಿನ ನೋವಿದ್ದಾಗ ಮಹಿಳೆಯರು ಹಾಸಿಗೆಯಲ್ಲಿಯೇ ಮಲಗಿಕೊಂಡು ಕಾಲ ಕಳೆಯಲು ಬಯಸುತ್ತಾರೆ. ಆಗ ವಯಾಗ್ರವನ್ನು ಸೇವಿಸಿದರೆ ಅವರಿಗೆ ನೋವು ಕಡಿಮೆಯಾಗುತ್ತದೆ. ಆದರೆ ಇದಕ್ಕೆ ವೈದ್ಯರ ಶಿಫಾರಸು ಮತ್ತು ಸಹಕಾರ ಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ.

ಮೌಂಟೇನ್ ಸಿಕ್‌ನೆಸ್ ನಿವಾರಿಸಲು ಔಷಧಿಯಾಗಿ ಸಹ ಇದನ್ನು ಬಳಸಲಾಗುತ್ತದೆ!

ಮೌಂಟೇನ್ ಸಿಕ್‌ನೆಸ್ ನಿವಾರಿಸಲು ಔಷಧಿಯಾಗಿ ಸಹ ಇದನ್ನು ಬಳಸಲಾಗುತ್ತದೆ!

ಅಧ್ಯಯನಕಾರರು ವಯಾಗ್ರವನ್ನು ಮೌಂಟೇನ್ ಸಿಕ್‌ನೆಸ್ ನಿವಾರಿಸಲು ಔಷಧಿಯಾಗಿ ಸಹ ಬಳಸಬಹುದು ಎಂದು ತಿಳಿಸಿದ್ದಾರೆ. ಇದು ಎತ್ತರದ ಪ್ರದೇಶಗಳಲ್ಲಿ ಪಲ್ಮನರಿ ಅಭಿದಮನಿಗಳ ಮೇಲಿನ ಒತ್ತಡವನ್ನು ನಿವಾರಿಸುತ್ತದೆ. ಹಾಗಾಗಿ ದೇಹವು ಕಡಿಮೆ ಆಮ್ಲಜನಕದಲ್ಲಿಯೂ ಸಹ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

ಇದು ಭ್ರೂಣಗಳಲ್ಲಿ ತೂಕವನ್ನು ಹೆಚ್ಚಿಸುತ್ತದೆ....

ಇದು ಭ್ರೂಣಗಳಲ್ಲಿ ತೂಕವನ್ನು ಹೆಚ್ಚಿಸುತ್ತದೆ....

ವೈದ್ಯರು ವಯಾಗ್ರವನ್ನು ಗರ್ಭಾವಧಿಯಲ್ಲಿ ಸೇವಿಸುವುದರಿಂದ ಬೆಳೆಯುವ ಭ್ರೂಣಗಳ ತೂಕ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ. ಜೊತೆಗೆ ಇದರಿಂದ ಮಗುವಿನ ಆರೋಗ್ಯ ಸಹ ಸುಧಾರಿಸುತ್ತದೆ. ಹೀಗೆ ತೂಕ ಕಡಿಮೆ ಇರುವ ಮಕ್ಕಳು ಜನಿಸುವುದನ್ನು ತಡೆಯಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.

ಇದು ನಿಜಕ್ಕೂ ಚಟವಾಗಿ ಪರಿವರ್ತನೆಯಾಗುತ್ತದೆಯೇ?

ಇದು ನಿಜಕ್ಕೂ ಚಟವಾಗಿ ಪರಿವರ್ತನೆಯಾಗುತ್ತದೆಯೇ?

ಅಧ್ಯಯನಕಾರರು ಈ ಔಷಧಿ ಚಟವಾಗಿ ಪರಿವರ್ತನೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಎಂಬ ಮಾತನ್ನು ಸಹ ತಿಳಿಸುತ್ತಾರೆ. ಆ ವ್ಯಕ್ತಿ ಮಾನಸಿಕವಾಗಿ ಈ ಔಷಧಿಗೆ ದಾಸನಾಗುವುದನ್ನು ತಪ್ಪಿಸಲಾಗುವುದಿಲ್ಲ ಎಂದರ್ಥ!.

ಇದು ನಿಜಕ್ಕೂ ಚಟವಾಗಿ ಪರಿವರ್ತನೆಯಾಗುತ್ತದೆಯೇ?

ಇದು ನಿಜಕ್ಕೂ ಚಟವಾಗಿ ಪರಿವರ್ತನೆಯಾಗುತ್ತದೆಯೇ?

ಇದು ಕಾಮಾಸಕ್ತಿಯನ್ನು ಹೆಚ್ಚಿಸುವುದಿಲ್ಲ. ಆದರೂ ಈ ಮಾತ್ರೆ ಸೇವಿಸಿದ ವ್ಯಕ್ತಿಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂಬ ತುಡಿತ ಇರುತ್ತದೆ. ಆದ್ದರಿಂದ ಅವರು ಕಾಮಾಸಕ್ತಿಯನ್ನು ತೋರಿಸಬಹುದು.

 

English summary

Here's All You Need To Know About Viagra

Check out on some of the most unexpected things about Viagra that a common man generally does not know. So find out about the untold facts and myths on Viagra.
Subscribe Newsletter